Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಂಕೋಲ ಗುಡ್ಡ ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಲಾರಿ ಚಾಲಕ ಅರ್ಜುನ್ ಅವರ ಶವ ದೊರಕಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದನ್ನು ಶೇರ್ ಮಾಡಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಈ ಸಂದೇಶವನ್ನು ಶೇರ್ ಮಾಡಲಾಗುತ್ತಿದ್ದು, ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದೆ. ಮತ್ತು ಈ ಸಂದೇಶವು ತಪ್ಪು ಮಾಹಿತಿ ಎಂಬುದನ್ನು ಕಂಡುಕೊಂಡಿದೆ.
Also Read: ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿದೆ ಎಂಬ ಸುಳ್ಳು ಹೇಳಿಕೆ ವೈರಲ್
ಸತ್ಯಶೋಧನೆಗಾಗಿ ನಾವು ಮೊದಲು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆದರೆ ಯಾವುದೇ ಫಲಿತಾಂಶಗಳು ಲಭ್ಯವಾಗಿಲ್ಲ.
ಬಳಿಕ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಚಾಲಕ ಅರ್ಜುನ್ ಅವರ ಶವ ದೊರಕಿದ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎನ್‌ಡಿಆರ್ ಎಫ್ ಎಕ್ಸ್ ಖಾತೆಯನ್ನೂ ಪರಿಶೀಲಿಸಲಾಗಿದ್ದು, ಯಾವುದೇ ಮಾಹಿತಿಗಳು ಕಂಡುಬಂದಿಲ್ಲ.
ಆ ಬಳಿಕ ಕಾರವಾರ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಕಚೇರಿ ಹೇಳಿಕೆ ಪ್ರಕಾರ, ಅರ್ಜುನ್ ಅವರ ಶವ ದೊರಕಿದೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಅಂಕೋಲಾದ ಗುಡ್ಡ ಕುಸಿತ ಸ್ಥಳ, ಪಕ್ಕದ ಗಂಗಾವಳಿ ನದಿಯಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದ್ದು, ಚಾಲಕ ಅರ್ಜುನ್ ಅವರೂ ಸೇರಿದಂತೆ ನಾಪತ್ತೆಯಾದ ಮೂವರಿಗೆ ಹುಡುಕಾಟ ನಡೆಯುತ್ತಿದೆ. ಸ್ಥಳದಲ್ಲಿ ಸೇನೆ, ಎನ್‌ಡಿಆರ್ ಎಫ್, ರಕ್ಷಣಾ ತಂಡಗಳು ಇವೆ ಎಂದು ತಿಳಿಸಿದ್ದಾರೆ.
ತದನಂತರ ನಾವು ಕಾರವಾರದ ಕನ್ನಡಪ್ರಭ ಜಿಲ್ಲಾ ವರದಿಗಾರ, ಅಂಕೋಲಾ ಗುಡ್ಡಕುಸಿತದ ಬಗ್ಗೆ ವರದಿ ಮಾಡುತ್ತಿರುವ ವಸಂತ ಕುಮಾರ ಕತಗಾಲ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ ಅರ್ಜುನ್ ಸೇರಿದಂತೆ ಮೂವರ ಬಗ್ಗೆ ಹುಡುಕಾಟ ನಡೆಯುತ್ತಿದೆ. ಇದುವರೆಗೆ ಅರ್ಜುನ್ ಮತ್ತವರ ಲಾರಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸದ್ಯ ಗಂಗಾವಳಿ ನದಿಯ ಒಳಭಾಗದಲ್ಲಿ ಮೂರು ಕಡೆಗಳಲ್ಲಿ ಮೆಟಲ್ ತಂತ್ರಜ್ಞಾನ ನೆರವಿನಿಂದದ ಲೋಕದ ವಸ್ತುಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಶೋಧ ನಡೆಯಬೇಕಿದೆ. ಇದಕ್ಕೆ ಮಲ್ಪೆಯಿಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಆಗಮಿಸಿದ್ದು ಶೋಧ ನಡೆಸಲಿದೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತಂತೆ ನಾವು ತನಿಖೆ ನಡೆಸಿದಾಗ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ವಾರ್ತಾಭಾರತಿ ಜೊತೆಗೆ ಮಾತನಾಡಿದ ಆಡಿಯೋ ಲಭ್ಯವಾಗಿದೆ. ಜುಲೈ 26, 2024ರಂದು ವಾರ್ತಾಭಾರತಿ ವರದಿಯಲ್ಲಿ, ಈಶ್ವರ್ ಮಲ್ಪೆ ಅವರು 6 ಜನರ ತಂಡ ಅಂಕೋಲಾಕ್ಕೆ ತೆರಳಿ ಅರ್ಜುನ್ ಅವರ ಹುಡುಕಾಟ ನಡೆಸುವುದಾಗಿ ತಿಳಿಸಿದ್ದಾರೆ.
ಈ ಶೋಧನೆಗಳ ಪ್ರಕಾರ, ಕೇರಳ ಲಾರಿ ಚಾಲಕ ಅರ್ಜುನ್ ಅವರ ಶವ ದೊರೆತಿದೆ ಎಂಬ ಸಂದೇಶದೊಂದಿಗೆ ಹಂಚಿಕೊಳ್ಳುತ್ತಿರುವ ಪೋಟೋ ತಪ್ಪಾಗಿದೆ. ಈ ಲೇಖನ ಪ್ರಕಟಿಸುವವರೆಗೆ ನಾಪತ್ತೆಯಾದವರ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ಗೊತ್ತಾಗಿದೆ.
Also Read: ಹೊಗೇನಕಲ್ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್
Our Sources
Conversation with Office of SP Karawar
Conversation with Vasanth Kumar Katagala, Kannadaprabha, Karawar
Report By Varthabharathi, Dated: July 26, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.