Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

Weekly wrap

ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಗ್ಯಾರೆಂಟಿ ಯೋಜನೆಗಳಿಗೆ ದುಡ್ಡೆಲ್ಲಿಂದ ತರಲಿ ಎಂದು ಸಿಎಂ ಕೇಳಿದ್ದಾರೆ ಎನ್ನುವ ಸರ್ಕಾರಿ ವಿಚಾರಗಳಿಗೆ ಸಂಬಂಧಿಸಿದ ಕ್ಲೇಮ್‌ ಗಳು ಈ ವಾರ ಸದ್ದು ಮಾಡಿವೆ. ಇದರೊಂದಿಗೆ ರಾಜೀವ್-ಸೋನಿಯಾ ಗಾಂಧಿ ನಿಖಾ ಮಾಡಿಕೊಂಡಿದ್ದಾರೆ, ವಾವರ ಮಸೀದಿಗೆ ಅಯ್ಯಪ್ಪ ಭಕ್ತರು ಹಾಕಿದ ಹಣ, ನಕಲಿ ಗೋಡಂಬಿ ತಯಾರಿಕೆ, ವೈಟ್ ಬ್ರೆಡ್ ತಿಂದರೆ ಅಪಾಯ, ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೇ ಪ್ರಯಾಣಿಕರ ಹಣ ಕದಿಯುತ್ತಾರೆ ಎನ್ನುವ ಕ್ಲೇಮುಗಳೂ ಇದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ನಿಜವೇ?

ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಹೈಕೋರ್ಟ್ ಪ್ರಕರಣ ಗಮನಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು ಎನ್ನುವ ಪೋಸ್ಟ್ ಸದ್ದು ಮಾಡಿತ್ತು. ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಪ್ರಕರಣದ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಪೊಲೀಸರು ತಡೆಯಲು ಯತ್ನಿಸಬೇಕಿತ್ತು ಎಂದಿರುವುದು. ಘಟನೆ ನಡೆದ ಕೂಡಲೇ ಸಿಎಂ ತನಿಖೆಗೆ ಆದೇಶಿಸಿದ್ದಾರೆ ಎನ್ನುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?

ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಸಿದ್ದರಾಮಯ್ಯ ಹಣ ಎಲ್ಲಿಂದ ತರಲಿ ಎಂದು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದೆ. ಆದರೆ ಸತ್ಯಶೋಧನೆಯ ಪ್ರಕಾರ ಗ್ಯಾರೆಂಟಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ ಎನ್ನುವುದು ತಪ್ಪಾಗಿದೆ. ಅವರ ಭಾಷಣವನ್ನು ತುಂಡರಿಸಿ ವೈರಲ್ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂದು ಬಾಂಗ್ಲಾ ಮಸೀದಿ ವೀಡಿಯೋ ವೈರಲ್

ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನ್ಯೂಸ್‌ಚೆಕರ್ ಇದನ್ನು ತನಿಖೆಗೆ ಒಳಪಡಿಸಿದಾಗ, ಅಯ್ಯಪ್ಪ ಭಕ್ತರು ವಾವರ ಮಸೀದಿ ಹುಂಡಿಗೆ ಹಾಕಿದ ಹಣ ಎಂಬ ವೀಡಿಯೋ ಶಬರಿಮಲೆಯದ್ದಲ್ಲ. ಅದು ಬಾಂಗ್ಲಾದೇಶದ ಮಸೀದಿಯದ್ದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ರಾಜೀವ್ ಗಾಂಧಿ-ಸೋನಿಯಾ ನಿಖಾ ಮಾಡಿಕೊಂಡಿದ್ದಾರೆಯೇ?

ರಾಜೀವ್‌ ಗಾಂಧಿ-ಸೋನಿಯಾ ಗಾಂಧಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರಾಜೀವ್-ಸೋನಿಯಾ ಅವರು ಮುಸ್ಲಿಂ ಸಂಪ್ರದಾಯ ಪ್ರಕಾರ ನಿಖಾ ಮಾಡಿಕೊಂಡಿಲ್ಲ. ಅವರ ವಿವಾಹದ ಬಳಿಕ ನಡೆದ ಫ್ಯಾನ್ಸಿ ಡ್ರೆಸ್‌ ಪಾರ್ಟಿಯಲ್ಲಿ ಮುಸ್ಲಿಂ ಸಂಪ್ರದಾಯದ ರೀತಿ ಉಡುಗೆ ತೊಟ್ಟು ಫೊಟೋ ತೆಗೆಸಿಕೊಂಡಿದ್ದರು ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ನಕಲಿ ಗೋಡಂಬಿ ತಯಾರಿಕೆ ಎಂದ ಈ ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ನಕಲಿ ಗೋಡಂಬಿ ತಯಾರಿಸಲಾಗುತ್ತಿದೆ ಎಂದು ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ,  ಸತ್ಯಶೋಧನೆಯ ಪ್ರಕಾರ ಇದು ನಕಲಿ ಗೋಡಂಬಿ ತಯಾರಿಕೆಯ ಕುರಿತ ವೀಡಿಯೋವಲ್ಲ. ಇದು ಮೈದಾ ಕಾಜು ಎಂಬ ತಿಂಡಿಯೊಂದರ ಉತ್ಪಾದನೆ ಕುರಿತ ವೀಡಿಯೋ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುವ ವೀಡಿಯೋ, ಸತ್ಯ ಏನು?

ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಮತ್ತು ವಸ್ತುಗಳನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳು ಮತ್ತು ಮೆಸೆಂಜರ್ ಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಶೋಧ ನಡೆಸಿದಾಗ, ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರ ಹಣ ಕದಿಯುತ್ತಾರೆ ಎನ್ನುವ ವೀಡಿಯೋ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

Weekly wrap: ಬೆಳಗಾವಿ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಸರ್ಕಾರದ ಕ್ರಮವಿಲ್ಲ, ಗ್ಯಾರೆಂಟಿ ಯೋಜನೆಗೆ ದುಡ್ಡಿಲ್ಲ, ವಾರದ ಕ್ಲೇಮ್‌ ನೋಟ

ವೈಟ್ ಬ್ರೆಡ್ ತಿಂದರೆ ಮಲಬದ್ಧತೆ, ಮಧುಮೇಹಕ್ಕೆ ಕಾರಣವಾಗುತ್ತದೆಯೇ?

ವೈಟ್ ಬ್ರೆಡ್‌ ತಿಂದರೆ ಮಲಬದ್ಧತೆ, ಮಧುಮೇಹ ಮತ್ತು ಹೊಟ್ಟೆನೋವು ಆಗಬಹುದು ಎಂದು ಕ್ಲೇಮ್‌ ಒಂದು ಹರಿದಾಡಿದೆ. ಇನ್ ಸ್ಟಾಗ್ರಾಂನಲ್ಲಿ ಕಂಡುಬಂದಿರುವ ಹೇಳಿಕೆಯಲ್ಲಿ ವೈಟ್ ಬ್ರೆಡ್ ನಿಂದ ಆರೋಗ್ಯಕ್ಕೆ ಪ್ರತಿಕೂಲವಿದೆ ಎಂಬಂತೆ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲಿಸಿದಾಗ, ವೈಟ್ ಬ್ರೆಡ್‌ ತಿಂದರೆ ಮಲಬದ್ಧತೆ, ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಎಲ್ಲರಿಗೂ ಅನ್ವಯಿಸುವಂತಿಲ್ಲ. ಇದು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಬದಲಾಗಬಹುದು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದನ್ನು ಇಲ್ಲಿ ಓದಿ

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.