Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕನಿಮೋಳಿಯವರನ್ನು ಊರಿಗೆ ಬಾರದಂತೆ ತಡೆಯಲಾಗಿದೆ
Fact
ಕನಿಮೋಳಿ ಅವರನ್ನು ತೂತುಕುಡಿಯಲ್ಲಿ ಮಾತನಾಡುವಂತೆ ಹೇಳಿದ ವೀಡಿಯೋ ಇದಾಗಿದ್ದು, ಅವರನ್ನು ಊರಿಗೆ ಬಾರದಂತೆ ತಡೆಯಲಾಗಿದೆ ಎನ್ನುವುದು ಸುಳ್ಳಾಗಿದೆ
ಕನಿಮೋಳಿಯವರನ್ನು ಊರಿಗೆ ಬರದಂತೆ ತಡೆಯಲಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ತಮಿಳುನಾಡಿನಲ್ಲಿ ಕನ್ನಿಮೋಳಿ ಅಕ್ಕ ಅವರ್ಗಳ್ ಊರಿನ ಒಳಗಡೆ ಬಿಟ್ಟು ಕೊಡದ ಜನತೆ..” ಎಂದಿದೆ.
Also Read: ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ?

ಈ ವೀಡಿಯೋದ ಬಗ್ಗೆ ನಾವು ಸತ್ಯಶೋಧನೆ ಮಾಡಿದ್ದು, ಹೇಳಿಕೆ ತಪ್ಪು ಎಂದು ಕಂಡುಕೊಂಡಿದ್ದೇವೆ.
ಈ ವೀಡಿಯೋವನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕನಿಮೋಳಿ ಅವರಲ್ಲಿ ಜನರು “ಅಕ್ಕ ನೀವು ಮಾತನಾಡಿಯೇ ಹೋಗಬೇಕು” ಎಂದು ಹೇಳುವುದನ್ನು ಕೇಳಬಹುದು. ಇದರ ಇನ್ನಷ್ಟು ಶೋಧನೆಗೆ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಸರ್ಚ್ ವಿಧಾನಕ್ಕೆ ಒಳಪಡಿಸಿದ್ದೇವೆ.
ಈ ಹುಡುಕಾಟದಲ್ಲಿ, ಸನ್ ನ್ಯೂಸ್ ಯೂಟ್ಯೂಬ್ ಚಾನೆಲ್ ಎಪ್ರಿಲ್ 1, 2024ರಂದು ಪ್ರಕಟಿಸಿದ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಇದರ ಶೀರ್ಷಿಕೆಯಲ್ಲಿ “ಅಕ್ಕ ನೀನು ಮಾತನಾಡಬೇಕು, ತೂತುಕುಡಿ ಜನರು ಕನಿಮೋಳಿ ಅವರ ವಾಹನವನ್ನು ತಡೆದು ಪ್ರೀತಿಯಿಂದ ಕೇಳಿದರು” ಎಂದಿದೆ. (ಗೂಗಲ್ ಮೂಲಕ ಭಾಷಾಂತರಿಸಲಾಗಿದೆ. ಈ ವೀಡಿಯೋದಲ್ಲಿ ಜನರು ಕನಿಮೋಳಿ ಅವರಿಗೆ ಮಾತನಾಡಲು ಮನವಿ ಮಾಡುತ್ತಿರುವುದನ್ನು ಕಾಣಬಹುದು ಮತ್ತು ಕನಿಮೋಳಿ ಪ್ರಚಾರ ವಾಹನಕ್ಕೆ ಹತ್ತಿ ಚಪ್ಪಾಳೆಯೊಂದಿಗೆ ಹಾಗೆ ಕೇಳುತ್ತಿರುವುದನ್ನು ಕಾಣಬಹುದು.
ಹೆಚ್ಚಿನ ಹುಡುಕಾಟದ ನಂತರ, ಎಪ್ರಿಲ್ 1, 2024ರಂದು ಬಿಹೈಂಡ್‌ವುಡ್ಸ್ ಏರ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.
ಇತರ ಕೆಲವು ಮಾಧ್ಯಮಗಳು ಕೂಡ ಈ ಘಟನೆಯ ಬಗ್ಗೆ ವರದಿ ಮಾಡಿವೆ ಎಂದು ಶೋಧನೆ ವೇಳೆ ತಿಳಿದುಬಂದಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
Also Read: ತೈವಾನ್ ನಲ್ಲಿ ಭೂಕಂಪ ಎಂದು ಹಂಚಿಕೊಳ್ಳಲಾದ ವೀಡಿಯೋಗಳು ಟರ್ಕಿಯದ್ದು!
ಎಪ್ರಿಲ್ 1, 2024ರ thenmozhi.dmk ಇನ್‌ಸ್ಟಾಗ್ರಾಂ ಖಾತೆಯ ಪೋಸ್ಟ್ ಒಂದರಲ್ಲಿ “ಇದು ಅಕ್ಕ ಕನಿಮೋಳಿ ಅವರ ಮೇಲೆ ತೂತುಕುಡಿ ಜನತೆ ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ” (ಗೂಗಲ್ ಮೂಲಕ ಭಾಷಾಂತರಿಸಲಾಗಿದೆ) ಎಂದು ವೈರಲ್ ವೀಡಿಯೋ ರೀತಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಕನಿಮೋಳಿ ಅವರನ್ನು ತೂತುಕುಡಿಯಲ್ಲಿ ಮಾತನಾಡುವಂತೆ ಹೇಳಿದ ವೀಡಿಯೋ ಇದಾಗಿದ್ದು, ಅವರನ್ನು ಊರಿಗೆ ಬಾರದಂತೆ ತಡೆಯಲಾಗಿದೆ ಎನ್ನುವುದು ಸುಳ್ಳಾಗಿದೆ.
Also Read: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
Our Sources:
YouTube Video By Sun News, Dated: April 1, 2024
YouTube Video By Behindwoods Air, Dated: April 1, 2024
Instagram Post By thenmozhi.dmk, Dated: April 1, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.