Fact Check: ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆ ಎಂದ ವೀಡಿಯೋ ನಿಜವೇ?

ತಮಿಳುನಾಡು ಹೊಸೂರು ಆಲಿಕಲ್ಲು ಮಳೆ

Authors

Claim

ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆಯಾಗಿದೆ ಎಂದು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಾಟ್ಸಾಪ್‌ ನಲ್ಲಿ ಈ ವೀಡಿಯೋ ವೈರಲ್‌ ಆಗಿದ್ದು, ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದೆ. ಇದು ಹೊಸೂರಿನದ್ದಲ್ಲ, ಚೀನಾದ್ದು ಎಂದು ತನಿಖೆಯಲ್ಲಿ ಕಂಡುಬಂದಿದೆ.

Also Read: ಕಾಂಗ್ರೆಸ್‌ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನುವುದು ನಿಜವೇ?

Fact Check: ತಮಿಳುನಾಡಿನ ಹೊಸೂರಿನಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆ ಎಂದ ವೀಡಿಯೋ ನಿಜವೇ?

Fact

ಸತ್ಯಶೋಧನೆ ವೇಳೆ ನಾವು ಹೊಸೂರಿನಲ್ಲಿ ಆಲಿಕಲ್ಲು ಮಳೆಯಾಗಿದೆಯೇ ಎಂಬ ಬಗ್ಗೆ ಶೋಧ ನಡೆಸಿದ್ದೇವೆ. ಆದರೆ ಈ ಕುರಿತಂತೆ ಯಾವುದೇ ಸುದ್ದಿಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಆ ಬಳಿಕ  ನಾವು ವೈರಲ್‌ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಏಪ್ರಿಲ್‌ 28, 2024ರಂದು ಡಿಸಾಸ್ಟರ್ ಟ್ರಾಕರ್ ಖಾತೆಯಿಂದ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದ್ದು, ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌ ನಗರದಲ್ಲಿ ನಿನ್ನೆ ಆಲಿಕಲ್ಲು ಮಳೆಯ ಸಮಯದಲ್ಲಿ ಆ ಆಲಿಕಲ್ಲುಗಳ ಗಾತ್ರವನ್ನು ನೋಡಿ ಎಂದಿದೆ.

ಡಿಸಾಸ್ಟರ್ ಟ್ರಾಕ್‌ ಎಚ್ ಕ್ಯೂ ಎಕ್ಸ್ ಪೋಸ್ಟ್

ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಏಪ್ರಿಲ್ 28, 2024ರ ಒನ್‌ ಇಂಡಿಯಾದ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಇದರ ಶೀರ್ಷಿಕೆಯಲ್ಲಿ ಪ್ರವಾಹ ಪೀಡಿತ ನಗರವಾದ ಗುವಾಂಗ್‌ಝೌನಲ್ಲಿ ಸುಂಟರಗಾಳಿ,  ಗುವಾಂಗ್‌ಡಾಂಗ್‌ನಲ್ಲಿ ಆಲಿಕಲ್ಲು ಮಳೆ ಎಂದಿದೆ. ಈ ವರದಿಯಲ್ಲಿ ನಾವು ವೈರಲ್‌ ಆಗಿರುವ ವೀಡಿಯೋದ ಕ್ಲಿಪ್‌ ಅನ್ನು ಗಮನಿಸಿದ್ದೇವೆ.

ಒನ್‌ ಇಂಡಿಯಾ ಯೂಟ್ಯೂಬ್‌ ವೀಡಿಯೋ

ಇದೇ ರೀತಿಯ ಸುದ್ದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಈ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಹೊಸೂರಿನಲ್ಲಿ ಆಲಿಕಲ್ಲು ಮಳೆಯಾಗಿದೆ ಎಂಬ ಕುರಿತ ವೈರಲ್‌ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದ್ದೇವೆ. ಚೀನದ ವೀಡಿಯೋದೊಂದಿಗೆ ಹೊಸೂರಿನಲ್ಲಿ ಆಲಿಕಲ್ಲು ಮಳೆಯಾಗಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.

Also Read: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?

Result: False

Our Sources
X post By Disaster Tracker, Dated: April 27, 2024
Report By One India, Dated: April 28, 2024
Report By Globalnews.ca, Dated April 29, 2024
Report By Newyork Times, Dated April 27, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors