Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಆಂಧ್ರಪ್ರದೇಶ ಸರ್ಕಾರದ ತಲ್ಲಿಕಿ ವಂದನಂ ಯೋಜನೆ ಮುಸ್ಲಿಮರಿಗೆ ಸೀಮಿತವಾಗಿದೆ ಮತ್ತು ಕುಟುಂಬದ ಬಳಕೆಗೆ ಹಣ ಲಭ್ಯವಾಗಲಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ದಾರಿತಪ್ಪಿಸುವ ಹೇಳಿಕೆಯಾಗಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ತಲ್ಲಿಕಿ ವಂದನಂ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಕಂಡುಬಂದಿದ್ದೇನೆಂದರೆ, ಇದು ವಿದ್ಯಾರ್ಥಿಗಳಿಗಾಗಿ ಇರುವ ಯೋಜನೆಯಾಗಿದೆ.
ತನಿಖೆಯ ಆರಂಭದಲ್ಲಿ ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ತಲ್ಲಿಕಿ ವಂದನಂ ಯೋಜನೆ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜೂನ್ 18, 2025ರ ಇಂಡಿಯಾ ಟುಡೇ ವರದಿಯ ಪ್ರಕಾರ, “ಟಿಡಿಪಿ ಮತ್ತು ಎನ್ಡಿಎ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ‘ತಲ್ಲಿಕಿ ವಂದನಂ’ ಎಂಬ ಹೊಸ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ, ಪ್ರತಿ ವಿದ್ಯಾರ್ಥಿಯ ತಾಯಿ ಅಥವಾ ಪೋಷಕರು ಪ್ರತಿ ವರ್ಷ 15,000 ರೂ.ಗಳನ್ನು ಪಡೆಯಲಿದ್ದಾರೆ. ಇದನ್ನು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಶುಕ್ರವಾರ ಘೋಷಿಸಿದ್ದಾರೆ. 2024 ರ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ನೀಡಿದ ಪ್ರಮುಖ ಭರವಸೆಗಳಲ್ಲಿ ‘ತಲ್ಲಿಕಿ ವಂದನಂ’ ಒಂದಾಗಿತ್ತು. ಇದು ಅವರ “ಸೂಪರ್ ಸಿಕ್ಸ್” ಕಲ್ಯಾಣ ಯೋಜನೆಗಳ ಭಾಗವಾಗಿದೆ.
ಈ ಯೋಜನೆಯ ನಿಯಮಗಳನ್ನು ಸರ್ಕಾರ ಹಂಚಿಕೊಂಡಿದೆ. ಶಾಲೆಗೆ ಹೋಗುವ ಮಕ್ಕಳ ತಾಯಂದಿರು ಅಥವಾ ಪೋಷಕರಿಗೆ ಪ್ರತಿ ವರ್ಷ ಪ್ರತಿ ಮಗುವಿಗೆ 15,000 ರೂ.ಗಳನ್ನು ನೀಡುವ ಮೂಲಕ ಅವರನ್ನು ಬೆಂಬಲಿಸುವುದು ಇದರ ಉದ್ದೇಶವಾಗಿದೆ. ಒಂದು ಕುಟುಂಬದಲ್ಲಿ 1 ರಿಂದ 12 ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಸಂಖ್ಯೆ ಎಷ್ಟು ಇದ್ದರೂ, ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಈ ಯೋಜನೆಯು 1 ನೇ ತರಗತಿ ಅಥವಾ ಜೂನಿಯರ್ ಇಂಟರ್ಮೀಡಿಯೇಟ್ಗೆ ಸೇರಲಿರುವ ವಿದ್ಯಾರ್ಥಿಗಳನ್ನು ಸಹ ಪರಿಗಣಿಸುತ್ತದೆ. ಸರ್ಕಾರದ ಪ್ರಕಾರ, ಸುಮಾರು 67 ಲಕ್ಷ ವಿದ್ಯಾರ್ಥಿಗಳು ಮತ್ತು 43 ಲಕ್ಷ ತಾಯಂದಿರು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. 15,000 ರೂ. ಮೊತ್ತದಲ್ಲಿ, 2,000 ರೂ.ಗಳನ್ನು ಶಾಲೆಗಳ ಸ್ವಚ್ಛತೆ, ನಿರ್ವಹಣೆ ಮತ್ತು ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು ಮೀಸಲಿಡಲಾಗುವುದು.” ಎಂದಿದೆ.

ಇದೇ ರೀತಿ ಜೂನ್ 15, 2025ರ ಎಜುಕೇಶನ್ ಇಕನಾಮಿಕ್ ಟೈಮ್ಸ್ ತನ್ನ ವರದಿಯಲ್ಲಿ “ರಾಜ್ಯಾದ್ಯಂತ ತಾಯಂದಿರು/ಪೋಷಕರ ಸಬಲೀಕರಣಕ್ಕಾಗಿ ವಿನ್ಯಾಸಗೊಳಿಸಲಾದ ಪ್ರಮುಖ ಉಪಕ್ರಮವಾದ ‘ತಲ್ಲಿಕಿ ವಂದನಂ’ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ, ಇದು ಪ್ರತಿ ಅರ್ಹ ತಾಯಿ/ಪೋಷಕರಿಗೆ ಪ್ರತಿ ಮಗುವಿಗೆ ವಾರ್ಷಿಕ 15,000 ರೂ.ಗಳ ಆರ್ಥಿಕ ಸಹಾಯವನ್ನು ವಿಸ್ತರಿಸುತ್ತದೆ” ಎಂದು ಸರ್ಕಾರದ ಕಾರ್ಯದರ್ಶಿ ಕೋನಾ ಶಶಿಧರ್ ಆದೇಶದಲ್ಲಿ ತಿಳಿಸಿದ್ದಾರೆ.” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಇದೇ ವೇಳೆ ಜೂನ್ 12, 2025ರಂದು ಆಂಧ್ರ ಪ್ರದೇಶ ಸರ್ಕಾರ ತಲ್ಲಿಕಿ ವಂದನಂ ಯೋಜನೆ ಕುರಿತು ಹೊರಡಿಸಿದ ಆದೇಶವನ್ನು ನೋಡಿದ್ದೇವೆ. ಇದರ ಪ್ರಕಾರ, ತಿಂಗಳಿಗೆ ಗ್ರಾಮಂತರ ಪ್ರದೇಶದಲ್ಲಿ 10 ಸಾವಿರ ಮತ್ತು ನಗರ ಪ್ರದೇಶಗಳಲ್ಲಿ 12 ಸಾವಿರ ಆದಾಯ ಹೊಂದಿದ ಕುಟುಂಬ ಯೋಜನೆಗೆ ಅರ್ಹವಾಗಿದೆ. 1ರಿಂದ 12ರವರೆಗೆ ಆಂಧ್ರ ಪ್ರದೇಶದಲ್ಲಿ ಕಲಿಯುವ ಮಕ್ಕಳು, ಶೇ.75ರಷ್ಟು ಶಾಲಾ ಹಾಜರಾತಿ ಹೊಂದಿರುವ ಮಕ್ಕಳು ಅರ್ಹರಾಗಿದ್ದಾರೆ ಮತ್ತು ವಿವಿಧ ಷರತ್ತುಗಳು ಇವೆ. ಶಿಕ್ಷಣಕ್ಕಾಗಿ ನೀಡುವ ಈ ಹಣ ತಾಯಿ/ಪೋಷಕರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದಿದೆ.
ಈ ಆದೇಶದಲ್ಲೂ ನಿರ್ದಿಷ್ಟ ಸಮುದಾಯ/ಧರ್ಮವನ್ನು ಪರಿಗಣಿಸಿ ಯೋಜನೆ ಜಾರಿಗೊಳಿಸುವುದನ್ನು ಹೇಳಲಾಗಿಲ್ಲ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಇದು ಆಂಧ್ರದ ಬಡ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಯೋಜನೆಯಾಗಿದ್ದು, 12ನೇ ತರಗತಿವರೆಗೆ ವಾರ್ಷಿಕ 15 ಸಾವಿರ ರೂ. ನೆರವು ಸಿಗಲಿದೆ ಎಂದು ಗೊತ್ತಾಗಿದೆ.
Our Sources
Report By India Today, Dated: June 18, 2025
Report By Education Economic Times, Dated: June 15, 2025
Order By Government Of Andhra Pradesh, Dated: June 12, 2025
Salman
November 26, 2025
Ishwarachandra B G
November 22, 2025
Ishwarachandra B G
November 19, 2025