Authors
Claim
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ
Fact
ಬೆಂಗಳೂರಿನ ಕೋರಮಂಗಲದ ವಾಣಿಜ್ಯ ಕಟ್ಟದ ಮಹಡಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ
ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಫೋಟದ ವೀಡಿಯೋ ಒಂದು ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಪಾಕಿಸ್ಥಾನ, ಆಸ್ಟ್ರೇಲಿಯಾ ನಡುವಿನ ಐಸಿಸ್ ಕ್ರಿಕೆಟ್ ವಿಶ್ವಕಪ್ ಪಂದ್ಯಾಟದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಎಂದು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ನಲ್ಲಿ ಕಂಡುಬಂದಿರುವ ಈ ಕ್ಲೇಮ್ನಲ್ಲಿ “Bomb Blast In Banglore (India) Near stadium,Hope everyone is Safe” ಎಂದು ಬರೆಯಲಾಗಿದೆ.
Also Read: ಇಸ್ರೇಲ್ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎನ್ನುವುದು ನಿಜವೇ?
ಇದೇ ರೀತಿಯ ಕ್ಲೇಮ್ಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಬಂದಿವೆ. ಮತ್ತು ಪಾಕಿಸ್ಥಾನ ಆಟಗಾರರು ಅಪಾಯದಲ್ಲಿದ್ದಾರೆ ಎಂದು ಹೇಳಿಕೊಳ್ಳಲಾಗುತ್ತಿದೆ.
ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು,ಇದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ವರದಿಗಳು ಲಭ್ಯವಾಗಿವೆ.
ಅಕ್ಟೋಬರ್ 20, 2023ರ ಪ್ರಜಾವಾಣಿ ವರದಿಯಲ್ಲಿ “ಕೋರಮಂಗಲ ಅಗ್ನಿ ಅವಘಡ ಚಾವಣಿಯಲ್ಲಿ 10 ಸಿಲಿಂಡರ್ ಸಂಗ್ರಹ; ಸೋರಿಕೆಯಿಂದ ಸ್ಫೋಟ” ಎಂದಿದೆ. ಇದರಲ್ಲಿ “ಕೋರಮಂಗಲ ಬಳಿಯ ತಾವರಕೆರೆ ಜಂಕ್ಷನ್ ನಲ್ಲಿರುವ ಮಡ್ ಪೈಪ್ ಕೆಫೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಕಟ್ಟಡದ ಚಾವಣಿಯಲ್ಲಿ ಅಕ್ರಮವಾಗಿ 10 ಸಿಲಿಂಡರ್ ಸಂಗ್ರಹಿಸಿಡಲಾಗಿತ್ತು. ಕೆಲ ಸಿಲಿಂಡರ್ ಗಳಿಂದ ಅಡುಗೆ ಅನಿಲ ಸೋರಿಕೆಯಾಗಿದ್ದೇ ಅವಘಡಕ್ಕೆ ಕಾರಣ ಎಂಬ ಸಂಗತಿ ಗೊತ್ತಾಗಿದೆ” ಎಂದಿದೆ.
18 ಒಕ್ಟೋಬರ್ 2023ರ ಕನ್ನಡ ಪ್ರಭ ವರದಿಯಲ್ಲಿ “ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಬಹುಮಹಡಿ ಕಟ್ಟಡದ ಪಬ್ ನಲ್ಲಿ ಬೆಂಕಿ, ಇಬ್ಬರಿಗೆ ಗಂಭೀರ ಗಾಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬುಧವಾರ ಮತ್ತೊಂದು ಅಗ್ನಿದುರಂತ ಸಂಭವಿಸಿದೆ. ಕೋರಮಂಗಲ ಸಮೀಪದ ತಾವರಕೆರೆ ಮುಖ್ಯರಸ್ತೆಯಲ್ಲಿರುವ ಪಬ್ ವೊಂದರಲ್ಲಿ ಸಿಲಿಂಡರ್ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ.” ಎಂದಿದೆ.
Also Read: ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?
ಪ್ರಕರಣದ ಬಗ್ಗೆ ಇನ್ನೂ ಅನೇಕ ವರದಿಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ನೋಡಿದ್ದೇವೆ. ಈವರದಿಗಳಲ್ಲಿ ಸ್ಫೋಟಕ್ಕೆ ಅನಿಲ ಸಿಲಿಂಡರ್ ಸೋರಿಕೆ ಕಾರಣ ಎಂದಿರುವುದನ್ನು ನಾವು ಗಮನಿಸಿದ್ದೇವೆ. ಮತ್ತು ವರದಿಗಳಲ್ಲಿ ಕಟ್ಟಡದ ಮಾಲಿಕ ಮತ್ತು ಕೆಫೆ ಮಾಲಿಕರ ವಿರುದ್ಧ ಕೇಸು ದಾಖಲಿಸಿರುವುದನ್ನು ಗಮನಿಸಿದ್ದೇವೆ.
ಹೆಚ್ಚಿನ ಮಾಹಿತಿಗಾಗಿ ನಾವು ಸದ್ದುಗುಂಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರನ್ನು ಸಂಪರ್ಕಿಸಿದ್ದು, “ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಕೋರಮಂಗಲದ ವಾಣಿಜ್ಯ ಕಟ್ಟಡದ 4ನೇ ಅಂತಸ್ತಿನಲ್ಲಿದ್ದ ಮಡ್ ಪೈಪ್ ಕೆಫೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ನೇಪಾಳದ ವ್ಯಕ್ತಿ, ಕೆಫೆಯ ಅಡಿಗೆಯಾತ ಕಟ್ಟಡದಿಂದ ಜಿಗಿದಿದ್ದು ಗಾಯಗೊಂಡಿದ್ದಾನೆ. ಆತ ಅಡುಗೆ ಕೋಣೆಯಲ್ಲಿ ಅನಿಲ ಸೋರಿಕೆಯಾಗಿರುವುದನ್ನು ಹೇಳಿದ್ದಾನೆ” ಎಂದು ನ್ಯೂಸ್ಚೆಕರ್ ಗೆ ತಿಳಿಸಿದ್ದಾರೆ.
ಇನ್ನು ಈ ಘಟನೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಸುದ್ದಿ ಹರಡಲಾಗುತ್ತಿದೆ ಎಂದು ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್ ವರದಿ ಹೇಳಿದೆ. ಈ ವರದಿಯಲ್ಲಿ ಪ್ರಾಥಮಿಕ ತನಿಖೆಯಲ್ಲಿ ಸಿಲಿಂಡರ್ ಸೋರಿಕೆ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿದ್ದಾಗಿ ಹೇಳಿದೆ.
Also Read: ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?
Conclusion
ಈ ಸಾಕ್ಷ್ಯಗಳ ಪ್ರಕಾರ, ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದ್ದಲ್ಲ, ಸಿಲಿಂಡರ್ ಸ್ಫೋಟದಿಂದಾಗಿ ಅವಘಡ ನಡೆದಿದೆ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.
Result: False
Report By Prajavani, Dated: October 20, 2023
Report By Kannadaprabha Dated: 18, 2023
Report By Karnataka Police Fact Check, Dated: October 18, 2023
Conversation with Police Inspector, Sudduguntepalya, Bengaluru
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.