Authors
ಕೋವಿಡ್ 19 ಎನ್ನುವುದು ರೋಗವೇ ಅಲ್ಲ ಎಂದು ವೈದ್ಯರ ತಂಡವೊಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ ಎಂಬ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Fact Check/ Verification
ಈ ಕ್ಲೇಮಿನ ಕುರಿತಾಗಿ ಸತ್ಯಶೋಧನೆ ನಡೆಸಿದಾಗ, ಈ ಹಿಂದೆ 2020ರಲ್ಲಿ ಇದೇ ವೀಡಿಯೋ ವೈರಲ್ ಆಗಿರುವುದು ಕಂಡು ಬಂದಿದೆ. ಈ ವೀಡಿಯೋ ಕ್ಲಿಪ್ ಅನ್ನು ನಾವು ಕೂಲಕಂಷ ಪರಿಶೀಲನೆಗೆ ಒಳಪಡಿಸಿದ್ದು, ಈ ವೇಳೆ ಅದರಲ್ಲಿ ಮಾತನಾಡುತ್ತಿರುವ ವ್ಯಕ್ತಿ “ಎಲ್ಕೆ ದೆ ಕ್ಲೆರ್ಕ್” ಎಂಬುದಾಗಿ ಕಂಡುಬಂದಿದೆ. ಈ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಿದಾಗ WORLD DOCTORS ALLIANCE ಎಂಬ ವೆಬ್‌ಸೈಟ್ ಕಂಡುಬಂದಿದೆ. ವೆಬ್‌ಸೈಟ್ ಪ್ರಕಾರ ವೀಡಿಯೋದಲ್ಲಿ ಮಾತನಾಡುತ್ತಿರುವ ಮಹಿಳೆ ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಸಂಬಂಧಪಟ್ಟವರಲ್ಲ. ಇದು ವಿಶ್ವ ಆರೋಗ್ಯ ಕೆಲಸಗಾರರ ಅಂದರೆ Worlddoctoralliance ಹೆಸರಿನ ಸಂಘಟನೆಯಾಗಿದೆ. ಇದು ಕೋವಿಡ್ ಲಾಕ್‌ಡೌನ್ ಅನ್ನು ಕೊನೆಗೊಳಿಸಬೇಕು ಎಂಬ ಆಗ್ರಹವನ್ನು ಹೊಂದಿತ್ತು.
Also Read: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕಲ್ಲೆಸೆತ ಪ್ರದರ್ಶನ?
ಇದರೊಂದಿಗೆ ಅಸೋಸಿಯೇಟೆಡ್ ಪ್ರೆಸ್‌ನಲ್ಲಿ ಅಕ್ಟೋಬರ್ 23, 2020ರಂದು ಪ್ರಕಟವಾದ ವರದಿ ಕೂಡ ಪತ್ತೆಯಾಗಿದೆ. ಅಲ್ಲಿ ಕ್ಲೇಮ್‌ನಲ್ಲಿ ಹಾಕಲಾದ ವೈರಲ್ ವೀಡಿಯೋ ಕ್ಲಿಪ್ ವಿವಾದಕ್ಕೊಳಗಾಗಿದೆ. ಇದಲ್ಲದೆ ದಿ ಗಾರ್ಡಿಯನ್ ಕೂಡ ಈ ಕುರಿತು ವರ್ಷದ ಹಿಂದೆ ವರದಿಯೊಂದನ್ನು ಮಾಡಿದ್ದು, ಈ ಸಂಘಟನೆ ಕೋವಿಡ್ -19 ಬಗ್ಗೆ ಹೇಗೆ ತಪ್ಪುದಾರಿಗೆಳೆವ ಹಕ್ಕನ್ನು ಹರಡುತ್ತಿದೆ ಎಂಬುದನ್ನು ಹೇಳಿದೆ.
ಇದೀಗ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಅನುಸರಿಸಲು ಸರ್ಕಾರ ಸಲಹೆ ನೀಡಿದೆ.
ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಕ್ಲೇಮ್‌ನಲ್ಲಿ ಕೋವಿಡ್ ಬಗ್ಗೆ ಇರುವ ಮಾಹಿತಿ ಸುಳ್ಳಾಗಿದೆ.
Result: False
Our Sources
World doctor Alliance Website
AP Fact Check on Coronavirus, Dated: Octorober 23, 2020
Report Published by The Guardian, Dated: October 21, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.