Fact Check: ಕಾವೇರಿ ವಿವಾದ ಹಿನ್ನೆಲೆ ತಮಿಳುನಾಡು ಲಾರಿ ಚಾಲಕನ ಮೇಲೆ ಹಲ್ಲೆಯ ವೀಡಿಯೋ ಈಗಿನದ್ದಲ್ಲ!

ಲಾರಿ ಚಾಲಕ, ತಮಿಳುನಾಡು, ಕರ್ನಾಟಕ,. ಹಲ್ಲೆ ಕಾವೇರಿ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕಾವೇರಿ ವಿವಾದ ಹಿನ್ನೆಲೆಯಲ್ಲಿ ತಮಿಳುನಾಡು ಲಾರಿ ಚಾಲಕನ ಮೇಲೆ ಹಲ್ಲೆ

Fact
ತಮಿಳು ಚಾಲಕನ ಮೇಲೆ ಹಲ್ಲೆ ನಡೆದ ವೀಡಿಯೋ ಈಗಿನದ್ದಲ್ಲ. ಅದು 2016ರ ಸಮಯದ್ದು

ಕಾವೇರಿ ನದಿ ನೀರು ಹಂಚಿಕೆ ಕುರಿತ ವಿವಾದ, ತಮಿಳುನಾಡಿಗೆ ನೀರು ಬಿಡುತ್ತಿರುವ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆ, ಬಂದ್‌ ಕರೆ ವಿದ್ಯಮಾನಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ವೈರಲ್‌ ಆಗಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ವೀಡಿಯೋದಲ್ಲಿ, ಕನ್ನಡ ಕಾರ್ಯಕರ್ತರು ಎಂದು ಗುರುತಿಸಲಾದ ವ್ಯಕ್ತಿಗಳು ತಮಿಳುನಾಡು ಲಾರಿ ಚಾಲಕನೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಇಲ್ಲಿದೆ. 4.08 ನಿಮಿಷಗಳ ಈ ವೀಡಿಯೋದಲ್ಲಿ “ಕರ್ನಾಟಕಕ್ಕೆ ಯಾಕೆ ಬಂದಿದ್ದೀಯಾ? ಕನ್ನಡ ಮಾತಾಡು, ಕಾವೇರಿ ನಮ್ಮದು ಎಂದು ಹೇಳು… “ ಎಂದು ಬೈಗುಳಗಳ ನಡುವೆ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಇದಾಗಿದೆ.

Also Read: ಹುಡುಗಿಯ ದುಪ್ಪಟ್ಟಾ ಎಳೆದ ಆರೋಪಿಗಳ ಪರಿಸ್ಥಿತಿ ಹೀಗಾಗಿದೆ ಎಂದ ವೈರಲ್ ವೀಡಿಯೋ ನಿಜವೇ?

ಈ ವೀಡಿಯೋದ ಬಗ್ಗೆ ಸತ್ಯಶೋಧನೆಗೆ ನ್ಯೂಸ್‌ಚೆಕರ್ ಮುಂದಾಗಿದ್ದು, ಇದು ಹಳೆಯ ವೀಡಿಯೋ, ಈಗಿನ ಕಾವೇರಿ ವಿವಾದ/ಪ್ರತಿಭಟನೆಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್‌ ಗಳನ್ನು ತೆಗೆದಿದ್ದೇವೆ. ಬಳಿಕ ಗೂಗಲ್‌ನಲ್ಲಿ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಯೂಟ್ಯೂಬ್‌ ವೀಡಿಯೋವೊಂದು ಲಭ್ಯವಾಗಿದೆ.

ಸೆಪ್ಟೆಂಬರ್ 13, 2016ರಂದು ರೆಡ್ ಪಿಕ್ಸ್ ಆಲ್ಫಾ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ “Cauvery Row: Elderly Lorry Driver From Tamil Nadu Forced to Speak Kannada” (ಕಾವೇರಿ ವಿವಾದ: ತಮಿಳುನಾಡಿನ ಹಿರಿಯ ಲಾರಿ ಚಾಲಕನಿಗೆ ಕನ್ನಡ ಮಾತನಾಡುವಂತೆ ಬಲವಂತ) ಶೀರ್ಷಿಕೆಯಡಿ ವೀಡಿಯೋವೊಂದನ್ನು ಪ್ರಕಟಿಸಲಾಗಿದೆ.

ಈ ವೀಡಿಯೋವನ್ನು ನಾವು ಪರಿಶೀಲನೆ ಮಾಡಿದ್ದು, ಇದು ವೈರಲ್‌ ವೀಡಿಯೋಕ್ಕೆ ಸಾಮ್ಯತೆ ಹೊಂದಿರುವುದನ್ನು ಗುರುತಿಸಿದ್ದೇವೆ.

ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಸೆಪ್ಟೆಂಬರ್ 13, 2016ರಂದು ನ್ಯೂಸ್‌18 ತಮಿಳುನಾಡು ಯೂಟ್ಯೂಬ್‌ ಚಾನೆಲ್‌ ಪ್ರಕಟಿಸಿದ ವೀಡಿಯೋಕ್ಕೆ “Cauvery Issue: Tamil Nadu lorry driver attacked by pro-Kannada outfits” ಎಂಬ ಶೀರ್ಷಿಕೆ ನೀಡಲಾಗಿದ್ದು, “ಕರ್ನಾಟಕದಲ್ಲಿ ತಮಿಳುನಾಡು ಟ್ರಕ್‌ ಮೇಲೆ ಹಿಂಸಾತ್ಮಕ ದಾಳಿ” (ಭಾಷಾಂತರಿಸಲಾಗಿದೆ) ಎಂಬ ವಿವರಣೆ ಕೊಡಲಾಗಿದೆ.

Also Read: ಮನೆ ಬಳಿ ಬಸ್‌ ನಿಲ್ಲಿಸದ್ದಕ್ಕೆ ಮುಸ್ಲಿಂ ಗುಂಪು ಬಸ್‌ ಪುಡಿಗಟ್ಟಿತೇ, ಸತ್ಯ ಏನು?

ಈ ವೀಡಿಯೋದಲ್ಲೂ ನಾವು ತಮಿಳು ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ಕಂಡುಕೊಂಡಿದ್ದು, ಈ ವಿದ್ಯಮಾನ ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ನಡೆದಿದೆ ಎಂದು ತಿಳಿದುಕೊಂಡಿದ್ದೇವೆ.

ಸೆಪ್ಟೆಂಬರ್ 13, 2016ರ ಪುದಿಯತಲೈಮುರೈ ಟಿವಿ ಯೂಟ್ಯೂಬ್‌ ಚಾನೆಲ್‌ ಪ್ರಕಟಿಸಿದ ವೀಡಿಯೋಕ್ಕೆ “Cauvery issue: TN lorry drivers brutally attacked by Kannadigas near border” ಎಂಬ ಶೀರ್ಷಿಕೆ ನೀಡಲಾಗಿದೆ. ಇದರಲ್ಲೂ ವೈರಲ್‌ ವೀಡಿಯೋವನ್ನು ಹೋಲುವ ವೀಡಿಯೋ ಇದ್ದು, ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಯವರು ಎಂದು ಗುರುತಿಸಿದ ವ್ಯಕ್ತಿಗಳು ತಮಿಳುನಾಡು ಲಾರಿ ಚಾಲಕನಿಗೆ ಕನ್ನಡ ಮಾತಾಡುವಂತೆ ಬಲವಂತ, ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ.

ಈ ಕುರಿತು ಶೋಧನೆ ನಡೆಸಿದಾಗ, ಕರ್ನಾಟಕ ಸ್ಟೇಟ್ ಪೊಲೀಸ್‌ ಫ್ಯಾಕ್ಟ್ ಚೆಕ್‌ ಸೆಪ್ಟೆಂಬರ್ 26, 2023ರಂದು ಮಾಡಿರುವ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ “ತಮಿಳು ಲಾರಿ ಚಾಲಕನ ಮೇಲೆ ಗಡಿಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾದ ವೀಡಿಯೋ ಹಳೆಯದಾಗಿದೆ” ಎಂದು ಹೇಳಲಾಗಿದೆ.

Also Read: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

Conclusion

ಈ ಸಾಕ್ಷ್ಯಾಧಾರಗಳ ಪ್ರಕಾರ, ತಮಿಳುನಾಡು ಲಾರಿ ಚಾಲಕನಿಗೆ ಹಲ್ಲೆ ನಡೆಸಿ ಕನ್ನಡ ಮಾತನಾಡುವಂತೆ, ಕಾವೇರಿ ನಮ್ಮದು ಎಂದು ಹೇಳುವಂತೆ ಹಲ್ಲೆ ನಡೆಸಿದ ವಿದ್ಯಮಾನ ಇತ್ತೀಚಿನದ್ದಲ್ಲ, ಇದು 2016ರ ಹೊತ್ತಿನದ್ದು ಎಂದು ತಿಳಿದುಬಂದಿದೆ.

Result: Partly False

Our Sources
YouTube Video By News18 Tamilnadu, Dated: September 13, 2016

YouTube Video By PuthiyathalaimuraiTV, Dated: September 13, 2016

Tweet By Karnataka State Police Fact Check, Dated: September 26, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.