Authors
ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆ, ಉಡುಪಿ ಗ್ಯಾಂಗ್ ವಾರ್ ನಲ್ಲಿ ವ್ಯಕ್ತಿಯ ಕೊಲೆ, ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ, ನಟಿ ರಶ್ಮಿಕಾ ಮಂದಣ್ಣ ಬಿಕಿನಿಯಲ್ಲಿ ಕಾಣಿಸಿಕೊಂಡ ವೀಡಿಯೋ, ಒಣದ್ರಾಕ್ಷಿ ನೀರು ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ ಎಂಬ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಸುಳ್ಳುಗಳು ಎಂದು ನಿರೂಪಿಸಿದೆ.
ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆ ಎಂದ ವೀಡಿಯೋ ನಿಜವೇ?
ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆಯಾಗಿದೆ ಎಂದು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ನಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದೆ. ಇದು ಹೊಸೂರಿನದ್ದಲ್ಲ, ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌ ನಗರದ್ದು ಎಂದು ತನಿಖೆಯಲ್ಲಿ ಕಂಡುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಉಡುಪಿ ಗ್ಯಾಂಗ್ ವಾರ್ ನಲ್ಲಿ ವ್ಯಕ್ತಿಯ ಕೊಲೆಯಾಗಿದೆಯೇ?
ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ತನಿಖೆಯಲ್ಲಿ ತಿಳಿದುಬಂದಂತೆ ಉಡುಪಿ ಗ್ಯಾಂಗ್ ವಾರ್ ನಲ್ಲಿ ವ್ಯಕ್ತಿಯ ಕೊಲೆಯಾಗಿಲ್ಲ. ವ್ಯಕ್ತಿಯೊಬ್ಬ ಗಾಯಗೊಂಡಿದ್ದು ಚೇತರಿಸಿಕೊಂಡಿದ್ದಾನೆ, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?
ಕೇರಳ ಪೊಲೀಸರು ಅಲ್ಲಿನ ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎಂಬ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ನ್ಯೂಸ್‌ಚೆಕರ್ ಈ ಬಗ್ಗೆ ತನಿಖೆ ನಡೆಸಿದಾಗ, ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಂಧಿಸಿ ಎಳೆದೊಯ್ದಿಲ್ಲ, ಬಂಧನಕ್ಕೊಳಗಾದವರು ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಎಂಬವರಾಗಿದ್ದು, ಆನೆದಾಳಿಯ ವಿರುದ್ಧದ ಪ್ರತಿಭಟನೆ ಪ್ರಕರಣವೊಂದರಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ನಟಿ ರಶ್ಮಿಕಾ ಮಂದಣ್ಣ ಬಿಕಿನಿಯಲ್ಲಿ ಕಾಣಿಸಿಕೊಂಡ ಡೀಪ್ ಫೇಕ್ ವೀಡಿಯೋ ವೈರಲ್
ನಟಿ ರಶ್ಮಿಕಾ ಮಂದಣ್ಣ ಕೆಂಪು ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡಿದ ವೀಡಿಯೋ ಎಂದು ದೃಶ್ಯವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನಿಖೆ ವೇಳೆ ಕಂಡುಬಂದಂತೆ ಇದು ಮೂಲದಲ್ಲಿ ರೂಪದರ್ಶಿ ಡೇನಿಯೆಲಾ ವಿಲ್ಲಾರಿಯಲ್ ಅವರ ವೀಡಿಯೋವಾಗಿದ್ದು ಅದನ್ನು ತಿರುಚಿ ನಟಿ ರಶ್ಮಿಕಾ ಮಂದಣ್ಣರದ್ದು ಎಂಬಂತೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಒಣದ್ರಾಕ್ಷಿ ನೀರು ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆಯೇ?
ಒಣದ್ರಾಕ್ಷಿ ನೀರನ್ನು ಕುಡಿದರೆ ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ಒಣದ್ರಾಕ್ಷಿ ನೀರನ್ನು ಕುಡಿಯುವುದು ರಕ್ತವನ್ನು ಶುದ್ಧೀಕರಿಸುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.