Authors
Claim
ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುವ ವೀಡಿಯೋ
Fact
ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುತ್ತಾರೆ ಎನ್ನುವ ವೀಡಿಯೋ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ
ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಮತ್ತು ವಸ್ತುಗಳನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳು ಮತ್ತು ಮೆಸೆಂಜರ್ ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೋದ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್ ಗೆ (+91-9999499044) ವಿನಂತಿಸಿಕೊಂಡಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.
Also Read: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?
ವಿಮಾನ ಪ್ರಯಾಣಕ್ಕೆ ಮೊದಲು ಭದ್ರತೆಯ ದೃಷ್ಟಿಯಿಂದ ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಲಿ ಪರಿಶೀಲನೆ ನಡೆಸುವ ಸಿಬ್ಬಂದಿ ವಸ್ತುಗಳನ್ನು ಕದಿಯುತ್ತಾರೆ ಎನ್ನಲಾಗಿದೆ. ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಇಂಡಿಯಾ ಟುಡೇ, ಎನ್ಡಿಟಿವಿ ಸೇರಿದಂತೆ ಮಾಧ್ಯಮ ವರದಿಗಳ ಪ್ರಕಾರ, ವಿವಿಧ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾದ ಸಿಬ್ಬಂದಿ ಪ್ರಯಾಣಿಕರ ವಸ್ತುಗಳು ಮತ್ತು ಹಣವನ್ನು ಕದ್ದ ಅನೇಕ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದ ಬಳಕೆದಾರರು ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಮತ್ತು ಸಾಮಾನುಗಳನ್ನು ಕದ್ದಿದ್ದಾರೆ ಎಂದು ಹೇಳುತ್ತಿದ್ದಾರೆ.
Fact Check/ Verification
ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಮತ್ತು ವಸ್ತುಗಳನ್ನು ಕದಿಯುತ್ತಿದ್ದಾರೆ ಎಂಬ ಹೇಳಿಕೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ತೆಗೆದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ, ಅನೇಕ ಯೂಟ್ಯೂಬ್ ಬಳಕೆದಾರರು ವೈರಲ್ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ.
ಗೂಗಲ್‌ನಲ್ಲಿ ಯೂಟ್ಯೂಬ್ ವೀಡಿಯೋಗಳ ಕೀಫ್ರೇಮ್‌ಗಳ ಬಗ್ಗೆ ಶೋಧಿಸಿದಾಗ, ವೈರಲ್ ವೀಡಿಯೊವನ್ನು ನವೆಂಬರ್ 2 2023 ರಂದು ಪೌಲ್ ವುಟಿವಿ ಎಂಬ ಯೂಟ್ಯೂಬ್ ಚಾನೆಲ್ ಪ್ರಕಟಿಸಿರುವುದು ಗೊತ್ತಾಗಿದೆ.
Also Read: ರಾಜೀವ್ ಗಾಂಧಿ-ಸೋನಿಯಾ ನಿಖಾ ಮಾಡಿಕೊಂಡಿದ್ದಾರೆಯೇ?
ಚಾನೆಲ್ ಅನ್ನು ಸ್ಕ್ಯಾನ್ ಮಾಡಿದಾಗ, ಸ್ಕ್ರಿಪ್ಟ್ ಮಾಡಿದ ವೀಡಿಯೋಗಳನ್ನು ಚಾನೆಲ್ ಪೋಸ್ಟ್ ಮಾಡಿದೆ ಎಂದು ನಮಗೆ ತಿಳಿದುಬಂದಿದೆ. ಚಾನೆಲ್ ಪ್ರಕಟಿಸಿದ ಹೆಚ್ಚಿನ ವೀಡಿಯೋಗಳನ್ನು ವೈರಲ್ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಅದೇ ನಟರು ನಟಿಸಿರುವುದನ್ನು ಗಮನಿಸಿದ್ದೇವೆ.
ವೈರಲ್ ವೀಡಿಯೋದಲ್ಲಿ ನಟಿಸಿದ ನಟರ ಇತರ ವೀಡಿಯೋಗಳು
Conclusion
ಹೀಗಾಗಿ, ನಮ್ಮ ತನಿಖೆಯಲ್ಲಿ, ಪ್ರಯಾಣಿಕರ ಹಣ ಮತ್ತು ಸಾಮಾನುಗಳನ್ನು ವಿಮಾಣ ನಿಲ್ದಾಣದ ಸಿಬ್ಬಂದಿ ಕದಿಯುತ್ತಾರೆ ಎನ್ನುವ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದು ಎನ್ನುವುದು ಸ್ಪಷ್ಟವಾಗಿದೆ. ವಾಸ್ತವವಾಗಿ, ವೈರಲ್ ವೀಡಿಯೋ ಸ್ಕ್ರಿಪ್ಟ್ ಮಾಡಿದ್ದಾಗಿದ್ದು ಅದರಲ್ಲಿ ಕಂಡುಬರುವ ನಟರನ್ನು ಪೌಲ್ ವುಟಿವಿ ಎಂಬ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಇತರ ವೀಡಿಯೋಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಬಹುದು.
Result: Missing Context
Our Sources
Videos published on PaulVuTV YouTube channel
Newschecker analysis
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.