Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್
Fact
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದ ಬಾಲಕಿಯೊಬ್ಬಳ ವೈರಲ್ ವೀಡಿಯೋ ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಸಂದರ್ಭದ್ದಾಗಿದೆ
ಬಾಂಗ್ಲಾದೇಶದ ಬಿಕ್ಕಟ್ಟಿನ ನಡುವೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಪ್ ನಲ್ಲಿ ಕಂಡುಬಂದ ಈ ವೀಡಿಯೋದಲ್ಲಿ “ನೋಡಿ ಹಿಂದುಗಳೇ ಕಣ್ಣ್ ಬಿಟ್ಟು ನೋಡಿ ಬಾಂಗ್ಲಾದೇಶ ದಲ್ಲಿ ಹಿಂದೂಗಳ ಮೇಲೆ ನಡೀತಾ ಇರೋ ದೌರ್ಜನ್ಯ ನಮ್ಮ ಹೆಣ್ಣುಮಕ್ಕಳ ಮೇಲೆ ಆಗ್ತಾ ಇರೋ ಅತ್ಯಾಚಾರ ಅನಾಚಾರ” ಎಂದಿದೆ.
Also Read: ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಠಾಗೋರ್ ಪ್ರತಿಮೆ ಧ್ವಂಸ ಎಂದು ಹಳೆಯ ಫೋಟೋ ವೈರಲ್
ಈ ಕುರಿತಂತೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್ (+91-9999499044) ಗೆ ಮನವಿ ಮಾಡಿದ್ದು ಅದನ್ನು ತನಿಖೆಗೆ ಅಂಗೀಕರಿಸಲಾಗಿದೆ. ಆ ಪ್ರಕಾರ ಸತ್ಯಶೋಧನೆ ನಡೆಸಿದಾಗ ಇದು ಬಾಂಗ್ಲಾದೇಶದ ವೀಡಿಯೋ ಅಲ್ಲ, ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ದಾಳಿಗೆ ಸಂಬಂಧಿಸಿದ್ದು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ನೋಡಿದ್ದೇವೆ. ಈ ವೇಳೆ ಎಡಭಾಗದಲ್ಲಿ ಅಲ್ ಜಝೀರಾ ಟಿವಿಯ ಲೋಗೋ ಮತ್ತು ಬಲಭಾಗದಲ್ಲಿ ನುಸೆರಾತ್ ಕ್ಯಾಂಪ್ ಗಾಝಾ ಮತ್ತು ಜುಲೈ 14, 2024 ಎಂದು ಅರೆಬಿಕ್ ಭಾಷೆಯಲ್ಲಿ (ಗೂಗಲ್ ಮೂಲಕ ಅನುವಾದಿಸಲಾಗಿದೆ) ಬರೆದಿರುವುದನ್ನು ಗಮನಿಸಿದ್ದೇವೆ.
ಆ ಬಳಿಕ ವೈರಲ್ ವೀಡಿಯೋ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು, ಇದು ಪ್ಯಾಲೆಸ್ತೀನ್ ಎಂದು ಬರೆದುಕೊಂಡಿದ್ದರು. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಇದರೊಂದಿಗೆ FidaFalastine ಎಂಬ ಎಕ್ಸ್ ಬಳಕೆದಾರರು ಜುಲೈ 15, 2024ರಂದು ಇಸ್ರೇಲ್ ಯುಎನ್‌ಆರ್ ಡಬ್ಲ್ಯೂ ಶಾಲೆ ಯಲ್ಲಿದ್ದ ನಿರ್ವಸಿತರ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಬರೆದಿರುವುದನ್ನು ಗಮನಿಸಿದ್ದೇವೆ. ಈ ಪೋಸ್ಟ್ ನಲ್ಲಿ ಅವರು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಅದನ್ನು ಇಲ್ಲಿ ನೋಡಬಹುದು.
ಈ ಸಾಕ್ಷ್ಯಗಳ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಮಾಹಿತಿಗಳು ಲಭ್ಯವಾಗಿವೆ.
Also Read: ವಯನಾಡ್ ದುರಂತ ಎಂದು ಎಐ ಫೋಟೋ ಹಂಚಿಕೆ
ಸಿಬಿಎಸ್ ನ್ಯೂಸ್ ಜುಲೈ 19ರ ಫೇಸ್‌ಬುಕ್ ಪೋಸ್ಟ್ ನಲ್ಲಿ “ಸೆಂಟ್ರಲ್ ಗಾಜಾದ ನುಸೆರಾತ್‌ನಲ್ಲಿರುವ ಯುಎನ್-ಸಂಯೋಜಿತ ಅಬು ಒರೆಬಾನ್ ಶಾಲೆಯ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯ ನಂತರ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 70 ಜನರು ಗಾಯಗೊಂಡಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಗಾಜಾದಲ್ಲಿ ಕನಿಷ್ಠ ಎಂಟು ಶಾಲೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಅದರಲ್ಲಿ ಆರು ಏಜೆನ್ಸಿಗೆ ಸೇರಿದೆ ಎಂದು ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಯುಎನ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿಯ ಕಮಿಷನರ್-ಜನರಲ್ ಬುಧವಾರ ಹೇಳಿದ್ದಾರೆ. ಇಸ್ರೇಲಿ ಸೇನೆಯು ನಗರ ನುಸೆರಾತ್ ನಿರಾಶ್ರಿತರ ಶಿಬಿರದಲ್ಲಿ ಅಬು ಒರೈಬಾನ್ ಶಾಲೆಯಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ಹಮಾಸ್ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಪ್ರತ್ಯಕ್ಷದರ್ಶಿಗಳು ಬಿಬಿಸಿ ಅರೇಬಿಕ್‌ಗೆ ತಿಳಿಸಿದ ಮಾಹಿತಿಯಲ್ಲಿ, ಅಲ್ಲಿ ಶಸ್ತ್ರಸಜ್ಜಿತ ಯೋಧರು ಇರಲಿಲ್ಲ ಮತ್ತು ಗಾಯಗೊಂಡವರಲ್ಲಿ ಮಕ್ಕಳೂ ಇದ್ದಾರೆ ಎಂದು ಹೇಳಿದ್ದಾರೆ” ಎಂದಿದೆ. ಈ ಪೋಸ್ಟ್ ನೊಂದಿಗೆ ನೀಡಲಾದ ವೀಡಿಯೋ ವೈರಲ್ ವೀಡಿಯೋದೊಂದಿಗೆ ಹೋಲಿಕೆಯಾಗುವುದನ್ನು ನಾವು ಗುರುತಿಸಿದ್ದೇವೆ.
ಅಲ್ ಜಝೀರಾದ ಜುಲೈ 18, 2024ರ ವರದಿಯಲ್ಲಿ, “ಕಳೆದ 10 ದಿನಗಳಲ್ಲಿ ಸ್ಥಳಾಂತರಿದ ಪ್ಯಾಲೆಸ್ತೀನಿಯರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದ ಕನಿಷ್ಠ ಆರು ವಿಶ್ವಸಂಸ್ಥೆಯ ಶಾಲೆಗಳು ಇಸ್ರೇಲ್ ದಾಳಿಯಿಂದಾಗಿ ಹಾನಿಗೊಳಗಾಗಿವೆ. ಅಕ್ಟೋಬರ್ 7 ರಂದು ಗಾಜಾದ ಮೇಲೆ ಇಸ್ರೇಲ್ ತನ್ನ ಯುದ್ಧವನ್ನು ಪ್ರಾರಂಭಿಸಿದ 120 ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಗಳಾಗಿವೆ ಎಂದು ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಹೇಳಿದೆ.” ಎಂದು ವರದಿಯಲ್ಲಿದೆ. ಈ ವರದಿಯಲ್ಲೂ ವೈರಲ್ ವೀಡಿಯೋದಲ್ಲಿ ಕಂಡಬಂದಿರುವ ಬಾಲಕಿಯ ಚಿತ್ರವನ್ನು ನೀಡಲಾಗಿದೆ.
ಟಿಆರ್ ಟಿ ಆಫ್ರಿಕಾದ ಜುಲೈ 17, 2024ರ ವರದಿಯಲ್ಲೂ “ವಿಶ್ವಸಂಸ್ಥೆ ಪ್ರಧಾನ ಕಾರ್‍ಯದರ್ಶಿ ಆಂಟಾನಿಯೋ ಗುಟೆರಸ್ ಅವರು ಗಾಜಾದಲ್ಲಿನ ಪರಿಸ್ಥಿತಿಯು ‘ನಮ್ಮೆಲ್ಲರ ಮೇಲೆ ನೈತಿಕ ಕಳಂಕವಾಗಿದೆ’ ಎಂದು ಹೇಳಿರುವುದನ್ನು ವರದಿ ಮಾಡಿದ್ದು, ಇಸ್ರೇಲ್ ದಾಳಿಯ ಅಪ್ಡೇಟ್ ಗಳನ್ನು ನೀಡಿದೆ. ಇಲ್ಲೂ ವೈರಲ್ ವೀಡಿಯೋದಲ್ಲಿ ಕಂಡುಬಂದಿರುವ ಬಾಲಕಿಯ ಫೊಟೋವನ್ನು ವರದಿಯಲ್ಲಿ ನೀಡಲಾಗಿದೆ.
ಈ ಸಾಕ್ಷ್ಯಗಳ ಪ್ರಕಾರ, ಇದು ಗಾಝಾದ ಮೇಲೆ ಇಸ್ರೇಲ್ ದಾಳಿ ಸಂದರ್ಭದ ವೀಡಿಯೋ ಆಗಿದ್ದು, ಬಾಂಗ್ಲಾದೇಶದ ಸದ್ಯದ ಘಟನೆಗಳಿಗೆ ಸಂಬಂಧಿಸಿದ್ದಲ್ಲ ಎಂದು ಗೊತ್ತಾಗಿದೆ. ಆದ್ದರಿಂದ ಹೇಳಿಕೆ ತಪ್ಪಾಗಿದೆ.
Also Read: ನೇತ್ರಾವತಿ ನದಿಯಲ್ಲಿ ಪ್ರವಾಹ ಎಂದು ಕೇರಳದ ಪಟ್ಟಾಂಬಿ ಸೇತುವೆ ವೀಡಿಯೋ ವೈರಲ್
Our Sources
X post By FidaFalastine, Dated: July 15, 2024
Facebook Post By CBS News, Dated: July 19, 2024
Report By Aljazeera, Dated: July 18, 2024
Report By trtafrika, Dated: July 17, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
July 12, 2025
Vasudha Beri
July 10, 2025
Ishwarachandra B G
June 30, 2025