Fact Check: ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?

ಸಿದ್ದರಾಮಯ್ಯ ಜನತಾ ದರ್ಶನ

Claim
ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆ

Fact
ಜನತಾ ದರ್ಶನದಲ್ಲಿ  ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆ ಎನ್ನುವುದು ತಪ್ಪಾಗಿದೆ. ಈ ಘಟನೆ 2019ರಲ್ಲಿ ನಡೆದಿದ್ದು, ಸಿದ್ದರಾಮಯ್ಯ ಅವರು ಮಹಿಳೆ ಕೈಯಿಂದ ಮೈಕ್‌ ಎಳೆಯುವಾಗ ದುಪ್ಪಟ್ಟಾ ಸಿಲುಕಿದ ವಿದ್ಯಮಾನ ಇದಾಗಿದೆ

ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದರು ಎಂದು ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ಕುರಿತು ಟ್ವಿಟರ್ ನಲ್ಲಿ ಹರ್ಯಾಣ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅರುಣ್‌ ಯಾದವ್ ಅವರು ಮಾಡಿದ ಪ್ರತಿಪಾದನೆಯಲ್ಲಿ, “ಬಹಳ ನಾಚಿಕೆಗೇಡು, ಕಾಂಗ್ರೆಸ್ಸಿನ ದುಶ್ಶಾಸನ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರ್ಬಾರ್ ನಲ್ಲಿ ಮಹಿಳೆಯ ವಸ್ತ್ರಾಪಹರಣ ಮಾಡಿದರು” ಎಂದಿದೆ.

Also Read: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?

Fact Check: ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?

ಈ ಪೋಸ್ಟ್ ನ ಆರ್ಕೈವ್‌ ಆವೃತ್ತಿ ಇಲ್ಲಿದೆ.

ಈ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಜನತಾ ದರ್ಶನ ಕಾರ್ಯಕ್ರಮದ್ದಲ್ಲ, ಬದಲಾಗಿ ಐದು ವರ್ಷಗಳ ಹಿಂದೆ ಮೈಸೂರಿನ ವರುಣಾ ಕ್ಷೇತ್ರದಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದ್ದು ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿದೆ.

ಜನವರಿ 28, 2019ರ ವಿಜಯ ಕರ್ನಾಟಕದಲ್ಲಿ “ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ, ಮೈಕ್‌ ಕಸಿದು ಆವಾಜ್‌ ಹಾಕಿದ ಮಾಜಿ ಸಿಎಂ” ಶೀರ್ಷಿಕೆಯಲ್ಲಿ ನೀಡಲಾದ ವರದಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಗರಂ ಆಗಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ಮಹಿಳೆಯೊಬ್ಬರು ಪುತ್ರನ ಬಗ್ಗೆ ದೂರು ಹೇಳಲು ಮುಂದಾಗುತ್ತಿದ್ದಂತೆ ಮೈಕ್‌ ಕಸಿದು ಆವಾಜ್‌ ಹಾಕಿದ್ದಾರೆ. ಸಿದ್ದರಾಮಯ್ಯ ಅವರ ಈ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಪುತ್ರ ಹಾಗೂ ಶಾಸಕ ಯತೀಂದ್ರ ಕೈಗೆ ಸಿಗುವುದಿಲ್ಲ. ಅವರು ಸಿಗುವುದಿಲ್ಲ ನೀವು ಸಿಗುವುದಿಲ್ಲ. ನಮ್ಮ ದೂರುಗಳನ್ನು ಯಾರಿಗೆ ಹೇಳಿಕೊಳ್ಳಬೇಕು ಎಂದು ಮಹಿಳೆಯ ಪ್ರಶ್ನಿಸುತ್ತಿದ್ದಂತೆ, ಮೈಕ್‌ ಕಸಿದುಕೊಂಡ ಸಿದ್ದರಾಮಯ್ಯ, ಸುಮ್ಮನೆ ಇರಮ್ಮ, ಕೂತ್ಕೋ ಎಂದು ತಮ್ಮ ಎಂದಿನ ಶೈಲಿಯಲ್ಲಿಯೇ ಗದರಿದ್ದಾರೆ ಎಂದಿದೆ.

Fact Check: ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?

ಜನವರಿ 28, 2019ರ ಒನ್‌ ಇಂಡಿಯಾ ವರದಿಯಲ್ಲಿ “ಎಳೆದದ್ದು ಮೈಕ್‌, ಜಾರಿದ್ದು ದುಪ್ಪಟ್ಟಾ, ಅದು ಸಿದ್ರಾಮಣ್ಣನ ದುರಾದೃಷ್ಟ” ಎಂದಿದೆ. ಶಾಸಕ, ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ನಡೆದ ಅಹವಾಲು ಸಭೆಯಲ್ಲಿ ಮಗನ ವಿರುದ್ಧ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಮಾಲ ಅವರು ದೂರು ಹೇಳಿ, ಮೇಜು ಕುಟ್ಟಿ ಮಾತನಾಡಿದಾಗ ಸಿದ್ದರಾಮಯ್ಯ ಸಿಟ್ಟಿಗೆದ್ದಿದ್ದು, ಆಕೆ ಕೈಯಿಂದ ಮೈಕ್ ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ದುಪ್ಪಟ್ಟಾ ಜಾರಿದೆ ಎಂದಿದೆ.

Also Read: ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎನ್ನುವುದು ನಿಜವೇ?

ಈ ಕುರಿತು ನಾವು ಇನ್ನಷ್ಟು ಪರಿಶೀಲನೆ ನಡೆಸಿದ ವೇಳೆ ಜನವರಿ 28, 2019ರ ಎಎನ್‌ಐ ಯೂಟ್ಯೂಬ್‌ ವೀಡಿಯೋ ಲಭ್ಯವಾಗಿದೆ. “Siddaramaiah caught on camera misbehaving with woman in Karnataka’s Mysuru” ಶೀರ್ಷಿಕೆಯಡಿಯಲ್ಲಿ ನೀಡಲಾದ ಸುದ್ದಿಯಲ್ಲಿ “ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕದ ಮೈಸೂರಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳೆಯೊಬ್ಬರಿಂದ ಮೈಕ್ ಕಸಿದುಕೊಂಡ ಘಟನೆಯೊಂದರಲ್ಲಿ ತಾನು ಮತ್ತು ತಮ್ಮ ಪಕ್ಷವನ್ನು ವಿವಾದಕ್ಕೀಡು ಮಾಡಿದ್ದಾರೆ” ಎಂದಿದೆ.

ಇನ್ನು ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಸಿದ್ದರಾಮಯ್ಯನವರು ತಮ್ಮ ಎಕ್ಸ್ ಖಾತೆಯಲ್ಲಿ ಜನವರಿ 28, 2019ರಂದು ಸ್ಪಷ್ಟೀಕರಣ ಕೊಟ್ಟಿದ್ದರು. “ಇದೊಂದು ಆಕಸ್ಮಿಕ ಘಟನೆಯಾಗಿದ್ದು ಯಾವುದೇ ದುರುದ್ದೇಶ ಇರಲಿಲ್ಲ.  ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ ಎಂದು ಹೇಳಿದ್ದರು” ಈ ಕುರಿತ ಟ್ವೀಟ್ ಇಲ್ಲಿದೆ.

ಇನ್ನು ಜನರ ಅಹವಾಲು ಸ್ವೀಕಾರದ ಜನಸ್ಪಂದನ ಸಭೆ ವಿಧಾನಸೌಧದಲ್ಲಿ ನಡೆದಿದ್ದು, ಫೆಬ್ರವರಿ 8, 2024ರಂದು ನಡೆದಿತ್ತು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ 11 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಕುರಿತ ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

Conclusion

ಆದ್ದರಿಂದ ಈ ಸತ್ಯಶೋಧನೆ ಪ್ರಕಾರ, ಜನತಾ ದರ್ಶನದಲ್ಲಿ  ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆ ಎನ್ನುವುದು ತಪ್ಪಾಗಿದೆ. ಈ ಘಟನೆ 2019ರಲ್ಲಿ ನಡೆದಿದ್ದು, ಸಿದ್ದರಾಮಯ್ಯ ಅವರು ಮಹಿಳೆ ಕೈಯಿಂದ ಮೈಕ್‌ ಎಳೆಯುವಾಗ ದುಪ್ಪಟ್ಟಾ ಸಿಲುಕಿದ ವಿದ್ಯಮಾನ ಇದಾಗಿದೆ.

Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?

Result: Missing Context

Our Sources:

Report By Vijaya Karnataka, Dated: January 28, 2019

Report By One India, Dated: January 28, 2019

YouTube Video By ANI, Dated: January 28, 2019

Tweet By Siddaramaiah, Dated: January 28, 2019

YouTube Video By TV9 Kannada, Dated: February 8, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.