Authors
Claim
ಆರ್ ಬಿಐ ಹೊಸದಾಗಿ ₹5000 ನೋಟು ಬಿಡುಗಡೆ ಮಾಡಿದೆ
Fact
ಆರ್ ಬಿಐ ಹೊಸದಾಗಿ 5000 ರೂ.ಗಳ ನೋಟುಗಳನ್ನು ಬಿಡುಗಡೆ ಮಾಡಿಲ್ಲ. ಈ ಹೇಳಿಕೆ ಸುಳ್ಳಾಗಿದೆ
ಆರ್ ಬಿಐ ಹೊಸದಾಗಿ ₹5000 ಗಳ ನೋಟುಗಳನ್ನು ಬಿಡುಗಡೆ ಮಾಡಿದೆ ಎಂಬತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “BIG NEWS : ‘5000 ರೂಪಾಯಿಯ’ ಹೊಸ ನೋಟು ಬಿಡುಗಡೆ : `RBI’ ನೀಡಿದೆ ಈ ಮಾಹಿತಿ, 5000 New Note” ಎಂದಿದೆ.
Also Read: ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್, ಎಐ ಫೋಟೋ ವೈರಲ್!
ಇಂತಹ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆಯನ್ನು ನಡೆಸಿದಾಗ, ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ಮೊದಲು ನಾವು ವೈರಲ್ ಪೋಸ್ಟ್ ಗಳಲ್ಲಿ ಕಂಡುಬಂದ 5 ಸಾವಿರ ರೂ. ನೋಟಿನ ಫೋಟೋವನ್ನು ಗಮನಿಸಿದ್ದೇವೆ. ಇದು ನಕಲಿಯಾಗಿದೆ ಎಂದು ಶೋಧನೆಯಲ್ಲಿ ಕಂಡುಬಂದಿದೆ.
ನೋಟಿನ ಮೇಲಿರುವ ಗಾಂಧಿ ಚಿತ್ರ ಎಡಿಟ್ ಮಾಡಿ ಕೂರಿಸಿದ್ದನ್ನು ಇಲ್ಲಿ ಕಾಣಬಹುದು.
ನೋಟಿನ ಬದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ
ನೋಟಿನ ನಡುವಿನ ಕಲರ್ ಥ್ರೆಡ್ ಕೂಡ ಎಡಿಟ್ ಮಾಡಲಾಗಿದೆ
ಆರ್ ಬಿಐ ಹೊರತಂದಿರುವ ನೋಟುಗಳ ಪಟ್ಟಿ ಇಲ್ಲಿದ್ದು. ಅವುಗಳ ವಿನ್ಯಾಸ ಹೇಗಿದೆ ಎಂಬುದನ್ನು ಇಲ್ಲಿ ನೋಡಬಹುದು.
ಇದರೊಂದಿಗೆ ಆರ್ ಬಿಐ 5 ಸಾವಿರ ರೂಪಾಯಿ ನೋಟು ಹೊರತಂದಿದೆಯೇ ಎಂದು ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯಾವುದೇ ಸುದ್ದಿಗಳು ಕಂಡುಬಂದಿಲ್ಲ.
ಬಳಿಕ ಈ ಕುರಿತು ನಾವು ಎಕ್ಸ್ ನಲ್ಲಿ ಹುಡುಕಾಡಿದ ವೇಳೆ ಜನವರಿ 4, 2025ರಂದು ಪಿಐಬಿ ಫ್ಯಾಕ್ಟ್ ಚೆಕ್ ಆರ್ ಬಿಐ ಅನ್ನು ಟ್ಯಾಗ್ ಮಾಡಿ ಮಾಡಿರುವ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಇದರಲ್ಲಿ “ಆರ್ ಬಿಐ 5000 ಸಾವಿರ ರೂ. ನೋಟುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾದ ವದಂತಿ ಸುಳ್ಳು” ಎಂದು ಹೇಳಲಾಗಿದೆ.
ಇದರೊಂದಿಗೆ ನಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲಿ ಇತ್ತೀಚಿನ ಪ್ರಕಟಣೆಗಳನ್ನು ನೋಡಿದ್ದೇವೆ. ಅಲ್ಲಿಯೂ 5 ಸಾವಿರ ರೂಪಾಯಿ ನೋಟುಗಳನ್ನು ಹೊರತಂದಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆಯನ್ನು ಪಡೆದ ಬಳಿಕ ಈ ಲೇಖನವನ್ನು ನವೀಕರಿಸಲಾಗುವುದು.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಆರ್ ಬಿಐ 5 ಸಾವಿರ ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದೆ ಎನ್ನುವುದು ಸುಳ್ಳಾಗಿದೆ.
Also Read: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
Result: False
Our Sources
Know your Bank notes By RBI
X post By PIB Fact Check, Dated: January 4th, 2025
Reserve Bank of India Press release list
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.