Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಪ್ರತಿ ತಿಂಗಳು ₹ 8,500 ಮತ್ತು ಯುವಕರಿಗೆ ₹ 1,00,000 ಸಂಬಳ ನೀಡುವುದಾಗಿ ಚುನಾವಣಾ ಭರವಸೆ ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಾರೆ.
Fact
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳ ಬಗ್ಗೆ ರಾಹುಲ್ ಗಾಂಧಿಯವರು ಯಾವುದೇ ಕ್ಷಮೆ ಕೋರಿಲ್ಲ ಮತ್ತು ಚುನಾವಣಾ ಭರವಸೆಗಳ ಕುರಿತಾದ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿರುವ ಹೇಳಿಕೆಗಳು ತಪ್ಪುದಾರಿಗೆಳೆಯುವಂಥಾದ್ದಾಗಿದೆ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿಂಗಳಿಗೆ ₹ 8,500 ಮತ್ತು ಯುವಕರಿಗೆ ತಿಂಗಳಿಗೆ ₹ 1,00,000 ವೇತನ ನೀಡುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ 99 ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ನಾಯಕ ಈ “ಸುಳ್ಳು” ಗಳನ್ನು ಬಳಸಿದ್ದರಿಂದ ಬಿಜೆಪಿ ಮೂರನೇ ಬಾರಿಗೆ ಕಡಿಮೆ ಬಲದೊಂದಿಗೆ ಅಧಿಕಾರಕ್ಕೆ ಮರಳಿದೆ. ಈ ಭರವಸೆಗಳು ಚುನಾವಣಾ ವಂಚನೆಯ ಸ್ಪಷ್ಟ ಪ್ರಕರಣವಾಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
Also Read: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ಈ ಹೇಳಿಕೆಯ ಆರ್ಕೈವ್ ಆವೃತ್ತಿ ಇಲ್ಲಿದೆ.
ನ್ಯೂಸ್‌ಚೆಕರ್ ಮೊದಲು “Rahul Gandhi apologise poll promises” ಎಂಬ ಕೀವರ್ಡ್ ಸರ್ಚ್ ನಡೆಸಿದೆ. ಈ ವೇಳೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳನ್ನು ಅಥವಾ ಕಾಂಗ್ರೆಸ್ ನಾಯಕ ಅಥವಾ ಪಕ್ಷದಿಂದ ಅಧಿಕೃತ ಹೇಳಿಕೆ ಕಂಡುಬಂದಿಲ್ಲ. ಆ ಬಳಿಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು (X, Facebook ಮತ್ತು Instagram) ನಾವು ಪರಿಶೀಲಿಸಿದ್ದೇವೆ ಮತ್ತು ಜೂನ್ 4, 2024 ರಂದು ಚುನಾವಣಾ ಫಲಿತಾಂಶಗಳ ನಂತರ ಯಾವುದೇ ರೀತಿಯ ಕ್ಷಮೆಯಾಚನೆಯ ಪೋಸ್ಟ್ ಗಳು ಕಂಡುಬಂದಿಲ್ಲ. ಸೋಶಿಯಲ್ ಬ್ಲೇಡ್ ಎಂಬ ವಿಶ್ಲೇಷಣಾ ಸಾಧನವು ಜೂನ್ 4, 2024 ರ ನಂತರ ಯಾವುದೇ ಟ್ವೀಟ್ ಅನ್ನು ಪಕ್ಷ ಅಥವಾ ಗಾಂಧಿ ಅಳಿಸಿದ್ದಾರೆ ಎಂದೂ ತೋರಿಸಿಲ್ಲ.
ಚುನಾವಣಾ ಭರವಸೆಗಳ ಬಗ್ಗೆ ತಪ್ಪುದಾರಿಗೆಳೆಯುವ ಹೇಳಿಕೆ
2024 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ, ಮಹಾಲಕ್ಷ್ಮೀ ಯೋಜನೆ ಸೇರಿದಂತೆ 25 ಭರವಸೆಗಳೊಂದಿಗೆ ಸುಮಾರು 80 ಮಿಲಿಯನ್ ಮನೆಗಳನ್ನು ತಲುಪಲು ಕಾಂಗ್ರೆಸ್ ‘ಘರ್ ಘರ್ ಗ್ಯಾರಂಟಿ’ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಇದು ನೇರವಾಗಿ ತಿಂಗಳಿಗೆ ₹ 8,500 ಭರವಸೆ ನೀಡುತ್ತದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬದ ಮಹಿಳೆಗೆ ಈ ನೆರವು ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಚುನಾವಣಾ ಫಲಿತಾಂಶದ ನಂತರ ಮಹಾಲಕ್ಷ್ಮೀ ಯೋಜನೆ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಮನಿ ಕಂಟ್ರೋಲ್‌ಗೆ ಹೇಳಿಕೆ ನೀಡಿದ್ದು, ಕೆಲವು ಮುಸ್ಲಿಂ ಮಹಿಳೆಯರು ಚುನಾವಣೆಯ ನಂತರ ಭರವಸೆ ನೀಡಿದ ಪ್ರಕಾರ ಹಣ ಸಿಗಲಿದೆ ಎಂದು ತಪ್ಪಾಗಿ ನಂಬಿದ್ದರು. ಆದರೆ ಪಕ್ಷವು ಅಧಿಕಾರಕ್ಕೆ ಬಂದಾಗ ಮಾತ್ರ ಈ ಭರವಸೆ ಈಡೇರಿಸಲು ಸಾಧ್ಯ ಎಂದು ಹೇಳಿದ್ದರು. ಇನ್ನು ಕಾಂಗ್ರೆಸ್‌ನ ಮಹಾಲಕ್ಷ್ಮೀ ಯೋಜನೆಯಡಿ ನೀಡಲಾದ ಮಾಸಿಕ ₹8,500 ಪಡೆಯಲು ಮುಸ್ಲಿಂ ಮಹಿಳೆಯರು ಸರತಿ ಸಾಲಿನಲ್ಲಿ ಕಾಯುತ್ತಿರುವುದು ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದು ವೈರಲ್ ಆಗಿದ್ದು ಅದನ್ನು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿ, ಸುಳ್ಳು ಎಂದು ನಿರೂಪಿಸಿತ್ತು. ಈ ಹಿಂದೆ ನಿರಾಕರಿಸಿದ್ದರು.
Also Read: ಕೊಯಮತ್ತೂರಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂದ ವೈರಲ್ ಪೋಸ್ಟ್ ಸುಳ್ಳು
ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಡಿಪ್ಲೊಮಾ ಪದವೀಧರ ಅಥವಾ ಕಾಲೇಜು ಪದವೀಧರ ಯುವಕರು “ಅಪ್ರೆಂಟಿಸ್‌ಶಿಪ್ ಹಕ್ಕು ಕಾಯಿದೆ” ಯ ಭಾಗವಾಗಿ ಒಂದು ವರ್ಷದವರೆಗೆ ಸಾರ್ವಜನಿಕ/ಖಾಸಗಿ ವಲಯದ ಕಂಪನಿಯಲ್ಲಿ ಶಿಷ್ಯವೃತ್ತಿಯ ಅವಕಾಶವನ್ನು ಪಡೆಯುತ್ತಾರೆ ಎಂದು ಭರವಸೆ ನೀಡಿತ್ತು ಎಂದು ನಾವು ಕಂಡುಕೊಂಡಿದ್ದೇವೆ. ₹ 1 ಲಕ್ಷ ಅಂದರೆ (ತಿಂಗಳಿಗೆ ₹ 8,500) ಸ್ಟೈಫಂಡ್ ಸಿಗುತ್ತದೆ. ನ್ಯೂಸ್‌ಚೆಕರ್ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂಬಂಧಿತ ವಿಷಯಗಳನ್ನು ಕಂಡುಕೊಂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹೇಳಿಕೆಗಳ ಬಗ್ಗೆ ಪಕ್ಷದ ಸ್ಪಷ್ಟೀಕರಣ ಕೇಳಿ ನಾವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯ ಎಐಸಿಸಿ ಸಂಯೋಜಕ ಗೌರವ್ ಪಾಂಡಿ ಅವರನ್ನು ಸಂಪರ್ಕಿಸಿದ್ದೇವೆ ಮತ್ತು ನಮಗೆ ಪ್ರತಿಕ್ರಿಯೆ ಬಂದ ನಂತರ ಈ ಲೇಖನವನ್ನು ನವೀಕರಿಸುತ್ತೇವೆ.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳು ಸುಳ್ಳಾಗಿದ್ದಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕ್ಷಮೆ ಯಾಚಿಸಿದ್ದಾರೆ ಎಂಬ ಹೇಳಿಕೆ ವೈರಲ್ ಆಗಿದೆ ಎನ್ನುವುದು ತಪ್ಪಾಗಿದೆ. ರಾಹುಲ್ ಅವರು ಕ್ಷಮೆ ಕೋರಿಲ್ಲ ಎಂದು ತಿಳಿದುಬಂದಿದೆ.
Also Read: ಈ ಬಾರಿ ಲೋಕಸಭೆಗೆ 110 ಮಂದಿ ಮುಸ್ಲಿಂ ಸಂಸದರು ಚುನಾಯಿತರಾಗಿದ್ದಾರೆ ಎಂಬ ಹೇಳಿಕೆ ವೈರಲ್
Our Sources:
Social media accounts of Rahul Gandhi and Congress
Congress manifesto for the 2024 general polls
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 16, 2024
Vasudha Beri
November 12, 2024
Ishwarachandra B G
August 24, 2024