Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನ್ಯೂಯಾರ್ಕ್ ಗೆ ಝೊಹ್ರಾನ್ ಮಮ್ದಾನಿ ಮೇಯರ್ ಆಗುತ್ತಿದ್ದಂತೆ ಅಮೆರಿಕದ ಧ್ವಜಗಳನ್ನು ಕಿತ್ತೆಸೆದ ಮುಸ್ಲಿಮರು
2023ರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನ್ಯೂಯಾರ್ಕ್ ನಲ್ಲಿ ನಡೆದ ವೇಳೆ ಪ್ರತಿಭಟನಕಾರನೊಬ್ಬ ಧ್ವಜಗಳನ್ನು ಕಿತ್ತೆಸೆದಿದ್ದು, ತಪ್ಪಾದ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ
ನ್ಯೂಯಾರ್ಕ್ ನಗರಕ್ಕೆ ಝೊಹ್ರಾನ್ ಮಮ್ದಾನಿ ಮೇಯರ್ ಆಗುತ್ತಿದ್ದಂತೆ ಮುಸ್ಲಿಮರು ಅಮೆರಿಕದ ಧ್ವಜಗಳನ್ನು ಕಿತ್ತೆಸೆದಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು ಇದರಲ್ಲಿ, “ನುಯಾರ್ಕ್ ಮೇಯರ್ ಮುಸ್ಲಿಂ ಆದ ತಕ್ಷಣ ಅಮೇರಿಕಾದ ಬಾವುಟವನ್ನು ಹರಿದು ಹಾಕಿದ ಅಬ್ದುಲ್ಲ ಗಳು ಭಾರತದಲ್ಲಿ ಕಾಂಗ್ರೆಸ್. ಏನಾದ್ರು ಬಂದ್ರೆ ಇದೆ ಪರಿಸ್ಥಿತಿ ಬರುತ್ತೆ. ಎಚ್ಚರ ಅಮೇರಿಕಾದ ಪಪ್ಪು ಏನು ಮಾಡುತ್ತಿದ್ದಾನೆ ಅಂತ” ಎಂದಿದೆ.

ಈ ವೀಡಿಯೋದ ಸತ್ಯಾಸತ್ಯತೆಯನ್ನು ನ್ಯೂಸ್ಚೆಕರ್ ಪರಿಶೀಲನೆ ನಡೆಸಿದ್ದು, 2023ರ ಪ್ಯಾಲಸ್ತೀನ್ ಪರ ಪ್ರತಿಭಟನೆ ಸಂದರ್ಭದ ಘಟನೆಯನ್ನು ಮಮ್ದಾನಿ ಮೇಯರ್ ಆದ ವಿಚಾರಕ್ಕೆ ಸಮೀಕರಿಸಲಾಗುತ್ತಿದೆ ಎಂದು ಕಂಡುಕೊಂಡಿದ್ದೇವೆ.
ಮಗುವನ್ನು ಗೂಳಿಯ ದಾಳಿಯಿಂದ ಹಸು ರಕ್ಷಿಸುವ ವೀಡಿಯೋ; ಇದು ನಿಜವಲ್ಲ, ಎಐ ಕರಾಮತ್ತು
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ @Joe_Roberts01 ಎಂಬ ಎಕ್ಸ್ ಬಳಕೆದಾರರ ನವೆಂಬರ್ 12, 2023ರ ಪೋಸ್ಟ್ ಗಮನಿಸಿದ್ದೇವೆ. ಈ ಪೋಸ್ಟ್ ನಲ್ಲಿ ಅವರು ವೆಟರನ್ಸ್ ಡೇ ದಿನದಂದು ಅಮೆರಿಕದ ಧ್ವಜವನ್ನು ಹರಿದು ಹಾಕುವುದು ಅಮೆರಿಕ ಪ್ರತಿನಿಧಿಸುವ ಎಲ್ಲದಕ್ಕೂ ಅವಮಾನ. ಇದು ಅಕ್ಷರಶಃ ನನ್ನ ಸಂಕಟಕ್ಕೆ ಕಾರಣವಾಯಿತು. ಇದು ಪ್ಯಾಲೆಸ್ಟೀನಿಯನ್ನರ ಬಗ್ಗೆ ಅಲ್ಲ – ಇದು ಸಾಂಸ್ಕೃತಿಕ ಯುದ್ಧಕ್ಕಾಗಿ ಅವರ ಉದ್ದೇಶವನ್ನು ಅಪಹರಿಸುತ್ತಿದೆ. ಈ ವಿದೂಷಕರು ಇದರಿಂದ ಯಾವುದೇ ಹೃದಯ ಮತ್ತು ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ.” ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನಕಾರರನ್ನು ಅವರು ಹೆಸರಿದ್ದು, ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.

ನವೆಂಬರ್ 11, 2023ರ ಫಾಕ್ಸ್ ನ್ಯೂಸ್ ವರದಿಯಲ್ಲಿ, ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಪ್ರತಿಭಟಿಸಲು ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನಾಕಾರರ ಗುಂಪೊಂದು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಒಬ್ಬ ಬೀದಿ ದೀಪದ ಕಂಬವನ್ನು ಹತ್ತಿ ಅಮೆರಿಕದ ಧ್ವಜಗಳು ಮತ್ತು ವಿಶ್ವಸಂಸ್ಥೆಯ ಧ್ವಜಗಳನ್ನು ಹರಿದು ಹಾಕಿದ್ದಾನೆ. ಕೊನೆಗೆ ಪ್ರತಿಭಟನಕಾರ ಕಂಬದಿಂದ ಕೆಳಗಿಳಿದ ಬಳಿಕ ಆತನನ್ನು ಬಂಧಿಸಲಾಯಿತು ಎಂದಿದೆ.

ನವೆಂಬರ್ 12, 2023ರ ಟೈಮ್ಸ್ ಆಫ್ ಇಂಡಿಯಾ ಪೋಸ್ಟ್ ಮಾಡಿದ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಕಂಡುಬಂದಿದೆ. ಇದರ ವಿವರಣೆಯಲ್ಲಿ, “ಮಾಜಿ ಸೈನಿಕರ ದಿನದ ಸ್ಮರಣಾರ್ಥ ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರಿಂದ ಅಮೆರಿಕ ಮತ್ತು ವಿಶ್ವಸಂಸ್ಥೆಯ ಧ್ವಜಗಳಿಗೆ ಅಗೌರವ” ಎಂದಿದೆ.

ಇದೇ ರೀತಿಯ ವರದಿ ಇಲ್ಲಿನೋಡಬಹುದು.
ಈ ಸತ್ಯಶೋಧನೆಯ ಪ್ರಕಾರ, ನ್ಯೂಯಾರ್ಕ್ ಗೆ ಝೊಹ್ರಾನ್ ಮಮ್ದಾನಿ ಮೇಯರ್ ಆಗುತ್ತಿದ್ದಂತೆ ಅಮೆರಿಕದ ಧ್ವಜಗಳನ್ನು ಕಿತ್ತೆಸೆದ ಮುಸ್ಲಿಮರು ಎನ್ನುವುದು ತಪ್ಪಾಗಿದೆ. ಧ್ವಜ ಕಿತ್ತ ಘಟನೆ 2023ರಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ನಡೆದಿತ್ತು ಎಂದು ಗೊತ್ತಾಗಿದೆ.
Also Read: ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಎಂದು ಟರ್ಕಿಯ ವೀಡಿಯೋ ಹಂಚಿಕೆ
Our Sources
X post by Joe_Roberts01, November 12, 2023
Report by Fox News, Dated: November 11, 2023
YouTube video by Times of India, November 12, 2023
Report by wpde, Dated: November 13, 2023
Ishwarachandra B G
November 8, 2025
Ishwarachandra B G
October 29, 2025
Ishwarachandra B G
August 4, 2025