Authors
ಉತ್ತರ ಪ್ರದೇಶದ ಮಹಿಳೆಗೆ 24 ಮಕ್ಕಳು, ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ, ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದು, ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ ಮಾಡಿದ್ದು ಈ ವಾರ ಹೈಲೈಟ್ ಆಗಿತ್ತು. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ ಇವುಗಳು ಸುಳ್ಳು ಹೇಳಿಕೆಗಳು ಎಂದು ಕಂಡುಬಂದಿವೆ.
ಉತ್ತರಪ್ರದೇಶದ ಮಹಿಳೆ 24 ಮಕ್ಕಳನ್ನು ಹೊಂದಿದ್ದಾಳೆ ಎಂಬ ವೀಡಿಯೋ ಹಿಂದಿನ ಸತ್ಯವೇನು?
ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬಳು 24 ಮಕ್ಕಳನ್ನು ಹೊಂದಿದ್ದಾಳೆ ಎಂಬ ಆರೋಪ ಸುಳ್ಳು, ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಹಿಂದೂ ಮಹಿಳೆಯೊಬ್ಬರು 24 ಮಕ್ಕಳನ್ನು ಹೊಂದಿದ್ದಾರೆಂದು ಹೇಳಿಕೊಳ್ಳುವ ವೈರಲ್ ವೀಡಿಯೋವನ್ನು ಮನರಂಜನೆ ಉದ್ದೇಶಕ್ಕಾಗಿ ಚಿತ್ರಕಥೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?
ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಬಾಂಗ್ಲಾದೇಶದ ಗ್ರಾಮವೊಂದಕ್ಕೆ ಜಿಹಾದಿಗಳು ಬೆಂಕಿ ಹಚ್ಚಿದ್ದಾರೆ ಎನ್ನುವುದು ನಿಜವಲ್ಲ, ಬೋಗ್ರಾ ಸದರ್‌ನ ಕ್ಷಿದ್ರಧಾಮ ಮಧ್ಯಪಾರ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದೇ?
ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಬೆರೆಸಿ ವಾರಕ್ಕೆ ಒಂದೆರಡು ಬಾರಿ ಕುಡಿಯುವುದರಿಂದ ವೀರ್ಯದ ಸಂಖ್ಯೆ ಹೆಚ್ಚಿಸಬಹುದು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಕಬ್ಬಿನ ರಸವನ್ನು ಗೋಧಿ ಹಿಟ್ಟು ಮತ್ತು ಏಲಕ್ಕಿಯೊಂದಿಗೆ ಕುಡಿಯುವುದು ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಾಬೀತಾದ ಪರಿಹಾರವಲ್ಲ. ಈ ಪದಾರ್ಥಗಳುಹೇಳಿಕೊಳ್ಳುವಂತೆ ಫಲವತ್ತತೆಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ
ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಪ್ರಸಾರದ ವೇಳೆ ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹೇಳಲು ಫೋಟೋ ವೊಂದನ್ನು ಹಂಚಿಕೊಳ್ಳಲಾಗಿದೆ. ಆದರೆ ಸತ್ಯಶೋಧನೆಯ ಪ್ರಕಾರ, 2021ರ ಫೋಟೋವನ್ನು ಮನಮೋಹನ್ ಸಿಂಗ್ ಅವರ ಕೊನೆಯ ಫೊಟೋ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.