Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇನ್ನು ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯವಾಗಲಿದೆ ಎಂದು ಸುದ್ದಿಯೊಂದು ಹರಿದಾಡಿದೆ. ನಾಲ್ಕು ಚಕ್ರದ ವಾಹನಗಳಂತೆ ದ್ವಿಚಕ್ರ ವಾಹನದವೂ ಫಾಸ್ಟ್ಯಾಗ್ ಅಳವಡಿಸಿ, ಟೋಲ್ ಪಾವತಿ ಮಾಡಬೇಕು ಎಂಬರ್ಥದಲ್ಲಿ ಈ ಸುದ್ದಿಯಿದೆ.
ಹೊಸಕನ್ನಡ ವೆಬ್ ಈ ಕುರಿತ ವರದಿ ಮಾಡಿದ್ದು, ಈ ದಿನದಿಂದಲೇ ಜಾರಿಯಾಗಲಿದೆ ಎಂದಿದೆ.

ಇದರ ಆರ್ಕೈವ್ ಪುಟ ಇಲ್ಲಿದೆ
Also Read: ಅಮೆರಿಕದ ಶ್ವೇತಭವನದಲ್ಲಿ ಪಾಕಿಸ್ತಾನೀಯರಿಂದ ಆಹಾರಕ್ಕಾಗಿ ನೂಕುನುಗ್ಗಲು, ನಿಜಾಂಶವೇನು?
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದ್ದು, ಕೇಂದ್ರ ಸಾರಿಗೆ ಇಲಾಖೆ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಮತ್ತು ಈ ಸುದ್ದಿ ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದೇವೆ. ಈ ಸುದ್ದಿ ಬಗ್ಗೆ ಕೆಲವು ಅಂತರ್ಜಾಲ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದರೂ, ಪ್ರಮುಖ ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂದಿಲ್ಲ.
ಈ ಬಗ್ಗೆ ಇನ್ನಷ್ಟು ಹುಡುಕಾಟ ನಡೆಸಿದಾಗ ಎಕ್ಸ್ ನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪೋಸ್ಟ್ ಒಂದನ್ನು ನೋಡಿದ್ದೇವೆ.
ಜೂನ್ 26, 2024ರ ಪೋಸ್ಟ್ ನಲ್ಲಿ ನಿತಿನ್ ಗಡ್ಕರಿ ಅವರು “ಕೆಲವು ಮಾಧ್ಯಮಗಳು ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸುವ ಬಗ್ಗೆ ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿವೆ. ಅಂತಹ ಯಾವುದೇ ನಿರ್ಧಾರವನ್ನು ಪ್ರಸ್ತಾಪಿಸಲಾಗಿಲ್ಲ. ದ್ವಿಚಕ್ರ ವಾಹನಗಳಿಗೆ ಟೋಲ್ನಲ್ಲಿ ಸಂಪೂರ್ಣ ವಿನಾಯಿತಿ ಮುಂದುವರಿಯುತ್ತದೆ. ಸತ್ಯವನ್ನು ತಿಳಿಯದೆ ದಾರಿತಪ್ಪಿಸುವ ಸುದ್ದಿಗಳನ್ನು ಹರಡುವ ಮೂಲಕ ಸಂಚಲನ ಮೂಡಿಸುವುದು ಆರೋಗ್ಯಕರ ಪತ್ರಿಕೋದ್ಯಮದ ಲಕ್ಷಣವಲ್ಲ. ಇದನ್ನು ನಾನು ಖಂಡಿಸುತ್ತೇನೆ.” ಎಂದು ಬರೆದಿರುವುದು ಕಂಡುಬಂದಿದೆ.
ಜೂನ್ 26, 2025ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು “ಭಾರತ ಸರ್ಕಾರವು ದ್ವಿಚಕ್ರ ವಾಹನಗಳ ಮೇಲೆ ಬಳಕೆದಾರ ಶುಲ್ಕ ವಿಧಿಸಲು ಯೋಜಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. #NHAI ಅಂತಹ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ. ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕವನ್ನು ಪರಿಚಯಿಸುವ ಯಾವುದೇ ಯೋಜನೆಗಳಿಲ್ಲ.” ಎಂದಿದೆ.
ಜೂನ್ 26, 2025ರಂದು ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಎಕ್ಸ್ ನಲ್ಲಿ ಫ್ಯಾಕ್ಟ್ ಚೆಕ್ ಫಲಿತಾಂಶವನ್ನು ಪೋಸ್ಟ್ ಮಾಡಿದ್ದು ದ್ವಿಚಕ್ರವಾಹನಗಳಿಗೆ ಟೋಲ್ ವಿಧಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದೆ. ಅಲ್ಲದೇ ಅಂತಹ ಯಾವುದೇ ಪ್ರಸ್ತಾಪಗಳೂ ಇಲ್ಲ ಎಂದು ಸ್ಪಷ್ಟವಾಗಿದೆ ಎಂದಿದೆ.
ಈ ಕುರಿತ ಮಾಧ್ಯಮ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಆದ್ದರಿಂದ ಈ ತನಿಖೆಯ ಪ್ರಕಾರ, ಹೆದ್ದಾರಿ ಪ್ರಯಾಣಕ್ಕೆ ಇನ್ನು ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯವಾಗಲಿದೆ ಎನ್ನುವ ಸುದ್ದಿ ಸುಳ್ಳಾಗಿದೆ.
Also Read: ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು!
Our Sources
X post By Nitin Gadkari, Dated: June 26, 2025
X post By NHAI, Dated: June 26, 2025
X post By PIB Fact Check: Dated 26, 2025
Ishwarachandra B G
October 16, 2025
Ishwarachandra B G
October 7, 2025
Ishwarachandra B G
July 4, 2025