Authors
Fact
ಬೆಂಗಳೂರು-ಮೈಸೂರು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆ
Claim
ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವ ಎಲ್ಲ ಕೆಎಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರ ಏರಿಕೆಯಾಗಿಲ್ಲ. ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ಇದು ಅನ್ವಯ
ಬೆಂಗಳೂರು-ಮೈಸೂರು ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಹೆಚ್ಚು ದರ ಪಾವತಿಸಬೇಕು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಕುರಿತು ಟಿವಿ9 ಕನ್ನಡ ಮಾಡಿದ ಟ್ವೀಟ್‌ನಲ್ಲಿ “ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಶಾಕ್; ದರ ಹೆಚ್ಚಳದ ವಿವರ ಇಲ್ಲಿದೆ” ಎಂದು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ಇಲ್ಲಿದೆ.
ಇನ್ನೊಂದು ಟ್ವೀಟ್‌ನಲ್ಲಿ “ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಉಭಯ ನಗರಗಳ ನಡುವಣ ಪ್ರಯಾಣದ ಟಿಕೆಟ್ ದರ ಹೆಚ್ಚಳ ಮಾಡಿದೆ. ಬೆಂಗಳೂರು ಮೈಸೂರು ಪ್ರಯಾಣದ ದರ ಹೆಚ್ಚಳ ಮಾಡಿ ಕೆಎಸ್‌ಆರ್‌ಟಿಸಿ ಇಂದು ಪ್ರಕಟಣೆ ಹೊರಡಿಸಿದೆ.” ಎಂದು ಹೇಳಲಾಗಿದೆ.
ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್ ಮುಂದಾಗಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್, ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಕೆಲವು ಮಾಧ್ಯಮ ವರದಿಗಳು ಲಭ್ಯವಾಗಿದೆ.
ಮಾರ್ಚ್ 14, 2023ರಂದು ದಿ ಹಿಂದೂ ಪ್ರಕಟಿಸಿದ ವರದಿಯಲ್ಲಿ “ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಗೆ ವಿಧಿಸಿದ ಟೋಲ್ ದರವು ಖಾಸಗಿ ವಾಹನಗಳಿಗೆ ಮಾತ್ರವಲ್ಲದೆ, ಸಾರ್ವಜನಿಕ ಸಾರಿಗೆಯಾದ ಕೆಎಸ್‌ಆರ್‌ಟಿಸಿ ಪ್ರಯಾಣ ದರದ ಮೇಲೂ ಪರಿಣಾಮ ಬೀರಿದೆ. ಟೋಲ್ ದರದ ಕಾರಣ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವ ಬಸ್‌ಗಳಿಗೆ ಟಿಕೆಟ್ ದರವೂ ಏರಿಕೆ ಮಾಡಿ ಕೆಎಸ್‌ಆರ್‌ಟಿಸಿ ಪ್ರಕಟನೆ ಹೊರಡಿಸಿದೆ ಎಂದಿದೆ. ಎಕ್ಸ್‌ಪ್ರೆಸ್ ವೇ ನಲ್ಲಿ ಸಂಚರಿಸುವ ಬ್ಯಾಟಲಿ ಚಾಲಿತ ಬಸ್‌ಗಳು ಮತ್ತು ವೋಲ್ವೋ ಬಸ್‌ಗಳಿಗೂ ಈ ಟಿಕೆಟ್ ದರ ಏರಿಕೆ ಅನ್ವಯಿಸಲಿದೆ.” ಎಂದಿದೆ.
ಈ ವರದಿಯಲ್ಲಿ “ನಾನ್‌ಸ್ಟಾಪ್ ಎಕ್ಸ್‌ಪ್ರೆಸ್‌ಗಳಿಗೆ ಟಿಕೆಟ್ ದರ 15 ರೂ., ರಾಜಹಂಸಕ್ಕೆ 18 ರೂ., ಐರಾವತ, ಇವಿ, ಮಲ್ಟಿಆಕ್ಸೆಲ್, ಸ್ಲೀಪರ್ ಬಸ್‌ಗಳಿಗೆ 20 ರೂ. ದರ ಏರಿಕೆ ಮಾಡಲಾಗಿದೆ. ಈ ಬೆಲೆ ಏರಿಕೆಯು ಟೋಲ್ ದರವನ್ನು ಭರಿಸಲು ಆಗಿದೆ ಎಂದು ಕೆಎಸ್‌ಆರ್‌ಟಿಸಿ ನಿರ್ದೇಶಕ ಅನ್ಬಕುಮಾರ್ ಅವರು ಹೇಳಿದ್ದಾರೆ” ಎಂದು ವರದಿ ಹೇಳಿದೆ.
ಮಾರ್ಚ್ 15, 2023ರಂದು ಟೈಮ್ಸ್ ನೌ ಪ್ರಕಟಿಸಿದ ವರದಿಯಲ್ಲಿ “ಎಕ್ಸ್‌ಪ್ರೆಸ್‌ವೇ ಶುಲ್ಕವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರಿಗೆ ವರ್ಗಾಯಿಸಲು ನಿರ್ಧರಿಸಿರುವುದರಿಂದ ಸರ್ಕಾರಿ ಬಸ್‌ಗಳಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಯಾಣಿಸುವ ಜನರು ಇನ್ನು ಮುಂದೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.” ಎಂದು ಹೇಳಲಾಗಿದೆ.
Also Read: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಜನ ಸೇರಲಿಲ್ಲವೇ, ಕ್ಲೇಮ್ ಹಿಂದಿನ ಸತ್ಯ ಏನು?
ಈ ವರದಿಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ, ನ್ಯೂಸ್‌ಚೆಕರ್ ಕೆಎಸ್‌ಆರ್‌ಟಿಸಿಯನ್ನು ಸಂಪರ್ಕಿಸಿದೆ. ಈ ವೇಳೆ ಮಾತನಾಡಿದ ಕೆಎಎಸ್‌ಆರ್‌ಟಿಸಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್. ಅವರು, “ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ನೂತನ ಬಸ್ ಟಿಕೆಟ್ ದರ ಅನ್ವಯಿಸಲಿದೆ. ಸಾಮಾನ್ಯ ರಸ್ತೆಯಲ್ಲಿ ಹೋಗುವ ಬಸ್‌ಗಳಿಗೆ ಈದರ ಅನ್ವಯಿಸುವುದಿಲ್ಲ ಬುಧವಾರದಿಂದ ಅಂದರೆ ಮಾರ್ಚ್ 15, 2023ರಿಂದ ಹೊಸ ದರ ಜಾರಿಯಾಗಲಿದೆ” ಎಂದು ತಿಳಿಸಿದ್ದಾರೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಶಾಕ್ ಎನ್ನುವುದು ತಪ್ಪಾದ ಸಂದರ್ಭ. ಟಿಕೆಟ್ ದರ ಏರಿಕೆಯು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಬಸ್‌ಗಳಿಗೆ ಮಾತ್ರ ಸೀಮಿತವಾಗಿದೆ.
Result: Missing Context
Our Sources:
Report by The Hindu, Dated: March 14, 2023
Report by Times Now, Dated: March 15, 2023
Conversation with KSRTC Public Relation officer Dr. Latha T.S.
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.