Fact Check
ನಟಿಯ ಪೋಸ್ಟರ್ ಗೆ ಲವ್ ಜಿಹಾದ್ ಹೇಳಿಕೆ, ಸುಡಾನ್ ಮುಸ್ಲಿಮರಿಂದ ಶವ ಪೆಟ್ಟಿಗೆಯಲ್ಲಿ ಕ್ರಿಶ್ಚಿಯನ್ನರ ಜೀವಂತ ಸಮಾಧಿ, ವಾರದ ನೋಟ
ನಟಿಯ ಪೋಸ್ಟರ್ ಜೊತೆಗೆ ಲವ್ ಜಿಹಾದ್ ಹೇಳಿಕೆ, ಸುಡಾನ್ ನಲ್ಲಿ ಮುಸ್ಲಿಮರಿಂದ ಶವ ಪೆಟ್ಟಿಗೆಯಲ್ಲಿ ಕ್ರಿಶ್ಚಿಯನ್ನರ ಜೀವಂತ ಸಮಾಧಿ, ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ, ಮಗುವನ್ನು ಗೂಳಿಯ ದಾಳಿಯಿಂದ ಹಸು, ನ್ಯೂಯಾರ್ಕ್ ಗೆ ಝೊಹ್ರಾನ್ ಮಮ್ದಾನಿ ಮೇಯರ್ ಆಗುತ್ತಿದ್ದಂತೆ ಅಮೆರಿಕದ ಧ್ವಜಗಳನ್ನು ಕಿತ್ತೆಸೆದ ಮುಸ್ಲಿಮರು ಎಂಬ ಹೇಳಿಕೆಗಳು ಈ ವಾರಲ್ ವೈರಲ್ ಆಗಿವೆ. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇವುಗಳು ನಿಜವಲ್ಲ ಎಂದು ಸಾಕ್ಷ್ಯಗಳ ಸಮೇತ ನಿಜವನ್ನು ಬಿಚ್ಚಿಟ್ಟಿದೆ. ಈ ಕುರಿತ ವಾರದ ನೋಟ ಇಲ್ಲಿದೆ.

ಲವ್ ಜಿಹಾದ್ ಹೇಳಿಕೆಯೊಂದಿಗೆ ಬಾಂಗ್ಲಾ ನಟಿಯ ಪೋಸ್ಟರ್ ವೈರಲ್
ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ್ನು ಮದುವೆಯಾದ್ದಕ್ಕೆ ಈಗ ಅನುಭವಿಸುತ್ತಿದ್ದಾಳೆ, ಇದು ಲವ್ ಜಿಹಾದ್ ನಿಂದಾಗಿ ನಡೆದಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ.ಈ ಬಗ್ಗೆ ಪರಿಶೀಲಿಸಿದಾಗ, ಬಾಂಗ್ಲಾದೇಶದ ಸಿನೆಮಾ ನಟಿಯೊಬ್ಬರ ಪೋಸ್ಟ್ ಗಳನ್ನು ಕೋಮು ಹೇಳಿಕೆಗಳೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಸುಡಾನ್ ನಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಜೀವಂತವಾಗಿ ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡುತ್ತಿದ್ದಾರೆಯೇ?
ಸುಡಾನ್ ನಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರನ್ನು ಜೀವಂತವಾಗಿ ಶವ ಪೆಟ್ಟಿಗೆಯಲ್ಲಿ ಸಮಾಧಿ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಈ ಹೇಳಿಕೆ ತಪ್ಪು ದಾರಿಗೆಳೆಯುವಂಥದ್ದಾಗಿದೆ. ಇಬ್ಬರು ಶ್ವೇತ ವರ್ಣೀಯ ರೈತರು, ಕಪ್ಪು ವರ್ಣದ ವ್ಯಕ್ತಿಯನ್ನು ಶವಪೆಟ್ಟಿಗೆಯಲ್ಲಿಟ್ಟು ಕೊಲೆಗೆ ಯತ್ನಿಸಿದ 2017ರ ವಿದ್ಯಮಾನ ಇದಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಎಂದು ಟರ್ಕಿಯ ವೀಡಿಯೋ ಹಂಚಿಕೆ
ಬೆಳಗಾವಿಯಲ್ಲಿ ವಿನೂತನ ಮಾದರಿಯ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಯೋಜನೆ ಜಾರಿಗೆ ಬಂದಿರುವುದು ನಿಜವೇ ಆಗಿದ್ದರೂ ಇದರೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಟರ್ಕಿಯದ್ದು ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಮಗುವನ್ನು ಗೂಳಿಯ ದಾಳಿಯಿಂದ ಹಸು ರಕ್ಷಿಸುವ ವೀಡಿಯೋ; ಇದು ನಿಜವಲ್ಲ, ಎಐ ಕರಾಮತ್ತು
ಮಗುವನ್ನು ಗೂಳಿಯ ದಾಳಿಯಿಂದ ಹಸು ರಕ್ಷಿಸುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆ ನೋಡಿದಾಗ ಇದು ನಿಜವಲ್ಲ ಎಐ ಮೂಲಕ ಮಾಡಿದ ವೀಡಿಯೋ ಎಂದು ನ್ಯೂಸ್ಚೆಕರ್ ಕಂಡುಹಿಡಿದಿದೆ. ಈ ವರದಿ ಇಲ್ಲಿ ಓದಿ

ನ್ಯೂಯಾರ್ಕ್ ಗೆ ಝೊಹ್ರಾನ್ ಮಮ್ದಾನಿ ಮೇಯರ್ ಆಗುತ್ತಿದ್ದಂತೆ ಅಮೆರಿಕದ ಧ್ವಜಗಳನ್ನು ಕಿತ್ತೆಸೆದ ಮುಸ್ಲಿಮರು?
ನ್ಯೂಯಾರ್ಕ್ ನಗರಕ್ಕೆ ಝೊಹ್ರಾನ್ ಮಮ್ದಾನಿ ಮೇಯರ್ ಆಗುತ್ತಿದ್ದಂತೆ ಮುಸ್ಲಿಮರು ಅಮೆರಿಕದ ಧ್ವಜಗಳನ್ನು ಕಿತ್ತೆಸೆದಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ 2023ರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನ್ಯೂಯಾರ್ಕ್ ನಲ್ಲಿ ನಡೆದ ವೇಳೆ ಪ್ರತಿಭಟನಕಾರನೊಬ್ಬ ಧ್ವಜಗಳನ್ನು ಕಿತ್ತೆಸೆದಿದ್ದು, ತಪ್ಪಾದ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ