Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿಗೆ ಬಿಜೆಪಿ ಟಿಕೆಟ್, ವಾರದ ನೋಟ

weekly wrap

ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿ ವಿದ್ಯಾರಾಣಿಗೆ ಬಿಜೆಪಿ ಟಿಕೆಟ್, ಡಿಎಂಕೆ ನಾಯಕಿ ಕನಿಮೋಳಿಯನ್ನು ಊರಿನೊಳಕ್ಕೆ ಬಿಡದ ಜನ, ಅಸ್ತಮಾಕ್ಕೆ ಬೆಳ್ಳುಳ್ಳಿ ಜ್ಯೂಸ್‌ ಔಷಧ ಎಂಬ ಕ್ಲೇಮ್ ಗಳು, ತೈವಾನ ಭೂಕಂಪ ಎಂದು ಟರ್ಕಿ ಭೂಕಂಪದ ವೀಡಿಯೋ ಈ ವಾರ ಹರಿದಾಡಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಕುರಿತ ಕ್ಲೇಮ್ ಗಳು ಹೆಚ್ಚಾಗಿದ್ದವು. ಇವುಗಳ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಸುಳ್ಳು ಎಂದು ಸಾಬೀತು ಮಾಡಿದೆ.

Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿಗೆ ಬಿಜೆಪಿ ಟಿಕೆಟ್ ವಾರದ ಕ್ಲೇಮ್ ನೋಟ

ಸಂಸದ ಡಿ.ಕೆ. ಸುರೇಶ್ ಪೊಲೀಸರಿಗೆ ಆವಾಜ್‌ ಹಾಕಿದ ಹಳೆ ವೀಡಿಯೋ ಹಂಚಿಕೆ

ಸಂಸದ ಡಿ.ಕೆ.ಸುರೇಶ್ ಅವರು ದಾದಾಗಿರಿ ಮಾಡುತ್ತಿದ್ದಾರೆ ಎಂದು ವೀಡಿಯೋವೊಂದನ್ನು ವಿಧಾನಸಬೆ ವಿರೋಧಪಕ್ಷದ ನಾಯಕ ಆರ್ ಅಶೋಕ್‌ ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ, ಸಂಸದ ಡಿ.ಕೆ. ಸುರೇಶ್ ಅವರಿಂದ ಪೊಲೀಸರಿಗೆ ಆವಾಜ್‌ ಎಂದ ವೀಡಿಯೋ 2023ರ ವಿಧಾನಸಭೆ ಚುನಾವಣೆ ಸಮಯದ್ದಾಗಿದ್ದು, ಇತ್ತೀಚಿನದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿಗೆ ಬಿಜೆಪಿ ಟಿಕೆಟ್ ವಾರದ ಕ್ಲೇಮ್ ನೋಟ

ಕಾಡುಗಳ್ಳ ವೀರಪ್ಪನ್‌ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ?

ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ವಿದ್ಯಾರಾಣಿ ಅವರು ಇತ್ತೀಚಿಗೆ ಬಿಜೆಪಿ ತೊರೆದು ಎನ್‌ಟಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದ, ಆ ಪಕ್ಷದ ಟಿಕೆಟ್ ನಿಂದಲೇ ಸ್ಪರ್ಧಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿಗೆ ಬಿಜೆಪಿ ಟಿಕೆಟ್ ವಾರದ ಕ್ಲೇಮ್ ನೋಟ

ಕನಿಮೋಳಿಯವರನ್ನು ಊರಿಗೆ ಬಾರದಂತೆ ತಡೆಯಲಾಗಿದೆ ಎಂಬ ಹೇಳಿಕೆ ನಿಜವೇ?

ಕನಿಮೋಳಿಯವರನ್ನು ಊರಿಗೆ ಬರದಂತೆ ತಡೆಯಲಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಕನಿಮೋಳಿ ಅವರನ್ನು ತೂತುಕುಡಿಯಲ್ಲಿ ಮಾತನಾಡುವಂತೆ ಜನರು ಒತ್ತಾಯಿಸಿದ ವೀಡಿಯೋ ಇದಾಗಿದ್ದು, ಅವರನ್ನು ಊರಿಗೆ ಬಾರದಂತೆ ತಡೆಯಲಾಗಿದೆ ಎನ್ನುವುದು ಸುಳ್ಳಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿಗೆ ಬಿಜೆಪಿ ಟಿಕೆಟ್ ವಾರದ ಕ್ಲೇಮ್ ನೋಟ

ತೈವಾನ್ ನಲ್ಲಿ ಭೂಕಂಪ ಎಂದು ಹಂಚಿಕೊಳ್ಳಲಾದ ವೀಡಿಯೋಗಳು ಟರ್ಕಿಯದ್ದು!

ತೈವಾನ್‌ ನಲ್ಲಿ ಭೂಕಂಪ ವೇಳೆ ಕುಸಿದು ಬೀಳುತ್ತಿರುವ ಬಹುಮಡಿ ಕಟ್ಟಡಗಳು ಎಂದು ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋದ ಸತ್ಯಶೋಧನೆಯನ್ನು ನಾವು ನಡೆಸಿದ್ದು ಇವುಗಳು ತೈವಾನ್‌ ಭೂಕಂಪಕ್ಕೆ ಸಂಬಂಧಿಸಿದ್ದಲ್ಲ ಎಂದು ಕಂಡುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್‌ ಆವಾಜ್, ವೀರಪ್ಪನ್‌ ಪುತ್ರಿಗೆ ಬಿಜೆಪಿ ಟಿಕೆಟ್ ವಾರದ ಕ್ಲೇಮ್ ನೋಟ

ಬೆಳ್ಳುಳ್ಳಿ ರಸವನ್ನು ಕುಡಿದರೆ ಅಸ್ತಮಾ ನಿಯಂತ್ರಣವಾಗುತ್ತದೆಯೇ?

ಬೆಳ್ಳುಳ್ಳಿ ರಸವನ್ನು ಕುಡಿದರೆ ಅಸ್ತಮಾ ನಿಯಂತ್ರಣವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ದಿನಕ್ಕೆರಡು ಬಾರಿ ಬಿಸಿನೀರಿನೊಂದಿಗೆ ಬೆಳ್ಳುಳ್ಳಿ ರಸವನ್ನು ಸೇವಿಸಿದರೆ, ಅಸ್ತಮಾ ನಿಯಂತ್ರಣಕ್ಕೆ ಇದು ದಾರಿ ಮಾಡಿಕೊಡುತ್ತದೆ” ಎಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.