Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
10 ರಾಜ್ಯಗಳಲ್ಲಿ ಐಎನ್‌ಡಿಐ ಬಣ ಮುನ್ನಡೆ, ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಲ್ಲಿ ನಿಗೂಢ ಪೆಟ್ಟಿಗೆ, ರಾಹುಲ್ ಗಾಂಧಿಯನ್ನು ನೋಡಲು ಜನಸಾಗರ ಎಂದು ಚಿಕ್ಕೋಡಿ ಎತ್ತಿನ ಗಾಡಿ ಸ್ಪರ್ಧೆ ವೀಡಿಯೋ ಹಂಚಿಕೆ, ರಾಮನವಮಿ ದಿನವೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮಾಂಸಾಹಾರ ಊಟ ಮಾಡಿದ್ದಾರೆ ಎಂಬ ಕ್ಲೇಮುಗಳು ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಇದರೊಂದಿಗೆ ಆರೋಗ್ಯ ಕುರಿತಾಗಿ ದಾಳಿಂಬೆ ರಸ, ಉಪ್ಪು ಮತ್ತು ಜೇನುತುಪ್ಪ ಮಿಶ್ರಣ ತಿನ್ನುವುದರಿಂದ ಹಸಿವು, ಜೀರ್ಣಶಕ್ತಿ ಹೆಚ್ಚುತ್ತದೆ ಎನ್ನುವುದು ನಿಜವೇ ಎಂಬುದರ ಬಗ್ಗೆಯೂ ಸತ್ಯಶೋಧನೆ ಮಾಡಲಾಗಿದೆ. ಇವುಗಳು ಸುಳ್ಳು ಎಂದು ಕಂಡುಬಂದಿದೆ.

ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ ಐಎನ್‌ಡಿಐ ಬಣ ಮುನ್ನಡೆ ಸಾಧಿಸಲಿದೆ ಎಂದು ದೈನಿಕ್ ಭಾಸ್ಕರ್ ಮತ್ತು ನೀಲ್ಸನ್ ನಡೆಸಿದ ಸಮೀಕ್ಷೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇದು ನಕಲಿ, ಇಂತಹ ಯಾವುದೇ ಸಮೀಕ್ಷೆ ಫಲಿತಾಂಶಗಳು ಪ್ರಕಟಗೊಂಡಿಲ್ಲ ಎಂದು ದೈನಿಕ್ ಭಾಸ್ಕರ್ ಸ್ಪಷ್ಟಪಡಿಸಿದ್ದನ್ನು ನಾವು ತನಿಖೆಯಲ್ಲಿ ಕಂಡುಕೊಂಡಿದ್ದೇವೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಚಿತ್ರದುರ್ಗದಲ್ಲಿ ನಿನ್ನೆ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಯನ್ನು ಇಳಿಸಲಾಗಿದ್ದು ಅದಲ್ಲಿ ಏನಿದೆ ಎಂದು ಕೇಳಿದ ಮೆಸೇಜ್ ಒಂದು ವಾಟ್ಸಾಪ್ ನಲ್ಲಿ ವೈರಲ್ ಆಗಿದೆ. ರಾಜಕಾರಣಿ ಬೃಜೇಶ್ ಕಾಳಪ್ಪನವರು ಪ್ರಶ್ನಿಸಿದ ಪೋಸ್ಟ್ ಹರಿದಾಡುತ್ತಿತ್ತು. ತನಿಖೆಯಲ್ಲಿ ಕಂಡುಬಂದಂತೆ, ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎಂದ ರಾಜಕಾರಣಿ ಬೃಜೇಶ್ ಕಾಳಪ್ಪ ಅವರ ಪೋಸ್ಟ್ 2019ರ ಚುನಾವಣಾ ಸಮಯದ್ದಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ರಾಹುಲ್ ಗಾಂಧಿಯವರನ್ನು ನೋಡಲು ಜನಸಾಗರ ನೆರೆದಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನಿಖೆಯ ಪ್ರಕಾರ, ರಾಹುಲ್ ಗಾಂಧಿ ಅವರನ್ನು ನೋಡಲು ನೆರೆದ ಜನರಲ್ಲ, ಬದಲಾಗಿ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ ಜನ್ಮದಿನದ ಅಂಗವಾಗಿ ಚಿಕ್ಕೋಡಿಯಲ್ಲಿ ನಡೆದ ಅಂತಾರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯ ವೀಡಿಯೋ ಆಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ರಾಮ ನವಮಿ ದಿನವೇ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಥೆ ಮಾಂಸಾಹಾರ ಊಟ ಮಾಡಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ನ್ಯೂಸ್‌ಚೆಕರ್ ತನಿಖೆಯ ಪ್ರಕಾರ, ಮಾಂಸಾಹಾರ ಸೇವಿಸಿದ್ದಾರೆ ಎನ್ನುವ ಹೇಳಿಕೆ ಸುಳ್ಳು ನಾಗ್ಪುರ ಜಿಲ್ಲೆಯ ಉಮ್ರೆಡ್ ನಲ್ಲಿ ಏಪ್ರಿಲ್ 17ರ ರಾಮನವಮಿಯಂದು ಸ್ಥಳೀಯ ಮಹಿಳೆಯೊಬ್ಬರು ತಯಾರಿಸಿದ ಸಸ್ಯಾಹಾರಿ ಖಾದ್ಯವನ್ನು ಅವರು ಸವಿದಿದ್ದರು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ದಾಳಿಂಬೆ ರಸ, ಉಪ್ಪು ಮತ್ತು ಜೇನುತುಪ್ಪ ಮಿಶ್ರಣ ತಿನ್ನುವುದರಿಂದ ಹಸಿವು, ಜೀರ್ಣ ಶಕ್ತಿ ಹೆಚ್ಚುತ್ತದೆ ಎಂಬ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಆದರೆ ಜೀರ್ಣಶಕ್ತಿಗೆ ದಾಳಿಂಬೆ ರಸ-ಕಲ್ಲುಪ್ಪು ಮಿಶ್ರಣ ಮಾತ್ರ ಪರಿಣಾಮಕಾರಿ ಆದರೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಇದರೊಂದಿಗೆ ದಾಳಿಂಬೆ ರಸ, ಉಪ್ಪು ಮತ್ತು ಜೇನುತುಪ್ಪ ಮಿಶ್ರಣ ತಿನ್ನುವುದರಿಂದ ಹಸಿವು, ಜೀರ್ಣ ಶಕ್ತಿ ಹೆಚ್ಚುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಂಶೋಧನೆಗಷ್ಟೇ ಸೀಮಿತವಾಗಿದೆ ಎಂದು ಗೊತ್ತಾಗಿದೆ.
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
January 20, 2025
Kushel Madhusoodan
June 19, 2024
Newschecker and THIP Media
April 19, 2024