Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸುಡಾನ್ ನಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಜೀವಂತವಾಗಿ ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡುತ್ತಿದ್ದಾರೆ
ಈ ಹೇಳಿಕೆ ತಪ್ಪು ದಾರಿಗೆಳೆಯುವಂಥದ್ದಾಗಿದೆ. ಇಬ್ಬರು ಶ್ವೇತ ವರ್ಣೀಯ ರೈತರು, ಕಪ್ಪು ವರ್ಣದ ವ್ಯಕ್ತಿಯನ್ನು ಶವಪೆಟ್ಟಿಗೆಯಲ್ಲಿಟ್ಟು ಕೊಲೆಗೆ ಯತ್ನಿಸಿದ 2017ರ ವಿದ್ಯಮಾನ ಇದಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಸುಡಾನ್ ನಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಜೀವಂತವಾಗಿ ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ವಿಶ್ವದ ಶಾಂತಿ ಯುತ ಧರ್ಮದವರು ಸುಡಾನ್ ನಲ್ಲಿ ಅಮಾಯಕ ಕ್ರಿಶ್ಚಿಯನ್ ಜನರನ್ನು ಜೀವಂತ ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡ್ತಿದ್ದಾರೇ ಸುಡಾನ್ ನಲ್ಲಿ ಪ್ರಧಾನಿ ಪೊಲೀಸ್ ಸೇನೆ ಕೋರ್ಟು ಗಳು ಲಾಯರ್ ಗಳು ಎಲ್ಲ ಇವೆ ಆದ್ರೆ ಏನು ಮಾಡೋಕೆ ಆಗ್ತಿಲ್ಲ ಹಿಂದುಗಳೇ ಎಚ್ಚರ” ಎಂದಿದೆ.

ಈ ವೈರಲ್ ಪೋಸ್ಟ್ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ದಾರಿಗೆಳೆಯುವ ಹೇಳಿಕೆ ಎಂದು ಗೊತ್ತಾಗಿದೆ.
Also Read: ಲವ್ ಜಿಹಾದ್ ಹೇಳಿಕೆಯೊಂದಿಗೆ ಬಾಂಗ್ಲಾ ನಟಿಯ ಪೋಸ್ಟರ್ ವೈರಲ್
ಸುಡಾನ್ ನಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಏಪ್ರಿಲ್ 15, 2023 ರಂದು, ಸುಡಾನ್ನಲ್ಲಿ ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (RSF) ನಡುವೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದವು, ಇದರ ಪರಿಣಾಮವಾಗಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರು (IDP ಗಳು), ಆಶ್ರಯ ಪಡೆಯುವವರು ಮತ್ತು ನಿರಾಶ್ರಿತರು ಸೇರಿದಂತೆ ಸುಮಾರು 13 ಮಿಲಿಯನ್ ಜನರು ಸ್ಥಳಾಂತರಗೊಂಡರು. ಏತನ್ಮಧ್ಯೆ ಬಂಡುಕೋರರು ಭಾರತೀಯನೊಬ್ಬನನ್ನು ಅಪಹರಿಸಿದ್ದಾರೆ ಎನ್ನುವ ಸುದ್ಧಿ ಸುಡಾನ್ ಕುರಿತು ಚರ್ಚೆ ತೀವ್ರವಾಗುವಂತೆ ಮಾಡಿದೆ.
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ.
ಈ ವೇಳೆ ಆಗಸ್ಟ್ 25, 2017ರ ಬಿಬಿಸಿ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ, “ಕಪ್ಪು ವರ್ಣೀಯ ವ್ಯಕ್ತಿಯನ್ನು ಶವಪೆಟ್ಟಿಗೆಯಲ್ಲಿ ಬಲವಂತವಾಗಿ ಮಲಗಿಸಿ ಕೊಲೆಗೆ ಯತ್ನಿಸಿದ ಮತ್ತು ಅಪಹರಣದ ಆರೋಪದಡಿ ದಕ್ಷಿಣ ಆಫ್ರಿಕಾದ ಇಬ್ಬರು ಬಿಳಿಯ ರೈತರನ್ನು ದೋಷಿಗಳೆಂದು ಘೋಷಿಸಲಾಗಿದೆ. “ಆರೋಪಿಗಳು ಬಲಿಪಶುವನ್ನು ಕೊಲ್ಲಲು ಉದ್ದೇಶಿಸಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ನ್ಯಾಯಾಧೀಶರು ಹೇಳಿದರು. ದಕ್ಷಿಣ ಆಫ್ರಿಕಾದ ಮಿಡೆಲ್ಬರ್ಗ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಗಿನಿಂದ ಬಿಬಿಸಿಯ ನೊಮ್ಸಾ ಮಾಸೆಕೊ ವರದಿ ಮಾಡಿದ್ದಾರೆ.” ಎಂದಿದೆ. ಈ ವರದಿಯೊಂದಿಗೆ ನೀಡಲಾಗಿರುವ ವೀಡಿಯೋ ವೈರಲ್ ವೀಡಿಯೋವನ್ನು ಹೋಲುತ್ತದೆ ಎನ್ನುವುದುನ್ನು ನಾವು ಕಂಡಿದ್ದೇವೆ.

ಈ ಕುರಿತು ನಾವು ಇನ್ನಷ್ಟು ಶೋಧ ನಡೆಸಿದಾಗ, ವಿವಿಧ ವರದಿಗಳು ಲಭ್ಯವಾಗಿ.
ಅಕ್ಟೋಬರ್ 28, 2017ರಂದು ಅಲ್ ಜಝೀರಾ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೋದ ವಿವರಣೆಯಲ್ಲಿ, “ಕಪ್ಪು ವರ್ಣೀಯ ವ್ಯಕ್ತಿಯನ್ನು ಬಲವಂತವಾಗಿ ಶವಪೆಟ್ಟಿಗೆಗೆ ಹಾಕಿ ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ದಕ್ಷಿಣ ಆಫ್ರಿಕಾದ ಇಬ್ಬರು ಬಿಳಿಯ ಪುರುಷರಿಗೆ ಒಟ್ಟು 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣವು ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.” ಎಂದಿದೆ. ಈ ವೀಡಿಯೋ ಕೂಡ ವೈರಲ್ ಕ್ಲಿಪ್ ನ್ನು ಹೊಂದಿದೆ

ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಸತ್ಯಶೋಧನೆ ಪ್ರಕಾರ, ಸುಡಾನ್ ನಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಜೀವಂತವಾಗಿ ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡುತ್ತಿದ್ದಾರೆ ಎನ್ನುವುದು ತಪ್ಪುದಾರಿಗೆಳೆಯುವಂಥದ್ದಾಗಿದೆ. ಕಪ್ಪು ವರ್ಣೀಯ ವ್ಯಕ್ತಿಯೊಬ್ಬನನ್ನು ಬಿಳಿಯ ಇಬ್ಬರು ರೈತರು ಶವ ಪೆಟ್ಟಿಗೆಯಲ್ಲಿಟ್ಟು ಕೊಲೆ ಮಾಡಲು ಯತ್ನಿಸಿದ ದಕ್ಷಿಣ ಆಫ್ರಿಕಾ ದೇಶದ ಪ್ರಕರಣ ಇದಾಗಿದೆ.
Our Sources
Report by BBC Dated: August 25, 2017
YouTube Video by Aljazeera, Dated: August 28, 2017
Report by CNN, Dated: August 25, 2017
Report by DW, dated: August 27, 2017
Ishwarachandra B G
November 8, 2025
Ishwarachandra B G
October 18, 2025
Runjay Kumar
October 13, 2025