Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ವೀಡಿಯೋ ದೃಶ್ಯಗಳಲ್ಲಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ
Fact
ಅಮೆರಿಕ, ಈಜಿಪ್ಟ್ ವೀಡಿಯೋಗಳನ್ನು ಬಳಸಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಎಂದು
ಬಿಪರ್ ಜಾಯ್ ಚಂಡಮಾರುತದ ಬಗೆಗಿನ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಪರಿಣಾಮವನ್ನು ತೋರಿಸುವ ಅನೇಕ ವೀಡಿಯೋಗಳು ಹರಿದಾಡಿದ್ದವು. ನ್ಯೂಸ್‌ಚೆಕರ್ ಅಂತಹ ಮೂರು ವೀಡಿಯೋಗಳ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಅವುಗಳು ಬಿಪರ್ ಜಾಯ್ ಚಂಡಮಾರುತಕ್ಕೆ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ.
ಸಮುದ್ರದ ಮಧ್ಯದಲ್ಲಿ ಸಿಲುಕಿದ್ದ ದೋಣಿಯೊಂದು ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ಉರುಳಿ ಬೀಳುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ದೋಣಿ ಮುಳುಗಿದೆ ಎಂದು ಕ್ಲಿಪ್ ಹಂಚಿಕೊಂಡವರು ಹೇಳಿದ್ದಾರೆ.
Also Read: ಸೇತುವೆ ಮೇಲೆ ಭಾರೀ ತೆರೆಗಳು ಅಪ್ಪಳಿಸುವ ವೈರಲ್ ವೀಡಿಯೋ ಬಿಪರ್ ಜಾಯ್ ಚಂಡಮಾರುತದ್ದಲ್ಲ!
ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಕ್ಲಿಪ್ n ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಇಮೇಜ್ ಮೂಲಕ ಹುಡುಕಲಾಗಿದ್ದು, ಫೆಬ್ರವರಿ 4, 2023 ರ ಟೈಮ್ಸ್ ಆಫ್ ಇಂಡಿಯಾದ ವೀಡಿಯೊ ವರದಿ ಲಭ್ಯವಾಗಿದೆ. “ಯುಎಸ್ ಕೋಸ್ಟ್ ಗಾರ್ಡ್ ಈಜುಗಾರನು ಸಮುದ್ರದಿಂದ ವ್ಯಕ್ತಿಯನ್ನು ರಕ್ಷಿಸುತ್ತಿದ್ದಂತೆ ದೊಡ್ಡ ಅಲೆಗಳು ದೋಣಿಯನ್ನು ಮುಳುಗಿಸಿವೆ.” ಎಂದಿದೆ.
ವರದಿಯು ವೈರಲ್ ಕ್ಲಿಪ್ ಅನ್ನು ಒಳಗೊಂಡಿದ್ದ ಮತ್ತು “ಹೊಸ ಕೋಸ್ಟ್ ಗಾರ್ಡ್ ರಕ್ಷಕ ಈಜುಗಾರ ಒರೆಗಾನ್, ವಾಷಿಂಗ್ಟನ್ ರಾಜ್ಯದ ಕೊಲಂಬಿಯಾ ನದಿಯ ಭಾಗದಲ್ಲಿ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ಪೆಟ್ಟಿ ಆಫೀಸರ್ ಮೈಕೆಲ್ ಕ್ಲಾರ್ಕ್ ಪ್ರಕಾರ, ಏಜೆನ್ಸಿಗೆ ಬೆಳಗ್ಗೆ 10 ಗಂಟೆಗೆ ಕರೆ ಬಂದಿದ್ದು ಎಂದು ಹೇಳಿದ್ದಾರೆ, ಈ ಬಗ್ಗೆ ಯಾವುದೇ ಹೆಚ್ಚುವರಿ ಮಾಹಿತಿ ಇಲ್ಲ.” ಎಂದಿದೆ.
ಇದಲ್ಲದೆ, ಫೆಬ್ರವರಿ 6, 2023 ರ ಸಿಎನ್ಎನ್ ವೀಡಿಯೊ ವರದಿಯಲ್ಲಿ ಯುಎಸ್ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಚರಣೆಯ ತುಣುಕನ್ನು ಹಾಕಲಾಗಿತ್ತು.
ಯುಎಸ್ ಸಿಜಿ ಪೆಸಿಫಿಕ್ ನಾರ್ತ್ ವೆಸ್ಟ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಫೆಬ್ರವರಿ 4, 2023 ರಂದು ಈ ಘಟನೆಯನ್ನು ವಿವರಿಸುವ ವೀಡಿಯೊವನ್ನು ಹಂಚಿಕೊಂಡಿದೆ.
ಈ ಸತ್ಯಶೋಧನೆ ಪ್ರಕಾರ, ಫೆಬ್ರವರಿಯಲ್ಲಿ ಯುಎಸ್ ಕೋಸ್ಟ್ ಗಾರ್ಡ್ ನಡೆಸಿದ ರಕ್ಷಣಾ ಕಾರ್ಯಾಚರಣೆಯ ವೀಡಿಯೋವನ್ನೇ ಬಿಪರ್ ಜಾಯ್ ಚಂಡಮಾರುತ ಪ್ರಭಾವದಿಂದ ಸಮುದ್ರ ಮಧ್ಯೆ ದೋಣಿ ಮುಳುಗಿದೆ ಎಂದು ಹೇಳಲು ಸಂಬಂಧ ಕಲ್ಪಿಸಲಾಗಿದೆ.
ಬೀಸುವ ಗಾಳಿಗೆ ಶೀಟ್ ಒಂದು ಹಾರಿ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳುವ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕ್ಲಿಪ್ ಹಂಚಿಕೊಂಡವರು ಇದು ಪಾಕಿಸ್ಥಾನದ ಸಿಂಧ್ ನ ಕೇತಿ ಬಂದರ್ ಎಂದು ಹೇಳುತ್ತಿದ್ದಾರೆ ಜೊತೆಗೆ ಇದು ಬಿಪರ್ ಜೋಯ್ ಚಂಡಮಾರುತದ ಪರಿಣಾಮ ಎಂದು ಹೇಳುತ್ತಿದ್ದಾರೆ.
Also Read: ತೆಂಗಿನ ಮರ ತೂಗಾಡಿದ್ದು ಬಿಪರ್ ಜಾಯ್ ಚಂಡಮಾರುತ ಕಾರಣ ಅಲ್ಲ, ಇದು ಸುಳ್ಳು!
ಅಂತಹ ಪೋಸ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಗೂಗಲ್ ಲೆನ್ಸ್ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್ಗಳ ಬಗ್ಗೆ ಶೋಧನೆ ನಡೆಸಿದಾಗ, ಮೇ 11, 2022 ರಂದು ಪ್ರುಡೆಂಟ್ ಮೀಡಿಯಾದ ಫೇಸ್ಬುಕ್ ಪೋಸ್ಟ್ ಒಂದು ಲಭ್ಯವಾಗಿದೆ. ಇದರಲ್ಲಿ “#ViralVideo: ಕರ್ನಾಟಕದಲ್ಲಿ ಭಾರಿ ಗಾಳಿ ಬೀಸುವುದನ್ನು ನೋಡಿ” ಎಂಬ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಹಾಕಲಾಗಿತ್ತು.
“ಲವ್ ಫ್ರಮ್ ಗೋವಾ ನ್ಯೂಸ್” ಎಂಬ ಯೂಟ್ಯೂಬ್ ಚಾನೆಲ್ ಕೂಡ ಮೇ 11, 2022 ರಂದು ವೈರಲ್ ತುಣುಕನ್ನು ಅದೇ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ಮೇ 10, 2022 ರಂದು @ANDALINFO ಎಂಬ ಮತ್ತೊಂದು ಫೇಸ್ಬುಕ್ ಖಾತೆಯಿಂದ ಪೋಸ್ಟ್ ವೈರಲ್ ಕ್ಲಿಪ್ ಅನ್ನು ಅಸಾನಿ ಚಂಡಮಾರುತಕ್ಕೆ ಲಿಂಕ್ ಮಾಡಲಾಗಿತ್ತು.
ಅಸಾನಿ ಚಂಡಮಾರುತದ ಪರಿಣಾಮವನ್ನು ತೋರಿಸಲು @ludiaapynz ಅವರು ಮೇ 11, 2022 ರಂದು ಟ್ವಿಟರ್ನಲ್ಲಿ ಈ ತುಣುಕನ್ನು ಪೋಸ್ಟ್ ಮಾಡಿದ್ದರು.
ವಿಶೇಷವೆಂದರೆ, ಆಸಾನಿ ಚಂಡಮಾರುತವು ಮೇ 2022 ರಲ್ಲಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿತ್ತು.
ಈ ವೀಡಿಯೊ ಕರ್ನಾಟಕದ್ದೋ ಅಥವಾ ಅಸಾನಿ ಚಂಡಮಾರುತ ಪೀಡಿತ ರಾಜ್ಯಗಳಿಂದ ಬಂದಿದೆಯೋ ಎಂಬುದನ್ನು ಕಂಡುಹಿಡಿಯಲು ನಮಗೆ ಸ್ವತಂತ್ರವಾಗಿ ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಮೇ 202 ರಿಂದ ಚಲಾವಣೆಯಲ್ಲಿದೆ, ಆದ್ದರಿಂದ ಬಿಪರ್ ಜೋಯ್ ಚಂಡಮಾರುತಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಸಮುದ್ರದ ಮೇಲ್ಮೈಯಲ್ಲಿ ಭಾರಿ ಮರಳು ಬಿರುಗಾಳಿ ಎದ್ದಿರುವ ಮತ್ತು ಹಡಗುಗಳನ್ನು ಆವರಿಸಿದ ವೀಡಿಯೋವನ್ನು ಕೂಡ ಬಿಪರ್ ಜಾಯ್ ಚಂಡಮಾರುತಕ್ಕೆ ಲಿಂಕ್ ಮಾಡಲಾಗಿದೆ. ಕರಾಚಿ ಮತ್ತು ಗುಜರಾತ್ ಕರಾವಳಿ ಭೂ ಪ್ರದೇಶಗಳತ್ತ ಚಂಡಮಾರುತದ ದೃಶ್ಯಗಳು ಚಲಿಸುತ್ತಿರುವುದನ್ನು ತೋರಿಸಲು ಅನೇಕ ಟ್ವಿಟರ್ ಬಳಕೆದಾರರು ಈ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
Also Read: ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತ ಎಂದು 2022ರಲ್ಲಿ ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋ ಹಂಚಿಕೆ
ಇದೇ ರೀತಿಯ ಪೋಸ್ಟ್ ಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ.
ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್ ನಲ್ಲಿ ಹುಡುಕಲಾಗಿದ್ದು, ಜೂನ್ 5, 2023 ರಂದು ಬಾಜಾ ನ್ಯೂಸ್ ನಲ್ಲಿ “ಮರಳು ಬಿರುಗಾಳಿ ಈಜಿಪ್ಟ್ ಮತ್ತು ಇಸ್ರೇಲ್ ಅನ್ನು ಆವರಿಸಿದೆ ” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿರುವುದನ್ನು ಗುರುತಿಸಲಾಗಿದೆ. ವೈರಲ್ ಕ್ಲಿಪ್ ಸಣ್ಣ ಆವೃತ್ತಿಯನ್ನು ವರದಿಯಲ್ಲಿ ಹಾಕಲಾದೆ. “ಕೈರೋವನ್ನು ಆವರಿಸಿದ ದೈತ್ಯ ಮರಳು ಬಿರುಗಾಳಿ ಸೂಯೆಜ್ ಕಾಲುವೆಯ ಮೂಲಕ ಹಾದು ಇಸ್ರೇಲ್ ತಲುಪಿದೆ, ಈ ವೇಳೆ ಓರ್ವ ವ್ಯಕ್ತಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ” ಎಂದು ಹೇಳಿದೆ.
ಈಜಿಪ್ಟಿನ ಸೂಯೆಜ್ ಕಾಲುವೆಗೆ ಅಪ್ಪಳಿಸುವ “ಬೃಹತ್ ಧೂಳಿನ ಬಿರುಗಾಳಿ” ಯನ್ನು ತೋರಿಸಲು ಜೂನ್ 7, 2023 ರಂದು ಯೂಟ್ಯೂಬ್ ಚಾನೆಲ್ l Disaster Compilations ಈ ತುಣುಕನ್ನು ಹಂಚಿಕೊಂಡಿದೆ.
ವೈರಲ್ ಕ್ಲಿಪ್‌ನ ತುಣುಕುಗಳೊಂದಿಗೆ ಬಿಬಿಸಿ ಜೂನ್ 2, 2023 ರ ತನ್ನ ವರದಿಯಲ್ಲಿ, ” ಸೂಯೆಜ್ ಕಾಲುವೆಯ ಸುತ್ತಲೂ ಮರಳು ಬಿರುಗಾಳಿಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋ ಒಂದು ತೋರಿಸಿದ್ದು, ಈ ಕಾರಣ ಅಧಿಕಾರಿಗಳು ಎರಡು ಬಂದರುಗಳನ್ನು ಮುಚ್ಚಿದರು. ಈಜಿಪ್ಟಿನ ಕೆಲವು ಭಾಗಗಳಲ್ಲಿ ಧೂಳು ಮತ್ತು ಮರಳಿನ ಮೋಡಗಳಿಂದ ಹಾನಿಯಾಗಿವೆ” ಎಂದು ಹೇಳಿದೆ.
ಈಜಿಪ್ಟಿನ ಮರಳು ಬಿರುಗಾಳಿಯ ಬಗ್ಗೆ ಇತರ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆದ್ದರಿಂದ, ಈ ವೀಡಿಯೊ ವಾಸ್ತವವಾಗಿ ಈಜಿಪ್ಟ್ನಲ್ಲಿ ಮರಳು ಬಿರುಗಾಳಿಯನ್ನು ತೋರಿಸುತ್ತದೆ ಮತ್ತು ಬಿಪರ್ಜೋಯ್ ಚಂಡಮಾರುತಕ್ಕೆ ಸಂಬಂಧಿಸಿದ್ದು ಎನ್ನುವುದು ಸುಳ್ಳಾಗಿದೆ.
ಈ ಸತ್ಯಶೋಧನೆಯ ಪ್ರಕಾರ ಬಿಪರ್ ಜಾಯ್ ಚಂಡಮಾರುತದ ಪರಿಣಾಮವನ್ನು ತೋರಿಸಲು ಅಮೆರಿಕದ ಮತ್ತು ಈಜಿಪ್ಟ್‌ನ ಸಂಬಂಧವಿಲ್ಲದ ವೀಡಿಯೋಗಳನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಹಳೆಯ ವೀಡಿಯೋ ತುಣುಕುಗಳನ್ನು ಕೂಡ ಚಂಡಮಾರುತದೊಂದಿಗೆ ತಪ್ಪಾಗಿ ಸಂಬಂಧ ಕಲ್ಪಿಸಲಾಗಿದೆ.
Our Sources
Report By Times Of India, Dated February 4, 2023
Report By CNN, Dated February 6, 2023
Tweet By @USCGPacificNW, Dated February 4, 2023
Facebook Post By Prudent Media, Dated May 11, 2022
Facebook Post By @ANDALINFO, Dated May 10, 2022
Report By Baja News, Dated June 5, 2023
YouTube Video By Disaster Compilations, Dated June 7, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ.)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
December 2, 2022
Ishwarachandra B G
December 15, 2023
Kushel Madhusoodan
August 18, 2023