Fact Check: ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆಯೇ, ವೈರಲ್‌ ವೀಡಿಯೋ ನಿಜವೇ?

ಆಗುಂಬೆ ಘಾಟಿ, ಹುಲಿ ಸಂಚಾರ, ವೈರಲ್‌ ವೀಡಿಯೋ

Claim
ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆ

Fact
ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿಲ್ಲ. ಈ ವೈರಲ್‌ ವೀಡಿಯೋ 2022ರ ತಮಿಳುನಾಡಿನ ವಾಲ್ಪಾರೈ ಪ್ರದೇಶದ್ದು.

ಆಗುಂಬೆ ಘಾಟಿಯಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತ ಫೇಸ್ಬುಕ್‌ ಕ್ಲೇಮ್‌ ಒಂದರಲ್ಲಿ ರಸ್ತೆಯಲ್ಲಿ ಹುಲಿಯೊಂದು ಸಂಚರಿಸುತ್ತಿರುವ ಬಳಿಕ ರಸ್ತೆಯಿಂದ ಅದು ಎತ್ತರದ ಪ್ರದೇಶಕ್ಕೆ ನೆಗೆಯುತ್ತಿರುವ ವೀಡಿಯೋವನ್ನು ಹಾಕಲಾಗಿದ್ದು, “ಆಗುಂಬೆ ಘಾಟ್ 15 ಮಾರ್ಚ್ 2023” ಎಂದು ಬರೆಯಲಾಗಿದೆ.

ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆ
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಇನ್ನೊಂದು ಟ್ವಿಟರ್‌ ಕ್ಲೇಮ್‌ನಲ್ಲಿ “Tiger spotted on Agumbe Ghat” ಎಂದು ಬರೆಯಲಾಗಿದ್ದು, ರಸ್ತೆಯಲ್ಲಿ ಹುಲಿ ಹೋಗುತ್ತಿರುವ ಅದೇ ವೈರಲ್‌ ವೀಡಿಯೋವನ್ನುಹಂಚಿಕೊಳ್ಳಲಾಗಿದೆ. ಈ ಟ್ವೀಟ್‌ ಇಲ್ಲಿದೆ.

ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆ
ಟ್ವಿಟರ್‌ನಲ್ಲಿ ಕಂಡುಬಂದ ಕ್ಲೇಮ್‌

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆಯನ್ನು ನಡೆಸಿದ್ದು ಇದೊಂದು ತಪ್ಪಾದ ಸಂದರ್ಭ ಎಂಬುದನ್ನು ಕಂಡುಕೊಂಡಿದೆ.

Fact Check/Verification

ಸತ್ಯಶೋಧನೆಗಾಗಿ ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌ಗಳನ್ನು ತೆಗೆದು ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಲಾಗಿದ್ದು, ಈ ವೇಳೆ ವರದಿಯೊಂದು ಲಭ್ಯವಾಗಿದೆ.

Also Read: ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್ ದರ ಏರಿಕೆಯಾಗಿದೆಯೇ?

ಫೆಬ್ರವರಿ 1, 2022ರಂದು ಎನ್‌ಡಿಟಿವಿ, “National Animal On National Highway”: Twitter Loves This Tiger Video” ಎಂದು ಸುದ್ದಿಯನ್ನು ಪ್ರಕಟಿಸಿದ್ದು, ಟ್ವಿಟರ್‌ನಲ್ಲಿ ವೈರಲ್‌ ಆದ ವೀಡಿಯೋವನ್ನು ಹೇಳಿತ್ತು. ಐಎಫ್‌ಎಸ್‌ ಅಧಿಕಾರಿ ಸುಸಾಂತಾ ನಂದಾ ಅವರು ಶೇರ್‌ ಮಾಡಿದ ವೀಡಿಯೋ ಇದಾಗಿದ್ದು, ದೊಡ್ಡ ಹುಲಿಯೊಂದು ರಸ್ತೆಯಲ್ಲಿ ಸಂಚರಿಸುತ್ತ ಬಳಿಕ ಎತ್ತರದ ಜಾಗಕ್ಕೆ ನೆಗೆದು ಕಣ್ಮರೆಯಾಗುವ ವೀಡಿಯೋ ಇದಾಗಿತ್ತು. 15 ಸೆಕೆಂಡ್‌ಗಳ ಈ ಕ್ಲಿಪ್‌ಗೆ ಅವರು ಫೊಟೋಗ್ರಾಫರ್‌ ರಾಜ್‌ ಮೋಹನ್ ಅವರಿಗೆ ಕಾಪಿರೈಟ್‌ ನೀಡಿದ್ದರು.

ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆ
ಎನ್‌ಡಿಟಿವಿ ವರದಿ

ಈ ವರದಿಯಲ್ಲಿ ಸುಸಾಂತಾ ನಂದಾ ಮತ್ತು ರಾಜ್‌ ಮೋಹನ್‌ ಅವರು ಟ್ವೀಟರಿನಲ್ಲಿ ಶೇರ್‌ ಮಾಡಿದ ವಿಡಿಯೋಗಳನ್ನೂ ಅಟ್ಯಾಚ್‌ ಮಾಡಲಾಗಿದ್ದು, ಇಬ್ಬರೂ ಜನವರಿ 31, 2022ರಂದು ವೀಡಿಯೋವನ್ನು ಅಪ್‌ಲೋಡ್‌ ಮಾಡಿರುವುದು ತಿಳಿದುಬಂದಿದೆ.

ರಾಜ್‌ ಮೋಹನ್‌ ಅವರು ಫೋಟೋಗ್ರಾಫರ್‌ ಆಗಿದ್ದು, ಅವರ ಟ್ವಿಟರ್‌ ಖಾತೆಯನ್ನು ಪರಿಶೀಲಿಸಿದಾಗ, ಈ ಹುಲಿ ವೀಡಿಯೋ ಪೋಸ್ಟ್‌ ಮಾಡಿ ಅವರು ಬರೆದುಕೊಂಡಿದ್ದಾರೆ. ಜನವರಿ 31, 2022ರ ವೀಡಿಯೋದಲ್ಲಿ ಅವರು “ವಾಲ್ಪಾರೈನಲ್ಲಿ ಎಚ್ಚರ ಮೂಡಿಸಿದ ಘಟನೆ” ಎಂದು ಹೇಳಿದ್ದಾರೆ. “ನನ್ನ ಹೆಂಡತಿಯ ಹೇಳಿಕೆಯಂತೆ, ರಾಜ್‌ ಮೋಹನ್‌ ಅವರು ವಾಹನ ನಿಲ್ಲಿಸಿ ಹುಲಿ ಹುಲಿ ಹುಲಿ ಎಂದು ಕೂಗಿದಾಗ, ನಾನು ನನ್ನ ನಿದ್ದೆಯಿಂದ ಏಕಾಏಕಿ ಎಚ್ಚರಗೊಂಡೆ” ಎಂದು ಹೇಳಿದ್ದಾರೆ. ಜೊತೆಗೆ ರಾಜ್‌ ಮೋಹನ್‌ ಅವರು ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತನ್ನ ಪತ್ನಿಯ ಇನ್‌ಸ್ಟಾ ಗ್ರಾಂನಲ್ಲಿ ನೋಡಬಹುದು ಎಂದು ಹೇಳಿಕೊಂಡಿದ್ದಾರೆ.

ಸತ್ಯಶೋಧನೆಗಾಗಿ ರಾಜ್‌ಮೋಹನ್‌ ಅವರು ನೀಡಿದ ಸ್ಪೂರ್ತಿ ಗುಪ್ತಾ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಹುಲಿ ರಸ್ತೆಯಲ್ಲಿ ಸಂಚರಿಸುತ್ತಿರುವ ವೀಡಿಯೋವನ್ನು ಜನವರಿ 30, 2022 ರಂದು ಹಂಚಿಕೊಳ್ಳಲಾಗಿದೆ. ಅದರಲ್ಲಿ ತಮಿಳುನಾಡಿನ ವಾಲ್ಪಾರೈನ ರಸ್ತೆಯಲ್ಲಿ ಹುಲಿ ಕಂಡ ಬಗ್ಗೆ ಆ ದಿನದ ವಿದ್ಯಮಾನವನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನ ವಾಲ್ಪಾರೈನಲ್ಲಿ ಕಾಣಿಸಿಕೊಂಡ ಹುಲಿ
ತಮಿಳುನಾಡಿನ ವಾಲ್ಪಾರೈ ರಸ್ತೆಯಲ್ಲಿ ಕಾಣಿಸಿಕೊಂಡ ಹುಲಿ ಬಗ್ಗೆ ಇನ್‌ಸ್ಟಾಗ್ರಾಂ ಪೋಸ್ಟ್‌

ಇನ್ನೂ ಹೆಚ್ಚಿನ ಮಾಹಿತಿಗಾಗಿ, ಗೂಗಲ್‌ನಲ್ಲಿ “tiger in valpari road” ಎಂದು ಕೀವರ್ಡ್ ಸರ್ಚ್‌ ನಡೆಸಲಾಗಿದ್ದು, ಹಲವು ವರದಿಗಳು ಲಭ್ಯವಾಗಿವೆ.

ಫೆಬ್ರವರಿ 2, 2022ರಂದು ಟೈಮ್ಸ್ ನೌ “National animal on national Highway: Tiger seen strolling on a highway in Tamil Nadu, footage goes viral’ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿದ್ದು, ಐಎಫ್‌ಎಸ್‌ ಅಧಿಕಾರಿ ಸುಸಾಂತಾ ನಂದಾ ಅವರು ಫೋಟೋಗ್ರಾಫರ್‌ ರಾಜ್‌ ಮೋಹನ್‌ ಅವರು ವಾಲ್ಪಾರೈನಲ್ಲಿ ತೆಗೆದು,  ಶೇರ್‌ ಮಾಡಿದ ವೀಡಿಯೋ ಎಂದು ಹೇಳಲಾಗಿದೆ. ಈ ವರದಿಯಲ್ಲೂ ರಾಜ್‌ ಮೋಹನ್‌ ಅವರ ಟ್ವೀಟ್‌ ಅನ್ನು ಬಳಸಿಕೊಳ್ಳಲಾಗಿದೆ.

ಫೆಬ್ರವರಿ 1, 2022ರಂದು ಇಂಡಿಯಾ ಟುಡೇ ಕೂಡ ಈ ಬಗ್ಗೆ ವರದಿ ಮಾಡಿದ್ದು, ಐಎಫ್‌ಎಸ್‌ ಅಧಿಕಾರಿ ಸುಸಾಂತ್ ನಂದಾ ಮತ್ತು ರಾಜ್‌ ಮೋಹನ್‌ ಅವರ ಟ್ವೀಟ್‌ಗಳನ್ನು ವೈರಲ್‌ ವೀಡಿಯೋದೊಂದಿಗೆ ಹಂಚಿಕೊಂಡಿದೆ. “ವಾಲ್ಪಾರೈನಲ್ಲಿ ಕಂಡ ಈ ಹುಲಿ ವೀಡಿಯೋ ವೈರಲ್‌ ಆಗಿದೆ” ಎಂದು ವರದಿ ಹೇಳಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ, ವಾಲ್ಪಾರೈನಲ್ಲಿ 2022ರಲ್ಲಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ಆದರೆ ಅದೇ ವೈರಲ್ ವೀಡಿಯೋವನ್ನು ಹಾಕಿ ಆಗುಂಬೆಯಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದಿರುವುದು ತಪ್ಪಾದ ಸಂದರ್ಭವಾಗಿದೆ.  

Result: Missing Context

Our Sources:

Report by NDTV, Dated: February 1, 2022

Report by India Today, Dated: February 1, 2022

Report by TimesNow, Dated:, February 2, 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.