Authors
Claim
ಮಾರುಕಟ್ಟೆಗೆ ಹೊಸ ₹1000 ಮುಖಬೆಲೆಯ ನೋಟುಗಳು ಎಂಟ್ರಿ
Fact
ಆರ್ ಬಿಐ ಗವರ್ನರ್ ಅವರ ಪ್ರಕಾರ ₹1 ಸಾವಿರ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ, ಇದುವರೆಗೆ ಹೊಸ ನೋಟು ಮಾರುಕಟ್ಟೆಗೆ ಬಂದಿಲ್ಲ.
ಮಾರುಕಟ್ಟೆಗೆ ಹೊಸ ₹1000 ಮುಖಬೆಲೆಯ ನೋಟುಗಳ ಎಂಟ್ರಿ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್ ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ಮಾರುಕಟ್ಟೆಗೆ ಹೊಸ ₹1000 ಮುಖಬೆಲೆಯ ನೋಟುಗಳು ಎಂಟ್ರಿಯಾಗಿವೆ. ಇಲ್ಲಿದೆ ನೋಡಿ ಸಾವಿರ ಮುಖಬೆಲೆಯ ಹೊಸ ನೋಟುಗಳ ಲುಕ್” ಎಂದಿದೆ. ಜೊತೆಗೆ ಇದರಲ್ಲಿ ₹1 ಸಾವಿರ ಹೊಸ ನೋಟು ಎನ್ನಲಾದ ಹಸಿರು ಬಣ್ಣದ ನೋಟಿನ ಫೋಟೋ ಕೂಡ ಹಾಕಲಾಗಿದೆ.
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆದುಕೊಳ್ಳುವುದಾಗಿ ಹೇಳಿದ್ದು, ಆ ಸುದ್ದಿಯ ಬೆನ್ನಲ್ಲೇ ₹1 ಸಾವಿರದ ಹೊಸ ನೋಟು ಬರಲಿದೆ ಎಂಬ ಸುದ್ದಿ ಹಬ್ಬಿದೆ.
Also Read: ಬೈಕಿನ ಹಿಂಬದಿ ಗೊಂಬೆ ಸಾಗಿಸಿದ ವ್ಯಕ್ತಿಯ ಫೋಟೋದೊಂದಿಗೆ ‘ಲವ್ ಜಿಹಾದ್’ ಹೇಳಿಕೆ ವೈರಲ್!
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಗೊತ್ತಾಗಿದೆ.
Fact Check/ Verification
ಸತ್ಯಶೋಧನೆಗಾಗಿ, ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ.
ಮೇ 22 2023ರ ಬ್ಯುಸಿನೆಸ್ ಟುಡೇ ವರದಿ ಪ್ರಕಾರ, “₹1 ಸಾವಿರ ಮುಖಬೆಲೆಯ ನೋಟುಗಳನ್ನು ಮರು ಚಲಾವಣೆಗೆ ತರುವ ಯಾವುದೇ ಪ್ರಸ್ತಾವನೆ ರಿಸರ್ವ್ ಬ್ಯಾಂಕ್ ಮುಂದೆ ಇಲ್ಲ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹೇಳಿದ್ದಾರೆ. ₹2 ಸಾವಿರ ಮುಖಬೆಲೆಯ ನೋಟನ್ನು ವಾಪಸ್ ಪಡೆಯುವ ನಿರ್ಧಾರ ಮಾಡಿದ ಮೇಲೆ ಹೊಸ ₹1 ಸಾವಿರದ ನೋಟು ಬರಲಿದೆ ಎಂದು ಹೇಳಲಾಗುತ್ತಿದೆ. ಅದು ಊಹಾಪೋಹವಷ್ಟೇ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ” ಎಂದಿದೆ.
ಮೇ 22, 2023ರ ಎನ್‌ಡಿಟಿವಿ ವರದಿಯಲ್ಲಿ “₹2 ಸಾವಿರದ ನೋಟು ಚಲಾವಣೆಯಿಂದ ಹಿಂತೆಗೆವ ಕಾರಣ ಆಗುವ ಪರಿಣಾಮಗಳನ್ನು ತಡೆಯಲು ₹1 ಸಾವಿರದ ಮುಖಬೆಲೆಯ ನೋಟುಗಳನ್ನು ಜಾರಿಗೆ ತರುವ ಯಾವುದೇ ಚಿಂತನೆ ರಿಸರ್ವ್ ಬ್ಯಾಂಕ್ ಮುಂದೆ ಇಲ್ಲ, ಅದು ಊಹೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ” ಎಂದಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಈ ಹೇಳಿಕೆಯನ್ನು ವಿವಿಧ ಮಾಧ್ಯಮಗಳು ವರದಿ ಮಾಡಿದ್ದು ಅವುಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿದೆ.
ಈ ವರದಿಗಳನ್ನು ನಾವು ಗಮನಿಸಿದ ಬಳಿಕ ವೈರಲ್ ಪೋಸ್ಟ್ ಬಗ್ಗೆ ಇನ್ನಷ್ಟು ಶೋಧ ನಡೆಸಿದ್ದೇವೆ.
Also Read: ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್ ಮಾಸ್ಟರ್ ಶರೀಫ್ ತಲೆಮರೆಸಿಕೊಂಡಿದ್ದಾರೆಯೇ, ಇಲ್ಲ ಈ ವೈರಲ್ ಹೇಳಿಕೆ ಸುಳ್ಳು!
ಈ ವೇಳೆ ₹1 ಸಾವಿರದ ಮುಖಬೆಲೆಯ ನೋಟು ಬರಲಿದ ಎಂದು 2022ರಲ್ಲೇ ಸುದ್ದಿಯಾಗಿತ್ತು. ₹2 ಸಾವಿರದ ಮುಖಬೆಲೆಯ ನೋಟು ನಿಷೇಧ, ಹೊಸ ₹1 ಸಾವಿರದ ನೋಟು ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಇದು ಸುಳ್ಳು ಎಂದು ಡಿಸೆಂಬರ್ 16, 2022ರಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಫ್ಯಾಕ್ಟ್ ಚೆಕ್ ತಿಳಿಸಿದೆ. ಈ ಕುರಿತ ಟ್ವೀಟ್ ಇಲ್ಲಿದೆ.
ಇದರೊಂದಿಗೆ ನಾವು ವೈರಲ್ ಪೋಸ್ಟ್ ನಲ್ಲಿ ಹೇಳಲಾದ ಹಸಿರು ಬಣ್ಣದ ₹1 ಸಾವಿರದ ನೋಟಿನ ಬಗ್ಗೆ ಶೋಧ ನಡೆಸಿದ್ದು, ಇದು ವಾಟ್ಸಾಪ್‌ನಲ್ಲಿ ಹರಿದಾಡಿದ ಸುದ್ದಿಗೆ ಬಳಸಲಾದ ಫೋಟೋ ಎಂದು ತಿಳಿದುಬಂದಿದೆ.
ಇಂಡಿಯಾ ಡಾಟ್ ಕಾಮ್ ಡಿಸೆಂಬರ್ 29, 2016ರಂದು ವರದಿಯಲ್ಲಿ “ವಾಟ್ಸಾಪ್‌ನಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ, ಅದಾಗಲೇ ಹೊಸ ₹1 ಸಾವಿರದ ನೋಟು ಬ್ಯಾಂಕ್‌ನಲ್ಲಿ ಲಭ್ಯವಿದ್ದು, ಜನವರಿ 1, 2017ರಿಂದ ಹೊಸ ₹1 ಸಾವಿರದ ನೋಟು ಲಭ್ಯವಿದೆ. ಜೊತೆಗೆ ₹2 ಸಾವಿದ ನೋಟುಗಳನ್ನ ವಾಪಸ್ ಕೊಡಬೇಕಿದೆ. ಗರಿಷ್ಠ ₹50 ಸಾವಿರ ವರೆಗೆ ಮಾತ್ರ ₹2 ಸಾವಿರದ ನೋಟು ಠೇವಣಿ ಇಡಬಹುದಾಗಿದ್ದು, 10 ದಿನ ಕಾಲಾವಕಾಶ ಇರಲಿದೆ. ಆ ಬಳಿಕ ₹2 ಸಾವಿರದ ನೋಟು ಬೆಲೆ ಕಳೆದುಕೊಳ್ಳಲಿದೆ” ಎಂದಿದೆ.
ಆಗಸ್ಟ್ 14, 2017ರಂದು ಝೀ ಬ್ಯುಸಿನೆಸ್ ಕೂಡ ಹೊಸ ₹1 ಸಾವಿರದ ನೋಟಿನ ಕುರಿತ ಸುದ್ದಿಯ ಬಗ್ಗೆ ವರದಿ ಮಾಡಿದೆ. ಈ ವರದಿಯಲ್ಲಿ ಅದು ₹1 ಸಾವಿರದ ಮುಖಬೆಲೆಯ ನೋಟು ಎಂದು ಹೇಳಲಾಗಿರುವುದು ಸುಳ್ಳು ಎಂದು ಎಚ್ಚರಿಸಿದೆ. “ವಾಟ್ಸಾಪ್, ಫೇಸ್‌ಬುಕ್ ಗಳಲ್ಲಿ ₹1 ಸಾವಿರ ಮುಖಬೆಲೆಯ ನೋಟು ಮತ್ತು ₹1 ಸಾವಿರದ ನಾಣ್ಯ ಬರಲಿದೆ ಎಂದು ಸುದ್ದಿ ಹಬ್ಬಿದ್ದು ಇದು ಸುಳ್ಳು ಎಂದು ಹೇಳಿದೆ. ಜೊತೆಗೆ ₹1 ಸಾವಿರದ ನೋಟು ಎಂದು ಹಸಿರು ಬಣ್ಣದಲ್ಲಿ ತೋರಿಸಲಾದ ಚಿತ್ರವು ತಿರುಚಿದ ಚಿತ್ರವಾಗಿದೆ” ಎಂದು ಹೇಳಿದೆ.
Also Read: ಒಡಿಶಾ ರೈಲು ದುರಂತ ಸ್ಥಳದ ಬಳಿಯ ಇಸ್ಕಾನ್ ದೇಗುಲ ಫೋಟೋ ಅರ್ಧ ತೋರಿಸಿ ಮಸೀದಿ ಎಂದು ಘಟನೆಗೆ ಕೋಮು ಬಣ್ಣ
Conclusion
ಈ ಸತ್ಯಶೋಧನೆಯ ಪ್ರಕಾರ, ಹೊಸ ₹1 ಸಾವಿರ ಮುಖಬೆಲೆಯ ನೋಟು ಚಲಾವಣೆಗೆ ಬಂದಿದೆ ಎನ್ನುವುದು ಸುಳ್ಳಾಗಿದೆ. ಈ ಹಿಂದೆ 2016ರ ಹೊತ್ತಿಗೆ ₹1 ಸಾವಿರದ ಮುಖಬೆಲೆಯ ನೋಟಿನ ನಕಲಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದೂ ಈ ತನಿಖೆಯಲ್ಲಿ ತಿಳಿದುಬಂದಿದೆ.
Result: False
Our Sources
Report By Business Today, Dated: May 22, 2023
Report By NDTV, Dated: May 22, 2023
Report By India.com, Dated: December 29, 2016
Report By Zee Business, Dated: August 14, 2017
Tweet By PIB Fact Check, Dated: December 16, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.