Fact Check: ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆಯೇ, ನಿಜ ಏನು?

ಸತ್ತರೆ ಉಚಿತವಾಗಿ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ

Claim
ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ

Fact
ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಹೇಳಿದ್ದು 2021ರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆಯಲ್ಲಿದೆ ಎಂಬಂತೆ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ. “ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆ ಕಂಡುಗಾಬರಿ ಬಿದ್ದ ಜನರು” ಎಂದಿದೆ.

ಸತ್ತರೆ ಉಚಿತವಾಗಿ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ

ಇದೇ ರೀತಿಯ ಕ್ಲೇಮ್‌ಗಳು ಇಲ್ಲಿ ಮತ್ತು ಇಲ್ಲಿ ಕಂಡುಬಂದಿವೆ. ಈ ಕುರಿತು ಸತ್ಯಶೋಧನೆ ನಡೆಸಲಾಗಿದ್ದು, ಇದೊಂದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ, ನ್ಯೂಸ್‌ಚೆಕರ್‌ ಗೂಗಲ್‌ ಕೀವರ್ಡ್‌ ಸರ್ಚ್ ನಡೆಸಿದ್ದು, ಈ ವೇಳೆ ವರದಿಯೊಂದು ಲಭ್ಯವಾಗಿದೆ.

ಆಗಸ್ಟ್‌ 30, 2021ರ ನ್ಯೂಸ್‌18 ಕನ್ನಡ ವರದಿಯಲ್ಲಿ “ಬೆಳಗಾವಿ ಪಾಲಿಕೆ ಫೈಟ್‌, ಬಿಜೆಪಿಯ ಉಚಿತ ಅಂತ್ಯಕ್ರಿಯೆ ಭರವಸೆ: ಡಿಕೆ ಶಿವಕುಮಾರ್‌ ಟೀಕೆ” ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಬಂದಿದ್ದು, ಇದರಲ್ಲಿ “ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕುರಿತ ಪ್ರಣಾಳಿಕೆಯಲ್ಲಿ ಬಿಜೆಪಿ ಉಚಿತ ಶವ ಸಂಸ್ಕಾರದ ಭರವಸೆ ನೀಡಿದ್ದು ಇದರ ವಿರುದ್ಧ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು” ಎಂದಿದೆ. “ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಚಿತ ಆಕ್ಸಿಜನ್‌, ಬೆಡ್‌ ಕೊಡ್ತೀವಿ, ಉಚಿತ ವ್ಯಾಕ್ಸಿನ್‌, ಫ್ರೀ ಔಷಧ ಕೊಡ್ತೀವಿ ಎಂದು ಹೇಳಬೇಕಿತ್ತು. ಅದು ಬಿಟ್ಟು ಉಚಿತ ಅಂತ್ಯಕ್ರಿಯೆ ಭರವಸೆ ನೀಡಿದ್ದಾರೆ” ಎಂದು ಟೀಕೆ ಮಾಡಿದ್ದನ್ನು ಹೇಳಲಾಗಿದೆ.

ಈ ವರದಿಯನ್ನು ಆಧಾರವಾಗಿರಿಸಿ ಇನ್ನಷ್ಟು ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ನ್ಯೂಸ್‌ಫಸ್ಟ್‌ ಆಗಸ್ಟ್‌ 29, 2021ರ ವರದಿ ಲಭ್ಯವಾಗಿದೆ. “ಸತ್ತರೆ ಉಚಿತವಾಗಿ ಶವಸಂಸ್ಕಾರ: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿಬಿದ್ದ ಜನರು” ಎಂಬ ಶೀರ್ಷಿಕೆಯಡಿಯಲ್ಲಿ “ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಭರ್ಜರಿ ಭರವಸೆಗಳ ಜೊತೆಗೆ ಕೆಲವೊಂದು ಅಂಶಗಳು ಮತದಾರ ಪ್ರಭುವಿನ ಹುಬ್ಬೇರುವಂತೆ ಮಾಡಿದೆ” ಎಂದಿದೆ. ಇದರಲ್ಲಿ “ಸತ್ತರ ಉಚಿತವಾಗಿ ಶವ ಸಂಸ್ಕಾರಕ್ಕೆ ವ್ಯವಸ್ಥೆ ಎಂದು ಘೋಷಿಸಲಾಗಿದ್ದು, ಇದನ್ನು ನೋಡಿ ಕುಂದಾನಗರಿಗರು ಬೆಚ್ಚಿ ಬಿದ್ದಿದ್ದಾರೆ. ಬಿಜೆಪಿ ಪಕ್ಷ ಜನರ ಸಾವನ್ನೇ ಬಯಸುತ್ತಿದೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ” ಎಂದಿದೆ.

Also Read: ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿದ್ದಾರಾ? ನೈಜ ಸಂಗತಿ ಏನು?

ಇದರೊಂದಿಗೆ ಪ್ರಣಾಳಿಕೆಯ ಸತ್ಯಾಸತ್ಯತೆ ಪರಿಶೀಲನೆಗೆ ಫೇಸ್‌ಬುಕ್‌ನಲ್ಲಿ ಸರ್ಚ್ ನಡೆಸಲಾಗಿದ್ದು ಈ ವೇಳೆ ರಾಜ್ಯ ಬಿಜೆಪಿ ಸೆಪ್ಟೆಂಬರ್‌ 1, 2021ರಂದು ಪೋಸ್ಟ್‌ ಮಾಡಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಪ್ರಣಾಳಿಕೆ ಪತ್ತೆಯಾಗಿದೆ. ಈ ಪ್ರಣಾಳಿಕೆಯಲ್ಲಿ ವಿವಿಧ ಅಂಶಗಳೊಂದಿಗೆ “ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಶವ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆಗೆ ಕ್ರಮ” ಎಂದು ಬರೆದಿರುವುದು ಪತ್ತೆಯಾಗಿದೆ.

ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆ

ಇದೇ ಚುನಾವಣೆ ಪ್ರಣಾಳಿಕೆಯನ್ನು ಬೆಳಗಾವಿಯ ಸಂಸದರಾದ ಮಂಗಳಾ ಸುರೇಶ ಅಂಗಡಿ ಅವರು ಪೋಸ್ಟ್‌ ಮಾಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಇದರೊಂದಿಗೆ ಕ್ಲೇಮಿನಲ್ಲಿ ಕಂಡುಬಂದ ಫೋಟೋ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು ನ್ಯೂಸ್‌ಫಸ್ಟ್‌ ಪ್ರಕಟಿಸಿದ ವರದಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದ್ದಾರೆ. ಲಕ್ಷ್ಮಣ ಸವದಿ ಅವರು ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಇಂತಹ ಪ್ರಣಾಳಿಕೆ ಬಿಡುಗಡೆಯಲ್ಲಿ ಅವರು ಭಾಗಿಯಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು.

ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆ

ಇನ್ನು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದ್ದು, ಈ ಕುರಿತು ಯಾವುದೇ ಫಲಿತಾಂಶ ಲಭ್ಯವಾಗಿರುವುದಿಲ್ಲ.

Conclusion

ಈ ಸತ್ಯಶೋಧನೆಯ ಪ್ರಕಾರ, “ಸತ್ತರೆ ಉಚಿತವಾಗಿ ಶವ ಸಂಸ್ಕಾರ, ಬಿಜೆಪಿ ಪ್ರಣಾಳಿಕೆ ಕಂಡುಗಾಬರಿ ಬಿದ್ದ ಜನರು” ಎನ್ನುವುದು 2021ರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದ್ದಾಗಿದೆ. ಮತ್ತು ಅದು ಈಗಿನ ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಇದು ತಪ್ಪಾದ ಸಂದರ್ಭವಾಗಿದೆ.

Results: False

Our Sources

Report by News18 Kannada, Dated: Augst 30, 2021

Report by NewsFirst, Dated: August 29, 2021

Facebook post by BJP Karnataka, Dated: September 1, 2021

Facebook post by Mangala Suresh Angady, Dated: September 1, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.