Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಜುಲೈ 14ರಿಂದ 2ನೇ ಮತ್ತು ನಾಲ್ಕನೇ ಶನಿವಾರ ಮತ್ತೆ ಕೆಲಸದ ದಿನಗಳಾಗಿ ಸರ್ಕಾರಿ ರಜೆ ರದ್ದು ಮಾಡಲಾಗಿದೆ
ಜುಲೈ 14ರಿಂದ 2ನೇ ಮತ್ತು ನಾಲ್ಕನೇ ಶನಿವಾರಗಳನ್ನು ಮತ್ತೆ ಕೆಲಸದ ದಿನಗಳಾಗಿ ಸುಪ್ರೀಂ ಕೋರ್ಟ್ ಘೋಷಿಸಿದೆ ಮತ್ತು ಸರ್ಕಾರಿ ರಜೆಗಳನ್ನು ರದ್ದು ಮಾಡಲಾಗಿದೆ ಎನ್ನುವುದು ನಿಜವಲ್ಲ. ರಜೆ ರದ್ದತಿಯು ಸುಪ್ರೀಂಕೋರ್ಟ್ ಕಚೇರಿಗೆ ಸೀಮಿತವಾಗಿದೆ.
2ನೇ ಮತ್ತು ನಾಲ್ಕನೇ ಶನಿವಾರಗಳನ್ನು ಮತ್ತೆ ಕೆಲಸದ ದಿನಗಳಾಗಿ ಸುಪ್ರೀಂ ಕೋರ್ಟ್ ಘೋಷಿಸಿದೆ ಮತ್ತು ಸರ್ಕಾರಿ ರಜೆಗಳನ್ನು ರದ್ದು ಮಾಡಲಾಗಿದೆ ಇದು ಜುಲೈ 14ರಿಂದ ಜಾರಿಗೆ ಬಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಸದ್ಯ ಬ್ಯಾಂಕ್ ಮತ್ತಿತರರ ವ್ಯವಸ್ಥೆಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದ್ದು ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹೊಸ ತೀರ್ಪು ಸಾರ್ವಜನಿಕರಿಗೆ ಪ್ರಯೋಜನಕಾರಿ ಎಂಬಂತೆ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಸದ್ಯ ಸುಪ್ರೀಂಕೋರ್ಟ್ ಹೊರಡಿಸಿದ ತೀರ್ಪು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಸಂಬಂಧಿಸಿದ್ದು, ಬ್ಯಾಂಕ್ ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.
Also Read: ಅಮೆರಿಕ ಇರಾನ್ ನ ಫೊರ್ಡೋ ಪರಮಾಣು ಘಟಕದ ಮೇಲೆ ದಾಳಿ ನಡೆಸಿದ ದೃಶ್ಯ ಎಂದ ವೈರಲ್ ವೀಡಿಯೋ ಸಿರಿಯಾದ್ದು!
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಕಂಡುಬಂದಿವೆ.
ಜೂನ್ 20, 2025ರ ಬಿಡಬ್ಲ್ಯೂ ಲೀಗಲ್ ವರ್ಲ್ಡ್ ವರದಿಯ ಪ್ರಕಾರ, ನ್ಯಾಯಾಂಗ ದಕ್ಷತೆಯನ್ನು ಹೆಚ್ಚಿಸುವ ಮತ್ತು ಆಡಳಿತಾತ್ಮಕ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿರುವ ಮಹತ್ವದ ಕ್ರಮದಲ್ಲಿ, ಭಾರತದ ಸುಪ್ರೀಂ ಕೋರ್ಟ್ ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮವನ್ನು ಸೂಚಿಸಿದೆ. 14 ಜೂನ್ 2025 ರಂದು ಬಿಡುಗಡೆಯಾದ ಈ ತಿದ್ದುಪಡಿಗಳು ಜುಲೈ 14, 2025 ರಿಂದ ಜಾರಿಗೆ ಬರಲಿವೆ ಮತ್ತು ಸುಪ್ರೀಂ ಕೋರ್ಟ್ನ ಕೆಲಸದ ವೇಳಾಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸುತ್ತವೆ. ಸುಪ್ರೀಂ ಕೋರ್ಟ್ ನಿಯಮಗಳು, 2013 ರ ಆದೇಶ II, ನಿಯಮಗಳು 1 ರಿಂದ 3 ರವರೆಗಿನ ತಿದ್ದುಪಡಿಗಳು ನ್ಯಾಯಾಲಯದ ಕಚೇರಿ ಸಮಯವನ್ನು ಪರಿಣಾಮಕಾರಿಯಾಗಿ ವಿಸ್ತರಿಸುತ್ತವೆ ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಕೆಲಸದ ದಿನಗಳಾಗಿ ಮರುಸ್ಥಾಪಿಸಿವೆ. ಹೆಚ್ಚುತ್ತಿರುವ ಪ್ರಕರಣಗಳ ಬಾಕಿಯನ್ನು ನಿರ್ವಹಿಸಲು ಮತ್ತು ಸ್ಪಂದನೆಯನ್ನು ಸುಧಾರಿಸಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಇದನ್ನು ಮಾಡಲಾಗಿದೆ.
ಆ ಪ್ರಕಾರ, ಸುಪ್ರೀಂ ಕೋರ್ಟ್ ಕೆಲಸದ ಸಮಯ

ಜೂನ್ 16, 2025ರ ಇಂಡಿಯಾ ಟಿವಿ ವರದಿಯ ಪ್ರಕಾರ,
ಒಂದು ಪ್ರಮುಖ ಆಡಳಿತಾತ್ಮಕ ಪರಿಷ್ಕರಣೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವಾಲಯವು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025 ಅನ್ನು ಸೂಚಿಸಿದ್ದು, ಸುಪ್ರೀಂ ಕೋರ್ಟ್ ನೋಂದಾವಣೆ ಮತ್ತು ಕಚೇರಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಮತ್ತೆ ಕೆಲಸದ ದಿನಗಳ ಪಟ್ಟಿಗೆ ತಂದಿದೆ. ಭಾರತದ ಗೆಜೆಟ್ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ತಿದ್ದುಪಡಿ ಜುಲೈ 14, 2025 ರಿಂದ ಜಾರಿಗೆ ಬರಲಿದೆ. ಎಂದಿದೆ. ಇದೇ ವರದಿಯಲ್ಲಿ, ಕೋರ್ಟ್ ಕಚೇರಿಯು ಈಗ ಎಲ್ಲ ಶನಿವಾರಗಳಂದು ತೆರೆದಿರುತ್ತದೆ, ಸಾಂಪ್ರದಾಯಿಕವಾಗಿ ರಜೆ ಸೇರಿದಂತೆ ಅಂದರೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ. ಶನಿವಾರದಂದು, ಕಚೇರಿ ಸಮಯ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಇರುತ್ತದೆ ಮತ್ತು ತುರ್ತು ವಿಷಯಗಳನ್ನು ಮಧ್ಯಾಹ್ನ 12:00 ಗಂಟೆಯ ಮೊದಲು ಸಲ್ಲಿಸಬೇಕು ಎಂದಿದೆ.

ಈ ಕುರಿತಾಗಿ ನಾವು ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾದ ಗೆಜೆಟ್ ಅಧಿಸೂಚನೆಯನ್ನು ನೋಡಿದ್ದೇವೆ. ಇದರಲ್ಲೂ ಇದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಅನ್ವಯವಾಗಿರುವುದಾಗಿ ಇದೆ.
ಈ ಕುರಿತ ಮಾಹಿತಿಗೆ ನ್ಯೂಸ್ಚೆಕರ್ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ನ ಕಾರ್ಯದರ್ಶಿಗಳಾದ ಪ್ರಗ್ಯಾ ಬಾಘೆಲ್ ಅವರನ್ನು ಸಂಪರ್ಕಿಸಿದ್ದು, “ರಜೆ ಕುರಿತ ಹೊಸ ತಿದ್ದುಪಡಿ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ಮಾತ್ರ ಸಂಬಂಧಿಸಿದ್ದು, 2ನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜೆ ರದ್ದುಪಡಿಸಲಾಗಿದೆ. ಆ ದಿನ ಸುಪ್ರೀಂ ಕೋರ್ಟ್ ತೆರೆದಿರಲಿದೆ” ಎಂದಿದ್ದಾರೆ.
ಇದರೊಂದಿಗೆ ಸರ್ಕಾರಿ ಸಿಬ್ಬಂದಿಗಳಿಗೆ ರಜೆಯ ಕುರಿತು ನ್ಯೂಸ್ ಚೆಕರ್ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ಸರ್ಕಾರಿ ಸಿಬ್ಬಂದಿಯ ರಜೆಗೆ ಇದು ಅನ್ವಯಿಸುವುದಿಲ್ಲ. ಸುಪ್ರೀಂ ರಿಜಿಸ್ಟ್ರಿಯ 2ನೇ ಮತ್ತು 4ನೇ ಶನಿವಾರದ ರಜೆ ಪರಿಷ್ಕರಣೆಯಾಗಿರುವುದಾಗಿ ತಿಳಿಸಿದ್ದಾರೆ.
ಈ ಸಾಕ್ಷ್ಯಗಳ ಪ್ರಕಾರ, ಜುಲೈ 14ರಿಂದ 2ನೇ ಮತ್ತು ನಾಲ್ಕನೇ ಶನಿವಾರಗಳನ್ನು ಮತ್ತೆ ಕೆಲಸದ ದಿನಗಳಾಗಿ ಸುಪ್ರೀಂ ಕೋರ್ಟ್ ಘೋಷಿಸಿದೆ ಮತ್ತು ಸರ್ಕಾರಿ ರಜೆಗಳನ್ನು ರದ್ದು ಮಾಡಲಾಗಿದೆ ಎನ್ನುವುದು ದಾರಿತಪ್ಪಿಸುವಂಥಾದ್ದಾಗಿದೆ. ರಜೆ ರದ್ದತಿಯು ಸುಪ್ರೀಂಕೋರ್ಟ್ ಕಚೇರಿಗೆ ಸೀಮಿತವಾಗಿದೆ.
Also Read: ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ವೇದಿಕೆ ಮೇಲೆ ಅವಕಾಶ ಸಿಕ್ಕಿಲ್ಲವೇ?
Our Sources
Report By bwlegalworld, Dated: June 20, 2025
Report By Indiatv, Dated: June 16, 2025
Gazette Notification dated 14.06.2025 Supreme Court (Amendment) Rules, 2025
Conversation with Pragya Baghel, Secretary for the Supreme Court Bar Council India
Conversation with Udupi District Collector, Swaroopa T.K.