Saturday, April 5, 2025

Fact Check

Fact Check: ಲುಪ್ಪೋ ಕೇಕ್‌ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Written By Vasudha Beri, Translated By Ishwarachandra B G, Edited By Pankaj Menon
Jul 17, 2023
banner_image

Claim
ಮಕ್ಕಳ ಆರೋಗ್ಯದ ಮೇಲೆ ಹಾನಿ ಮಾಡುವಂತೆ ಲುಪ್ಪೋ ಕೇಕ್‌ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ ಮಾಡಲಾಗುತ್ತಿದೆ

Fact
ಇದೊಂದು ಹಳೆಯ ಸುಳ್ಳು ವೈರಲ್‌ ವೀಡಿಯೋ ಆಗಿದ್ದು ಇರಾಕ್‌ನಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಲುಪ್ಪೋ ಕೇಕ್‌ ತಯಾರಿಕಾ ಕಂಪೆನಿ ಟರ್ಕಿ ಮೂಲದ್ದಾಗಿದ್ದು, ಟರ್ಕಿಯ ದಾಳಿಯನ್ನು ಬಹಿಷ್ಕರಿಸುವಂತೆ ಇರಾಕ್‌ನಲ್ಲಿ ಮಾಡಲಾದ ವೀಡಿಯೋ ಇದಾಗಿದೆ ಎಂದು ಊಹಿಸಲಾಗಿದೆ.

ಹೊಸ ಕೇಕ್‌ ಮಾರುಕಟ್ಟೆಗೆ ಬಂದಿದ್ದು, ಅದರಲ್ಲಿ ಮಕ್ಕಳ ಆರೋಗ್ಯದ ಮೇಲೆ ಹಾನಿ ಮಾಡುವಂತೆ ಮಾತ್ರೆಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಈ ಕುರಿತು ಫೇಸ್ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಹೊಸ ಕೇಕ್ ಮಾರುಕಟ್ಟೆಯಲ್ಲಿದೆ.  ಲುಪೋ ಕಂಪನಿಯು ಚಿಕ್ಕ ಮಕ್ಕಳನ್ನು ಅರ್ಧ ಸತ್ತಂತೆ ಮಾಡುವ ಟ್ಯಾಬ್ಲೆಟ್ ಅನ್ನು ಹೊಂದಿದೆ, ದಯವಿಟ್ಟು ಈ ವೀಡಿಯೊವನ್ನು ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ ಮತ್ತು ಅದನ್ನು ಹಿಂದೂ ಪ್ರದೇಶದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ನಿಮ್ಮ ಮಕ್ಕಳು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ” ಎಂದಿದೆ.

Also Read: ಕರ್ನಾಟಕದ ಮದರಸಾ ವಿದ್ಯಾರ್ಥಿಗಳು ಭಾರತದ ಪ್ರಧಾನಿ ಹೆಸರು ತಪ್ಪಾಗಿ ಹೇಳಿದರೇ, ಸತ್ಯ ಏನು?

@Badri Karthik ಫೇಸ್‌ಬುಕ್‌ ಸ್ಕ್ರೀನ್‌ಶಾಟ್

ಇದೇ ರೀತಿಯ ಕ್ಲೇಮ್‌ಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಬಂದಿವೆ.

Fact Check/Verification

ಈ ಬಗ್ಗೆ ನ್ಯೂಸ್ ಚೆಕರ್‌ ಸತ್ಯಶೋಧನೆ ಮಾಡಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಪರಿಶೀಲಿಸಿದ್ದು, ಮಾತ್ರೆಗಳಿವೆ ಎಂದು ಹೇಳಲಾದ ಕೇಕ್‌ನ ಪ್ಯಾಕೆಟ್‌ನಲ್ಲಿ “ಲುಪ್ಪೊ” ಎಂದು ಬರೆದಿರುವುದು ಕಂಡುಬಂದಿದೆ. ಕ್ಲೇಮಿನಲ್ಲಿ ಹೇಳಿದಂತೆ ಇದು ಲುಪೋ ಅಲ್ಲ. ಇದನ್ನು ಗಮನದಲ್ಲಿಟ್ಟು ನಾವು ಫೇಸ್‌ಬುಕ್‌ನಲ್ಲಿ ಕೀವರ್ಡ್‌ ಸರ್ಚ್ ನಡೆಸಿದ್ದೇವೆ ಈ ವೇಳೆ ಕೇಕ್‌ನಲ್ಲಿ ಮಾತ್ರೆಗಳು ಎಂದು ಬೇರೆ ಬೇರೆ ಹೇಳಿಕೆಗಳೊಂದಿಗೆ ವೀಡಿಯೋಗಳು  2019 ರಿಂದಲೇ ಹರಿದಾಡುತ್ತಿರುವುದು ಕಂಡುಬಂದಿದೆ.

ವೈರಲ್‌ ವೀಡಿಯೋದ ಸ್ಕ್ರೀನ್‌ ಶಾಟ್

ಈ ವೈರಲ್‌ ವೀಡಿಯೋದ ಸ್ಪಷ್ಟ ಆವೃತ್ತಿಯು 2019ರ ನವೆಂಬರ್‌ನಲ್ಲಿ ಅಪ್ಲೋಡ್‌ ಮಾಡಲಾದ  ಯೂಟ್ಯೂಬ್ ವೀಡಿಯೋದಲ್ಲಿ ಕಂಡುಬಂದಿದೆ. “ಮಾತ್ರೆಗಳೊಂದಿಗೆ ಓಲೆನ್ ಲುಪ್ಪೊ ಕೇಕ್ಗಳು?” ಎಂಬ ಶೀರ್ಷಿಕೆಯನ್ನು ಇದು ಹೊಂದಿದೆ. ಈ ವೀಡಿಯೋದಲ್ಲಿ ಕೇಕ್‌ ಮಧ್ಯದಲ್ಲಿ ತುಂಡಾದ ರೀತಿ ಇರುವುದನ್ನು ನಾವು ಗುರುತಿಸಲು ಸಾಧ್ಯವಾಗಿದೆ. ಇದರೊಂದಿಗೆ, ವ್ಯಕ್ತಿಯು ಕೇಕ್‌ ನ  ಒಂದು ಭಾಗವನ್ನು ತುಂಬಾ ಅವಸರದಿಂದ ಪುಡಿಮಾಡುತ್ತಾನೆ, ಆದರೆ ಮಾತ್ರೆಗಳನ್ನು ನೋಡಬಹುದಾದ ಇನ್ನೊಂದು ಬದಿಯನ್ನು ಬಹಳ ಜಾಗರೂಕನಾಗಿ ತೆಗೆಯುವುದನ್ನು ಕಾಣಬಹುದು. ಇದು ಸಂಶಯಕ್ಕೆ ಕಾರಣವಾಗಿದೆ ಮತ್ತು ಮಾತ್ರೆಗಳನ್ನು “ಅಡಗಿಸಿಟ್ಟಿರುವ” ನಿಖರವಾದ ಸ್ಥಳವು ಆ ವ್ಯಕ್ತಿಗೆ ಈಗಾಗಲೇ ತಿಳಿದಿದೆಯೇ? ಮತ್ತು ಎರಡು ಮಾತ್ರೆಗಳು ಪತ್ತೆಯಾದ ನಂತರ “ಹುಡುಕಾಟ” ಯನ್ನು ತಕ್ಷಣ ಯಾಕೆ ನಿಲ್ಲಿಸಲಾಯಿತು? ಇನ್ನು ಯಾವುದೇ ಮಾತ್ರೆಗಳಿಲ್ಲ ಎಂದು ವ್ಯಕ್ತಿಗೆ ತಿಳಿದಿತ್ತೇ? ಎಂಬ ಪ್ರಶ್ನೆಗಳು ಕಾಡುತ್ತವೆ.ೀೇ

Also Read: ಹಿಂದೂಗಳ ಬಹಿಷ್ಕಾರಕ್ಕೆ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆಕೊಟ್ಟಿದ್ದಾರೆಯೇ, ವೈರಲ್‌ ವೀಡಿಯೋ ನಿಜವೇ?

ವಿಶೇಷವೆಂದರೆ, ಲುಪ್ಪೊ ಎನ್ನುವುದು ಟರ್ಕಿಶ್ ಕಂಪನಿ ಸೋಲನ್ ನ ಬ್ರಾಂಡ್ ಆಗಿದೆ. ವೈರಲ್ ವೀಡಿಯೋವನ್ನು ಪರಿಶೀಲಿಸುವ ಟರ್ಕಿಯ ಫ್ಯಾಕ್ಟ್ ಚೆಕ್‌ ಸಂಸ್ಥೆ Teyit.org  ಎರಡು ವರ್ಷಗಳ ಹಿಂದೆ ಲೇಖನವನ್ನು ಪ್ರಕಟಿಸಿದ್ದು, ಅದರಲ್ಲಿ “ವೀಡಿಯೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಕೇಕ್‌ ವಿರೂಪಗೊಂಡಿರುವುದು ಗಮನಿಸಲಾಗಿದೆ. ಈ ಉತ್ಪನ್ನ ಟರ್ಕಿಯಲ್ಲಿ ಮಾರಾಟ ಮಾಡುವುದಿಲ್ಲ. ಇದು ರಫ್ತಾಗುವ ಉತ್ಪನ್ನವಾಗಿದ್ದು, ತಪಾಸಣೆ ಮತ್ತು ಅದರ ಫಲಿತಾಂಶಗಳು ಸರಿಯಾಗಿವೆ”. ಎಂದು ಹೇಳಿದೆ.

Teyit.org ವೆಬ್ ಸೈಟ್‌ ನ ಸ್ಕ್ರೀನ್‌ ಶಾಟ್

ಇದಲ್ಲದೆ, ಇರಾಕ್ ಯೂಟ್ಯೂಬ್ ಚಾನೆಲ್ Wishe Press ನಲ್ಲಿ ಮೂಲ ವಿಡಿಯೋವನ್ನು ಟೆಯಿಟ್ ಪತ್ತೆ ಹಚ್ಚಿದೆ. “ವೀಡಿಯೋದಲ್ಲಿ ಕಂಡುಬರುವ ಇನ್ನೊಂದು ಉತ್ಪನ್ನ ಆಸ್ಪಿಲಿಕ್‌ ಟರ್ಕಿಯಿಂದ ರಫ್ತು ಮಾಡಿರುವುದಾಗಿದ್ದು, ತವುಕ್ಲುಲಕ್ ಗೆ ಸೇರಿದೆ. ಇದು ಇರಾಕ್‌ನ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದ್ದು, ಈ ವೀಡಿಯೋವನ್ನು ಇರಾಕ್  ಚಿತ್ರೀಕರಿಸುವ ಸಾಧ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದೆ.”

ಇದರೊಂದಿಗೆ, ಸ್ನೋಪ್ಸ್ ನ 2019 ರ ವರದಿಯು ಸೋಲೆನ್ನ ವಕ್ತಾರರು ಆ ನಿರ್ದಿಷ್ಟ ಉತ್ಪನ್ನ ಇರಾಕ್‌ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ದೃಢಪಡಿಸಿದ್ದಾರೆ.

ವಿಶೇಷವೆಂದರೆ, ಟರ್ಕಿ 2019 ರಲ್ಲಿ ತನ್ನ ಆಪರೇಷನ್ ಪೀಸ್ ಸ್ಪ್ರಿಂಗ್ ಪ್ರಾರಂಭಿಸಿದ ಬಳಿಕ ಉತ್ತರ ಇರಾಕ್‌ನಲ್ಲಿ ಅಲ್ಲಿನ ಉತ್ಪನ್ನಗಳ ಬಹಿಷ್ಕಾರಕ್ಕೆ ಕಾರಣವಾಯಿತು. “ಅಂತಹ ವೀಡಿಯೋಗಳು ಬರಲು ಕಾರಣ (ಟರ್ಕಿಶ್ ಉತ್ಪನ್ನಗಳನ್ನು) ಬಹಿಷ್ಕರಿಸುವ ಪ್ರಯತ್ನಗಳಾಗಿರಬಹುದು ಎಂದು ಹೇಳಲಾಗಿದೆ” ಎಂದು ಟೆಯಿಟ್ ಹೇಳಿದೆ.

ಎರ್ಬಿಲ್ ಹೆಲ್ತ್ ಪ್ರೊಟೆಕ್ಷನ್ ಅಫೇರ್ಸ್ ಡೈರೆಕ್ಟರೇಟ್ ನವೆಂಬರ್ 6, 2019 ರಂದು ಫೇಸ್ಬುಕ್ ಪೋಸ್ಟ್ ಒಂದನ್ನು ಮಾಡಿದ್ದು, ವೀಡಿಯೋ ಮೊದಲು ಕಾಣಿಸಿಕೊಂಡ ಸಮಯದಲ್ಲಿ – “ಕೇಕ್‌ ಮಾದರಿಯನ್ನು (ಲುಪ್ಪೊ ಕೇಕ್) ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ ಮತ್ತು ತಿನ್ನಲು ಯೋಗ್ಯವಾಗಿದೆ” ಎಂದು ಸ್ಪಷ್ಟಪಡಿಸಿದೆ.

Also Read: ಬೆಂಗಳೂರಿನ ಜೋಡಿ ಕೊಲೆ ಪ್ರಕರಣ, ಕೋಮು ಬಣ್ಣದೊಂದಿಗೆ ಮೃತರ ಫೋಟೋ ವೈರಲ್

ಟೆಯಿಟ್ ವರದಿಯಲ್ಲಿಯೂ ಇದನ್ನು ಎತ್ತಿ ತೋರಿಸಲಾಗಿದೆ, “ಆಹಾರ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಗಳು ಆಂತರಿಕ ಮತ್ತು ಸ್ವತಂತ್ರ ಪರಿಶೀಲನೆಗೆ ಒಳಗಾಗುತ್ತವೆ. ಓಲೆನ್ ಚಾಕೊಲೇಟ್ ಬಗ್ಗೆ ಸ್ವತಂತ್ರ ಪರೀಕ್ಷಕರ ಪ್ರಯೋಗಾಲಯದಲ್ಲೂ ಯಾವುದೇ ಫಲಿತಾಂಶ ಕಂಡುಬಂದಿಲ್ಲ” ಎಂದು ಹೇಳಲಾಗಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಲುಪ್ಪೋ ಕೇಕ್‌ನಲ್ಲಿ ಮಾತ್ರೆಗಳು ಕಂಡುಬಂದಿವೆ ಎಂದು ಹೇಳಿರುವುದು ಮತ್ತು ಅದನ್ನು ಹಿಂದೂ ಪ್ರದೇಶದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಎನ್ನುವುದು ಸುಳ್ಳಾಗಿದೆ. ಇದೊಂದು ಹಳೆಯ ಸುಳ್ಳು ವೈರಲ್‌ ವೀಡಿಯೋ ಆಗಿದ್ದು ಇರಾಕ್‌ನಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಲುಪ್ಪೋ ಕೇಕ್‌ ತಯಾರಿಕಾ ಕಂಪೆನಿ ಟರ್ಕಿ ಮೂಲದ್ದಾಗಿದ್ದು, ಟರ್ಕಿಯ ದಾಳಿಯನ್ನು ಬಹಿಷ್ಕರಿಸುವಂತೆ ಇರಾಕ್‌ನಲ್ಲಿ ಮಾಡಲಾದ ವೀಡಿಯೋ ಇದಾಗಿದೆ ಎಂದು ಊಹಿಸಲಾಗಿದೆ.
ಈ ಹಿಂದೆಯೂ ಈ ವೀಡಿಯೋದ ಸತ್ಯಾಸತ್ಯತೆಯನ್ನೂ ಹಲವು ಬಾರಿ ಪರಿಶೀಲಿಸಲಾಗಿದ್ದು ಸುಳ್ಳು ಎಂದು ಕಂಡುಬಂದಿದೆ.

Result: False

Our Sources

Report By Snopes, Dated: November 12, 2019

Teyit.org

Official Website Of Solen

(ಈ ವರದಿಯನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,672

Fact checks done

FOLLOW US
imageimageimageimageimageimageimage