ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಕಲ್ಲೆಸೆತ ಪ್ರದರ್ಶನ?

ಭಾರತ್‌ ಜೋಡೋ, ರಾಹುಲ್‌ ಗಾಂಧಿ

ಭಾರತ್ ಜೋಡೋ ಯಾತ್ರೆ ರಾಜಧಾನಿ ದಿಲ್ಲಿಯನ್ನು ಪ್ರವೇಶಿಸಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೆಜ್ಜೆಹಾಕಿದ್ದಾರೆ. ಈ ವೇಳೆ ಅವರು ಕಲ್ಲೆಸೆವ ರೀತಿ ಪ್ರದರ್ಶಿಸಿದ್ದಾರೆ ಎನ್ನುವುದು ವೈರಲ್‌ ಆಗಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ವೈರಲ್‌ ಕ್ಲೇಮ್‌ ಹೀಗಿದೆ “ ದೆಹಲಿಯ ಥುರ್ಖರ ಏರಿಯಾಗೆ ಬಂದ ರಾ”ಹುಳ’ ಕಲ್ಲು ಎಸೆಯವ ಅವರ ಪರಂಪರಾನುಗತ ಕಲೆಯನ್ನು ಪ್ರದರ್ಶಿಸಿ ಅಲ್ಲಿ ನೆರೆದಿರುವ ಎಲ್ಲರನ್ನೂ ರಂಜಿಸಿದನು.”

ಭಾರತ್‌ ಜೋಡೋ, ಯಾತ್ರೆ, ರಾಹುಲ್‌ ಗಾಂಧಿ, ಕಲ್ಲೆಸೆತ, ಕಾಂಗ್ರೆಸ್‌
ಫೇಸ್‌ಬುಕ್‌ ಪೋಸ್ಟ್‌ ಸ್ಕ್ರೀನ್‌ ಶಾಟ್‌

ಈ ಕ್ಲೇಮ್‌ ಸತ್ಯವೇ? ರಾಹುಲ್‌ ಕಲ್ಲೆಸೆವ ರೀತಿ ಪ್ರದರ್ಶನ ಮಾಡಿದ್ದರೇ? ಎಂಬುದನ್ನು ಪರಿಶೀಲಿಸೋಣ.

Fact Check/ Verification

ಕ್ಲೇಮ್‌ ಕುರಿತಂತೆ ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆ ನಡೆಸಲು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದೆ. ಈ ವೇಳೆ, ಈ ಚಿತ್ರ, ರಾಹುಲ್‌ ಗಾಂಧಿ ಅವರು ನಡೆಸುತ್ತಿರುವ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಯ ಸಂದರ್ಭದ್ದು ಎನ್ನುವುದು ತಿಳಿದುಬಂದಿದೆ.

Also Read: ಬ್ರಿಟನ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಏರಿಕೆ ಅಪಾಯಕಾರಿ: ವೈರಲ್‌ ಮೆಸೇಜ್‌ ನಿಜವೇ?

ಈ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದು, ಅದರಂತೆ ರಾಹುಲ್‌ ಗಾಂಧಿಯವರು ದಿಲ್ಲಿಯಲ್ಲಿ ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ವರದಿಗಳಿವೆ. ಈ ವೇಳೆ ಹಲವು ಮಾಧ್ಯಮಗಳು ರಾಹುಲ್‌ ಅವರು ಚಾಕಲೇಟ್‌ಗಳನ್ನು ಮಾಧ್ಯಮದ ಮಂದಿಯತ್ತ ಎಸೆದಿರುವುದನ್ನು ಫೋಟೋ ಸಹಿತ ಹಾಕಿವೆ. ಪರಿಶೀಲನೆ ವೇಳೆ ವೈರಲ್‌ ಕ್ಲೇಮ್‌ನಲ್ಲಿ ಹಾಕಲಾದ ಫೋಟೋ ಮತ್ತು ವಿವಿಧ ಮಾಧ್ಯಮಗಳು ಪ್ರಕಟಿಸಿದ ಫೋಟೋ ಸಾಮ್ಯತೆ ಹೊಂದಿರುವುದು ಕಂಡುಬಂದಿದೆ.

ಸತ್ಯಶೋಧನೆಯ ಪ್ರಕಾರ, ಈ ಸಂದರ್ಭ ರಾಹುಲ್‌ ಗಾಂಧಿಯವರು ಜನರ ಮೇಲೆ ಚಾಕಲೇಟ್‌ ಎಸೆದರು ಎಂದು ಹಿಂದೂಸ್ತಾನ್‌ ಟೈಮ್ಸ್‌ ಫೋಟೋ ಸಹಿತ ವರದಿಯನ್ನು ಪ್ರಕಟಿಸಿದೆ.

ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದ ಫೋಟೋ

ಇದೇ ಸಂದರ್ಭದ ಬಗ್ಗೆ ನ್ಯೂಸ್‌ಟೈಮ್‌ ತನ್ನ ವರದಿಯಲ್ಲಿ ರಾಹುಲ್‌ ಗಾಂಧಿ ಚಾಕಲೇಟ್‌ಗಳನ್ನು ಮಾಧ್ಯಮದ ಮಂದಿಯತ್ತ ಎಸೆದರು ಎಂದು ಹೇಳಿದೆ. ಜೊತೆಗೆ ರಾಹುಲ್‌ ಅವರು ಕೈಯಲ್ಲಿ ಚಾಕಲೇಟ್‌ಗಳನ್ನು ಹಿಡಿದು ಎಸೆಯುತ್ತಿರುವ ಸ್ಪಷ್ಟ ಚಿತ್ರವನ್ನು ಹಾಕಿದೆ. ಇದರೊಂದಿಗೆ ಈ ಸಂದರ್ಭದ ವಿವಿಧ ಚಿತ್ರಗಳನ್ನೂ ನ್ಯೂಸ್‌ಟೈಮ್‌ ಹಾಕಿದೆ.

ನ್ಯೂಸ್‌ಟೈಮ್‌ ಎಕ್ಸ್ ಪ್ರೆಸ್ ಪ್ರಕಟಿಸಿದ ಫೊಟೋ; ರಾಹುಲ್‌ ಗಾಂಧಿ ಚಾಕಲೇಟ್‌ಗಳನ್ನು ಹಿಡಿದುಕೊಂಡಿರುವುದು.

ಔಟ್‌ ಲುಕ್‌ ಕೂಡ ಈ ಸಂದರ್ಭದ ಬಗ್ಗೆ ವರದಿ ಮಾಡಿದ್ದು, ಭಾರತ್‌ ಜೋಡೋ ಯಾತ್ರೆ ದಿಲ್ಲಿಗೆ ಪ್ರವೇಶಿಸುವ ವೇಳೆ ರಾಹುಲ್‌ ಅವರು ಮಾಧ್ಯಮದ ಮಂದಿಯತ್ತ ಚಾಕೊಲೆಟ್‌ಗಳನ್ನು ಎಸೆದರು ಎಂದು ಫೋಟೋ ಕ್ಯಾಪ್ಷನ್‌ ನೀಡಿದೆ.

ಓಟ್‌ಲುಕ್‌ ಪ್ರಕಟಿಸಿದ ಫೋಟೋ ಕ್ಯಾಪ್ಷನ್‌

Conclusion

ಆದ್ದರಿಂದ ಕ್ಲೇಮಿನಲ್ಲಿ ಹೇಳಿರುವಂತೆ ರಾಹುಲ್‌ ಗಾಂಧಿ ಕಲ್ಲೆಸತ ರೀತಿ ಪ್ರದರ್ಶನ ಮಾಡಿಲ್ಲ. ಬದಲಾಗಿ ಅವರು ಚಾಕೊಲೆಟ್‌ಗಳನ್ನು ಎಸೆದರು ಎನ್ನುವುದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ. ಆದ್ದರಿಂದ ಕ್ಲೇಮ್‌ ತಪ್ಪಾಗಿದೆ.

Result: False

Our sources
Self analysis
Hindustan Times Report on Bharat Jodo Yatra, Dated: December 24, 2022
Newstimeexpress.com Report on Bharat Jodo Yatra, Dated: December 24, 2022
Outlook Report on Bharat Jodo yatra, Dated: December 24, 2022

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.