Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಜಸ್ಥಾನದಲ್ಲಿ "ಅರಾವಳಿ ರಕ್ಷಿಸಿ" ಆಂದೋಲನಕ್ಕಾಗಿ ಬೃಹತ್ ಜನಸಮೂಹ ಜಮಾಯಿಸಿದ್ದು, ಅರಾವಳಿ ಬೆಟ್ಟಗಳನ್ನು ರಕ್ಷಿಸುವ ಅಭಿಯಾನ ನಡೆದಿದೆ
ಈ ವೀಡಿಯೋ ಯಾವುದೇ ಪ್ರತಿಭಟನೆಯದ್ದಲ್ಲ. ಇದು ವಾಸ್ತವವಾಗಿ ಆಗಸ್ಟ್ 2025 ರಲ್ಲಿ ರಾಜಸ್ಥಾನದ ಕರೌಲಿ ಜಿಲ್ಲೆಯ ಕರಿರಿ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದ ಪ್ರೇಕ್ಷಕರದ್ದಾಗಿದೆ
ಅರಾವಳಿ ಬೆಟ್ಟದ ಕುರಿತ ವಿವಾದದ ಮಧ್ಯೆ, ಗುಡ್ಡಗಾಡು ಪ್ರದೇಶದಲ್ಲಿ ಕುಳಿತಿರುವ ದೊಡ್ಡ ಜನಸಮೂಹವನ್ನು ತೋರಿಸುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ರಾಜಸ್ಥಾನದಲ್ಲಿ “ಅರಾವಳಿ ಉಳಿಸಿ” ಪ್ರತಿಭಟನೆಯದ್ದು ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ರಾಜಸ್ಥಾನ, ಹರಿಯಾಣ, ಗುಜರಾತ್ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ವ್ಯಾಪಿಸಿರುವ ಅರಾವಳಿ ಬೆಟ್ಟಗಳ ಪರಿಷ್ಕೃತ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ ನಂತರ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ವರದಿಯಾಗುತ್ತಿದ್ದಂತೆ ಈ ವೀಡಿಯೋ ಕಾಣಿಸಿಕೊಂಡಿದೆ. ಪರಿಷ್ಕೃತ ವ್ಯಾಖ್ಯಾನದಡಿ, ಅರಾವಳಿ ಬೆಟ್ಟವನ್ನು ಸುತ್ತಮುತ್ತಲಿನ ಭೂಪ್ರದೇಶದಿಂದ ಕನಿಷ್ಠ 100 ಮೀಟರ್ ಎತ್ತರಕ್ಕೆ ಹೆಚ್ಚಿರುವ ಬೆಟ್ಟಗಳು, 500 ಮೀಟರ್ ತ್ರಿಜ್ಯದೊಳಗಿನ ಎರಡು ಅಥವಾ ಹೆಚ್ಚಿನ ಬೆಟ್ಟಗಳಿದ್ದರೆ ಅದನ್ನೂ ಅರಾವಳಿ ಶ್ರೇಣಿ ಎಂದು ಪರಿಗಣಿಸಲಾಗುತ್ತದೆ. ಈ ವ್ಯಾಖ್ಯಾನವು ಹಲವಾರು ಪರಿಸರ ಸೂಕ್ಷ್ಮ ಬೆಟ್ಟಗಳನ್ನು ಪರಿಸರ ರಕ್ಷಣೆಯಿಂದ ಹೊರಗಿಡಬಹುದು ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ, ಆದರೂ ಕೇಂದ್ರ ಸರ್ಕಾರವು ಈ ಕ್ರಮವು ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುವ ಬದಲು ನಿಯಂತ್ರಕ ಸ್ಪಷ್ಟತೆ ಮತ್ತು ಏಕರೂಪತೆಯನ್ನು ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ, ಅರಾವಳಿ ರಕ್ಷಣಾ ಆಂದೋಲನಕ್ಕೆ ಪೂರಕವಾಗಿ, ಒಂದು ಪುರಾವೆಯಾಗಿ ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
“ಸರ್ಕಾರ ಅರಾವಳಿ ಪರ್ವತಗಳತ್ತ ನೋಡಿದರೆ, ಇಡೀ ರಾಜಸ್ಥಾನ ಬೀದಿಗಿಳಿಯುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಅದೇ ರೀತಿಯ ಹೇಳಿಕೆಯನ್ನು ನೀಡುವ
ಪೋಸ್ಟ್ಗಳನ್ನು ಇಲ್ಲಿ ನೋಡಬಹುದು.

ವೈರಲ್ ಕ್ಲಿಪ್ನ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಆಗಸ್ಟ್ 31, 2025 ರಂದು ಅದೇ ವೀಡಿಯೋ ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್ ಸಿಕ್ಕಿತು . ಈ ಪೋಸ್ಟ್ನ ಶೀರ್ಷಿಕೆಯು ಕರೌಲಿ ಜಿಲ್ಲೆಯ ಕರಿರಿ ಗ್ರಾಮದಲ್ಲಿ ನಡೆದ ರಾಜಸ್ಥಾನದ ಅತಿದೊಡ್ಡ ಕುಸ್ತಿ ಸ್ಪರ್ಧೆ ಎಂದು ಹೇಳಲಾಗಿದೆ. ಈ ವೀಡಿಯೋ ನವೆಂಬರ್ 2025 ರಲ್ಲಿ ಪ್ರಕಟಗೊಂಡ ಅರಾವಳಿ ಬೆಟ್ಟಗಳ ವಿವಾದಕ್ಕಿಂತ ಹಿಂದಿನದ್ದಾಗಿದೆ. ಅಂದರೆ ಇದು ಪ್ರತಿಭಟನೆಗೆ ಸಂಬಂಧಸಿದ್ದಲ್ಲ ಎನ್ನುವುದು ಗೊತ್ತಾಗುತ್ತದೆ.

ಯೂಟ್ಯೂಬ್ನಲ್ಲಿ ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು ಹೆಚ್ಚಿನ ಪರಿಶೀಲನೆ ನಡೆಸಿದಾಗ, ಆಗಸ್ಟ್ 31, 2025 ರಂದು ಜಗತ್ ತಕ್ ನ್ಯೂಸ್ ಮತ್ತು ರಾಜಸ್ಥಾನ ಟಿವಿ ನ್ಯೂಸ್ನಂತಹ ಚಾನೆಲ್ಗಳು ಅಪ್ಲೋಡ್ ಮಾಡಿದ ವೀಡಿಯೋಗಳು ಲಭ್ಯವಾಗಿವೆ. ಈ ವೀಡಿಯೋಗಳು ಕುಸ್ತಿಪಟುಗಳು ತೆರೆದ ಕ್ರೀಡಾಂಗಣದಲ್ಲಿ ಸ್ಪರ್ಧಿಸುತ್ತಿರುವುದನ್ನು ತೋರಿಸುತ್ತವೆ, ಅದೇ ಜನಸಂದಣಿಯ ವ್ಯವಸ್ಥೆ, ಸುತ್ತಮುತ್ತಲಿನ ಕಟ್ಟಡಗಳು ಮತ್ತು ಪೋಸ್ಟರ್ಗಳು ವೈರಲ್ ಕ್ಲಿಪ್ನಲ್ಲಿ ಗೋಚರಿಸುತ್ತವೆ, ಇದು ಕ್ರೀಡಾಕೂಟದ ಸಮಯದ ದೃಶ್ಯಾವಳಿಗಳು ಎಂದು ತಿಳಿದುಬರುತ್ತದೆ.

ಆಗಸ್ಟ್ 2025 ರ ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಕುಸ್ತಿ ಪಂದ್ಯಾವಳಿಯು ಕರಿರಿ ಗ್ರಾಮದಲ್ಲಿ ಭೈರವ ಬಾಬಾ ಲಖಿ ಜಾತ್ರೆಯ ಸಮಯದಲ್ಲಿ ಆಯೋಜಿಸಲಾದ ವಾರ್ಷಿಕ ಕಾರ್ಯಕ್ರಮವಾಗಿದೆ. ವರದಿಯ ಪ್ರಕಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಕುಸ್ತಿಪಟುಗಳು ತೋಡಾಭಿಮ್ ಉಪವಿಭಾಗದ ಬಳಿಯ ಬೆಟ್ಟಗಳಿಂದ ಸುತ್ತುವರೆದಿರುವ ಮೈದಾನದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ವೈರಲ್ ಆಗಿರುವ ಈ ವೀಡಿಯೋ “ಅರಾವಳಿ ರಕ್ಷಿಸಿ” ಪ್ರತಿಭಟನೆಯದ್ದಲ್ಲ. ಇದು ಆಗಸ್ಟ್ 2025 ರಲ್ಲಿ ರಾಜಸ್ಥಾನದ ಕರೌಲಿ ಜಿಲ್ಲೆಯ ಕರಿರಿ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯದ್ದಾಗಿದೆ.
FAQಗಳು
Q1 ವೈರಲ್ ವೀಡಿಯೋ ರಾಜಸ್ಥಾನದ ಅರಾವಳಿ ರಕ್ಷಿಸಿ ಪ್ರತಿಭಟನೆಯದ್ದೇ?
ಇಲ್ಲ. ವೀಡಿಯೋವು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಪ್ರೇಕ್ಷಕರನ್ನು ತೋರಿಸುತ್ತದೆ, ಅರಾವಳಿ ಬೆಟ್ಟಗಳಿಗೆ ಸಂಬಂಧಿಸಿದ ಪ್ರತಿಭಟನೆಯಲ್ಲ.
Q2 ವೈರಲ್ ವೀಡಿಯೋವನ್ನು ನಿಜವಾಗಿಯೂ ಎಲ್ಲಿ ರೆಕಾರ್ಡ್ ಮಾಡಲಾಗಿದೆ?
ಇದನ್ನು ರಾಜಸ್ಥಾನದ ಕರೌಲಿ ಜಿಲ್ಲೆಯ ಕರಿರಿ ಗ್ರಾಮದಲ್ಲಿ ರೆಕಾರ್ಡ್ ಮಾಡಲಾಗಿದೆ.
Q3 ವೀಡಿಯೋವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ?
ವೀಡಿಯೋ ಆಗಸ್ಟ್ 2025ರ ಹಿಂದಿನದ್ದು, ಅರಾವಳಿ ಬೆಟ್ಟಗಳ ವಿವಾದ ತೀವ್ರಗೊಳ್ಳುವ ತಿಂಗಳುಗಳ ಮೊದಲಿನದ್ದಾಗಿದೆ
Our Sources
Instagram post, Dated: August 31, 2025
YouTube video by Jagat Tak News, Dated: August 31, 2025
YouTube video by Rajasthan TV News, August 31, 2025
Report by Dainik Bhaskar, Dated: August 31, 2025
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ವರದಿ ಮಾಡಲಾಗಿದ್ದು, ಅದು ಇಲ್ಲಿದೆ)
Vasudha Beri
December 26, 2025
Ishwarachandra B G
October 16, 2025
Ishwarachandra B G
June 27, 2025