Weekly wrap: ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್ ನೋಟ

weekly wrap

ಹಮಾಸ್ ಇಸ್ರೇಲ್‌ ಕದನ ನಡೆದಿರುವಂತೆ, ಈ ವಾರವೂ ಈ ಕುರಿತ ಕ್ಲೇಮ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಹಮಾಸ್‌ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿದರು, ಇಸ್ರೇಲ್‌ ದಾಳಿ ವೇಳೆ ಪ್ಯಾಲೆಸ್ತೀನಿಯರು ರಕ್ಷಣೆಗೆ ಭಾರತದ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎಂಬ ಕ್ಲೇಮ್‌ ಗಳು ಮುಖ್ಯವಾಗಿದ್ದವು. ಇದರೊಂದಿಗೆ ನಿತ್ಯ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದು, ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟವಾಗಿದೆ ಎಂಬ ಕ್ಲೇಮ್ ಗಳೂ ಇದ್ದವು. ಇವುಗಳ ಬಗ್ಗೆ ನ್ಯೂಸ್‌ ಚೆಕರ್ ಶೋಧ ನಡೆಸಿದ್ದು ಸುಳ್ಳು ಎಂದು ಕಂಡುಬಂದಿದೆ.

ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್ ನೋಟ

ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?

ಹಮಾಸ್‌ ದಾಳಿಕೋರರು ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿ ಹೃದಯ ಹೊರತೆಗೆದಿದ್ದಾರೆ ಎನ್ನುವ ಭೀಭತ್ಸ ವೀಡಿಯೋ ಒಂದು ವಾಟ್ಸಾಪ್‌ ನಲ್ಲಿ ಹರಿದಾಡಿದೆ. ಸತ್ಯಶೋಧನೆ ನಡೆಸಿದಾಗ, ವ್ಯಕ್ತಿಯೊಬ್ಬನ ಎದೆ ಸೀಳಿ ದೇಹದ ಭಾಗವನ್ನು ತೆಗೆದು ತಿನ್ನುತ್ತಿರುವ ರೀತಿಯ ಈ ವೀಡಿಯೋ ಮೆಕ್ಸಿಕೋದ್ದು. ಮೆಕ್ಸಿಕೋದ ಡ್ರಗ್‌ ದಂಧೆಕೋರ ಗ್ಯಾಂಗ್ ಒಂದು ಹೀಗೆ ಮಾಡಿದ್ದರ ಕುರಿತು ಪತ್ರಿಕಾ ವರದಿಗಳು ಲಭ್ಯವಾಗಿವೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್ ನೋಟ

ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು

ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ತ್ರಿವರ್ಣ ಧ್ವಜ ಹೊದ್ದು ದಾಳಿಯಿಂದ ಪಾರಾದರು ಎಂದು ಕ್ಲೇಮೊಂದು ಹರಿದಾಡಿತ್ತು. ಆದರೆ ಸತ್ಯಶೋಧನೆಯಲ್ಲಿ ತಿಳಿದುಬಂದ ಪ್ರಕಾರ ಇಸ್ರೇಲ್‌ ದಾಳಿ ವೇಳೆ ಪ್ಯಾಲಸ್ತೀನೀಯರು ಸುರಕ್ಷತೆಗಾಗಿ ಭಾರತದ ಧ್ವಜವನ್ನು ಹೊದ್ದುಕೊಂಡು ಹೋಗಲಿಲ್ಲ, ಈ ಕುರಿತು ವೈರಲ್‌ ಆದ ವೀಡಿಯೋ ಇರಾಕ್‌ನಲ್ಲಿ ನಡೆದ ಅರೆಬಿಯನ್‌ ಜಾಥಾದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್ ನೋಟ

ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಎಂಬ ಈ ಹೇಳಿಕೆಗಳು ಸುಳ್ಳು!

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಎಂದು ವೀಡಿಯೋ ಒಂದು ವೈರಲ್‌ ಆಗಿತ್ತು. ನ್ಯೂಸ್‌ಚೆಕರ್ ಇದರ ಸತ್ಯಾಂಶ ಪರಿಶೀಲನೆ ನಡೆಸಿದ್ದು, ಬೆಂಗಳೂರಿನ ಕೋರಮಂಗಲದ ವಾಣಿಜ್ಯ ಕಟ್ಟದ ಮಹಡಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಹಮಾಸ್‌ ಇಸ್ರೇಲ್‌ ವ್ಯಕ್ತಿಯ ಎದೆ ಸೀಳಿದರು, ಭಾರತದ ಧ್ವಜ ಹೊದ್ದು ಪ್ಯಾಲೆಸ್ತೀನೀಯರು ಪಾರು, ವಾರದ ಕ್ಲೇಮ್ ನೋಟ

ದಿನನಿತ್ಯ ಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದೇ?

ಹುರಿದ ಬೆಳ್ಳುಳ್ಳಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಧುಮೇಹ ಗುಣವಾಗುತ್ತದೆ ಎಂದು ಪೋಸ್ಟ್ ಒಂದು ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ, ಖಾಲಿ ಹೊಟ್ಟೆಗೆ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಮಧುಮೇಹ ನಿಯಂತ್ರಲ್ಲಿಡಲು ಸಾಧ್ಯವಿಲ್ಲ. ಮಧುಮೇಹ ಒಂದು ಸಂಕೀರ್ಣ ಕಾಯಿಲೆ. ಇದಕ್ಕೆ ಸೂಕ್ತ ವೈದ್ಯಕೀಯ ನೆರವು ಅಗತ್ಯ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.