Authors
Claim
ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ನಡೆಯುತ್ತಿದೆ ಎಂದ ವೀಡಿಯೋ
Fact
ಬಾಂಗ್ಲಾದೇಶದ ಬೋಗ್ರಾದಲ್ಲಿ ರಥಯಾತ್ರೆ ವೇಳೆ ವಿದ್ಯುತ್ ಶಾಕ್ ಬಡಿದು 6 ಮಂದಿ ಮೃತಪಟ್ಟ ಘಟನೆ ಇದಾಗಿದೆ. ಈ ವೀಡಿಯೋ ಇತ್ತೀಚಿನ ಬಾಂಗ್ಲಾದೇಶದ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಆಡಳಿತ ಕೊನೆಗೊಂಡು ಅರಾಜಕ ವಾತಾವರಣ ಉಂಟಾದ ಬೆನ್ನಲ್ಲೇ ಹಿಂದೂಗಳ ಮೇಲೆ ದೌರ್ಜನ್ಯ, ಕೊಲೆಗಳು ನಡೆಯುತ್ತಿವೆ ಎಂಬಂತೆ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಒಂದು ಮೆಸೇಜ್ ನಲ್ಲಿ ವೀಡಿಯೋವೊಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಹೇಳಿಕೆಯಲ್ಲಿ “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಇನ್ನೂ ಭೀಕರ ಕೊಲೆಗಳು ನಡೆಯುತ್ತಿವೆ, ಒಬ್ಬೊಬ್ಬರಾಗಿ ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು 10, 10 ಮುಸ್ಲಿಮರು ಅತ್ಯಾಚಾರ ಮಾಡುತ್ತಾರೆ ಮತ್ತು ನಂತರ ಅವರನ್ನು ಹೀಗೆ ಎಸೆಯುತ್ತಾರೆ ಆದರೆ ಹಿಂದೂಗಳು ಎಂದಿಗೂ ಸುಧಾರಿಸಲಿಲ್ಲ ಮತ್ತು ಎಂದಿಗೂ ಸುಧಾರಿಸುವುದಿಲ್ಲ…” ಎಂದಿದೆ.
Also Read: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್
ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ. ಈ ವರದಿಗಳಲ್ಲಿ ವೈರಲ್ ವೀಡಿಯೋವನ್ನು ಹೋಲುವ ಫೋಟೋಗಳನ್ನೂ ನಾವು ಕಂಡಿದ್ದೇವೆ.
ಜುಲೈ 7, 2024ರ ಡೈಲಿ ಇತ್ತೇಫಾಕ್ ವರದಿಯ ಪ್ರಕಾರ,”ಬೋಗ್ರಾ ನಗರದ ಸೇಝ್ಗಾರಿ ಪ್ರದೇಶದಲ್ಲಿ ರಥಯಾತ್ರೆ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 30-35 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಕೆಲವರ ಸ್ಥಿತಿ ಗಂಭೀರವಿದೆ. ಘಟನೆ ಜುಲೈ 7 ಭಾನುವಾರ ಸಂಜೆ 5.30 ರ ವೇಳೆಗೆ ಸಂಭವಿಸಿದೆ. ಗಾಯಾಳುಗಳನ್ನು ಬೋಗ್ರಾದ ಶಹೀದ್ ಝೈರ್ ರಹ್ಮಾನ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮತ್ತು 250 ಹಾಸಿಗೆಯ ಮೊಹಮ್ಮದ್ ಅಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೋಗ್ರಾ ಸರ್ದಾರ್ ಪೊಲೀಸ್ ಸ್ಟೇಷನ್ ಅಧಿಕಾರಿ ಸೈಹಾನ್ ಒಲಿಯುಲ್ಲಾಗ್ ಅವರು 6 ಮಂದಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ” ಎಂದಿದೆ (ಗೂಗಲ್ ಮೂಲಕ ಅನುವಾದಿಸಲಾಗಿದೆ)
ಈ ಸುದ್ದಿಯ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.
ಜುಲೈ 7, 2024ರಂದು ನ್ಯೂಸ್ 18 ಬಾಂಗ್ಲಾ ಪ್ರಕಟಿಸಿದ ವರದಿಯಲ್ಲಿ, “ರಥಯಾತ್ರೆಯ ಆನಂದ ಕ್ಷಣಮಾತ್ರದಲ್ಲಿ ದುಃಖವಾಗಿ ಮಾರ್ಪಟ್ಟಿತು. ರಥಯಾತ್ರೆಯ ಮೆರವಣಿಗೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ. ಭಾನುವಾರ ರಥಯಾತ್ರೆಯ ದಿನ ಸಂಜೆ 5:30 ರ ಸುಮಾರಿಗೆ ಬಾಂಗ್ಲಾದೇಶದ ಬೋಗ್ರಾ ನಗರದಲ್ಲಿ ಈ ಘಟನೆ ನಡೆದಿದೆ. ಬೋಗ್ರಾದ ಈ ರಥವು ಬಾಂಗ್ಲಾದೇಶದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ರಥವನ್ನು ನೋಡಲು ಸಾಕಷ್ಟು ಮಂದಿ ಆಗಮಿಸಿದ್ದರು. ರಥಯಾತ್ರೆ ಉದ್ಘಾಟನೆಯಾದ 10-15 ನಿಮಿಷಗಳ ನಂತರ ರಥವು ವಿದ್ಯುತ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬಂದಿತ್ತು. ಬಾಂಗ್ಲಾದೇಶದ ಮಾಧ್ಯಮದ ಮೂಲಗಳ ಪ್ರಕಾರ, ಹಲವಾರು ಜನರನ್ನು ತಕ್ಷಣವೇ ವಿದ್ಯುತ್ ಶಾಕ್ ಗೆ ಈಡಾದರು ಮತ್ತು ಅವರ ಪಕ್ಕದಲ್ಲಿ ನಿಂತಿದ್ದ ಸುಮಾರು 50 ಜನರಿಗೆ ವಿದ್ಯುತ್ ಪ್ರವಾಹಕ್ಕೆ ಈಡಾದರು” ಎಂದಿದೆ (ಗೂಗಲ್ ಮೂಲಕ ಅನುವಾದಿಸಲಾಗಿದೆ)
Also Read: ಬಾಂಗ್ಲಾ ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆಯೇ?
ಜುಲೈ 8, 2024ರ ದೇಶ್ ರುಪಂಟರ್ ವರದಿಯಲ್ಲಿ “ಬೋಗ್ರಾದಲ್ಲಿ ರಥಯಾತ್ರೆ ವೇಳೆ ವಿದ್ಯುತ್ ಸ್ಪರ್ಶದಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 3 ಮಹಿಳೆಯರು ಮತ್ತು 2 ಪುರುಷರು ಇದ್ದರು. ಮೃತಪಟ್ಟವರಲಲಿ ಒಬ್ಬರನ್ನು ಗುರುತಿಸಲಾಗಲಿಲ್ಲ. ಘಟನೆಯಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ಬೋಗ್ರಾ ನಗರದ ಅಮ್ತಾಲಾ ಜಂಕ್ಷನ್‌ನಲ್ಲಿ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.” ಎಂದಿದೆ. (ಗೂಗಲ್ ಮೂಲಕ ಅನುವಾದಿಸಲಾಗಿದೆ)
‘ಬೋಗ್ರಾದಲ್ಲಿ ರಥಯಾತ್ರೆ ಆನಂದ ವಿಷಾದವಾಗಿ ಮಾರ್ಪಟ್ಟಿತು’ ಎಂಬ ಶೀರ್ಷಿಕೆಯೊಂದಿಗೆ ಸೊಮೊಯ್ ಟಿವಿ ಯೂಟ್ಯೂಬ್ ವೀಡಿಯೋ ಜುಲೈ 7, 2024ರಂದು ಪ್ರಕಟಿಸಲಾಗಿದೆ. ಅದು ಇಲ್ಲಿದೆ.
ಜುಲೈ 7, 2024ರಂದು ಮಾತ್ರಿಮಾಯಾ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೋದಲ್ಲಿ “ಬೋಗ್ರಾದಲ್ಲಿ ರಥಯಾತ್ರೆ ವೇಳೆ ವಿದ್ಯುತ್ ಸ್ಪರ್ಶದಿಂದ 5 ಮಂದಿ ಸಾವು, 20 ಮಂದಿ ಗಾಯಗೊಂಡಿದ್ದಾರೆ” ಎಂಬ ಶೀರ್ಷಿಕೆಯಿದೆ. ಇದನ್ನು ಇಲ್ಲಿ ನೋಡಬಹುದು.
Conclusion
ಈ ಸಾಕ್ಷ್ಯಾಧಾರಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಹಿಂದೂಗಳ ಭೀಕರ ಕೊಲೆ ಎಂದ ವೀಡಿಯೋ ಬೋಗ್ರಾದಲ್ಲಿ ರಥಯಾತ್ರೆಯಲ್ಲಿ ವಿದ್ಯುದಾಘಾತಕ್ಕೀಡಾಗಿ ಜನರು ಸಾವನ್ನಪ್ಪಿದ ದೃಶ್ಯವಾಗಿದೆ. ಆದ್ದರಿಂದ ಹೇಳಿಕೆ ತಪ್ಪಾಗಿದೆ.
Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್
Result: False
Our Sources
Report By ttefaq, Dated: July 7, 2024
Report By deshrupantor, Dated: July 8, 2024
Report By News 18 Bangla, Dated: July 7, 2024
YouTube Video By Matrimaya Tv, Dated: July 7, 2024
YouTube Video By Somoy Tv, Dated: July 7, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.