Sunday, March 16, 2025

Fact Check

Fact Check: ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್‌ ಮಾಸ್ಟರ್ ಶರೀಫ್‌ ತಲೆಮರೆಸಿಕೊಂಡಿದ್ದಾರೆಯೇ, ಇಲ್ಲ ಈ ವೈರಲ್‌ ಹೇಳಿಕೆ ಸುಳ್ಳು!

Written By Vasudha Beri, Translated By Ishwarachandra B G, Edited By Pankaj Menon
Jun 7, 2023
banner_image

Claim
ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್‌ ಮಾಸ್ಟರ್‌ ಶರೀಫ್‌ ತಲೆಮರೆಸಿಕೊಂಡಿದ್ದಾರೆ

Fact
ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್‌ ಮಾಸ್ಟರ್‌ ಶರೀಫ್‌ ಪರಾರಿ ಎನ್ನವುದು ಸುಳ್ಳು. ಅಂತಹ ಹೆಸರಿನ ಯಾವುದೇ ವ್ಯಕ್ತಿ ಬಹನಾಗ ನಿಲ್ದಾಣದಲ್ಲಿ ಕರ್ತವ್ಯದಲ್ಲಿಲ್ಲ. ಅಪಘಾತದ ದಿನದಂದು ಕರ್ತವ್ಯದಲ್ಲಿದ್ದವರು ಸ್ಟೇಷನ್ ಮಾಸ್ಟರ್ ಎಸ್‌ ಬಿ ಮೊಹಾಂತಿ

ಕಳೆದ ವಾರ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ರೈಲ್ವೆ ನಿಲ್ದಾಣದ ಬಳಿ ಬಹು ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 278 ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿಬಿಐ ತನಿಖೆಯ ನೇತೃತ್ವವನ್ನೂ ವಹಿಸಿಕೊಂಡಿದೆ. ಇದೇ ವೇಳೆ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು, “ಕೋರಮಂಡಲ್ ರೈಲು ಡಿಕ್ಕಿ ಹೊಡೆದ್ದಕ್ಕೆ ಕಾರಣವಾದ ಸ್ಥಳದ ಸ್ಟೇಷನ್‌ ಮಾಸ್ಟರ್‌ ಶರೀಫ್‌ ಕಾಣೆಯಾಗಿದ್ದಾರೆ” ಎಂಬ ಸುದ್ದಿಗಳನ್ನು ಹಬ್ಬಿದ್ದಾರೆ “. “ಗುಪ್ತಚರ ಸಂಸ್ಥೆಗಳು ಬಾಂಗ್ಲಾದೇಶ ಮತ್ತು ರೋಹಿಂಗ್ಯಾ ಐಎಸ್ಐ ಮತ್ತು ಮಣಿಪುರದ ವಿಚಾರವನ್ನೂ ಶಂಕಿಸಿವೆ” ಎಂದಿದೆ.

Also Read: ಒಡಿಶಾ ರೈಲು ದುರಂತ ಸ್ಥಳದ ಬಳಿಯ ಇಸ್ಕಾನ್ ದೇಗುಲ ಫೋಟೋ ಅರ್ಧ ತೋರಿಸಿ ಮಸೀದಿ ಎಂದು ಘಟನೆಗೆ ಕೋಮು ಬಣ್ಣ

ಅಂತಹ ಪೋಸ್ಟ್ ಗಳನ್ನು ಇಲ್ಲಿಇಲ್ಲಿಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಲವು ಪೋಸ್ಟ್‌ಗಳಲ್ಲಿ “ತಲೆಮರೆಸಿಕೊಂಡಿರುವ ಸ್ಟೇಷನ್ ಮಾಸ್ಟರ್ ಮೊಹಮ್ಮದ್ ಶರೀಫ್ ಅಹ್ಮದ್” ಅನ್ನು ತೋರಿಸುವುದಾಗಿ ವ್ಯಕ್ತಿಯೊಬ್ಬರ ಫೋಟೋವನ್ನೂ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಅಂತಹ ಪೋಸ್ಟ್ ಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಅಪಘಾತಕ್ಕೆ ಸಂಬಂಧಿಸಿದಂತೆ ಮಸೀದಿ ಪಕ್ಕದಲ್ಲಿ ದುರಂತ ನಡೆದಿದೆ ಎಂದು ಕೋಮುಬಣ್ಣ ಹಚ್ಚುವ ಹೇಳಿಕೆಗಳನ್ನು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಅದನ್ನು ಈ ಹಿಂದೆ ತಳ್ಳಿಹಾಕಿತ್ತು, ವಾಸ್ತವವಾಗಿ ಅದು ಮಸೀದಿಯಲ್ಲ, ಬದಲಾಗಿ ಇಸ್ಕಾನ್‌ ದೇವಾಲಯ ಎಂಬುದನ್ನು ಹೇಳಿತ್ತು.

Fact Check/ Verification

ರೈಲು ಅಪಘಾತ ಸಂಭವಿಸಿದ ಸ್ಥಳ ಒಡಿಶಾದ ಬಾಲಸೋರ್ ನ ಬಹನಾಗ ನಿಲ್ದಾಣದ ಬಳಿ ಆಗಿದೆ. ಇದನ್ನು ಗಮನದಲ್ಲಿಟ್ಟು ನಾವು ಗೂಗಲ್ನಲ್ಲಿ “Station Master” ಮತ್ತು “Bahanaga” ಎಂಬ ಕೀವರ್ಡ್ ಸರ್ಚ್ ನಡೆಸಿದ್ದು, ಜೂನ್ 5, 2023 ರ ಒಡಿಶಾ ಭಾಸ್ಕರ್ ವರದಿ ಲಭ್ಯವಾಗಿದೆ. ಅದರಲ್ಲಿ “ಬಾಲಸೋರ್ ಜಿಲ್ಲೆಯ ಬಹನಾಗ ನಿಲ್ದಾಣದ ಬಳಿ ಕೋರಮಂಡಲ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರೈಲ್ವೆ ಸುರಕ್ಷತಾ ಆಯುಕ್ತರ ತಂಡವು ಪ್ರಸ್ತುತ ಬಹನಾಗ ಬಜಾರ್ ಸ್ಟೇಷನ್ ಮಾಸ್ಟರ್ ಎಸ್ ಬಿ ಮೊಹಾಂತಿ ಅವರನ್ನು ಪ್ರಶ್ನಿಸುತ್ತಿದೆ” ಎಂದು ವರದಿ ತಿಳಿಸಿದೆ.

ಜೂನ್ 5, 2023 ರ ಇಂಡಿಯಾ ಟುಡೇ ವೀಡಿಯೋ ವರದಿಯಲ್ಲಿ, ರೈಲು ಅಪಘಾತದ ದಿನದಂದು ಕರ್ತವ್ಯದಲ್ಲಿದ್ದವರು ಸ್ಟೇಷನ್ ಮಾಸ್ಟರ್ ಎಸ್‌ ಬಿ ಮೊಹಾಂತಿ ಎಂದು ಗುರುತಿಸಲಾಗಿದೆ. ಮೊಹಾಂತಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ವರದಿಗಳ ಹೊರತಾಗಿ ಪ್ರಸ್ತುತ ಸ್ಟೇಷನ್‌ ಮಾಸ್ಟರ್ ಆಗಿರುವ ಎಸ್‌.ಕೆ. ಪಟ್ಟನಾಯಕ್‌ ಅವರು, ಅಪಘಾತಕ್ಕೆ ಮೊಹಾಂತಿ ಅವರನ್ನು ದೂಷಿಸಲಾಗುವುದಿಲ್ಲ ಎಂದು ಹೇಳಿದ್ದಾರೆ” ಎಂದು ವರದಿ ಉಲ್ಲೇಖಿಸಿದೆ.

Also Read: ರೈಲ್ವೇ ಟ್ರ್ಯಾಕ್‌ ಮೇಲೆ ಬಾಲಕ ಕಲ್ಲು ಇಟ್ಟ ಈ ವೈರಲ್‌ ವೀಡಿಯೋ ಈಗಿನದ್ದಲ್ಲ, ಇದರ ಹಿಂದಿನ ಸತ್ಯ ಏನು?

ಇಂಡಿಯಾ ಟುಡೇ ಯೂಟ್ಯೂಬ್‌ ವರದಿಯ ಸ್ಕ್ರೀನ್‌ ಗ್ರ್ಯಾಬ್

ಆ ನಂತರ ನಾವು, ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ ಎಎನ್ಐಗೆ ಪ್ರತಿಕ್ರಿಯಿಸಿರುವುದನ್ನು ಗಮನಿಸಿದ್ದೇವೆ. ಇದರಲ್ಲಿ ಅವರು, “ರೈಲ್ವೆ ಕಾರ್ಮಿಕರು ಪರಾರಿಯಾಗಿದ್ದಾರೆ ಎಂದು ಕೆಲವು ಸ್ಥಳಗಳಲ್ಲಿ ಸುಳ್ಳು ಸುದ್ದಿ ನಡೆಯುತ್ತಿದೆ, ಅಂತಹದ್ದೇನೂ ಇಲ್ಲ, ಎಲ್ಲ ಕಾರ್ಮಿಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಎಲ್ಲವನ್ನೂ ಪ್ರಕ್ರಿಯೆಯಂತೆಯೇ ಮಾಡಲಾಗುತ್ತಿದೆ. ರೈಲ್ವೇ ಸಿಬ್ಬಂದಿಯ ಹೆಸರುಗಳನ್ನು ಬಳಸುವುದರಲ್ಲಿ ತಪ್ಪಿಲ್ಲ. ಹಾಗೆಯೇ ರೈಲ್ವೇ ಹಂಚಿಕೊಳ್ಳುತ್ತಿರುವ ಮಾಹಿತಿಗಳೂ ಸರಿಯಾಗಿವೆ” ಎಂದು ಹೇಳಿದ್ದಾರೆ ಎಂದಿದೆ.

ಟೈಮ್ಸ್‌ ಆಫ್‌ ಇಂಡಿಯಾ ಸ್ಕ್ರೀನ್‌ ಗ್ರ್ಯಾಬ್‌

ಇನ್ನು, ಬಹನಾಗ ಬಜಾರ್ ಸ್ಟೇಷನ್ ಮಾಸ್ಟರ್ ಬಗ್ಗೆ ವೈರಲ್ ಹೇಳಿಕೆಯನ್ನು ತಳ್ಳಿಹಾಕಿದ ಸಿಪಿಆರ್ಒ ಆದಿತ್ಯ ಕುಮಾರ್ ಚೌಧರಿ ಅವರನ್ನೂ ನ್ಯೂಸ್ಚೆಕರ್ ಸಂಪರ್ಕಿಸಿತು. ಶರೀಫ್ ಎಂಬ ಯಾವುದೇ ಸಿಬ್ಬಂದಿ ಅಥವಾ ಸ್ಟೇಷನ್ ಮಾಸ್ಟರ್ ನಿಲ್ದಾಣದಲ್ಲಿ ನಿಯೋಜನೆಯಾಗಿಲ್ಲ ಎಂದವರು ತಿಳಿಸಿದ್ದಾರೆ. “ಯಾವುದೇ ಸಿಬ್ಬಂದಿ ಕರ್ತವ್ಯದಿಂದ ಪರಾರಿಯಾಗಿಲ್ಲ. ಅವರು ತನಿಖೆಯ ಭಾಗವಾಗಿದ್ದಾರೆ. ಅವರೆಲ್ಲರೂ ತನಿಖೆಗೆ ಸಹಕರಿಸುತ್ತಿದ್ದಾರೆ” ಎಂದವರು ಹೇಳಿದ್ದಾರೆ.

ಇನ್ನೂ ಒಂದು ವಿಚಾರವೆಂದರೆ ಅಪಘಾತದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು “ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್‌ನಲ್ಲಿನ ಬದಲಾವಣೆಯಿಂದಾಗಿ ಅಪಘಾತ ಸಂಭವಿಸಿದೆ” ಎಂದು ಹೇಳಿದ್ದರು. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ, ಆದ್ದರಿಂದ ಸಾರ್ವಜನಿಕವಾಗಿ ಲಭ್ಯವಿರುವ ಈ ಮಾಹಿತಿ ಇರುವಾಗ, ಈ ಘಟನೆಯು “ರೋಹಿಂಗ್ಯಾ, ಬಾಂಗ್ಲಾದೇಶಿ, ಮಣಿಪುರ ಅಥವಾ ಐಎಸ್ಐ” ನಡೆಸಿದ ವಿಧ್ವಂಸಕ ಕೃತ್ಯವಾಗಿದೆ ಎಂದು ಹೇಳಲು ಯಾವುದೇ ಆಧಾರಗಳಿಲ್ಲವಾಗಿದೆ.

ಇದಲ್ಲದೆ “ತಲೆ ಮರೆಸಿಕೊಂಡಿದ್ದಾರೆ” ಎಂದು ಹೇಳಲಾದ ಸ್ಟೇಷನ್‌ ಮಾಸ್ಟರ್ ವೈರಲ್‌ ಫೋಟೋ ಬ್ಲಾಗ್‌ ಒಂದರಲ್ಲಿ ಕಂಡುಬಂದಿದ್ದು ಅದರ ಶೀರ್ಷಿಕೆ “Kottavalasa Kirandul KK Line” ಎಂದಿದೆ. ಇದು ಮಾರ್ಚ್‌ 2004ರಲ್ಲಿ ಕೊಟ್ಟವಲಾಸ ಕಿರುಂಡುಲ್‌ ಕೆಕೆ ಲೈನ್‌ಗೆ ಲೇಖಕರ ಭೇಟಿಯನ್ನು ಹೇಳಿದೆ. ಆದಾಗ್ಯೂ ವೈರಲ್‌ ಆಗಿರುವ ಫೋಟೋದ ಬಗ್ಗೆ ಇತರ ವಿವರಗಳನ್ನು ನಾವು ಕಂಡುಹಿಡಿಯಲು ಸಾಧ್ಯವಾಗಿಲ್ಲ.

Also Read: ರಾಹುಲ್‌ ಗಾಂಧಿ ‘ನಾನು ಮುಸ್ಲಿಂ’ ಎಂದು ಹೇಳಿದ್ದಾರೆನ್ನಲಾದ ತಿರುಚಿದ ಸುದ್ದಿಯ ಚಿತ್ರ ವೈರಲ್

Conclusion

ಒಡಿಶಾದ ಬಾಲಸೋರ್ ನಲ್ಲಿ ರೈಲು ದುರಂತ ಸಂಭವಿಸಿದ ನಂತರ ಸ್ಟೇಷನ್‌ ಮಾಸ್ಟರ್‌ ಶರೀಫ್‌ ಎಂಬವರು ತಲೆಮರೆಸಿಕೊಂಡಿದ್ದಾರೆ ಎಂಬ ವೈರಲ್‌ ಪೋಸ್ಟ್‌ ಸುಳ್ಳಾಗಿದೆ.

Result: False

Our Sources:
Report By Odisha Bhaskar, Dated June 5, 2023

Report By India Today, Dated June 5, 2023

Report By Times Of India, Dated June 5, 2023

Telephonic Conversation With South Eastern Railways CPRO Aditya Kumar Chaudhary On June 6, 2023

ಈ ಲೇಖನ ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿದ್ದು, ಅದನ್ನು ಇಲ್ಲಿ ಓದಬಹುದು


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,450

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.