Saturday, March 29, 2025

Fact Check

ಬೆಲ್ಲದ ಚಹಾ ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸಮಸ್ಯೆಗೆ ಸಹಾಯ ಮಾಡುತ್ತದೆಯೇ?

banner_image

Claim

image

ಬೆಲ್ಲದ ಚಹಾವನ್ನು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುತ್ತದೆ

Fact

image

ಬೆಲ್ಲದ ಚಹಾವು ಎಲ್ಲ ರೀತಿಯ ಪರಿಹಾರವಲ್ಲ. ಇದು ಕೆಲವು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ ಆದರೆ ನೇರವಾಗಿ ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಗಮನಾರ್ಹವಾಗಿ ಸುಧಾರಿಸಲು ಅಥವಾ ರಕ್ತಹೀನತೆಯನ್ನು ನಿವಾರಿಸಲು ಕಾರಣವಾಗುವುದಿಲ್ಲ

ಬೆಲ್ಲದ ಚಹಾ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.

ಇನ್‌ಸ್ಟಾಗ್ರಾಂ  ಪೋಸ್ಟ್‌ ನಲ್ಲಿ ಹೇಳಿರುವಂತೆ ಬೆಲ್ಲದ ಚಹಾವನ್ನು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದಿದೆ. ಇದರ ಬಗ್ಗೆ ನಾವು ಸತ್ಯಶೋಧನೆ ಮಾಡಿದ್ದು ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.

Also Read: ರಾಮೇಶ್ವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದ ವೀಡಿಯೋ ಎಐ ಉತ್ಪತ್ತಿ

Fact Check/Verification

ಬೆಲ್ಲದ ಚಹಾವು ತೂಕ ನಷ್ಟಕ್ಕೆ ಸಹಾಯ ಮಾಡಬಹುದೇ?

ಇಲ್ಲ, ಬೆಲ್ಲದ ಚಹಾವು ತೂಕ ನಷ್ಟಕ್ಕೆ ಮಾಂತ್ರಿಕ ಪರಿಹಾರವಲ್ಲ. ಬೆಲ್ಲ ಸಕ್ಕರೆಯ ಒಂದು ರೂಪ. ಬಿಳಿ ಸಕ್ಕರೆಗಿಂತ ಕಡಿಮೆ ಸಂಸ್ಕರಣೆಯಾಗಿದ್ದರೂ, ಇದು ಬಹುತೇಕ ಅದೇ ಸಂಖ್ಯೆಯ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಒಂದು ಚಮಚ ಬೆಲ್ಲದಲ್ಲಿ 60 ಕ್ಯಾಲೋರಿಗಳಿವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ತ್ವರಿತವಾಗಿ ಏರಿಕೆಯಾಗುತ್ತದೆ. ತೂಕ ನಷ್ಟ ಎಂದರೆ ಪ್ರಾಥಮಿಕವಾಗಿ ಕ್ಯಾಲೋರಿ ಕೊರತೆ ಯಾಗುವುದಾಗಿದೆ. ಅಂದರೆ ಸೇವಿಸುವುದಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ನಷ್ಟಮಾಡುವುದು. ಹೆಚ್ಚಿನ ಕ್ಯಾಲೋರಿ ಆಹಾರದ  ನಿರ್ವಹಣೆ ವೇಳೆ ಬೆಲ್ಲದ ಚಹಾವನ್ನು ಕುಡಿಯುವುದು ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುವುದಿಲ್ಲ.

 ಬೆಲ್ಲ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ (ಜಿಐ) ಹೊಂದಿದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ಉಂಟುಮಾಡಬಹುದು, ಇದು ಹೆಚ್ಚಿನ ಬಯಕೆ ಮತ್ತು ಹಸಿವಿನ ಸಂಕಟಗಳಿಗೆ ಕಾರಣವಾಗುತ್ತದೆ. ಮಿತಿಮೀರಿ ಸೇವಿಸಿದರೆ, ತೂಕವನ್ನು ಕಳೆದುಕೊಳ್ಳುವ ಬದಲು ತೂಕ ಹೆಚ್ಚಾಗಬಹುದು.

ಬೆಲ್ಲದ ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆಯೇ?

ಬಹುಶಃ ಮಾಡಬಹುದು. ಆದರೆ ಬೆಲ್ಲದ ಚಹಾದಲ್ಲಿ ಯಾವ ಸಂಯೋಜನೆ ಇರಬೇಕು ಎಂಬ ಬಗ್ಗೆ ಖಚಿತಪಟ್ಟಿಲ್ಲ. ಕೆಲವು ಸಂಶೋಧನಾ ಅಧ್ಯಯನಗಳು  ಬೆಲ್ಲವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತವೆ. ಇದು ಜೀರ್ಣಕ್ರಿಯೆಯನ್ನು ಬೆಂಬಲಿಸುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳನ್ನು ಹೊಂದಿರುತ್ತದೆ ಆದರೆ ಇದಕ್ಕೆ ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಬೆಲ್ಲದ ಚಹಾವನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ತಿಳಿದುಕೊಳ್ಳಬಹುದು.

ಕೆಲವು ಜನರು-ವಿಶೇಷವಾಗಿ ಕೆರಳಿದ ಕರುಳಿನ ಸಹಲಕ್ಷಣಗಳು (IBS) ಅಥವಾ ಸೂಕ್ಷ್ಮ ಹೊಟ್ಟೆ ಹೊಂದಿರುವವರಿಗೆ ಬೆಲ್ಲ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು, ಏಕೆಂದರೆ ಇದು ಕರುಳಿನಲ್ಲಿ ಹುದುಗುವಿಕೆ ಮತ್ತು ಉಬ್ಬುವುದು ಅಥವಾ ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಬೆಲ್ಲದ ಚಹಾ ರಕ್ತಹೀನತೆಗೆ ಪರಿಹಾರ ನೀಡಬಹುದೇ?

ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿಲ್ಲ. ಬೆಲ್ಲ ಕಬ್ಬಿಣ ಅಂಶ ಒಳಗೊಂಡಿದೆ, ಆದರೆ ಮೊತ್ತವು ತುಂಬಾ ಚಿಕ್ಕದಾಗಿದೆ-100 ಗ್ರಾಂಗೆ ಸುಮಾರು 11 ಮಿಗ್ರಾಂ. ಬೆಲ್ಲದ ಚಹಾದ ಸೇವನೆಯಲ್ಲಿ ಅದು ಕಡಿಮೆಯಿರುವುದರಿಂದ ರಕ್ತಹೀನತೆ ಹೊಂದಿರುವವರಿಗೆ ಹೆಚ್ಚು ಪೂರಕವಾಗಿಲ್ಲ

ಮೇಲಾಗಿ, ಬೆಲ್ಲದ ಕಬ್ಬಿಣ ಹೀಮ್ ಅಲ್ಲದ ಕಬ್ಬಿಣವಾಗಿದೆ (ಸಸ್ಯ ಮೂಲದಿಂದ) ಅಂದರೆ ಪ್ರಾಣಿ ಮೂಲಗಳಿಂದ ಬಂದ ಹೀಮ್ ಕಬ್ಬಿಣಕ್ಕೆ ಹೋಲಿಸಿದರೆ ಇದು ದೇಹದಲ್ಲಿ ಸುಲಭವಾಗಿ ಹೀರಲ್ಪಡುವುದಿಲ್ಲ. ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು, ಅದರೊಂದಿಗೆ  ವಿಟಮಿನ್ ಸಿ ಭರಿತ ಆಹಾರಗಳು ವಿಶೇಷವಾಗಿ ಸಿಟ್ರಸ್ ಹಣ್ಣು ಗಳನ್ನು ಸೇವಿಸಬೇಕು. ರಕ್ತಹೀನತೆಯನ್ನು ಸರಿಪಡಿಸಲು ಬೆಲ್ಲದ ಚಹಾವನ್ನು ಕುಡಿಯುವುದು ಸಾಕಾಗುವುದಿಲ್ಲ.

ಬೆಲ್ಲದ ಚಹಾ ಕುಡಿಯಬಹುದೇ?

ಕುಡಿಯಬಹುದು, ಆದರೆ ಮಿತವಾಗಿ ಮತ್ತು ಪವಾಡಗಳನ್ನು ನಿರೀಕ್ಷಿಸುವಂತಿಲ್ಲ. ಬೆಲ್ಲವು ಕೆಲವು ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ನೀಡುತ್ತದೆ. ಇದು ಸಂಸ್ಕರಿಸಿದ ಸಕ್ಕರೆಗೆ ಉತ್ತಮ ಪರ್ಯಾಯ. ಆದಾಗ್ಯೂ, ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಬೇಕು, ವಿಶೇಷವಾಗಿ ತೂಕ ಕಡಿಮೆ ಮಾಡಲು ಬಯಸುವವರು ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಣೆ ಮಾಡಬೇಕೆಂದಿರುವವರು ಗಮನಿಸಬೇಕಾಗಿದೆ.

ತೂಕ ನಷ್ಟ, ಜೀರ್ಣಕ್ರಿಯೆ ಅಥವಾ ರಕ್ತಹೀನತೆಯ ಪರಿಹಾರಕ್ಕಾಗಿ ಬೆಲ್ಲದ ಚಹಾವನ್ನು ಅವಲಂಬಿಸುವ ಬದಲು, ಸಮತೋಲಿತ ಆಹಾರ, ಫೈಬರ್-ಭರಿತ ಆಹಾರಗಳು, ನೇರ ಪ್ರೋಟೀನ್ಗಳನ್ನು ಹೊಂದಿರುವ ಪಾಲಕ್, ದಾಲ್ ನಂತಹ ಕಬ್ಬಿಣಾಂಶ ಸಮೃದ್ಧವಾದ ಮೂಲಗಳನ್ನು ಅವಲಂಬಿಸಬಹುದು. ರಕ್ತಹೀನತೆಯನ್ನು ಹೊಂದಿದ್ದರೆ, ಸರಿಯಾದ ಆಹಾರಕ್ಕಾಗಿ ವೈದ್ಯರನ್ನು ಸಂಪರ್ಕಿಸಬೇಕು.

Conclusion

ಬೆಲ್ಲದ ಚಹಾವು ಎಲ್ಲ ರೀತಿಯ ಪರಿಹಾರವಲ್ಲ. ಇದು ಕೆಲವು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ ಆದರೆ ನೇರವಾಗಿ ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಗಮನಾರ್ಹವಾಗಿ ಸುಧಾರಿಸಲು ಅಥವಾ ರಕ್ತಹೀನತೆಯನ್ನು ನಿವಾರಿಸಲು ಕಾರಣವಾಗುವುದಿಲ್ಲ. ಆದರೆ ಮಿತವಾದ ಸೇವನೆ ಮುಖ್ಯ. ನಿಜವಾದ ಆರೋಗ್ಯ ಪ್ರಯೋಜನಕ್ಕೆ ಸಮಗ್ರ ಆಹಾರ ಕ್ರಮ ಉತ್ತಮ.  

Also Read: ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋ ವೈರಲ್

Our Sources
New dimensions in development of health-based spices and herbs fortified value added jaggery products

Optimal Diet Strategies for Weight Loss and Weight Loss Maintenance

(This article has been published in collaboration with THIP Media)


RESULT
imageFalse
image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,571

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.