ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇಲ್ಲ, ಇದು ಸತ್ಯವೇ?

ಕರಿದ ಈರುಳ್ಳಿ

Claim

ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇರುವುದಿಲ್ಲ, ಹಸಿ ಈರುಳ್ಳಿಯೇ ಉತ್ತಮ ಎನ್ನುವ ರೀತಿ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕ್ಲೇಮ್‌ ಹೀಗಿದೆ. “ನಿಮಗಿದು ಗೊತ್ತೇ? ಕರಿದ/ಫ್ರೈ ಮಾಡಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶಗಳೂ ಇರಲ್ಲ. ಇದು ಒಂದು ರೀತಿ ಮೈದಾ ತರಹ.” ಎಂದು ಹೇಳಲಾಗಿದೆ. ಇದನ್ನು ಇಲ್ಲಿ ನೋಡಬಹುದು.

ಕರಿದ ಈರುಳ್ಳಿ, ಪೋಷಕಾಂಶ
ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾದ ಕ್ಲೇಮ್‌

ಹಾಗಾದರೆ ಕರಿದ ಈರುಳ್ಳಿ ತಿಂದರೆ ಏನೂ ಪ್ರಯೋಜನವಿಲ್ಲವೇ? ಎಂಬುದರ ಕುರಿತ ಸತ್ಯ ಪರಿಶೀಲನೆಯನ್ನು ನ್ಯೂಸ್‌ಚೆಕರ್‌ ಮಾಡಿದ್ದು, ಭಾಗಶಃ ತಪ್ಪು ಎಂದು ಕಂಡುಬಂದಿದೆ.

Fact Check/ Verification

ಈ ಕ್ಲೇಮಿನ ಬಗ್ಗೆ ಸತ್ಯಪರಿಶೀಲನೆಗೆ ಗೂಗಲ್‌ ಕೀವರ್ಡ್‌ ಸರ್ಚ್ ನಡೆಸಲಾಗಿದ್ದು, ಈ ವೇಳೆ ಟಫ್ಟ್ಸ್ ವಿಶ್ವವಿದ್ಯಾನಿಲಯದ  ಹೆಲ್ತ್‌ ಆಂಡ್‌ ನ್ಯೂಟ್ರಿಷನ್‌ಲೆಟರ್ನಲ್ಲಿ ಸೆಪ್ಟೆಂಬರ್‌ 2019ರಂದು ಅಪ್ಡೇಟ್‌ ಮಾಡಲಾದ ಪ್ರಶ್ನೋತ್ತರದಲ್ಲಿ ಹಸಿ ಈರುಳ್ಳಿ ಕರಿದ ನೀರುಳ್ಳಿಗಿಂತ ಹೆಚ್ಚು ಪೋಷಕಾಂಶ ಹೊಂದಿದೆಯೇ ಎಂಬುದಕ್ಕೆ ಉತ್ತರ ನೀಡಲಾಗಿದೆ. ಆ ಪ್ರಕಾರ, “ಈರುಳ್ಳಿಯಲ್ಲಿ ಆರೋಗ್ಯಕಾರಿ ರಾಸಾಯನಿಕಗಳಿವೆ.

ಇದರಲ್ಲಿ ವಿಟಮನ್‌ ಸಿ, ಫ್ಲೇವನಾಯ್ಸ್ಡ್ಗಳು, ಆಂಟಿ ಆಕ್ಸಿಡೆಂಟ್‌ಗಳು, ಸಲ್ಫರ್‌ ಸಂಯುಕ್ತಗಳಿವೆ. ಈರುಳ್ಳಿಗಳು, ಪೋಷಕಾಂಶಗಳನ್ನು ಹೆಚ್ಚು ಹೊಂದಿರುತ್ತವೆ. ಈರುಳ್ಳಿಯನ್ನು ಕರಿದು ಅಥವಾ ಹಸಿಯಾಗಿಯೇ ತಿನ್ನಬಹುದು. ಆದರೆ ಹಸಿ ಈರುಳ್ಳಿ ಹೆಚ್ಚಿನ ಮಟ್ಟದ ಸಲ್ಫರ್‌ ಸಂಯುಕ್ತಗಳನ್ನು ಹೊಂದಿರುತ್ತವೆ ಎಂದು ಹೇಳಲಾಗಿದೆ. ಈ ಸಲ್ಫರ್‌ ಸಂಯುಕ್ತ ಕ್ಯಾನ್ಸರ್‌, ರಕ್ತದಲ್ಲಿ ಸಕ್ಕರೆ ಅಂಶ, ಕೆಟ್ಟ ಕೊಲೆಸ್ಟ್ರಾಲ್‌ ವಿರುದ್ಧ ತಡೆಯಾಗಿ ಕೆಲಸ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

Also Read: ಬಿಸಿ ಅನನಾಸು ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ, ವೈರಲ್‌ ಕ್ಲೇಮ್‌ ತಪ್ಪು

ಕರಿದ ಈರುಳ್ಳಿಯಲ್ಲೂ ಹಸಿ ಈರುಳ್ಳಿಯಲ್ಲಿ ಕಂಡು ಬರುವ ಪೋಷಕಾಂಶಗಳೇ ಇರುತ್ತವೆ. ಆದರೆ ಶಾಖದೊಂದಿಗೆ ಅದನ್ನು ಕರಿದಾಗ ಅದರಲ್ಲಿ ಪೌಷ್ಟಿಕಾಂಶವು ಕಡಿಮೆಯಾಗುತ್ತದೆ. ವಿಶೇಷವಾಗಿ ಅಡುಗೆ ಮಾಡುವ ವಿಧಾನದಿಂದ ಪೌಷ್ಟಿಕಾಂಶದ ಮಟ್ಟವೂ ಕಡಿಮೆಯಾಗುತ್ತದೆ. 2009ರಲ್ಲಿ ಪ್ರಕಟಗೊಂಡ ಸಂಶೋಧನೆಯು ಕರಿಯುವ ಪ್ರಕ್ರಿಯೆಯಲ್ಲಿ ಹೆಚ್ಚು ಶಾಖದೊಂದಿಗೆ ಕಡಿಮೆ ಸಮಯದಲ್ಲಿ ಕರಿಯುವುದರಿಂದ ಸಾಮಾನ್ಯ ರೀತಿಯಲ್ಲಿ ಕರಿಯುವುದಕ್ಕಿಂತ ಕಡಿಮೆ ಪ್ರಮಾಣದ ಜೀವಸತ್ವದ ನಷ್ಟವಾಗುತ್ತದೆ ಎಂದು ತೋರಿಸುತ್ತದೆ. ಜೊತೆಗೆ ಜನರು ಹೆಚ್ಚು ಕರಿದ ಆಹಾರ ಸೇವಿಸಬಾರದು ಎಂದು ಸಂಶೋಧನೆ ಶಿಫಾರಸು ಮಾಡಿರುತ್ತದೆ. ಏಕೆಂದರೆ ಅದರಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ದೇಹದಲ್ಲಿ ಅತಿಯಾದ ಕೊಬ್ಬು ರೋಗಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

Conclusion

ನ್ಯೂಸ್‌ ಚೆಕರ್‌ ಸತ್ಯ ಪರಿಶೀಲನೆಯಲ್ಲಿ ಕಂಡುಬಂದ ಪ್ರಕಾರ, ಅಡುಗೆ ಮಾಡುವ ವಿಧಾನದಿಂದ ಪೌಷ್ಟಿಕಾಂಶದ ಮಟ್ಟ ಕಡಿಮೆಯಾಗುತ್ತದೆ. ಆದರೆ ಕ್ಲೇಮಿನಲ್ಲಿ ಹೇಳಿರುವಂತೆ ಕರಿದ/ಫ್ರೈ ಮಾಡಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶಗಳೂ ಇರುವುದಿಲ್ಲ, ಇದು ಒಂದು ರೀತಿ ಮೈದಾ ತರಹ ಎನ್ನುವುದು ತಪ್ಪು.

Result: False

Our Sources
Health and Nutrition Letter, Ask the expert column, Dated September 17, 2019
Nutrient losses and gains during frying: a review by L.Fillion and C.J.K.Henry, Dated July 6, 2009

(This article has been published in collaboration with THIP Media)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.