Authors
ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರಿಂದ ಹಲ್ಲೆ, ಕರ್ನಾಟಕದ ಶಾಪಿಂಗ್ ಮಾಲ್ ನಿಂದ ‘ಡಿಸ್ಕೌಂಟ್ ಜಿಹಾದ್’ ಎಂಬ ಕೋಮು ಹೇಳಿಕೆಗಳು ಈ ವಾರ ವೈರಲ್ ಆಗಿವೆ. ಇದರೊಂದಿಗೆ ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯವಿರುವ ವೀಡಿಯೋ, ಗೋವಾದಲ್ಲಿ ಮುಳುಗುತ್ತಿರುವ ದೋಣಿ ಎಂದ ವೈರಲ್ ವೀಡಿಯೋ, ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳ್ಳುಳ್ಳಿ ತಿಂದರೆ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಈ ಕುರಿತಾಗಿ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಹೇಳಿಕೆಗಳು ಎಂದು ನಿರೂಪಿಸಿವೆ.
ಕೇಸರಿ ಬಟ್ಟೆ ಹೊದ್ದುಕೊಂಡು ವ್ಯಕ್ತಿಯೊಬ್ಬ ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದರೇ, ವೈರಲ್ ವೀಡಿಯೋ ಹಿಂದಿನ ಸತ್ಯವೇನು?
ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಆತನಿಗೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದಾರೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಹೊಡೆಯಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಕರ್ನಾಟಕದ ಶಾಪಿಂಗ್ ಮಾಲ್ ‘ಡಿಸ್ಕೌಂಟ್ ಜಿಹಾದ್’ ಘೋಷಿಸಿದೆಯೇ? ವೈರಲ್ ಹೇಳಿಕೆ ಹಿಂದಿನ ಸತ್ಯ ಇಲ್ಲಿದೆ
ಲವ್ ಜಿಹಾದ್ ಉತ್ತೇಜಿಸುವ ಪ್ರಯತ್ನವೊಂದರಲ್ಲಿ, ಹಿಂದೂ ಹುಡುಗಿಯರನ್ನು ತಮ್ಮೊಂದಿಗೆ ಕರೆತರುವ ಮುಸ್ಲಿಂ ಯುವಕರಿಗೆ 10% ರಿಂದ 50% ರಿಯಾಯಿತಿಯನ್ನು ಘೋಷಿಸಿದ್ದಾಗಿ ಕರ್ನಾಟಕದ ಸಿಎಂಆರ್ ಶಾಪಿಂಗ್ ಮಾಲ್ ಹೋರ್ಡಿಂಗ್ ತೋರಿಸುತ್ತದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ತೆಲಂಗಾಣದಲ್ಲಿ ಹಾಕಲಾಗಿದ್ದ 2019ರ ಸಿಎಂಆರ್ ಶಾಪಿಂಗ್ ಮಾಲ್ ನ ಹೋರ್ಡಿಂಗ್ ಫೋಟೋವನ್ನು ಕರ್ನಾಟಕದಲ್ಲಿ ‘ಲವ್ ಜಿಹಾದ್’ ಉತ್ತೇಜಿಸುವ ಹೋರ್ಡಿಂಗ್ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಗೋವಾದಲ್ಲಿ ಮುಳುಗುತ್ತಿರುವ ದೋಣಿ ಎಂದ ವೈರಲ್ ವೀಡಿಯೋ ಆಫ್ರಿಕಾದ ಕಾಂಗೋದ್ದು!
ದೋಣಿಯೊಂದು ನೀರಿನಲ್ಲಿ ಮುಳುಗುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಗೋವಾದಲ್ಲಿ ನಡೆದ ದುರಂತದ್ದು ಎಂದು ಹೇಳಲಾಗಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಗೋವಾದಲ್ಲಿ ಮುಳುಗುತ್ತಿರುವ ದೋಣಿ ಎಂದು ಹಂಚಿಕೊಂಡಿರುವ ವೀಡಿಯೋಗಳು ನಿಜಕ್ಕೂ ಗೋವಾದ್ದಲ್ಲ, ಅದು ಆಫ್ರಿಕಾದ ಕಾಂಗೋ ದೇಶದ್ದಾಗಿದೆ. ಈ ಕುರಿತ ವಿವರ ಇಲ್ಲಿದೆ
ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯವಿರುವ ವೀಡಿಯೋ ನಿಜವೇ?
ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯವಿರುವ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ತಾಯಿಯೊಬ್ಬಳು ಬಾಲಕನೊಬ್ಬನಿಂದ ಮೊಬೈಲ್ ಅನ್ನು ಕಿತ್ತುಕೊಂಡು ಓದುವಂತೆ ಹೇಳಿದ ಬಳಿಕ ಆ ಬಾಲಕ ತಾಯಿಗೆ ಬ್ಯಾಟಿನಿಂದ ಹೊಡೆಯುವ ವೀಡಿಯೋ ಇದಾಗಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ. ಇದು ನಿಜವಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳ್ಳುಳ್ಳಿ ತಿಂದರೆ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದು ನಿಜವೇ?
ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳ್ಳುಳ್ಳಿ ತಿಂದರೆ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳ್ಳುಳ್ಳಿ ತಿಂದರೆ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಹೇಳಿಕೆ ತಪ್ಪಾಗಿದೆ. ಬೆಳ್ಳುಳ್ಳಿ ತಿನ್ನುವುದು ಆರೋಗ್ಯಕ್ಕೆ ಪೂರಕವಾದರೂ ಹೆಚ್ಚು ಬೆಳ್ಳುಳ್ಳಿ ತಿನ್ನುವುದು ಪ್ರತಿಕೂಲ ಸಮಸ್ಯೆಗಳನ್ನೂ ತಂದೊಡ್ಡಬಹುದು ಎಂದು ಸತ್ಯಶೋಧನೆ ಹೇಳಿದೆ. ಈ ಕುರಿತ ವಿವರ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.