Authors
Claim
ಬಾಂಗ್ಲಾದೇಶದ ಹಳ್ಳಿಗಳಲ್ಲಿ ಹಿಂದೂಗಳನ್ನು ಮುಸ್ಲಿಮರು ಕೊಲ್ಲುತ್ತಿದ್ದಾರೆ
Fact
ಬಾಂಗ್ಲಾದೇಶದ ಶೇರ್ಪುರ್ ಸದರ್ ಉಪಜಿಲ್ಲೆಯಲ್ಲಿರುವ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಹೆಸರಿನ ಶ್ರದ್ಧಾಕೇಂದ್ರದಲ್ಲಿ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ ನಡೆಸಲಾದ ದಾಳಿಯ ದೃಶ್ಯಾವಳಿ
ಬಾಂಗ್ಲಾದೇಶದ ಹಳ್ಳಿಗಳಲ್ಲಿ ಹಿಂದೂಗಳನ್ನು ಮುಸ್ಲಿಮರು ಕೊಲ್ಲುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಾಂಗ್ಲಾದೇಶದಮುಸ್ಲಿಮರು ಈಗ ಹಳ್ಳಿಗಳಲ್ಲಿ ಮತ್ತು ಬಾಂಗ್ಲಾದೇಶದ ದೂರದ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂಗಳನ್ನು ಕೊಲ್ಲುತ್ತಿದ್ದಾರೆ. ಹಿಂದೂಗಳ ಮನೆಗಳನ್ನು ಸುಡುವುದು ಅವರ ಹೊಲಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ” ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ.
ಈ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಕೊಂಡಿದ್ದೇವೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ನವೆಂಬರ್ 28, 2024ರ ಬಾಂಗ್ಲಾ ಅಫೇರ್‍ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ಪುರದಲ್ಲಿ ಶ್ರದ್ಧಾಕೇಂದ್ರಗಳ ಮೇಲೆ ದಾಳಿ, ಲೂಟಿ ಮತ್ತು ಬೆಂಕಿ ಹಚ್ಚಿರುವುದು ಎಂಬ ಶೀರ್ಷಿಕೆಯಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ಕಂಡಿದ್ದೇವೆ.
ನವೆಂಬರ್ 28, 2024ರಂದು ಜಮುನ ಟಿವಿ ಯೂಟ್ಯೂಬ್ ಚಾನೆಲ್ ಶೇರ್ಪುರ್ ದರ್ಬಾರ್ ಷರೀಫ್ ಧ್ವಂಸ ಮತ್ತು ಲೂಟಿ ಶೀರ್ಷಿಕೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು ಇದರ ವಿವರಣೆಯಲ್ಲಿ, ಶೇರ್ಪುರ್ ಸದರ್‌ನಲ್ಲಿರುವ ದೋಜಾ ಪೀರ್‌ನ ದರ್ಬಾರ್‌ನಲ್ಲಿ ದಾಳಿ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ ಮುರ್ಷಿದ್‌ಪುರ ಗ್ರಾಮಸ್ಥರು ಸ್ಥಳೀಯ ಕ್ವಾಮಿ ಮದರಸಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜತೆಗೂಡಿ ದರ್ಬಾರ್ ಷರೀಫ್ ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಗ್ರಾಮಸ್ಥರು ಪೀರನ ಹಿಂಬಾಲಕರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದಿದೆ. ಈ ವೀಡಿಯೋದಲ್ಲಿಯೂ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ಕಂಡಿದ್ದೇವೆ.
ಬಳಿಕ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಗಳನ್ನು ನಡೆಸಿದ್ದು ಘಟನೆಯ ಕುರಿತ ವರದಿಗಳನ್ನು ನೋಡಿದ್ದೇವೆ.
ನವೆಂಬರ್ 28, 2024ರ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಶೇರ್ಪುರ್ ಸದರ್ ಉಪಜಿಲ್ಲೆಯಲ್ಲಿರುವ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಎಂದೂ ಕರೆಯಲ್ಪಡುವ ದೋಜಾ ಪಿರೇರ್ ದರ್ಬಾರ್ ಮೇಲೆ ನೂರಕ್ಕೂ ಹೆಚ್ಚು ಜನರ ಗುಂಪೊಂದು ನಿನ್ನೆ ಮತ್ತೊಮ್ಮೆ ದಾಳಿ ಮಾಡಿದೆ. ಇದು ಮೂರು ದಿನಗಳಲ್ಲಿ ಶ್ರದ್ಧಾಕೇಂದ್ರದ ಮೇಲೆ ಎರಡನೇ ದಾಳಿಯಾಗಿದೆ. ಮಂಗಳವಾರ, ಶ್ರದ್ಧಾಕೇಂದ್ರದ ಮೇಲೆ ನಡೆದ ದಾಳಿಯ ನಂತರ ಘರ್ಷಣೆ ಸಂಭವಿಸಿತು, ಇದರ ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದರು. ನಿನ್ನೆಯ ದಾಳಿಯು ಸುಮಾರು ಮೂರು ಗಂಟೆಗಳ ಕಾಲ ಮುಂದುವರೆಯಿತು, ಈ ಸಮಯದಲ್ಲಿ ಜನಸಮೂಹವು ಶ್ರದ್ಧಾಕೇಂದ್ರದ ಲೂಟಿ ಮಾಡಿ ಸುಟ್ಟುಹಾಕಿತು ಎಂದಿದೆ.
ನವೆಂಬರ್ 29, 2024ರ ಪ್ರೊಥೊಮೊಲೊ ವರದಿಯ ಪ್ರಕಾರ, ಶೇರ್ಪುರ ಸದರ್ ಉಪಜಿಲ್ಲಾದ ಲಕ್ಷ್ಮಣಪುರ ಪ್ರದೇಶದಲ್ಲಿ ಖ್ವಾಜಾ ಬದ್ರುದ್ದೋಜಾ ಹೈದರ್ ಅಲಿಯಾಸ್ ದೋಜಾ ಪಿರ್ ಅವರ ದರ್ಬಾರ್ (ಮುರ್ಷಿದ್‌ಪುರ ಪಿರ್‌ನ ದರ್ಬಾರ್) ಮೇಲೆ ದಾಳಿ, ಬೆಂಕಿ ಮತ್ತು ಲೂಟಿ ಮಾಡಿದ ಘಟನೆ ಮತ್ತೆ ಉದ್ವಿಗ್ನತೆಯನ್ನು ಸೃಷ್ಟಿಸಿದೆ. ಶುಕ್ರವಾರ ಮಧ್ಯಾಹ್ನ ಶ್ರದ್ಧಾಕೇಂದ್ರದ ಮೇಲೆ ದಾಳಿ ಮಾಡಿ ಲೂಟಿ ಮಾಡಲು ಬಂದಿದ್ದ ಜನರ ಗುಂಪನ್ನು ಪೀರ್ ಅವರ ಅನುಯಾಯಿಗಳು ಬೆನ್ನಟ್ಟಿದ್ದರು. ಈ ವೇಳೆ ಲೂಟಿ ಮಾಡಿದ ಮಾಲನ್ನು ತೆಗೆದುಕೊಂಡು ಹೋಗಲು ಬಂದ ಕೆಲ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಇದಕ್ಕೂ ಮುನ್ನ ಕಳೆದ ಮಂಗಳವಾರ ಬೆಳಗ್ಗೆ ದರ್ಬಾರ್‌ನಲ್ಲಿ ಮೊದಲ ದಾಳಿ ಮತ್ತು ಬೆಂಕಿ ಹಚ್ಚಲಾಗಿತ್ತು. ಎರಡೂ ಕಡೆಯಿಂದ 13 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಫೀಜ್ ಉದ್ದೀನ್ (40) ಎಂಬ ಬಡಗಿ ಬುಧವಾರ ಢಾಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದಿದೆ.
ನವೆಂಬರ್ 28, 2024ರ ಬಾಂಗ್ಲಾ ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ, ಶೇರ್ಪುರದ ಖ್ವಾಜಾ ಬದ್ರುದ್ದೋಜಾ ಹೈದರ್ ಅಲಿಯಾಸ್ ದೋಜಾ ಪೀರ್ (ಮುರ್ಷಿದ್‌ಪುರ ಪೀರ್‌ನ ದರ್ಬಾರ್) ದರ್ಬಾರ್ ಅನ್ನು ಎರಡು ದಿನಗಳ ಅವಧಿಯಲ್ಲಿ ಮತ್ತೊಮ್ಮೆ ದಾಳಿ, ಧ್ವಂಸ, ಬೆಂಕಿ ಮತ್ತು ಲೂಟಿ ಮಾಡಲಾಯಿತು. ಗುರುವಾರ (ನವೆಂಬರ್ 28) ಮಧ್ಯಾಹ್ನ, ಕೋಪಗೊಂಡ ಜನಸಮೂಹವು ಸದರ್ ಉಪಜಿಲಾದ ಲಚ್ಮನ್‌ಪುರ ಪ್ರದೇಶದಲ್ಲಿ ದರ್ಬಾರ್ ಮೇಲೆ ದಾಳಿ ಮಾಡಿದೆ. ಇದಕ್ಕೂ ಮುನ್ನ ಕಳೆದ ಮಂಗಳವಾರ ಬೆಳಗ್ಗೆ ಮುರ್ಷಿದ್‌ಪುರ ಪೀರ್‌ನ ದರ್ಬಾರ್ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿತ್ತು. ದಾಳಿಕೋರರನ್ನು ವಿರೋಧಿಸಲು ಯತ್ನಿಸಿದಾಗ ಘರ್ಷಣೆಯಲ್ಲಿ ಎರಡೂ ಕಡೆಯ 13 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಎಂ.ಡಿ. ಹಫೀಜ್ ಉದ್ದೀನ್ (40) ಎಂಬ ವ್ಯಕ್ತಿ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದಿದೆ.
Conclusion
ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಇದು ಹಿಂದೂಗಳ ಮೇಲೆ ನಡೆದ ದಾಳಿಯಲ್ಲ, ಬದಲಾಗಿ ಮುರ್ಷಿದಪುರ್ದ ದರ್ಬಾರ್ ಷರೀಫ್ ಶ್ರದ್ಧಾಕೇಂದ್ರದಲ್ಲಿ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ ನಡೆಸಲಾದ ದಾಳಿಯ ದೃಶ್ಯಾವಳಿಗಳು ಎಂದು ತಿಳಿದುಬಂದಿದೆ.
Result: False
Our Sources
YouTube Video By Bangla Affairs, Dated: November 28, 2024
YouTube Video By JamunaTv, Dated: November 28, 2024
Report By Thedailystar, Dated: November 28, 2024
Report By Prothomalo, Dated: November 29, 2024
Report By Bangladhaka Tribune, Dated: November 28, 2024
(Inputs from Sayeed joy and Rifat, Newschecker Bangladesh)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.