Authors
ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿಕೆ, ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾರನ್ನು ವ್ಯಕ್ತಿಯೊಬ್ಬ ನಿಂದಿಸಿದ್ದಾನೆ, ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ಹೇಳಿಕೆಗಳು ಈ ವಾರ ವೈರಲ್ ಆಗಿವೆ. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದರ ಸತ್ಯಾಸತ್ಯತೆಯನ್ನು ತೆರೆದಿಟ್ಟಿದೆ.
ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾರನ್ನು ವ್ಯಕ್ತಿಯೊಬ್ಬ ನಿಂದಿಸಿದ್ದಾನೆ ಎನ್ನಲಾದ ವೀಡಿಯೋ ಹಿಂದಿನ ಸತ್ಯವೇನು?
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ವ್ಯಕ್ತಿಯೊಬ್ಬ ನಿಂದಿಸಿದ ನಾಲ್ಕು ವರ್ಷಗಳ ಹಿಂದಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ಹಳೆಯ ಪ್ರಕರಣವಾಗಿದ್ದು, ನಾಲ್ಕು ವರ್ಷಗಳ ಹಿಂದೆ ನಡೆದಿದೆ. ಈ ಬಗ್ಗೆ ಅಕೋಲಾದ ಪಾತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆಯೇ?
ಭಾರತದ ವಿರುದ್ಧ ಹೋರಾಡಲು ಸಿದ್ಧ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಮೋದಿ, ಅಮಿತ್ ಶಾ ರಾಜನಾಥ್ ಸಿಂಗ್ ಅವರನ್ನುದ್ದೇಶಿಸಿ ಎಚ್ಚರಿಕೆ ರೂಪದಲ್ಲಿ ಮಾತನಾಡಿದವರು ಬಾಂಗ್ಲಾ ದೇಶದ ಮಾಜಿ ಲೆಫ್ಟಿನೆಂಟ್ ಕರ್ನಲ್.ಮನೀಶ್ ದೆವಾನ್ ಅವರಾಗಿದ್ದಾರೆ. ಇವರು ಸೇನಾ ಮುಖ್ಯಸ್ಥರಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?
ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ನನ್ನ ಮಕ್ಕಳು ಹೊರ ದೇಶದಲ್ಲಿ ಓದುತ್ತಾರೆ ಎಂದು ರಾಹುಲ್ ಗಾಂಧಿ ಭಾಷಣವೊಂದರಲ್ಲಿ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ನನ್ನ ಹತ್ತಿರ ಕೋಟಿ ರೂಪಾಯಿ ಇದೆ, ನಾನು ಲಂಡನ್ ಗೆ ಹೋಗುತ್ತೇನೆ ಎಂದು ರಾಹುಲ್ ಅವರು ಲಾತೂರ್ ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನು ಉದ್ದೇಶಿಸಿ ಹೇಳಿದ ಮಾತಾಗಿದ್ದು, ಅವರ ಹೇಳಿಕೆಯನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ. ಈ ಕುರಿತ ವಿವರ ಇಲ್ಲಿದೆ
17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?
17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಓದ್ದೋಡಿಸುವ ಪ್ರಕ್ರಿಯೆ ಆರಂಭ ಎನ್ನುವ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರ ಹಾಕುವ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಆಶ್ರಯ ಮನವಿ ತಿರಸ್ಕೃತಗೊಂಡವರು ಮತ್ತು ಕಾನೂನು ಬಾರಹಿರವಾಗಿ ಪ್ರವೇಶಿಸಿದ ವಲಸಿಗರನ್ನು ಹೊರಹಾಕುವ ಪ್ರಕ್ರಿಯೆಗೆ ಐರೋಪ್ಯ ಒಕ್ಕೂಟದ ದೇಶಗಳು ಮುಂದಾಗಿವೆ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.