Fact Check: ‘ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ’ ಎಂಬ ಹಳೆಯ ವಿವಾದಿತ ಹೇಳಿಕೆ ಹಂಚಿಕೆ

ಜನಾರ್ದನ ಪೂಜಾರಿ ಎನ್‌ ಕೌಂಟರ್ ಮಾಡಿ ವಿವಾದಿತ ಹೇಳಿಕೆ

Authors

Claim
ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ ಎಂದು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಹೇಳಿದ್ದಾನೆ

Fact
ವ್ಯಕ್ತಿಯೊಬ್ಬನಿಂದ ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ ಎಂಬ ಹೇಳಿಕೆ ಡಿಸೆಂಬರ್ 2018ರ ಸಮಯದ್ದಾಗಿದೆ. ಆದರೆ ಅದನ್ನು ಈಗಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ

ಜನಾರ್ದನ ಪೂಜಾರಿಯವರನ್ನು ಎನ್‌ಕೌಂಟರ್ ಮಾಡಿ ಎಂದು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಹೇಳಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಹರಿದಾಡಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ರೀತಿ, ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠ ಬೈಂದೂರು ಹೆಸರಿನಲ್ಲಿರುವ ಈ ಸಂದೇಶದಲ್ಲಿ “ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕರಾವಳಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಮಹತ್ತರ ಹೋರಾಟ ಕೊಟ್ಟ ಮಹನೀಯ. ಐ ಆರ್ ಡಿ ಪಿ ಸಾಲ ಮೇಳ ಮೂಲಕ ಬಡವರಿಗೆ ಸಾಲ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಜನಾರ್ಧನ ಪೂಜಾರಿಯವರಿಗೆ ಅನ್ಯ ಕೋಮಿನ ಒಬ್ಬ ಎನ್ಕೌಂಟರ್ ಮಾಡಬೇಕು ಎಂದು ಹೇಳಿಕೆ ಕೊಡುತ್ತಾನೆ ಅಂದರೆ ಜಿಹಾದಿಗಳ ಉದ್ದೇಶ ಏನೂ ಅನ್ನೋದು ಸ್ಪಷ್ಟ. ಕಾಂಗ್ರೆಸ್ಸಿನಲ್ಲಿ ಒಳ್ಳೆಯವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಒಬ್ಬ ಪ್ರಾಮಾಣಿಕ ಜನನಾಯಕ ಜನಾರ್ದನ್ ಪೂಜಾರಿಯವರನ್ನ ಈ ರೀತಿ ನೆಡೆಸಿಕೊಂಡದ್ದು ಬಹಳ ನೋವಿನ ಸಂಗತಿ! ಕಾಂಗ್ರೆಸ್ಸಿನಲ್ಲಿ ಮುಂದೆ ಯಾರಾದರೂ ಸತ್ಯವನ್ನ ಹೇಳಿದರೆ ಅವರಿಗೆ ಉಳಿಗಾಲವಿಲ್ಲ. ಜನಾರ್ದನ್‌ ಪೂಜಾರಿ ಬೆಂಬಲಿಗರು ದಯವಿಟ್ಟು ಪ್ರತ್ಯುತ್ತರ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಿ. ಸಾರ್ವಜನಿಕವಾಗಿ ಒಬ್ಬ ಪ್ರಾಮಾಣಿಕ ವ್ಯಕ್ತಿಗೆ ಎನ್ಕೌಂಟರ್ ಮಾಡಿ ಅನ್ನುವ ಮಟ್ಟಿಗೆ ಡಿಕೆ ಬ್ರದರ್ಸ್ ಬೆಳೆದುಬಿಟ್ಟಿದ್ದಾರೆ. ಹಾಗಾದರೆ ಕಾಂಗ್ರೆಸ್ಸಿನಲ್ಲಿ ಯಾರಿಗೆ ಬೆಲೆ ಅನ್ನೋದು ಸಾಬೀತಾಗಿದೆ. ದಯವಿಟ್ಟು ಜನಾರ್ದನ್ ಪೂಜಾರಿಯವರ ಬಗ್ಗೆ ಹೇಳಿಕೆ ಕೊಟ್ಟವನನ್ನು ಬಂಧಿಸಲಿ, ಈ ಬಗ್ಗೆ ಬಿಲ್ಲವ ಸಮಾಜ ಎದ್ದು ನಿಲ್ಲಲಿ” ಎಂದಿದೆ.

Fact Check: 'ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ' ಎಂಬ ಹಳೆಯ ವಿವಾದಾಸ್ಪದ ಹೇಳಿಕೆ ಹಂಚಿಕೆ

ಜನಾರ್ದನ ಪೂಜಾರಿ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದು ಸದ್ಯ ಸಕ್ರಿಯ ರಾಜಕಾರಣದಲ್ಲಿಲ್ಲ. ಅವರ ಬಗ್ಗೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಎನ್ ಕೌಂಟರ್ ಹೇಳಿಕೆ ನೀಡಿದ್ದಾರೆಯೇ? ಜನಾರ್ದನ್ ಪೂಜಾರಿ ಬೆಂಬಲಿಗರು ದಯವಿಟ್ಟು ಪ್ರತ್ಯುತ್ತರ ಕೊಡುವಂತೆ ಸರ್ಕಾರವನ್ನು ಒತ್ತಾಯಿಸಿ.. ‘ಡಿಕೆ ಬ್ರದರ್ಸ್‌’ ಎಂದು ಪದವನ್ನು ನಮೂದಿಸಿ ಈಗಿನ ಸರ್ಕಾರವನ್ನೂ ಗುರಿ ಮಾಡಲಾಗಿದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್‌ ಲೈನ್‌ (+91- 9999499044) ಗೆ ಮನವಿ ಬಂದಿದ್ದು ಅದನ್ನು ಶೋಧನೆಗಾಗಿ ಅಂಗೀಕರಿಸಲಾಗಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಮೊದಲು ವೀಡಿಯೋದ ಮೂಲವನ್ನು ಹುಡುಕಿದ್ದೇವೆ. ಇದು ಪಬ್ಲಿಕ್‌ ಟಿವಿಯ ನ್ಯೂಸ್‌ ಕ್ಲಿಪ್ಪಿಂಗ್‌ ಆಗಿದ್ದು ಇದನ್ನು ಯೂಟ್ಯೂಬ್‌ ನಲ್ಲಿ ಕೀವರ್ಡ್ ಸರ್ಚ್ ಮೂಲಕ ಹುಡುಕಿದ್ದೇವೆ. ಈ ವೇಳೆ ಫಲಿತಾಂಶ ಲಭ್ಯವಾಗಿದೆ.

ಡಿಸೆಂಬರ್ 3, 2018ರ ಪಬ್ಲಿಕ್‌ ಟಿವಿ ಯೂಟ್ಯೂಬ್‌ ಚಾನೆಲ್ ನಲ್ಲಿ “Janardhana Poojary Should Be Shot Dead: Mangaluru Congress Minority Unit Leader” ಶೀರ್ಷಿಕೆಯಡಿ ವೀಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಇದರ ವಿವರಣೆಯಲ್ಲಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡನೊಬ್ಬ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಬೇಕೆಂದು ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ. ಭಾನುವಾರ ರಾಮ ಮಂದಿರ ನಿರ್ಮಾಣದ ಪರವಾಗಿ ಜನಾರ್ದನ ಪೂಜಾರಿ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಪೂಜಾರಿ ಮಾತನ್ನು ಟೀಕಿಸಿ, ಆಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡನೊಬ್ಬ, ಪೂಜಾರಿ ಆರೆಸ್ಸೆಸ್ ಜೊತೆಗೆ ನಂಟು ಹೊಂದಿದ್ದಾರೆ. ಅವರು ಕಾಂಗ್ರೆಸಿನಲ್ಲಿ ಸೋಲಲು ಇದೇ ವರ್ತನೆ ಕಾರಣವಾಗಿದೆ. ರಾಮ ಮಂದಿರ ಪರವಾಗಿ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದಾರೆ. ಇಂಥಹ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ ಕೌಂಟರ್ ನಡೆಸಿ ಸಾಯಿಸಬೇಕು. ಜೊತೆಗೆ ರಾಮ ಮಂದಿರದ ಪರವಾಗಿ ಮಾತನಾಡುವವರನ್ನು ಕೊಲ್ಲಬೇಕು. ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತಾ ಹೇಳಿಕೊಂಡಿದ್ದಾನೆ ಎಂದಿದೆ.

Fact Check: 'ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ' ಎಂಬ ಹಳೆಯ ವಿವಾದಾಸ್ಪದ ಹೇಳಿಕೆ ಹಂಚಿಕೆ
2018ರ ಪಬ್ಲಿಕ್‌ ಟಿವಿ ವರದಿ

ಈ ವೀಡಿಯೋವನ್ನು ಆಧಾರವಾಗಿರಿಸಿಕೊಂಡು ನಾವು ಗೂಗಲ್‌ ನಲ್ಲಿ ಶೋಧ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.

ಡಿಸೆಂಬರ್ 3, 2018ರ ದೈಜಿವರ್ಲ್ಡ್ ವರದಿಯಲ್ಲಿ, “ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ಮಾತನಾಡಿದ ಜನಾರ್ದನ್ ಪೂಜಾರಿ ಅವರನ್ನು ಎನ್‌ಕೌಂಟರ್ ಮಾಡಿ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಾಯಕ ಹೇಳಿರುವ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ” ಎಂದಿದೆ. “ಜನಾರ್ದನ ಪೂಜಾರಿಯವರು ಡಿಸೆಂಬರ್ 3 ಭಾನುವಾರ ಮಾಧ್ಯಮದೊಂದಿಗೆ ಅಯೋಧ್ಯೆ ರಾಮಮಂದಿರ ಬಗ್ಗೆ ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ ಘಟಕದ ನಾಯಕರೊಬ್ಬರು ಪೂಜಾರಿ ವಿರುದ್ಧ ಮಾತನಾಡಿದ ಆಡಿಯೋ ಹೊರಬಂದಿದ್ದು, ಪೂಜಾರಿ ಆರೆಸ್ಸೆಸ್‌ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಇದು ಕಾಂಗ್ರೆಸ್‌ ಸೋಲಲು ಕಾರಣವಾಗಿದೆ. ಆರೆಸ್ಸೆಸ್‌ ಜೊತೆಗೆ ಸಂಪರ್ಕದಿಂದಾಗಿ ಆಮ ಮಂದಿರ ಪರವಾಗಿ ಮಾತನಾಡಿದ್ದಾರೆ. ಇಂತಹ ವ್ಯಕ್ತಿಗಳನ್ನು ದೇಶದಲ್ಲಿ ಉಳಿಯಲು ಬಿಡಬಾರದು ಎನ್ಕೌಂಟರ್ ಮೂಲಕ ಅವರನ್ನು ಕೊಲ್ಲಬೇಕು, ಇದರೊಂದಿಗೆ ರಾಮ ಮಂದಿರ ಪರವಾಗಿ ಮಾತನಾಡಿದವರನ್ನೂ ಕೊಲ್ಲಬೇಕು” ಎಂದು ಹೇಳಿರುವುದಾಗಿ ವರದಿಯಲ್ಲಿದೆ.

Fact Check: 'ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ' ಎಂಬ ಹಳೆಯ ವಿವಾದಾಸ್ಪದ ಹೇಳಿಕೆ ಹಂಚಿಕೆ
ದೈಜಿವರ್ಲ್ಡ್ ವರದಿ

ಡಿಸೆಂಬರ್ 4, 2018ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, “ಸಂವಿಧಾನದ ವಿರುದ್ಧವಾಗಿ ರಾಮಮಂದಿರದ ಪರವಾಗಿ ಮಾತನಾಡಿದ್ದಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರನ್ನು ಎನ್ ಕೌಂಟರ್ ಮಾಡಬೇಕೆನ್ನುವ ಆಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ” ಎಂದಿದೆ.

Fact Check: 'ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ' ಎಂಬ ಹಳೆಯ ವಿವಾದಾಸ್ಪದ ಹೇಳಿಕೆ ಹಂಚಿಕೆ
ಟೈಮ್ಸ್ ಆಫ್‌ ಇಂಡಿಯಾ ವರದಿ

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಇನ್ನು ಜನಾರ್ದನ ಪೂಜಾರಿ ಅವರ ಎನ್‌ಕೌಂಟರ್ ಹೇಳಿಕೆ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು ಅದನ್ನು ಮಾರ್ಚ್ 20, 2019ರಂದು ದಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ. “ಮಂಗಳೂರು ಸಿಟಿ ಪೊಲೀಸರು ಜನಾರ್ದನ ಪೂಜಾರಿ ಅವರ ವಿರುದ್ಧ ಎನ್‌ಕೌಂಟರ್ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಡಿಸೆಂಬರ್ 2018ರಂದು ಈ ಆಡಿಯೋ ಕ್ಲಿಪ್‌ ವೈರಲ್‌ ಆಗಿತ್ತು ಆರೋಪಿ ಹಕೀಂ ಪುತ್ತೂರು ಎಂಬಾತ ದಕ್ಷಿಣ ಕನ್ನಡದ ಪುತ್ತೂರು ಮೂಲದವನಾಗಿದ್ದು ದುಬೈಯಲ್ಲಿ ಉದ್ಯೋಗಿಗಯಾಗಿದ್ದ. ಆತನನ್ನು ಮಂಗಳವಾರ ಬೆಳಗ್ಗೆ ಮಂಗಳೂರು ಅಂ.ರಾ. ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ” ಎಂದಿದೆ.

Fact Check: 'ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ' ಎಂಬ ಹಳೆಯ ವಿವಾದಾಸ್ಪದ ಹೇಳಿಕೆ ಹಂಚಿಕೆ
ದಿ ನ್ಯೂಸ್‌ ಮಿನಿಟ್ ವರದಿ

Conclusion

ಈ ಪುರಾವೆಗಳ ಪ್ರಕಾರ, ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಎನ್ ಕೌಂಟರ್ ಮಾಡಿ ಎಂಬ ಹೇಳಿಕೆಯನ್ನು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ನೀಡಿದ ಘಟನೆ 2018ರದ್ದಾಗಿದೆ. ಆದರೆ ಇದನ್ನು ಈಗಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ನ್ಯೂಸ್ ಚೆಕರ್ ಕಂಡುಕೊಂಡಿದೆ.

Result: Missing Context

Our Sources

YouTube Video By Public Tv, Dated: December 3, 2018

Report By Daijiworld, Dated: December 3, 2018

Report By Times of India, Dated: December 4, 2018

Report By The news minute, Dated: March 20, 2019


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors