Authors
Claim
ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ
Fact
ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು ಬಂದು ಅನಾಹುತವಾಗಿಲ್ಲ. ಇದು ಛತ್ತೀಸ್‌ಗಢದ ಪ್ರಕರಣವಾಗಿದ್ದು, ಸಿಗ್ನಲಿಂಗ್ ಭಾಗವಾಗಿ ಒಂದು ರೈಲಿನ ಹಿಂದೆ ಇನ್ನೊಂದು ರೈಲು ನಿಲ್ಲಿಸಲಾಗಿದೆ ಎಂದು ರೈಲ್ವೇ ಸ್ಪಷ್ಟೀಕರಣ ನೀಡಿದೆ
ಒಡಿಶಾ ರೈಲು ದುರಂತ ಬಳಿಕವೂ ಹಲವು ಸಂಭಾವ್ಯ ಅವಘಡಗಳಿಂದ ರೈಲ್ವೇ ಪಾರಾದ ಕುರಿತ ಸುದ್ದಿಗಳು ಇರುವ ಬೆನ್ನಲ್ಲೇ.. ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಯಾಗುವುದು ತಪ್ಪಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಟ್ವಿಟರ್ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು. ತಪ್ಪಿದ ಅನಾಹುತ. ಶ್ರೇಯಸ್ಸೆಲ್ಲಾ ಮೋದಿಯವರಿಗೇ ಮೀಸಲು” ಎಂದು ಹೇಳಲಾಗಿದೆ. ಇದು ಇಲ್ಲಿದೆ.
Also Read: ಪ್ರಧಾನಿ ನರೇಂದ್ರ ಮೋದಿ ಅವರು ಕರೆಯದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾದರೇ, ಸತ್ಯ ಏನು?
ಇದೇ ರೀತಿ ಪೋಸ್ಟ್ ಫೇಸ್‌ಬುಕ್‌ನಲ್ಲೂ ಕಂಡುಬಂದಿದ್ದು ಅದು ಇಲ್ಲಿದೆ.
ನ್ಯೂಸ್‌ಚೆಕರ್ ಈ ಹೇಳಿಕೆಗಳ ಸತ್ಯಾಂಶದ ಬಗ್ಗೆ ಸತ್ಯಶೋಧನೆಯನ್ನು ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದೇ ರೀತಿಯ ಹೇಳಿಕೆಯಿರುವ ಟ್ವೀಟ್ ಒಂದಕ್ಕೆ ರೈಲ್ವೇ ನೀಡಿದ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ.
@WeThePeople3009 ಗೆ ಜೂನ್ 11, 2023ರಂದು ನೀಡಿದ ಪ್ರತಿಕ್ರಿಯೆಯಲ್ಲಿ ಆಗ್ನೇಯ ಕೇಂದ್ರೀಯ ರೈಲ್ವೇ (ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇ) ಎರಡು ರೈಲುಗಳು ಎದುರು ಬದುರಾಗಿಲ್ಲ ಎಂದು ಹೇಳಿದೆ. ಈ ಬಗ್ಗೆ ಅದು ಸರಣಿ ಟ್ವೀಟ್‌ಗಳನ್ನು ಮಾಡಿದೆ. “ಜಯರಾಮ್ ನಗರ-ಬಿಲಾಸ್‌ಪುರ ಸ್ಟೇಷನ್ ಸಿಗ್ನಲಿಂಗ್ ಬ್ಲಾಕ್ ಸ್ಟೇಷನ್ ಆಗಿದ್ದು, ರೈಲ್ವೇ ಸಾಮಾನ್ಯ ನಿಯಮ ಪ್ರಕಾರ, ಎಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಬ್ಲಾಕ್ ಸ್ಟೇಷನ್ ಇರುವುದೋ ಅಲ್ಲಿ ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ರೈಲುಗಳ ಸುರಕ್ಷತೆಯ ಕಾರ್ಯಾಚರಣೆಯನ್ನು ಸಿಗ್ನಲ್ ಆಧಾರದ ಮೇಲೆ ಮಾಡಲಾಗುತ್ತದೆ. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯ ನಿಯಮಗಳ ಪ್ರಕಾರ, ಈ ರೈಲುಗಳನ್ನು ಸಹ ನಿರ್ವಹಿಸಲಾಗಿದೆ. ಸ್ವಯಂಚಾಲಿತ ಸಿಗ್ನಲಿಂಗ್ ಬ್ಲಾಕ್ ವಿಭಾಗದಲ್ಲಿ ಈ ನಿಯಮ ಪ್ರಕಾರ ರೈಲುಗಳನ್ನು ನಿರ್ವಹಿಸಲಾಗುತ್ತದೆ. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ, ಮತ್ತೊಂದು ರೈಲು ಮುಂದೆ ನಿಂತಿರುವ ರೈಲಿನ ಹಿಂದೆ 150 ಮೀಟರ್ ವರೆಗೆ ಬರಬಹುದು, ಆದರೆ ಮೆಮು ರೈಲಿನ ಸಂದರ್ಭದಲ್ಲಿ ಅಂತರವನ್ನು 75 ಮೀಟರ್‌ಗೆ ಕಡಿಮೆ ಮಾಡಬಹುದು. ಮೆಮು ರೈಲಿನ ಹಿಂದೆ LV ಬೋರ್ಡ್ ಇದೆ. ಇದರರ್ಥ ಮೆಮು ರೈಲು ಮುಂದಿದೆ ಮತ್ತು ಇನ್ನೊಂದು ರೈಲು ಅದರ ಹಿಂದಿನಿಂದ ಇದೆ ಮತ್ತು ಸರಿಯಾದ, ನಿಗದಿತ ದೂರದಲ್ಲಿ ನಿಂತಿದೆ. ಇದರಲ್ಲಿ ಯಾವುದೇ ಅಚಾತುರ್ಯ ನಡೆದಿಲ್ಲ .ಹಿಂದೆ ಇದೇ ರೀತಿಯ ಘಟನೆಯನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿತ್ತು, ಅದನ್ನು #SECR ನಿರಾಕರಿಸಿದೆ. ಇದು ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆಯ ತಂತ್ರಜ್ಞಾನವಾಗಿದೆ. ಹಾಗಾಗಿ ಸಾಮಾನ್ಯ ಪ್ರಯಾಣಿಕರ ಸಂವೇದನೆಗೆ ಭಂಗ ತರುವಂತೆ ಮಾಡಬೇಡಿ ಎಂದು ಹೇಳಿದೆ.”
ಈ ಟ್ವೀಟ್ ಅನ್ನು ಇಲ್ಲಿ ನೋಡಬಹುದು.
Also Read: ಚಂದ್ರಯಾನ 3 ಉಡಾವಣೆ ಎಂದು ತೋರಿಸಲು ಹಂಚಿಕೊಂಡ ವೈರಲ್ ವೀಡಿಯೋಗಳ ಅಸಲಿಯತ್ತೇನು?
ಈ ಬಗ್ಗೆ ನಾವು ಕೀವರ್ಡ್ ಸರ್ಚ್ ಕೂಡ ನಡೆಸಿದ್ದು, ಮಾಧ್ಯಮಗಳಲ್ಲಿ ಈ ವೈರಲ್ ವೀಡಿಯೋದ ಬಗ್ಗೆ ವರದಿಗಳು ಬಂದಿರುವುದನ್ನು ಗುರುತಿಸಿದ್ದೇವೆ.
ಜೂನ್ 11, 2023ರ ಟೈಮ್ಸ್ ನೌ ವರದಿಯಲ್ಲಿ “ಛತ್ತೀಸ್‌ಗಢದಲ್ಲಿ ಹಳಿಯಲ್ಲಿ ಎರಡು ರೈಲುಗಳು ಇರುವ ವೈರಲ್ ವೀಡಿಯೋ ಒಂದಕ್ಕೆ ರೈಲ್ವೇ ಪ್ರತಿಕ್ರಿಯಿಸಿದ್ದು, ಇದು ಸಹಜ ಸಿಗ್ನಲಿಂಗ್ ಪ್ರಕ್ರಿಯೆ ಎಂದು ಹೇಳಿದೆ” ಎಂದಿದೆ.
ಜೂನ್ 11, 2023ರಂದು ಒಡಿಶಾ ಟಿವಿ.ಇನ್ ಕೂಡ ಇದನ್ನು ವರದಿ ಮಾಡಿದ್ದು “ಛತ್ತೀಸ್‌ಗಢದಲ್ಲಿ ಮೆಮು ಮತ್ತು ಗೂಡ್ಸ್ ರೈಲು ಮುಖಾಮುಖಿ ಢಿಕ್ಕಿಯಾಗುವ ಸಾಧ್ಯತೆ ಬಗ್ಗೆ ವೀಡಿಯೋ ವೈರಲ್ ಆಗಿದ್ದು, ರೈಲ್ವೇ ಸ್ಪಷ್ಟನೆ ನೀಡಿದೆ” ಎಂದಿದೆ.
Also Read: ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Conclusion
ಈ ಸತ್ಯಶೋಧನೆಯ ಪ್ರಕಾರ, ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗುವುದು ತಪ್ಪಿದೆ ಎಂದು ವೈರಲ್ ವೀಡಿಯೋದೊಂದಿಗೆ ಹೇಳಿರುವುದು ತಪ್ಪಾಗಿದೆ.
Result: False
Our Sources
Tweet Reply by South East Central Railway, Dated: June 11, 2023
Report By Times Now, Dated: June 11, 2023
Report By Odisha Tv.in, Dated: June 11, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.