Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಲಾಗುತ್ತಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬಾಂಗ್ಲಾದೇಶದಲ್ಲಿ ಬಂಧಿತ ಹಿಂದೂ ಪುರುಷರನ್ನು ಬಲವಂತವಾಗಿ ಮತಾಂತರ ಮಾಡುತಿದ್ದಾರೆ, ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗದ ಜಾತ್ಯಾತೀತ ಹಿಂದೂಗಳೇ ಈ ವಿಡಿಯೋ ನೋಡಿ” ಎಂದಿದೆ.
Also Read: ಕೈಲಾಸ ಪರ್ವತದ ಸನಿಹ ನರಕ ಗುಹೆ, ಪಾಪಿಗೆ ಇಲ್ಲಿ ಶಿಕ್ಷೆ ನೀಡಲಾಗುತ್ತಿದೆ ಎನ್ನುವುದು ನಿಜವೇ?
ಈ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಉದ್ಯೋಗ ಕೋಟಾಗಳ ವಿರುದ್ಧದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದ್ದಾಗಿದೆ ಮತ್ತು ಇದೇ ಪ್ರತಿಭಟನೆ ಮುಂದೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರ ಪದಚ್ಯುತಿಗೆ ಕಾರಣವಾಯಿತು. ಬಾಂಗ್ಲಾದೇಶದ ಬಶುಂಧರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ಝುಹ್ರ್ (ಮುಸ್ಲಿಮರು ನಿರ್ವಹಿಸುವ ಐದು ದೈನಂದಿನ ಪ್ರಾರ್ಥನೆಗಳಲ್ಲಿ ಒಂದು) ನೆರವೇರಿಸಿದರು ಎಂದು ಎಂದು ವೀಡಿಯೊದ ಶೀರ್ಷಿಕೆ ಹೇಳುತ್ತದೆ. ಇದೇ ರೀತಿಯ ವೀಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು, ಇನ್ನು ವೈರಲ್ ಆಗುತ್ತಿರುವ ವೀಡಿಯೋ ಆಗಸ್ಟ್ 5 ರಂದು ಹಸೀನಾರನ್ನು ದೇಶದಿಂದ ಹೊರಹಾಕುವುದಕ್ಕಿಂತ ಹಿಂದಿನದ್ದು ಎಂದು ಖಚಿತಪಡಿಸುತ್ತದೆ.
ದೇಶದ 1971 ರ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದವರ ವಂಶಸ್ಥರಿಗೆ ಸುಮಾರು ಮೂರನೇ ಒಂದು ಭಾಗದಷ್ಟು ಹುದ್ದೆಗಳನ್ನು ಮೀಸಲಿಡುವ ನಿಯಮವನ್ನು ಹೈಕೋರ್ಟ್ ಮರುಸ್ಥಾಪಿಸಿದ ನಂತರ ಸರ್ಕಾರಿ ಉದ್ಯೋಗಗಳಲ್ಲಿನ ಕೋಟಾಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಜುಲೈ 1, 2024 ರಿಂದ ವಿದ್ಯಾರ್ಥಿಗಳು ಬಾಂಗ್ಲಾದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರು.
ಹೆಚ್ಚಿನ ಶೋಧಕ್ಕಾಗಿ ಕೀವರ್ಡ್ ಸರ್ಚ್ ನಡೆಸಿದ್ದು ಈ ವೇಳೆ SomoyNews TV ವರದಿ ಲಭ್ಯವಾಗಿದೆ. ಇದರಲ್ಲಿ ಜುಲೈ 16, 2024 ರಂದು ಪ್ರಾರ್ಥನೆ ಮಾಡುವ ವಿದ್ಯಾರ್ಥಿಗಳ ಇದೇ ರೀತಿಯ ಸ್ಪಷ್ಟವಾದ ವೀಡಿಯೋ ಇದೆ. “ಕೋಟಾ ಸುಧಾರಣೆ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಂಗಳವಾರ ಬಶುಂಧರ ಗೇಟ್‌ನ ಮುಂಭಾಗದ ಪ್ರದೇಶದಿಂದ ಫೋಟೋ ತೆಗೆಯಲಾಗಿದೆ” ಎಂದು ಫೋಟೋದ ಶೀರ್ಷಿಕೆಯನ್ನು ಓದಿ.
”ರಾಜಧಾನಿಯ ಬಶುಂಧರ ಗೇಟ್ ಎದುರು ವಿವಿಧ ಖಾಸಗಿ ವಿವಿಗಳ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಗಂಟೆಗಟ್ಟಲೆ ನಿಂತಿದ್ದ ಸಂದರ್ಭದಲ್ಲಿ ಝುಹರ್ ನಮಾಝಿನ ಸಮಯ ಬಂದಾಗ ವಿದ್ಯಾರ್ಥಿಗಳು ಸಾಲಾಗಿ ನಿಂತು ಕಡ್ಡಾಯ ಪ್ರಾರ್ಥನೆ ಸಲ್ಲಿಸಿದರು. ಸಮೀಪದಲ್ಲಿ ನಿಂತಿದ್ದ ಇತರ ವಿದ್ಯಾರ್ಥಿಗಳು ತಮ್ಮ ಘೋಷಣೆ ಮತ್ತು ಆಂದೋಲನವನ್ನು ಮುಂದುವರೆಸಿದರು,” (ಭಾಷಾಂತರಿಸಲಾಗಿದೆ) ಎಂದಿದೆ. ಜುಲೈ 16, 2024 ರ ಢಾಕಾ ಪ್ರೆಸ್‌ನಲ್ಲೂ ಇದೇ ರೀತಿಯ ವರದಿಯಿದ್ದು ಇದನ್ನು ಇಲ್ಲಿ ನೋಡಬಹುದು.
ಸತ್ಯಶೋಧನೆಯ ಪ್ರಕಾರ ಈ ವೈರಲ್ ವೀಡಿಯೋ ಹಿಂದೂಗಳ ಬಲವಂತದ ಮತಾಂತರ ಕುರಿತಾಗಿರುವುದಲ್ಲ, ಬದಲಾಗಿ ಝುಹರ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರುವುದನ್ನು ತೋರಿಸುತ್ತದೆ ಎಂದು ದೃಢೀಕರಿಸಿದೆ.
Also Read: ಸೆ.30ರಂದು ಎಲ್ಲ ಪ್ಲ್ಯಾನ್ ಹಿಂತೆಗೆದುಕೊಳ್ಳುವುದಾಗಿ ಹೇಳಿದ ಎಲ್‌ಐಸಿ ಸುತ್ತೋಲೆ ನಕಲಿ
Sources
Youtube video, SomoyTVBulletin, Dated July 16, 2024
SomoyTV news report, Dated July 16, 2024
Dhaka Press report, Dated July 16, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
July 8, 2025
Ishwarachandra B G
June 30, 2025
Ishwarachandra B G
June 21, 2025