ಸಕ್ಕರೆಯೊಂದಿಗೆ ಮೂತ್ರ ಬೆರೆಸುವ ವಿಧಾನದೊಂದಿಗೆ ಮಹಿಳೆಯರು ಗರ್ಭಿಣಿಯಾಗಿದ್ದಾರಾ ಇಲ್ಲವೇ ಎಂಬ ಬಗ್ಗೆ ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ನಡೆಸಬಹುದು ಎಂದು ಹೇಳಿಕೊಳ್ಳಲಾಗುತ್ತಿದೆ. ಈ ಕುರಿತ ಫೇಸ್‌ಬುಕ್ ಪೋಸ್ಟ್ ಅನ್ನು ನಾವು ಇಲ್ಲಿ ನೋಡಿದ್ದೇವೆ.

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದ್ದೇವೆ.
Also Read: ಬೆಲ್ಲದ ಚಹಾ ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸಮಸ್ಯೆಗೆ ಸಹಾಯ ಮಾಡುತ್ತದೆಯೇ?
Fact Check/Verification
ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆಗೆ ಸಕ್ಕರೆ ಸಹಾಯ ಮಾಡಬಹುದೇ?
ಇಲ್ಲ. ಈ ವಿಧಾನವನ್ನು ಹೇಳುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ವೈದ್ಯಕೀಯ ಸಂಶೋಧನೆ ಮತ್ತು ಪೀರ್-ರಿವ್ಯೂಡ್ ವೈಜ್ಞಾನಿಕ ಸಾಹಿತ್ಯವನ್ನು ಪರಿಶೀಲಿಸಿದ ನಂತರ, ಈ ಹೇಳಿಕೆಗೆ ಯಾವುದೇ ಜೈವಿಕ ಅಥವಾ ರಾಸಾಯನಿಕ ಆಧಾರವಿಲ್ಲ ಎಂಬುದು ಸ್ಪಷ್ಟವಾಗಿದೆ. ಗರ್ಭಾವಸ್ಥೆಯಲ್ಲಿ ಉತ್ಪತ್ತಿಯಾಗುವ ಹಾರ್ಮೋನ್, ಮೂತ್ರದೊಂದಿಗೆ ಬೆರೆಸಿದಾಗ ಸಕ್ಕರೆ hCG ಯೊಂದಿಗೆ ಯಾವುದೇ ಪರಸ್ಪರ ಕ್ರಿಯೆಯನ್ನು ಹೊಂದುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ನಿಜವಾದ ಗರ್ಭಧಾರಣೆಯ ಪರೀಕ್ಷೆಗಳು ಸಂಶೋಧನೆಯ ಆಧಾರದ ಮೇಲೆ ನಿಂತಿದೆ. ಮೂತ್ರದಲ್ಲಿ ಮಾನವ ಕೋರಿಯಾನಿಕ್ ಗೊನಡೋಟ್ರೋಪಿನ್ (hCG).. ಎಂದಿದ್ದು, ಇದು ಸಕ್ಕರೆಯು ರಾಸಾಯನಿಕವಾಗಿ hCG ಯೊಂದಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ, ಆದ್ದರಿಂದ ಸಕ್ಕರೆ ಮೂಲಕ ಗರ್ಭಧಾರಣೆ ಪರೀಕ್ಷೆ ಮಾಡಬಹುದು ಎಂದಿದ್ದರೆ ಅದು ಅನಗತ್ಯ ಗೊಂದಲಕ್ಕೆ ಕಾರಣವಾಗಬಹುದು.
ನಿಜವಾದ ಗರ್ಭಧಾರಣೆಯ ಪರೀಕ್ಷೆ ಹೇಗೆ?
ಮಹಿಳೆಯ ಮೂತ್ರದಲ್ಲಿ hCG ಎಂಬ ನಿರ್ದಿಷ್ಟ ಹಾರ್ಮೋನ್ ಇರುವಿಕೆಯನ್ನು ಅವರು ಪತ್ತೆ ಮಾಡುತ್ತಾರೆ. ಮಹಿಳೆಯು ಗರ್ಭಿಣಿಯಾದಾಗ, ಅವಳ ದೇಹವು ಹೆಚ್ಚು hCG ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ, ಇದು ಗರ್ಭಧರಿಸಿದ ಸ್ವಲ್ಪ ಸಮಯದ ನಂತರ ಪ್ಲೆಸೆಂಟಾ ಮೂಲಕ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ರಕ್ತಪ್ರವಾಹ ಮತ್ತು ಮೂತ್ರದಲ್ಲಿ ತ್ವರಿತವಾಗಿ ನಿರ್ಮಾಣವಾಗುತ್ತದೆ., ಇದು ಗರ್ಭಧಾರಣೆಯ ಆರಂಭಿಕ ಗುರುತು ಪತ್ತೆ ಮಾಡುತ್ತದೆ.
ಮನೆಯಲ್ಲಿ ಬಳಸಬಹುದಾದ ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಈ ಹಾರ್ಮೋನ್ ಅನ್ನು ಪತ್ತೆಹಚ್ಚಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಿಟ್ ನಲ್ಲಿರುವ ಪಟ್ಟಿಯನ್ನು ಮೂತ್ರ ವಿಸರ್ಜನೆ ವೇಳೆ ಹಿಡಿದುಕೊಂಡರೆ ಅಥವಾ ಮೂತ್ರದ ಮಾದರಿಯಲ್ಲಿ ಮುಳುಗಿಸಿದರೆ hCG ಇದ್ದರೆ, ಅದು ಪಾಸಿಟಿವ್ ತೋರಿಸುತ್ತದೆ. ಸಾಮಾನ್ಯವಾಗಿ ಒಂದು ಗೆರೆ, ಸಂದೇಶ, ಡಿಜಿಟಲ್ ಚಿಹ್ನೆಯನ್ನು ಇದು ತೋರಿಸಬಹುದು.
ಈ ಕಿಟ್‌ಗಳು ಔಷಧಾಲಯಗಳಲ್ಲಿ ಲಭ್ಯವಿವೆ, ಇದಕ್ಕೆ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ ಮತ್ತು ಸರಿಯಾಗಿ ಬಳಸಿದಾಗ 99% ಕ್ಕಿಂತ ಹೆಚ್ಚು ನಿಖರ ಫಲಿತಾಂಶ ನೀಡುತ್ತದೆ.
ಗರ್ಭಧಾರಣೆಯ ಪರೀಕ್ಷೆಗಳಿಗೆ ಮನೆ ಪದಾರ್ಥಗಳನ್ನು ಬಳಸುವ ಬಗ್ಗೆ ವೈದ್ಯರು ಏನು ಹೇಳುತ್ತಾರೆ?
ಸಾಬೀತಾಗದ ವಿಧಾನಗಳನ್ನು ಅವಲಂಬಿಸದಂತೆ ವೈದ್ಯರು ಸಲಹೆ ನೀಡುತ್ತಾರೆ. ಪಾಟ್ನಾದ ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ತ್ರೀರೋಗತಜ್ಞೆ ಡಾ ಸೌಮ್ಯಾ, ಅವರ ಪ್ರಕಾರ ಸಕ್ಕರೆ ಅಥವಾ ಯಾವುದೇ ಗೃಹೋಪಯೋಗಿ ವಸ್ತು ಗರ್ಭಧಾರಣೆ ಪತ್ತೆ ಹಚ್ಚಲು ಸಹಾಯ ಮಾಡುವುದಿಲ್ಲ. hCG ಪರೀಕ್ಷಾ ಕಿಟ್ ವಿಶ್ವಾಸಾರ್ಹ ಪರೀಕ್ಷಾ ಕಿಟ್ ಆಗಿದ್ದು, ಸಾಮಾನ್ಯ ಮೆಡಿಕಲ್ ಗಳಲ್ಲೂ ಲಭ್ಯವಿದೆ. ಇವುಗಳ ಮೂಲಕ ಆರಂಭಿಕವಾಗಿ ಪರೀಕ್ಷಿಸುವುದು ಒಳ್ಳೆಯದು ಎಂದಿದ್ದಾರೆ. ಅಲ್ಲದೆ ಗರ್ಭಾವಸ್ಥೆಯನ್ನು ದೃಢೀಕರಿಸಲು, ಭ್ರೂಣದ ವಯಸ್ಸನ್ನು ನಿರ್ಧರಿಸಲು ಮತ್ತು ಯಾವುದೇ ಸಮಸ್ಯೆಗಳಿದ್ದರೆ ಪರಿಹಾರಕ್ಕೆ, ಕಿಬ್ಬೊಟ್ಟೆಯ ಅಥವಾ ಟ್ರಾನ್ಸ್ವಾಜಿನಲ್ ಅಲ್ಟ್ರಾಸೌಂಡ್ಗಾಗಿ ವೈದ್ಯರನ್ನು ಭೇಟಿಯಾಗಬೇಕು. ಆರಂಭಿಕವಾಗಿ ತಾಯಿ ಸರಿಯಾದ ಆರೈಕೆಯನ್ನು ಪಡೆಯುವುದರಲ್ಲಿ ಈ ಹಂತವು ನಿರ್ಣಾಯಕವಾಗಿದೆ ಎಂದಿದ್ದಾರೆ.
ನವದೆಹಲಿಯ ಜೀವನ್ ಅನ್ಮೋಲ್ ಆಸ್ಪತ್ರೆಯ ಸ್ತ್ರೀರೋಗತಜ್ಞೆ ಡಾ ಪೂಜಾ ಲೂತ್ರಾ ಅವರ ಪ್ರಕಾರ, ಸಕ್ಕರೆ ಪರೀಕ್ಷೆ ವಿಶ್ವಾಸಾರ್ಹವಲ್ಲ”ಸಕ್ಕರೆ ಅಥವಾ ಇತರ ಪದಾರ್ಥಗಳಿಗೆ ಯಾವುದೇ ವೈಜ್ಞಾನಿಕ ಸಿಂಧುತ್ವವಿಲ್ಲ. ವಿಶ್ವಾಸಾರ್ಹ ಫಲಿತಾಂಶಗಳಿಗಾಗಿ, ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಅತ್ಯುತ್ತಮ ಆಯ್ಕೆಯಾಗಿದೆ. ಸರಿಯಾದ ಆರೈಕೆಯತ್ತ ಮುಂದುವರಿಯಲು ಕಿಟ್ ಗಳ ಮೂಲಕ ಮನೆಯಲ್ಲೇ ಪರೀಕ್ಷೆಯ ನಂತರ ಶೀಘ್ರ ವೈದ್ಯರನ್ನು ಭೇಟಿ ಮಾಡಬೇಕು.
ಜನರು ಮನೆಯಲ್ಲೇ ಗರ್ಭಧಾರಣೆಯ ಪರೀಕ್ಷೆಗಳನ್ನು ಏಕೆ ಪ್ರಯತ್ನಿಸುತ್ತಾರೆ?
ಅನೇಕ ಮಹಿಳೆಯರಿಗೆ, ಮನೆಯಲ್ಲಿ ಗರ್ಭಧಾರಣೆಯ ಪರೀಕ್ಷೆ ತೆಗೆದುಕೊಳ್ಳುವುದು ಖಾಸಗಿ ವಿಚಾರಕ್ಕೆ, ತ್ವರಿತ ಮಾರ್ಗವಾಗಿದೆ. ವೈದ್ಯಕೀಯ ಸಹಾಯ ಪಡೆಯುವ ಮೊದಲ ಹಂತ. ಹೋಮ್ ಪ್ರೆಗ್ನೆನ್ಸಿ ಕಿಟ್‌ಗಳು ಸುಲಭವಾಗಿ ಲಭ್ಯವಿವೆ ಮತ್ತು ಪ್ರಿಸ್ಕ್ರಿಪ್ಷನ್ ಅಥವಾ ಅಪಾಯಿಂಟ್‌ಮೆಂಟ್ ಅಗತ್ಯವಿಲ್ಲದೇ ನಿಖರವಾಗಿ ಪತ್ತೆಹಚ್ಚುತ್ತವೆ.
ಇವುಗಳ ಹಿನ್ನೆಲೆಯಲ್ಲಿ ಜನರೂ ಪರೀಕ್ಷಾ ಕಿಟ್ ಗಳಿಗಿಂತಲೂ ಸುಲಭ ಎಂಬ ಕಾರಣಕ್ಕೆ, ಸೀಮಿತವಾದ ಸ್ಥಳಗಳಲ್ಲಿ ಸಕ್ಕರೆ ಅಥವಾ ಅಡಿಗೆ ಸೋಡಾವನ್ನು ಬಳಸುವ ನೀವೇ ಮಾಡಿ ನೋಡಿ ಎಂಬ ಪರೀಕ್ಷೆಗೆ ಮುಂದಾಗಬಹುದು. ಆದರೆ ಅವುಗಳು ವೈದ್ಯಕೀಯವಾಗಿ ವಿಶ್ವಾಸಾರ್ಹವಲ್ಲ.
ಈ ಅವೈಜ್ಞಾನಿಕ ವಿಧಾನಗಳು ಸುಳ್ಳು ಭರವಸೆ ಅಥವಾ ಅನಗತ್ಯ ಭಯ ಉಂಟುಮಾಡಬಹುದು. ತಪ್ಪು ಧನಾತ್ಮಕ ಭಾವನಾತ್ಮಕ ಒತ್ತಡವನ್ನು ಉಂಟುಮಾಡಬಹುದು. ದೀರ್ಘಾವಧಿಯಲ್ಲಿ, ಮಹಿಳೆಯ ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು.
Conclusion
ಸಕ್ಕರೆಯು ಗರ್ಭಧಾರಣೆಯನ್ನು ಪತ್ತೆ ಮಾಡುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ. ಸಕ್ಕರೆ hCG ಯೊಂದಿಗೆ ಸಂವಹನ ನಡೆಸುವುದಿಲ್ಲ ಮತ್ತು ಅದನ್ನು ನಂಬಲು ಯಾವುದೇ ರಾಸಾಯನಿಕ ಆಧಾರವಿಲ್ಲ. ಹೋಮ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್‌ಗಳು, ಮತ್ತೊಂದೆಡೆ, ಎಚ್‌ಸಿಜಿಯ ಸಣ್ಣ ಕುರುಹುಗಳನ್ನು ಸಹ ಗುರುತಿಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಗರ್ಭಿಣಿಯಾಗಿದ್ದರೆ ವಿಶ್ವಾಸಾರ್ಹ ಪರೀಕ್ಷೆ ಮಾಡುವುದೊಳ್ಳೆಯದು. ವೈದ್ಯರ ಭೇಟಿ ಉತ್ತಮ.
Also Read: ಥೈರಾಯ್ಡ್ ಆರೋಗ್ಯಕ್ಕೆ ಹಲಸಿನ ಹಣ್ಣು ಪ್ರಯೋಜನಕಾರಿಯೇ?
Our Sources
Strips of Hope: Accuracy of Home Pregnancy Tests and New Developments
Early Pregnancy Diagnosis
Conversation with Dr Saumya, gynaecologist at ESIC Medical College and Hospital, Patna
Dr Pooja Luthra, a gynaecologist at Jivan Anmol Hospital, New Delhi
(This article has been published in collaboration with THIP Media)