Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕ್ಯಾನ್ಸರ್ ಗುಣಪಡಿಸಲು ಬಿಸಿ ಅನನಾಸು ನೀರು ಕುಡಿಯಬೇಕು ಎಂಬ ಕ್ಲೇಮ್ ಒಂದು ವೈರಲ್ ಆಗುತ್ತಿದೆ.
ಕ್ಯಾನ್ಸರ್ ಗುಣಪಡಿಸಲು ಸಂಶೋಧಕರು ನಿರಂತರ ಪ್ರಯತ್ನ ನಡೆಸುತ್ತಿರುವಂತೆ, ಬಿಸಿ ನೀರಿಗೆ ಅನನಾಸು ಸೇರಿಸಿ ಕುಡಿಯಬೇಕು ಎಂಬ ವೈರಲ್ ಮೆಸೇಜ್, ವಾಟ್ಸಾಪ್, ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಆ ಕ್ಲೇಮ್ ಪ್ರಕಾರ, ಬಿಸಿ ನೀರಿಗೆ ಕೆಲವು ತುಂಡು ಅನನಾಸುಗಳನ್ನು ಹಾಕಿ ಕುಡಿಯಬೇಕು. ಇದರಿಂದ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ದೇಹಕ್ಕೆ ಬರುತ್ತದೆ. ಈ ಕ್ಲೇಮಿನ ಬಗ್ಗೆ ನ್ಯೂಸ್‌ಚೆಕರ್ ಪರಿಶೀಲನೆ ನಡೆಸಿದಾಗ ಇದು ಸುಳ್ಳು ಎಂದು ಕಂಡು ಬಂದಿದೆ.

ಈ ಕ್ಲೇಮಿನಲ್ಲಿ ಐಸಿಬಿಎಸ್ ಜನರಲ್ ಆಸ್ಪತ್ರೆಯ ಪ್ರೊಫೆಸರ್ ಡಾ.ಗಿಲ್ಬರ್ಟ್ ಎ ಎಂಬವರ ಹೆಸರನ್ನು ಹಾಕಲಾಗಿದೆ. ಅದರಲ್ಲಿ “ಅನನಾಸು ಬಿಸಿ ಆದಾಗ ಕ್ಯಾನ್ಸರ್ ವಿರೋಧಿ ಪದಾರ್ಥಗಳನ್ನು ಬಿಡುಗಡೆ ಮಾಡುತ್ತದೆ. ಇದು ಕ್ಯಾನ್ಸರ್ ಚಿಕಿತ್ಸೆಗೆ ಔಷಧದಲ್ಲಿ ಇತ್ತೀಚಿನ ಪ್ರಗತಿಯಾಗಿದೆ”
“ಅನಾನಸ್‌ನ ಬಿಸಿ ಹಣ್ಣು ಚೀಲಗಳು ಮತ್ತು ಗೆಡ್ಡೆಗಳನ್ನು ಕೊಲ್ಲುವ ಪರಿಣಾಮವನ್ನು ಹೊಂದಿದೆ. ಎಲ್ಲಾ ರೀತಿಯ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಬೀತಾಗಿದೆ. ಅನಾನಸ್ ಬಿಸಿನೀರು ಅಲರ್ಜಿಗಳು/ಅಲರ್ಜಿಗಳ ಪರಿಣಾಮವಾಗಿ ದೇಹದಿಂದ ಎಲ್ಲಾ ಸೂಕ್ಷ್ಮಜೀವಿಗಳು ಮತ್ತು ಜೀವಾಣುಗಳನ್ನು ಕೊಲ್ಲುತ್ತದೆ ಅನಾನಸ್ ಸಾರದಿಂದ ಔಷಧದ ಪ್ರಕಾರವು ‘ಹಿಂಸಾತ್ಮಕ ಕೋಶಗಳನ್ನು’ ಮಾತ್ರ ನಾಶಪಡಿಸುತ್ತದೆ, ಇದು ಆರೋಗ್ಯಕರ ಕೋಶಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಇದರ ಜೊತೆಗೆ, ಅನಾನಸ್ ಜ್ಯೂಸ್‌ನಲ್ಲಿರುವ ಅಮೈನೋ ಆಮ್ಲಗಳು ಮತ್ತು ಅನಾನಸ್ ಪಾಲಿಫಿನಾಲ್‌ಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಆಂತರಿಕ ರಕ್ತನಾಳಗಳ ಅಡಚಣೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ, ರಕ್ತ ಪರಿಚಲನೆಯನ್ನು ಸರಿಹೊಂದಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ.” ಎಂದು ಕ್ಲೇಮಿನಲ್ಲಿ ಹೇಳಲಾಗಿದೆ.
ಈ ಕ್ಲೇಮಿನ ಕುರಿತು ಪರಿಶೀಲನೆಗೆ ತೊಡಗುವ ಆರಂಭದಲ್ಲಿ ಐಸಿಬಿಎಸ್ ಜನರಲ್ ಆಸ್ಪತ್ರೆಯ ಪ್ರೊಫೆಸರ್ ಎಂದ ಡಾ.ಗಿಲ್ಬರ್ಟ್ ಎ ಎಂಬವರ ಬಗ್ಗೆ ಶೋಧನೆ ನಡೆಸಲಾಯಿತು. ಈ ಬಗ್ಗೆ ತೀವ್ರ ಶೋಧ ನಡೆಸಿದರೂ ಅಂತಹ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದರೊಂದಿಗೆ “ಅನಾನಸ್ ಬಿಸಿ ನೀರು” ಎಂಬ ಬಗ್ಗೆ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಈ ವೇಳೆ ಹಲವರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ತಿಳಿದುಬಂದಿದೆ. ಆದರೆ ಇವುಗಳಲ್ಲಿ ಒಂದು ಪೋಸ್ಟ್‌ನಲ್ಲಿ ಐಸಿಬಿಎಸ್ ಆಸ್ಪತ್ರೆಯ ಡಾ.ಗಿಲ್ಬರ್ಟ್ ಎ ಎಂಬ ಬದಲು ಡಾ.ಗಿಲ್ಬರ್ಟ್ ಎ ಕ್ವಾಕೆಯೆ ಎಂದು ಹೆಸರಿಸಿರುವುದು ಕಂಡು ಬಂದಿದೆ. ಇದರೊಂದಿಗೆ ನಾವು ಲಿಂಕ್ಡ್ ಇನ್ ನಲ್ಲಿ ಸರ್ಚ್ ನಡೆಸಿದಾಗ ಗಿಲ್ಬರ್ಟ್ ಅನುಮ್ ಕ್ವಾಕೆಯೆ ಎಂಬ ಹೆಸರು ಕಂಡುಬಂದಿದ್ದು, ಆ ಪ್ರೊಫೈಲ್‌ನಲ್ಲಿ ಘಾನಾ ಬ್ರಾಡ್ ಕಾಸ್ಟಿಂಗ್ ಕಾಪರೇಷನ್‌ನ ಸಂಪಾದಕರು ಎಂದು ಬರೆಯಲಾಗಿದೆ.

thereporters.com.ng, ವೆಬ್‌ಸೈಟ್ನಲ್ಲಿ ವರದಿಯೊಂದು ಪ್ರಕಟವಾಗಿದ್ದು ಅದರಲ್ಲಿ ವೈದ್ಯರು ಚಾನಾದ ಐಸಿಬಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದೆ. ಆದರೆ, ಅದು ಯಾವ ದೇಶದಲ್ಲಿದೆ ಎಂದು ಹೇಳಿಲ್ಲ. ಇದೇ ವೇಳೆ ಚಾನಾ ಎಂಬಲ್ಲಿ ಅಂತಹ ಆಸ್ಪತ್ರೆ ಇದೆಯೇ ಎಂದೂ ಸರ್ಚ್ ಮಾಡಿದ್ದು, ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಆದ್ದರಿಂದ ಅಂತಹ ವೈದ್ಯರು ಇಲ್ಲ ಎಂದು ಹೇಳಬಹುದು.
Also Read: ಕೋವಿಡ್ 19 ರೋಗ ಅಲ್ಲ; ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ನ್ಯೂಸ್ ಚೆಕರ್ ಇದರೊಂದಿಗೆ ಕ್ಯಾನ್ಸರ್ ಮೇಲೆ ಅನನಾಸಿನ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಿದೆ. ಈ ವೇಳೆ ಅಧ್ಯಯನ ವರದಿ ಲಭ್ಯವಾಗಿದ್ದು, ಇದನ್ನು ತೈವಾನ್‌ನ ವೈದ್ಯರು ನಡೆಸಿದ್ದಾಗಿ ಹೇಳಲಾಗಿದೆ. ಆ ಅಧ್ಯಯನದ ಪ್ರಕಾರ “ಅನನಾಸಿನ ಹಣ್ಣುಗಳಲ್ಲಿರುವ ಬ್ರೊಮೆಲೈನ್ ಕಿಣ್ವಗಳು “ಕೊಲೆರೆಕ್ಟಲ್ ಕ್ಯಾನ್ಸರ್ ಜೀವಕೋಶಗಳು (ಕೊಲೊನ್ ಕ್ಯಾನ್ಸರ್) ವೃದ್ಧಿಸುವ ಸಾಮರ್ಥ್ಯವನ್ನು ತಡೆಯುತ್ತದೆ ಎಂದಿದೆ. ಇದರೊಂದಿಗೆ ವಿವಿಧ ಅಧ್ಯಯನಗಳು “ಬ್ರೊಮೆಲಿನ್ ಜೀವಕೋಶದ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಮತ್ತು ವಿವಿಧ ರೀತಿಯ ಕ್ಯಾನ್ಸರ್ ಕಾರಕ ಜೀವಕೋಶಗಳ ಸಾಯುವಂತೆ ಪ್ರೇರಣೆ ನೀಡುತ್ತದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ” ಎಂದು ಸಂಶೋಧನಾ ಪ್ರಬಂಧದಲ್ಲಿ ಹೇಳಲಾಗಿದೆ.
ಆದರೆ ಮೆಮೊರಿಯಲ್ ಸ್ಲೋನ್ ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್‌ನ ವರದಿ ಪ್ರಕಾರ ಬ್ರೊಮೆಲೈನ್ ಒಂದೇ ಮನುಷ್ಯನಲ್ಲಿರುವ ಕ್ಯಾನ್ಸರ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗದು. “ಬ್ರೊಮೆಲೈನ್ ಕಿಣ್ವಗಳನ್ನು ಅನನಾಸಿನ ಕಾಂಡಗಳಿಂದ ಪಡೆಯಲಾಗುತ್ತದೆ ಮತ್ತು ಇದು ಪ್ರೊಟೀನ್ ಕಣಗಳನ್ನು ಒಡೆಯುವ ಸಾಮರ್ಥ್ಯ ಹೊಂದಿದೆ. ಲ್ಯಾಬ್ ಪರೀಕ್ಷೆಯ ವೇಳೆ ಬ್ರೊಮೆಲೈನ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದಿದೆ ಮತ್ತು ಉರಿಯೂತವನ್ನು ಕಡಿಮೆಗೊಳಿಸಿದೆ. ಮಾನವನ ಮೇಲೆ ಈ ಕುರಿತ ಸಂಶೋಧನೆ ಹೆಚ್ಚಿನದ್ದಾಗಿಲ್ಲ. ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸ್ಥಳೀಯವಾಗಿ ಬಳಸಿದಾಗ, ಸತ್ತ ಮತ್ತು ಹಾನಿಗೊಂಡ ಅಂಗಾಶಗಳನ್ನು ತೆಗೆದುಹಾಕಲು ಇದು ಸಹಾಯಮಾಡುತ್ತದೆ. ಬ್ರೊಮೆಲೈನ್‌ನನ್ನು ಕೆಲವೊಮ್ಮೆ ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವುದಕ್ಕೆ ಸಹಾಯ ಮಾಡಲು ಬಾಯಿ ಮೂಲಕ ತೆಗೆದುಕೊಳ್ಳಲಾಗುತ್ತದೆ. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನದ ಕೊರತೆ ಇದೆ. ಇದಲ್ಲದೆ ಮಾನವರಲ್ಲಿರುವ ಕ್ಯಾನ್ಸರ್ ಮೇಲೆ ಇದರ ಪರಿಣಾಮದ ಬಗ್ಗೆ ಅಧ್ಯಯನ ನಡೆದಿಲ್ಲ. ಬ್ರೊಮೆಲೈನ್‌ನಿಂದ ಕೆಲವೊಂದು ಪ್ರತಿಜೀವಕಗಳನ್ನು ಹೆಚ್ಚಿಸಬಹುದು” ಎಂದು ವರದಿ ಹೇಳುತ್ತದೆ.
ಎಎಫ್‌ಪಿನಲ್ಲಿ ಪ್ರಕಟವಾದ ಇನ್ನೊಂದು ವರದಿಯಲ್ಲಿ ಇಂಡೋನೇಷ್ಯಾದ ಕ್ಯಾನ್ಸರ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಅರು ವಿಸಾಕ್ಸೊನೊ ಸುದೊಯೊ ಅವರ ಪ್ರತಿಕ್ರಿಯೆಗಳನ್ನು ಹಾಕಲಾಗಿದೆ. – ಆ ಪ್ರಕಾರ, ಆಪಲ್ ಬೆಣ್ಣೆ ಹಣ್ಣು, ಅನನಾಸು ಮತ್ತಿತರ ಹಣ್ಣುಗಳು ಆರೋಗ್ಯಕಾರಿ. ಈ ಹಣ್ಣುಗಳು, ಸಾಮಾನ್ಯವಾಗಿ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಉಂಟುಮಾಡುತ್ತವೆ. ಅದಕ್ಕೂ ಹೆಚ್ಚಿನದ್ದೇನೂ ಇಲ್ಲ. ಅನನನಾಸು ಮತ್ತು ಇತರ ಆರೋಗ್ಯಕಾರಿ ಹಣ್ಣುಗಳನ್ನು, ತರಕಾರಿಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಸಪಾಯ ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೇ ಗಮನಿಸಬೇಕಾದ ಅಂಶವೆಂದರೆ, ರೋಗವನ್ನು ಶಮನ ಮಾಡಲು ಇತರ ಔಷಧ ಮತ್ತು ಥೆರಪಿಗಳಿಗೆ ಇವು ಸಮನಲ್ಲ”.
ನ್ಯೂಸ್‌ಚೆಕರ್ ಇದರೊಂದಿಗೆ, ಕೇರಳದ ಕಾರ್ತಿಯಾಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಆಕಾಂಲಜಿ ಶಸ್ತ್ರಚಿಕಿತ್ಸಕರಾದ ಡಾ.ಜೊಜೊ ವಿ ಜೋಸೆಫ್ ಅವರನ್ನು ಸಂಪರ್ಕಿಸಿದ್ದು, ಇಂತಹ ಕ್ಲೇಮ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
“ಬಾಳೆಹಣ್ಣು, ಸೇಬು ಇತ್ಯಾದಿಗಳಂತೆ ಅನನಾಸು ಆಹಾರ ಕ್ರಮಕ್ಕೆ ಒಂದು ಉತ್ತಮ ಸೇರ್ಪಡೆ. ಆದರೆ ಇದು ಯಾವುದೇ ಹೆಚ್ಚುವರಿ ಪ್ರಯೋಜನವನ್ನು ಹೊಂದಿಲ್ಲ. ಇದರಿಂದ ಕ್ಯಾನ್ಸರ್ ಏನೂ ಮ್ಯಾಜಿಕ್ ಚಿಕಿತ್ಸೆ ಸಾಧ್ಯವಿಲ್ಲ. ಇದನ್ನು ಕ್ಯಾನ್ಸರ್‌ಗೆ ಚಿಕಿತ್ಸೆಯಾಗಿಯೂ ಬಳಸುವುದಿಲ್ಲ. ದೀರ್ಘಕಾಲ ಇದನ್ನು ತಿನ್ನುವುದರಿಂದ ಕ್ಯಾನ್ಸರ್ ತಡೆಗಟ್ಟುವಿಕೆಯನ್ನೂ ಖಾತರಿಪಡಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಅನನಾಸಿನಲ್ಲಿರುವ ಕ್ಷಾರೀಯ ಅಂಶದ ಬಗ್ಗೆ ಹೇಳಿರುವ ಡಾ.ಜೊಜೊ ಅವರು, “ಅನನಾಸು ಒಂದು ಆಮ್ಲೀಯ ಹಣ್ಣು. ಅದರ ನೀರಿನಲ್ಲಿ 3-4ಪಿಎಚ್ ಹೊಂದಿದ್ದು, ಅದು ಕ್ಷಾರೀಯವಲ್ಲ” ಎಂದಿದ್ದಾರೆ.
ಬಿಸಿ ಅನಾನಸು ನೀರನ್ನು ಕ್ಯಾನ್ಸರ್‌ಗೆ ಚಿಕಿತ್ಸೆಯಾಗಿ ಬಳಸಬಹುದು ಎನ್ನುವುದು ತಪ್ಪುದಾರಿಗೆಳೆಯುವ ಹೇಳಿಕೆ ಎಂದು ನ್ಯೂಸ್‌ಚೆಕರ್ ತನ್ನ ಸಂಶೋಧನೆಯ ಮೂಲಕ ಬಹಿರಂಗಪಡಿಸಿದೆ. ಅನನಾಸಿನಲ್ಲಿರುವ ಕಿಣ್ವಗಳು ಕ್ಯಾನ್ಸರ್ ಜೀವಕೋಶದ ಬೆಳವಣಿಗೆಯನ್ನು ನಿರ್ಬಂಧಿಸಿ ಅವುಗಳು ನಾಶಹೊಂದುತ್ತವೆ ಎನ್ನುವುದು ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಕಂಡುಬಂದಿದೆ. ಆದರೆ, ಇದು ಕ್ಯಾನ್ಸರ್ ರೋಗವನ್ನು ಗುಣಪಡಿಸುವಲ್ಲಿ ಬಳಕೆಯಾಗುತ್ತದೆ ಎಂಬ ಖಾತರಿ ಇಲ್ಲವಾಗಿದೆ.
Our Sources
Memorial Sloan Kettering Cancer Centre: https://www.mskcc.org/cancer-care/integrative-medicine/herbs/bromelain
National Library Of Medicine: https://www.ncbi.nlm.nih.gov/pmc/articles/PMC6338369/
AFP: https://factcheck.afp.com/http%253A%252F%252Fdoc.afp.com%252F9KD4RC-4
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Newschecker and THIP Media
February 28, 2025
Newschecker and THIP Media
January 10, 2025
Newschecker and THIP Media
October 11, 2024