Fact Check: ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ತಾಯತ ತೆಗೆಸಿದ ಮೌಲ್ವಿ ಎಂಬ ಹೇಳಿಕೆ ನಿಜವೇ?

ಬಾಂಗ್ಲಾ, ಹಿಂದೂ, ತಾಯತ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
Fact Check: ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ತಾಯತ ತೆಗೆಸಿದ ಮೌಲ್ವಿ ಎಂಬ ಹೇಳಿಕೆ ನಿಜವೇ?

Fact
ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ತಾಯತ ತೆಗೆಸಿದ ಮೌಲ್ವಿ ಎಂಬ ಹೇಳಿಕೆ ತಪ್ಪಾಗಿದೆ. ಆ ಬಾಲಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ತಾಯತ ಇಸ್ಲಾಂಗೆ ವಿರುದ್ಧ ಎಂಬ ಕಾರಣಕ್ಕೆ ಅದನ್ನು ತೆಗೆಸಿದ್ದಾಗಿ, ಸ್ವತಃ ತಾಯತ ತೆಗೆಸಿದ ಮೌಲ್ವಿ ಹೇಳಿದ್ದಾರೆ

ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ಮೌಲ್ವಿಯೊಬ್ಬ ದೇವರ ತಾಯತ ತೆಗೆಸಿದ ಎಂದು ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಮೌಲ್ವಿಯೊಬ್ಬ ಬಾಂಗ್ಲಾದೇಶದಲ್ಲಿ ಹಿಂದೂ ಮಗುವಿಗೆ ಪರಿಹಾರ_ಸಾಮಗ್ರಿಗಳನ್ನು ಕೊಡುವ ನೆಪದಲ್ಲಿ, ಸುಭಾನ್ ಅಲ್ಲಾ, ಅಲ್ಲಾ ಹು ಅಕ್ಬರ್ ಎಂದು ಹೇಳುತ್ತಾ ಪ್ರತಿಯಾಗಿ ಅವನ ಹಿಂದೂ ದೇವರ ಮಾಲಾ ಅನ್ನು ತನ್ನ ಬಾಯಿಯಿಂದ ಕತ್ತರಿಸುತ್ತಾನೆ. ಆ ಮಗು ಹಿಂದೂ ದೇವರ ಮಾಲಾ ಬಗ್ಗೆ ಕೇಳಿದಾಗ, ಪರಿಹಾರ ಸಾಮಗ್ರಿಯನ್ನು ತೆಗೆದುಕೊಂಡು ಹೋಗು ಮತ್ತು ಮಾಲಾ ಬಗ್ಗೆ ಚಿಂತಿಸಬೇಡ ಎಂದು ಹೇಳಿದ.”  ಎಂದಿದೆ.

Also Read: ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್‌ ಪ್ಯಾಲಸ್ತೀನ್‌ ನಲ್ಲಿ ಸ್ಫೋಟ ನಡೆಸಿತೇ?

ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ ಚೆಕರ್ ಗೆ ಬಳಕೆದಾರರೊಬ್ಬರು ಟಿಪ್‌ ಲೈನ್‌ ಮೂಲಕ (+91-9999499044)  ವಿನಂತಿಸಿಕೊಂಡಿದ್ದಾರೆ. ಅದನ್ನು ತನಿಖೆಗೆ ಅಂಗೀಕರಿಸಲಾಗಿದೆ. ಸತ್ಯ ಶೋಧನೆಯಲ್ಲಿ ಕಂಡುಬಂದಂತೆ ಹೇಳಿಕೆ ತಪ್ಪಾಗಿದ್ದು, ಮುಸ್ಲಿಂ ಸಮುದಾಯದಲ್ಲಿರುವ ಒಂದು ನಂಬಿಕೆಯ ತಾಯತವನ್ನು ಮುಸ್ಲಿಂ ಮೌಲ್ವಿಯೇ ತೆಗೆಸಿರುವುದಾಗಿ ಕಂಡುಬಂದಿದೆ.

Fact Check/Verification

ತನಿಖೆಯ ಆರಂಭದಲ್ಲಿ ನಾವು 17 ಸೆಕೆಂಡ್ ನ ಈ ವೀಡಿಯೋವನ್ನು ಪರಿಶೀಲಿಸಿದ್ದೇವೆ. ಇದರಲ್ಲಿ ಬಾಂಗ್ಲಾ ಭಾಷೆಯಲ್ಲಿ ಬರೆದಿರುವುದನ್ನು ನಾವು ಅನುವಾದಿಸಿದ್ದೇವೆ. ಈ ವೇಳೆ “ನೊವಾಖಾಲಿ ಪರಿಹಾರ ಸಾಮಗ್ರಿಗಳ ವಿತರಣೆಯೊಂದಿಗೆ, ಹುಡುಗನು ಶಿರ್ಕ್‌ನಿಂದ ಮುಕ್ತನಾದನು” (ಗೂಗಲ್ ಮೂಲಕ ಅನುವಾದಿಸಲಾಗಿದೆ) ಎಂದಿರುವುದನ್ನು ಗಮನಿಸಿದ್ದೇವೆ.

ಇತ್ತೀಚೆಗೆ ಭಾರತದ ತ್ರಿಪುರಾ ರಾಜ್ಯದಲ್ಲಿ ಡೊಂಬೂರ್ ಗೇಟ್ ನಿಂದ ನೀರ ಹರಿವು ಹೆಚ್ಚಿದ್ದ ಕಾಣರ ದಕ್ಷಿಣ ಬಾಂಗ್ಲಾದೇಶದ ಫೆನಿ, ನೊವಾಖಾಲಿ, ಚಿತ್ತಗಾಂಗ್ ಮತ್ತು ಕೊಮಿಲ್ಲಾ ಪ್ರದೇಶಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಸಂಭವಿಸಿತ್ತು. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಶೈಕ್ಷಣಿಕ ಸಂಸ್ಥೆಗಳು ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳು ಜನರ ನೆರವಿಗೆ ಧಾವಿಸಿವೆ. ಇದೇ ವೇಳೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣೆಯೊಂದಿಗೆ ತಾಯತ ತೆಗೆಸಿದ ವಿಡಿಯೋ ವೈರಲ್ ಆಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ.

ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಈ ವೇಳೆ ತೌಹೀದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್‌ನ ಫೇಸ್‌ಬುಕ್ ಪುಟದಲ್ಲಿ ನಾವು ವೈರಲ್‌ ವೀಡಿಯೋವನ್ನು ಹೋಲುವ ವೀಡಿಯೊವನ್ನು ಕಂಡುಕೊಂಡಿದ್ದೇವೆ. ನಂತರ ನಾವು ತೌಹೀದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್ ನ ಪ್ರಾಂಶುಪಾಲರನ್ನು ಸಂಪರ್ಕಿಸಿದ್ದೇವೆ. 

ವೀಡಿಯೋ ಅವರ ಫೌಂಡೇಶನ್‌ಗೆ ಸಂಬಂಧಿಸಿದ್ದಾಗಿದೆ ಎಂದವರು ಹೇಳಿದ್ದಾರೆ. ನೊವಾಖಾಲಿಯ ಸೆನ್‌ಬಾಗ್‌ನ ಕಬೀರ್‌ಹತ್‌ನ ಚಾರ್ ಅಲ್ಗಿ ಗ್ರಾಮದಲ್ಲಿ ವೀಡಿಯೋ ಮಾಡಲಾಗಿದೆ. ಈ ದಿನ ಪರಿಹಾರ ವಿತರಣಾ ಕಾರ್ಯಕ್ರಮದ ಉಸ್ತುವಾರಿಯನ್ನು ತೌಹೀದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್ ನ ಶಿಕ್ಷಕ ಶೇಖ್ ಅಬ್ದುಲ್ ಮಲೇಕ್ ಮಿಯಾಜಿ ವಹಿಸಿದ್ದರು. 

ವೀಡಿಯೋದಲ್ಲಿ ಒಬ್ಬ ವ್ಯಕ್ತಿ ‘ಅಲ್ಲಾ ನಿನಗೆ ಕೊಡುಗೆಯನ್ನು ನೀಡುತ್ತಾನೆ’ ಎಂದು ಹೇಳುವುದನ್ನು ಕೇಳಬಹುದು. ಆವಾಗ ಶೇಖ್ ಅವರು, ‘ಅಲ್ಲಾಹ್ ಸುಭಾನ್ ತಾಲಾವನ್ನು ಸ್ವೀಕರಿಸು’ ಎಂದು ಹೇಳಿದರು, ತಕ್ಷಣವೇ ಹುಡುಗ, ‘ಅಮ್ಮ ಹೆದರುತ್ತಾರೆ’ ಎಂದು ಹೇಳಿದರು.  ಆಗ ಅಲ್ಲಿದ್ದ ವ್ಯಕ್ತಿ ಮತ್ತು ಶೇಖ್ ಹೇಳಿದರು, ‘ಇಲ್ಲ, ಕೂಗಬೇಡ. ದಯವಿಟ್ಟು ಪ್ರಾರ್ಥಿಸು. ಬಲ್ಬಾ ದೇವರು ಬರುತ್ತಾರೆ. ಅವರಿಗಾಗಿ ಪ್ರಾರ್ಥಿಸು ಎಂದು ಹೇಳುತ್ತಾರೆ.

ಈ ವಿಚಾರದ ಕುರಿತಂತೆ ನ್ಯೂಸ್‌ಚೆಕರ್ ಬಾಂಗ್ಲಾ ಅಬ್ದುಲ್ ಮಲೆಕ್ ಮಿಯಾಜಿ ಅವರನ್ನು ಸಂಪರ್ಕಿಸಿದಾಗ, ವೀಡಿಯೋದಲ್ಲಿರುವ ಹುಡುಗ ಮುಸ್ಲಿಂ ಕುಟುಂಬಕ್ಕೆ ಸೇರಿದವನು ಎಂದು ಅವರು ನಮಗೆ ತಿಳಿಸಿದ್ದಾರೆ. ತಾಯತ/ಮೋಡಿ ಹಾಕುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಕಾರಣ ಪರಿಹಾರ ಕೊಡುವ ವೇಳೆ ತಾಯತವನ್ನು ತೆಗೆದಿರುವುದಾಗಿ ಹೇಳಿದರು.

ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಇತರ ವಿದ್ವಾಂಸರು ಅದೇ ರೀತಿ ಮಾಡುತ್ತಿರುವುದು ಕಂಡುಬರುತ್ತದೆ. ಅಂತಹ ಕೆಲವು ವೀಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ತಾಯತ ಕಟ್ಟುವುದು ಇಸ್ಲಾಂಗೆ ಪೂರಕವಾಗಿದೆಯೇ?

ಇಸ್ಲಾಮಿನ ಪರಿಭಾಷೆಯಲ್ಲಿ ಶಿರ್ಕ್ ಎಂದರೆ ಅಲ್ಲಾಹನ ಆರಾಧನೆಯಲ್ಲಿ ಯಾರನ್ನಾದರೂ ಸಂಯೋಜಿಸುವುದು ಮತ್ತು ಅವನನ್ನು ಅಲ್ಲಾಗೆ ಸಮಾನವೆಂದು ಪರಿಗಣಿಸುವುದು. ಅಂದರೆ ಅಲ್ಲಾಹನ ಹೊರತಾಗಿ ಬೇರೆಯವರಲ್ಲೂ ನಂಬಿಕೆ ಇಡುವುದು. ಕುರಾನ್‌ನ ಹಲವಾರು ಶ್ಲೋಕಗಳು ಶಿರ್ಕ್ ವಿರುದ್ಧವಾಗಿ ಹೇಳುತ್ತವೆ. ಈ ಕುರಿತು ಇಸ್ಲಾಮಿಕ್ ವಿದ್ವಾಂಸರಲ್ಲಿ ಹಲವಾರು ಅಭಿಪ್ರಾಯಗಳಿವೆ, ಇಸ್ಲಾಂ ತಾಯತಗಳನ್ನು  ಧರಿಸುವುದನ್ನು ಇದು ಕ್ಷಮಿಸುತ್ತದೆ ಎಂದು ಕೆಲವರು ಹೇಳಿದರೆ, ತಾಯತಗಳನ್ನು ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಖುರಾನ್‌ನ ಶ್ಲೋಕಗಳನ್ನು ತಾಯತದಲ್ಲಿ ಹೊಂದಿದ್ದರೆ, ಅದು ಇಸ್ಲಾಂಗೆ ಪೂರಕವಾಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಇಲ್ಲಿ ಇಲ್ಲಿ ನೋಡಿ

ತಾಯತ ತೆಗೆಯುವ ಕೆಲಸವನ್ನು ಹಿಂದೂಗಳಿಗೂ ಮಾಡಲಾಗಿದೆಯೇ ಎಂದು ನಾವು ಪ್ರಶ್ನಿಸಿದಾಗ, ಅಂತಹ ಕೆಲಸವನ್ನು ಇಸ್ಲಾಂ ಹೊರತು ಬೇರೆ ಧರ್ಮದ ಯಾರಿಗೂ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

Conclusion

ಈ ತನಿಖೆಯ ಪ್ರಕಾರ, ಪರಿಹಾರ ಸಾಮಗ್ರಿ ಕೊಡುವ ನೆವದಲ್ಲಿ ಬಾಂಗ್ಲಾ ಹಿಂದೂ ಬಾಲಕನ ಕೊರಳಿಂದ ತಾಯತ ತೆಗೆಸಲಾಗಿದೆ ಎಂಬ ಹೇಳಿಕೆಯು ತಪ್ಪಾಗಿದೆ.  

Also Read: ಮಂಕಿ ಪಾಕ್ಸ್ ಇನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಅಲ್ಲ? WHO ಮುಖ್ಯಸ್ಥರ ಬೇರೆ ಸಂದರ್ಭದ ಹಳೆ ವೀಡಿಯೋ ಹಂಚಿಕೆ

Result: False

Our Sources
Facebook post By Tawheed Academy and Islamic Center, Dated: August 27, 2024

Conversation with Abdul Malek Miyaji

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಬಾಂಗ್ಲಾದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.