Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಮಹಾರಾಷ್ಟ್ರದ ಶ್ರೀರಾಂಪುರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ
Fact
ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎನ್ನುವುದು ಸುಳ್ಳು, ಇದು ಇಸ್ಲಾಮಿಕ್ ಧ್ವಜವಾಗಿದೆ
ಲೋಕಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಯಿತು ಎಂದು ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಕುರಿತು ಸತ್ಯಶೋಧನೆ ನಡೆಸುವಂತೆ ನ್ಯೂಸ್ ಚೆಕರ್ ಟಿಪ್ ಲೈನ್ (+91-9999499044) ಗೆ ಮನವಿ ಬಂದಿದ್ದು ಅದನ್ನು ತನಿಖೆಗೆ ಅಂಗೀಕರಿಸಲಾಗಿದೆ.
Also Read: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್ ಬರೆದ ಪತ್ರ ಸತ್ಯವೇ?
ಸುದರ್ಶನ್ ನ್ಯೂಸ್ ಮರಾಠಿ, @SudarshanNewsMH ನ X ಖಾತೆಯಿಂದಲೂ ಇಂತಹುದೇ ಕ್ಲೇಮ್ ಮಾಡಲಾಗಿದೆ. ಮೇ4ರಂದು ದೇಶಾದ್ಯಂತ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಆ ನಂತರ ಈ ಹಕ್ಕು ವೈರಲ್ ಆಗಿದೆ.
ಈ ಕ್ಲೇಮಿನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.
ಕ್ಲೇಮಿನಲ್ಲಿರುವ ವೀಡಿಯೋದಲ್ಲಿ ಕೆಲವು ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುತ್ತಿರುವುದು ಮತ್ತು ಹಸಿರು ಬಾವುಟವನ್ನು ಬೀಸುವುದು ಕಂಡುಬಂದಿದೆ.
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು ನಾವು ವೈರಲ್ ವೀಡಿಯೋವನ್ನು ಎಚ್ಚರಿಕೆಯಿಂದ ವೀಕ್ಷಿಸಿದ್ದೇವೆ. ಇದರಲ್ಲಿ ಒಬ್ಬ ವ್ಯಕ್ತಿಯು ಚಂದ್ರ ಮತ್ತು ನಕ್ಷತ್ರವಿರುವ ಹಸಿರು ಬಾವುಟವನ್ನು ಬೀಸುತ್ತಿರುವುದನ್ನು ನಾವು ನೋಡಿದ್ದೇವೆ.
ಚಂದ್ರ ಮತ್ತು ನಕ್ಷತ್ರಗಳಿರುವ ಧ್ವಜದ ಕುರಿತು ನಾವು ಮಾಹಿತಿಗಾಗಿ ಹುಡುಕಿದಾಗ, ನಮಗೆ ಈ ಧ್ವಜದ ಕುರಿತಾದ ಮಾಹಿತಿಯು researchgate.net ನಲ್ಲಿ ಕಂಡುಬಂದಿದೆ. ಈ ಧ್ವಜ ಇಸ್ಲಾಮಿಕ್ ಧ್ವಜ ಎಂದು ನಮ್ಮ ಗಮನಕ್ಕೆ ಬಂದಿದೆ.
ಇದಾದ ನಂತರ ನಾವು ಪಾಕಿಸ್ತಾನದ ಧ್ವಜದ ಬಗ್ಗೆ ಮಾಹಿತಿಗಾಗಿ ಹುಡುಕಿದೆವು. zameen.com ಪ್ರಕಟಿಸಿದ ಲೇಖನದಲ್ಲಿ ನಾವು ಪಾಕಿಸ್ತಾನದ ಧ್ವಜದ ಚಿತ್ರ ಮತ್ತು ಅದರ ಬಗ್ಗೆ ಮಾಹಿತಿಯನ್ನು ಕಂಡುಕೊಂಡಿದ್ದೇವೆ.
ಏತನ್ಮಧ್ಯೆ, ನಾವು ವೈರಲ್ ವೀಡಿಯೋದಲ್ಲಿ ತೋರಿಸಲಾದ ಧ್ವಜವನ್ನು ಮತ್ತು ಪಾಕಿಸ್ತಾನಿ ಧ್ವಜವನ್ನು ಹೋಲಿಸಿದಾಗ, ಇಸ್ಲಾಮಿಕ್ ಧ್ವಜದಲ್ಲಿ ಹಸಿರು ಬಣ್ಣವಿದ್ದು, ಬಿಳಿ ಬಣ್ಣದಲ್ಲಿ ಅರ್ಧಚಂದ್ರ ಮತ್ತು ನಕ್ಷತ್ರವನ್ನು ಮಾತ್ರ ಕಂಡುಕೊಂಡಿದ್ದೇವೆ. ಪಾಕಿಸ್ತಾನದ ಧ್ವಜವು ಹಸಿರು ಬಣ್ಣ, ಬಿಳಿ ಬಣ್ಣದಲ್ಲಿ ಚಂದ್ರ ಮತ್ತು ನಕ್ಷತ್ರಗಳು ಮತ್ತು ಬಿಳಿ ಪಟ್ಟಿಯನ್ನು ಹೊಂದಿದೆ ಎಂದು ಗಮನಿಸಲಾಗಿದೆ.
Also Read: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?
ಆದ್ದರಿಂದ ವೈರಲ್ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋದಲ್ಲಿರುವುದು ಪಾಕಿಸ್ಥಾನ ಧ್ವಜವಲ್ಲ, ಅದು ಇಸ್ಲಾಮಿಕ್ ಧ್ವಜ ಎಂದು ಕಂಡುಕೊಳ್ಳಲಾಗಿದೆ.
ವೈರಲ್ ಹೇಳಿಕೆಯಲ್ಲಿ, ಶ್ರೀರಾಮಪುರದಲ್ಲಿ ಮಹಾವಿಕಾಸ್ ಅಘಾಡಿಯ ವಿಜಯದ ಪ್ರಸ್ತಾವವಿದೆ. ಏತನ್ಮಧ್ಯೆ, ಶ್ರೀರಾಂಪುರದ ಲೋಕಸಭಾ ಕ್ಷೇತ್ರ ಯಾವುದು ಎಂದು ನಾವು ಹುಡುಕಿದ್ದೇವೆ . ಗೂಗಲ್‌ನಲ್ಲಿ ಹುಡುಕಾಡಿದಾಗ ಶ್ರೀರಾಂಪುರ ಕ್ಷೇತ್ರವು ಶಿರಡಿ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು, ಈ ಕ್ಷೇತ್ರದಲ್ಲಿ ಮಹಾವಿಕಾಸ ಅಘಾಡಿಯ ಭಾಗವಾಗಿರುವ ಉದ್ಧವ್ ಠಾಕ್ರೆ ಶಿವಸೇನೆಯ ಭೌಸಾಹೇಬ್ ರಾಜಾರಾಮ್ ವಕ್ಚೌರೆ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಶಿರಡಿ ಲೋಕಸಭಾ ಕ್ಷೇತ್ರದ ಶ್ರೀರಾಂಪುರ ವಿಭಾಗದಲ್ಲಿ ಈ ರೀತಿಯ ಸಂಭ್ರಮ ಇತ್ತೇ? ಮತ್ತು ಅಂತಹ ಧ್ವಜವನ್ನು ಅಲ್ಲಿ ಹಾರಿಸಲಾಗಿದೆಯೇ? ಇದನ್ನು ಪರಿಶೀಲಿಸಲು ನಾವು ಸ್ಥಳೀಯ ಪತ್ರಕರ್ತ ನಿತಿನ್ ಓಜಾ ಅವರನ್ನು ಸಂಪರ್ಕಿಸಿದಾಗ, ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, “ಹಸಿರು ಧ್ವಜ ಬೀಸಿ ಸಂಭ್ರಮಾಚರಣೆ ಮಾಡಲಾಗಿದೆ ಮತ್ತು ಆ ಸಮಯದಲ್ಲಿ ಹಾರಿಸಿದ ಧ್ವಜವು ಪಾಕಿಸ್ತಾನದ ಧ್ವಜವಲ್ಲ ಆದು ಇಸ್ಲಾಮಿಕ್ ಧ್ವಜ” ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಆ ಸಂದರ್ಭದ ವೀಡಿಯೋವೊಂದನ್ನೂ ಅವರು ಒದಗಿಸಿದ್ದಾರೆ. ನಿತಿನ್ ಓಜಾ ಅವರು ಹೇಳುವಂತೆ ಅಲ್ಲಿ “ಕೇಸರಿ ಧ್ವಜವನ್ನೂ ಬೀಸಲಾಗಿತ್ತು” ಎಂದು ತಿಳಿಸಿದ್ದಾರೆ. ಈ ವೀಡಿಯೋವನ್ನು ಈ ಕೆಳಗೆ ವೀಕ್ಷಿಸಬಹುದು.
ನಮ್ಮ ತನಿಖೆಯಲ್ಲಿ ಕಂಡುಬಂದಂತೆ, ಮಹಾವಿಕಾಸ್ ಅಘಾಡಿ ವಿಜಯೋತ್ಸವದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿತ್ತು ಎಂಬ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ. ಅಲ್ಲಿ ಹಾರಿಸಲಾಗಿದ್ದ ಧ್ವಜ ಇಸ್ಲಾಮಿಕ್ ಧ್ವಜವಾಗಿದ್ದು, ಇದರೊಂದಿಗೆ ಕೇಸರಿ ಧ್ವಜವನ್ನೂ ಹಾರಿಸಲಾಗಿತ್ತು ಎಂದು ಕಂಡುಬಂದಿದೆ.
Also Read: ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ, ಸತ್ಯ ಏನು?
Our Sources
Information published on researchgate.net
Article published by Zameen.com
Conversation with local Journalist Nitin Oza
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 8, 2024
Ishwarachandra B G
October 11, 2023
Vasudha Beri
June 23, 2023