Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆ ಎಸೆದಿದ್ದಾರೆ, ಅಂತಹ ಗುಂಪನ್ನುಅರೆಬೆತ್ತಲೆಯಾಗಿಸಿ ಪೆರೇಡ್ ನಡೆಸಿ ಪೊಲೀಸರು ಶಿಕ್ಷೆ ವಿಧಿಸಿದ್ದಾರೆ
Fact
ವೈರಲ್ ವೀಡಿಯೋ 2023ರ ಸೆಪ್ಟೆಂಬರ್ ನಲ್ಲಿ ನಡೆದ ಘಟನೆಯಾಗಿದ್ದು, ಮುಸ್ಲಿಂ ಗುಂಪು ಪರಸ್ಪರ ಕಲ್ಲು ತೂರಿದ್ದಕ್ಕಾಗಿ ಪೊಲೀಸರು ಅರೆಬೆತ್ತಲೆಯಾಗಿಸಿ ಪೆರೇಡ್ ನಡೆಸಿದ ಘಟನೆಯಾಗಿದೆ
ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆ ಎಸೆದಿದ್ದಾರೆ, ಅಂತಹ ಗುಂಪನ್ನುಅರೆಬೆತ್ತಲೆಯಾಗಿಸಿ ಪೊಲೀಸರು ಶಿಕ್ಷೆ ವಿಧಿಸಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಇಂದೋರ್‌ನ ಈ ಅಬ್ದುಲ್ ಜನರು ಈದ್‌ನಂದು ಹಿಂದೂಗಳ ಮನೆಗಳ ಮೇಲೆ ಕಲ್ಲು ಎಸೆದರು ಆಗ ಪೊಲೀಸರು ಅಬ್ದುಲ್ ಗ್ಯಾಂಗ್‌ಗೆ ಪೊಲೀಸ್ ಠಾಣೆಯಲ್ಲಿ ಅರೆಬೆತ್ತಲೆಯಾಗಿ ಥಳಿಸಿದ್ದಾರೆ ಮತ್ತು ಅವರುಗಳನ್ನು ಹಗ್ಗದಿಂದ ಕಟ್ಟಿ ಕಲ್ಲುಗಳನ್ನು ಎಸೆದ ಸ್ಥಳಕ್ಕೆ ತಂದು ಪ್ರತಿಯೊಂದು ಕಲ್ಲನ್ನು ಎತ್ತುವಂತೆ ಮಾಡಿದರು” ಎಂದಿದೆ.
ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭ ಮತ್ತು ಇತ್ತೀಚಿನ ಈದ್ ದಿನದ ವಿದ್ಯಮಾನ ಇದಲ್ಲ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಕೆಲವು ಮಾಧ್ಯಮ ವರದಿಗಳು ಕಂಡುಬಂದಿವೆ.
ಸೆಪ್ಟೆಂಬರ್ 10, 2023ರಂದು ನ್ಯೂಸ್ 9 ಪ್ರಕಟಿಸಿದ ವರದಿಯಲ್ಲಿ, “ಆಘಾತಕಾರಿ ವೀಡಿಯೋ ಒಂದರಲ್ಲಿ ಮಧ್ಯ ಪ್ರದೇಶ ಪೊಲೀಸರು 8 ಮಂದಿ ಮುಸ್ಲಿಮರನ್ನು ಅರೆಬೆತ್ತಲೆಯಾಗಿ ಪೆರೇಡ್ ನಡೆಸಿದ ಘಟನೆ ಇಂದೋರ್ ನಲ್ಲಿ ನಡೆದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ಶನಿವಾರ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರು ವೀಡಿಯೋದಲ್ಲಿ, 8 ಮಂದಿ ಶರ್ಟ್ ರಹಿತ ಪುರುಷರು, ಕೈಗಳನ್ನು ಹಗ್ಗದಲ್ಲಿ ಕಟ್ಟಿಕೊಂಡು ನಗರದಲ್ಲಿ ಪೆರೇಡ್ ಮಾಡುತ್ತಿರುವ ದೃಶ್ಯ ಇದೆ. ಜೊತೆಗೆ ಅವರು “ನಹಿ ಕರೇಂಗೆ ನಹಿ ಕರೇಂಗೆ ವಾಪಸ್ ಗಲ್ತಿ ನಹಿ ಕರೇಂಗೆ” ಎಂದು ಹೇಳುವುದು ಕೇಳಿಸುತ್ತದೆ. ಈ ಮಂದಿ ಪರಸ್ಪರ ಕಲ್ಲು ತೂರಿದ್ದಕ್ಕಾಗಿ ಪೊಲೀಸರು ಹೀಗೆ ಶಿಕ್ಷಿಸಿದ್ದಾರೆ ಎಂದು ಹೇಳಲಾಗಿದೆ” ಎಂದಿದೆ.
ಸೆಪ್ಟೆಂಬರ್ 10, 2023ರ ಫ್ರೀ ಪ್ರೆಸ್ ಜರ್ನಲ್ ನಲ್ಲಿ “ಇಂದೋರ್‌ನಲ್ಲಿ ಶನಿವಾರ ಪರಸ್ಪರ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಮುಸ್ಲಿಂ ಪುರುಷರನ್ನು ಪೊಲೀಸರು ಅರೆಬೆತ್ತಲೆ ಸ್ಥಿತಿಯಲ್ಲಿ ಮೆರವಣಿಗೆ ಮಾಡಿದರು. ವಾಗ್ವಾದದ ವೇಳೆ ಪುರುಷರು ಪರಸ್ಪರ ಕಲ್ಲು ತೂರಾಟ ನಡೆಸಿದ ನಂತರ ಘಟನೆ ಬಯಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಘಟನೆಯ ವೀಡಿಯೋದಲ್ಲಿ ಪುರುಷರು ಶರ್ಟ್‌ಗಳಿಲ್ಲದೆ ಮತ್ತು ಬೀದಿಯಲ್ಲಿ ಮೆರವಣಿಗೆ ಮಾಡುವಾಗ ಅವರ ಕೈಗಳನ್ನು ಕಟ್ಟಿಹಾಕಿರುವುದನ್ನು ತೋರಿಸಿದೆ. ಘಟನೆಯ ಕುರಿತು ಹೆಚ್ಚಿನ ವಿಚಾರ ತನಿಖೆಯಲ್ಲಿದೆ.” ಎಂದಿದೆ.
Also Read: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ಸೆಪ್ಟೆಂಬರ್ 10, 2023ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, “ಮಧ್ಯಪ್ರದೇಶ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ಇಂದೋರ್‌ನ ರಸ್ತೆಯಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಪುರುಷರು ಕಲ್ಲು ತೂರಾಟದ ಆರೋಪ ಹೊರಿಸಿ ಗಲಾಟೆ ಸೃಷ್ಟಿಸಿದ್ದರು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪುರುಷರು-‘ಪಾಥರ್ಬಜಿ ನಹೀ ಕರೇಂಗೆ, ನಹಿ ಕರೆಂಗೆ’ ಎಂದು ಪಠಿಸುತ್ತಿರುವುದು ಕಂಡುಬಂದಿತು. ಈ ವಿಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯೆ ನೀಡಿದ್ದಾರೆ.” ಎಂದಿದೆ.
ತನಿಖೆ ವೇಳೆ ಕಂಡುಬಂದತೆ, ಮುಸ್ಲಿಮರು ಪರಸ್ಪರ ಕಲ್ಲು ತೂರಿದ ವಿದ್ಯಮಾನ ಕಳೆದ ಸೆಪ್ಟೆಂಬರ್ ನದ್ದಾಗಿದೆ. ಇದು ಈದ್ ಸಮಯದ್ದಲ್ಲ ಮತ್ತು ವರದಿಗಳಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ಎಸೆದ ಬಗ್ಗೆ ವಿವರಗಳು ಕಂಡುಬಂದಿಲ್ಲ.
ಈ ಕುರಿತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯುಳ್ಳ ವೀಡಿಯೋವನ್ನು ಕಾಶಿಫ್ ಕಾವಿ ಎಂಬ ಪತ್ರಕರ್ತರೊಬ್ಬರು ಎಕ್ಸ್ ನಲ್ಲಿ ಸೆಪ್ಟೆಂಬರ್ 9, 2023ರಂದು ಪೋಸ್ಟ್ ಮಾಡಿದ್ದು ಅದು ಇಲ್ಲಿದೆ.
ಸತ್ಯಶೋಧನೆಯ ಪ್ರಕಾರ, ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆ ಎಸೆದಿದ್ದಾರೆ, ಅಂತಹ ಗುಂಪನ್ನುಅರೆಬೆತ್ತಲೆಯಾಗಿಸಿ ಪೊಲೀಸರು ಶಿಕ್ಷೆ ವಿಧಿಸಿದ್ದಾರೆ ಎನ್ನುವುದು ತಪ್ಪಾಗಿದೆ. ಪರಸ್ಪರ ಕಲ್ಲೆಸೆದ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಅರೆಬೆತ್ತಲೆ ಮಾಡಿ, ಪೆರೇಡ್ ಮಾಡಿಸಿದ್ದ ಪ್ರಕರಣ ಇದಾಗಿದೆ.
Also Read: ಈ ಬಾರಿ ಲೋಕಸಭೆಗೆ 110 ಮಂದಿ ಮುಸ್ಲಿಂ ಸಂಸದರು ಚುನಾಯಿತರಾಗಿದ್ದಾರೆ ಎಂಬ ಹೇಳಿಕೆ ವೈರಲ್
Our Sources
Report By News 9, Dated: September 10, 2023
Report By Free Press Journal, Dated: September 10, 2023
Report By Times Of India, Dated: September 10, 2023
Tweet By KashifKakvi, Dated: September, 9, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.