Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪಂಜಾಬ್ ಪ್ರವಾಹದಲ್ಲಿ ಹಾನಿಗೊಳಗಾದ ರೈತರಿಗೆ ಉಚಿತವಾಗಿ ಟ್ರಾಕ್ಟರ್ ವಿತರಣೆಗೆ ಮುಂದಾಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಫೇಸ್ಬುಕ್ ನಲ್ಲಿ ಈ ಪೋಸ್ಟ್ ಹರಿದಾಡಿದ್ದು, ಇದನ್ನು ನ್ಯೂಸ್ಚೆಕರ್ ಸತ್ಯಶೋಧನೆಗೊಳಪಡಿಸಿದೆ. ಈ ವೇಳೆ ಈ ಹೇಳಕೆ ಸುಳ್ಳು ಎಂದು ಕಂಡುಬಂದಿದೆ.
Also Read: ಹೈದ್ರಾಬಾದ್ ನ ಹುಸೇನ್ ಸಾಗರ್ ಸರೋವರದಲ್ಲಿ 1992ರಲ್ಲಿ ಬುದ್ಧ ಪ್ರತಿಮೆ ಪ್ರತಿಷ್ಠಾಪನೆಯ ದೃಶ್ಯ ಎಂದ ವೀಡಿಯೋ ಎಐ ಸೃಷ್ಟಿ

ಸತ್ಯಶೋಧನೆಗಾಗಿ ನಾವು ಮೊದಲು ನಾವು ಕೆಲವು ಪ್ರಮುಖ ಕೀವರ್ಡ್ ಗಳನ್ನು ಬಳಸಿ ಗೂಗಲ್ ನಲ್ಲಿಹುಡುಕಿದೆವು. ಆದಾಗ್ಯೂ, ನಮಗೆ ಯಾವುದೇ ಮಾಧ್ಯಮ ವರದಿಗಳು ಅಥವಾ ವಿಶ್ವಾಸಾರ್ಹ ಮಾಹಿತಿ ಸಿಗಲಿಲ್ಲ.
ಇದಾದ ನಂತರ, ನಾವು ಯುವರಾಜ್ ಸಿಂಗ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯನ್ನು ಪರಿಶೀಲಿಸಿದ್ದೇವೆ. ಪಂಜಾಬ್ನಲ್ಲಿನ ಪ್ರವಾಹದ ಕುರಿತು ಯುವರಾಜ್ ಸಿಂಗ್ ಅವರು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ ಭಾವನಾತ್ಮಕ ಪೋಸ್ಟ್ ನಮಗೆ ಸಿಕ್ಕಿತು. ಆದರೆ, ಅದರಲ್ಲಿ ಟ್ರ್ಯಾಕ್ಟರ್ ಅಥವಾ ಯಾವುದೇ ರೀತಿಯ ದೇಣಿಗೆ ನೀಡಿಕೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ.

ನಾವು ಯುವರಾಜ್ ಸಿಂಗ್ ಅವರ ಯು ವಿ ಕ್ಯಾನ್ ಫೌಂಡೇಶನ್ನ ಅಧಿಕೃತ ಖಾತೆಯನ್ನು ಸಹ ಪರಿಶೀಲಿಸಿದ್ದೇವೆ . ಆದರೆ, ಅಲ್ಲಿಯೂ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಈ ಹೇಳಿಕೆಯನ್ನು ದೃಢೀಕರಿಸಲು ನಾವು ಮಾಜಿ ಕ್ರಿಕೆಟಿಗ ಯುವರಾಜ್ ಅವರ YouWeCan ಫೌಂಡೇಶನ್ ಅನ್ನು ಸಂಪರ್ಕಿಸಿದೆವು. ಈ ವಿಚಾರವನ್ನು ಪರಿಶೀಲಿಸಿದಾಗ, ಪ್ರತಿಷ್ಠಾನದ ಸದಸ್ಯರೊಬ್ಬರು YouWeCan ಫೌಂಡೇಶನ್ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗಳು ಸುಳ್ಳು ಎಂದು ಹೇಳಿದರು.
ಹೀಗಾಗಿ, ಪ್ರವಾಹ ಪೀಡಿತರಿಗೆ ಯುವರಾಜ್ ಸಿಂಗ್ 600 ಟ್ರ್ಯಾಕ್ಟರ್ಗಳನ್ನು ದಾನ ಮಾಡುವ ಘೋಷಣೆಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಕ್ಕು ಸುಳ್ಳು ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
Also Read: ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ; ಚಾಲಕ ಮುಸ್ಲಿಂ?
Our Sources
Social media pages of cricketer Yuvraj Singh
Telephonic conversation with YouWeCan Foundation
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಪಂಜಾಬಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)