Fact Check
ಬಿಹಾರ ಚುನಾವಣೆ ಸೋಲಿನ ಬಳಿಕ ದೇಗುಲ ಭೇಟಿಯಲ್ಲಿ ರಾಹುಲ್ ಗಾಂಧಿ?
Claim
ಬಿಹಾರ ಚುನಾವಣೆ ಸೋಲಿನ ಬಳಿಕ ದೇಗುಲಗಳಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Fact
ಬಿಹಾರ ಚುನಾವಣೆ ಸೋಲಿನ ಬಳಿಕ ದೇಗುಲಗಳಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎನ್ನುವುದು ತಪ್ಪು ಹೇಳಿಕೆಯಾಗಿದೆ. 2024ರಲ್ಲಿ ಭಾರತ್ ಜೋಡೋ ಯಾತ್ರೆ ಸಂದರ್ಭ ನಾಸಿಕ್ ತ್ರಯಂಬಕೇಶ್ವರ ದೇಗುಲಕ್ಕೆ ಭೇಟಿ ನೀಡಿದ ವೀಡಿಯೋ ಇದಾಗಿದೆ
ಬಿಹಾರ ಚುನಾವಣೆಯಲ್ಲಿ ಐಎನ್ ಡಿಐಎ ಮೈತ್ರಿಕೂಟಕ್ಕೆ ಸೋಲಾಗಿದ್ದು, ಆ ಬಳಿಕ ಕಾಂಗ್ರೆಸ್ ನಾಯಕ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು, ರಾಹುಲ್ ಗಾಂಧಿಯವರು ಕೇಸರಿ ಶಾಲು ಧರಿಸಿ ಪೂಜೆಯೊಂದರಲ್ಲಿ ತೊಡಗಿಸಿಕೊಂಡಿರುವ ದೃಶ್ಯವಿದೆ.

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ದಾರಿ ತಪ್ಪಿಸುವ ಹೇಳಿಕೆ ಎಂದು ಕಂಡುಬಂದಿದೆ.
Also Read: ಭಾರತ-ಪಾಕಿಸ್ತಾನ ವೈಮಾನಿಕ ಘರ್ಷಣೆಯ ಕುರಿತು ಪ್ರಧಾನಿ ಮೋದಿ ಅವರಿಗೆ ಐಶ್ವರ್ಯಾ ರೈ ಪ್ರಶ್ನೆ? ಇಲ್ಲ ವೈರಲ್ ವೀಡಿಯೋ ನಕಲಿ
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು 2024ರಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಂದರ್ಭದ್ದಾಗಿದೆ ಎಂದು ಕಂಡುಬಂದಿದೆ.
ರಿವರ್ಸ್ ಇಮೇಜ್ ಸರ್ಚ್ ವೇಳೆ ಲಭ್ಯವಾದ ಫಲಿತಾಂಶದಲ್ಲಿ, ಮಾರ್ಚ್ 14, 2024ರ ಕನಕ್ ನ್ಯೂಸ್ ಯೂಟ್ಯೂಬ್ ವೀಡಿಯೋವನ್ನು ನೋಡಿದ್ದೇವೆ. ಇದರಲ್ಲಿ “ನಾಸಿಕ್‌ನ ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದರು” ಎಂಬ ಶೀರ್ಷಿಕೆ ಇದೆ.

ಮಾರ್ಚ್ 14, 2024ರ ಎಬಿಪಿ ನ್ಯೂಸ್ ಯೂಟ್ಯೂಬ್ ವೀಡಿಯೋದಲ್ಲಿ ಹೇಳಿದ ಪ್ರಕಾರ, “ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದರು” ಎಂದಿದೆ.

ಮಾರ್ಚ್ 14, 2024ರ ಇಂಡಿಯಾ ಡಾಟ್ ಕಾಮ್ ವರದಿಯ ಪ್ರಕಾರ, “ಭಾರತ್ ಜೋಡೋ ನ್ಯಾಯ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿದ್ದಾರೆ. ಅವರು ನಾಸಿಕ್ ತಲುಪಿದರು. ಇಲ್ಲಿ ಅವರು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದು, ಜನರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ, ರಾಹುಲ್ ಗಾಂಧಿ ನಾಸಿಕ್‌ನ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ನಿಲ್ಲಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
Conclusion
ಆದ್ದರಿಂದ ಈ ಸಾಕ್ಷ್ಯಗಳ ಪ್ರಕಾರ, ಬಿಹಾರದ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಗುಲಕ್ಕೆ ಭೇಟಿ ನೀಡಿದ್ದಲ್ಲ. ಭಾರತ್ ಜೋಡೋ ಯಾತ್ರೆ ಸಂದರ್ಭದ ಫೊಟೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಬಿಹಾರದಲ್ಲಿ ಬಿಜೆಪಿ ಗೆಲುವಿನ ಬಳಿಕ ರಸ್ತೆಗೆ ಇಳಿದು ಜನರ ಪ್ರತಿಭಟನೆ ಎನ್ನುವುದು ನಿಜವೇ?
Our Sources
YouTube Video by, Kanak News, Dated: March 14, 2024
YouTube Video by ABP News, Dated: March 14, 2024
Report by India.com, Dated: March 14, 2024