ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ನಗುತ್ತಲೇ ಚೆನ್ನೈಗೆ ಬಂದಿಳಿದ ವಿಜಯ್, WEF ಶೃಂಗಸಭೆಯಲ್ಲಿ ‘ಸುಂದರ್ ಪಿಚೈ-ಟ್ರಂಪ್’ ಮಾತಿನ ಸಮರ, ಕರ್ನಾಟಕದಲ್ಲಿ ಕೇಸರಿ ಬಟ್ಟೆಯನ್ನೂ ತೊಡುವುದೂ ಅಪರಾಧ, ಮುಸ್ಲಿಂ ವ್ಯಕ್ತಿ ಬ್ರಾಹ್ಮಣ ವೇಷದಲ್ಲಿ ನವರಾತ್ರಿಯಲ್ಲಿ ಮಾಂಸಾಹಾರ ತಿನ್ನುತ್ತಿರುವ ವೀಡಿಯೋ ಎಂಬ ವಿಚಾರಗಳು ಈ ವಾರ ವೈರಲ್ ಆಗಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ಸುಳ್ಳು ಎಂದು ನಿರೂಪಿಸಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ನಗುತ್ತಲೇ ಚೆನ್ನೈಗೆ ಬಂದಿಳಿದ ವಿಜಯ್, ವೀಡಿಯೋ ಹಿಂದಿನ ಸತ್ಯವೇನು?
ಕರೂರು ಕಾಲ್ತುಳಿತದ ಬಳಿಕ ಟಿವಿಕೆ ಪಕ್ಷದ ವಿಜಯ್ ಅವರು ಚೆನ್ನೈಗೆ ಬಂದಿಳಿದಿದ್ದು ಅವರಿಗೆ ಘಟನೆಯ ಬಗ್ಗೆ ಚಿಂತೆಯೇ ಇರಲಿಲ್ಲ ಎನ್ನುವಂತೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ ವಿಮಾನ ನಗುತ್ತಲೇ ಇಳಿಯುವ ದೃಶ್ಯ ಘಟನೆಗಿಂತ ಹಿಂದಿನದ್ದು ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

WEF ಶೃಂಗಸಭೆಯಲ್ಲಿ ‘ಸುಂದರ್ ಪಿಚೈ-ಟ್ರಂಪ್’ ಮಾತಿನ ಸಮರ ನಡೆದಿದೆಯೇ?
WEF ಶೃಂಗಸಭೆಯಲ್ಲಿ ‘ಸುಂದರ್ ಪಿಚೈ-ಟ್ರಂಪ್’ ಮಾತಿನ ಸಮರ ನಡೆದಿದೆ, ಈ ವೇಳೆ ವಿದೇಶಾಂಗ ಸಚಿವ ಜೈಶಂಕರ್ ಅವರೂ ಇದ್ದರು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸತ್ಯಶೋಧನೆ ನಡೆಸಿದಾಗ, ಈ ಸಂಭಾಷಣೆ ಸುಳ್ಳು ಮತ್ತು ಅದೊಂದು ಕಟ್ಟು ಕಥೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಕರ್ನಾಟಕದಲ್ಲಿ ಕೇಸರಿ ಬಟ್ಟೆಯನ್ನೂ ತೊಡುವುದೂ ಅಪರಾಧವೇ ಹೇಳಿಕೆ ಜೊತೆಗಿನ ವೈರಲ್ ವೀಡಿಯೋ ನಿಜವೇ?
ಕರ್ನಾಟಕದಲ್ಲಿ ಕೇಸರಿ ಬಟ್ಟೆಯನ್ನು ತೊಡುವದೂ ಅಪರಾಧವೇ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆಯನ್ನು ಕೇಳಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ವೈರಲ್ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋ ಚಾಮುಂಡಿ ಚಲೋ ಪ್ರತಿಭಟನೆಯ ಸಂದರ್ಭದ್ದಾಗಿದ್ದು ಪೊಲೀಸರು ತಪ್ಪಾಗಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದ ವಿದ್ಯಮಾನವಾಗಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಮುಸ್ಲಿಂ ವ್ಯಕ್ತಿ ಬ್ರಾಹ್ಮಣ ವೇಷದಲ್ಲಿ ನವರಾತ್ರಿಯಲ್ಲಿ ಮಾಂಸಾಹಾರ ತಿನ್ನುತ್ತಿರುವ ವೀಡಿಯೋ ಹಿಂದಿನ ಸತ್ಯ ಏನು?
ಮುಸ್ಲಿಂ ವ್ಯಕ್ತಿ ಬ್ರಾಹ್ಮಣ ವೇಷದಲ್ಲಿ ನವರಾತ್ರಿಯಲ್ಲಿ ಮಾಂಸಾಹಾರ ತಿನ್ನುತ್ತಿರುವ ವೀಡಿಯೋ ಎಂದು ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸತ್ಯಶೋಧನೆ ನಡೆಸಿದಾಗ, ವೀಡಿಯೋ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ. ಇದನ್ನು ಮಾಡಿದವರು ನೇಪಾಳದ ಮಹೇಶ್ ಉಪ್ರೇತಿ ಎಂಬವರಾಗಿದ್ದಾರೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ