Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ನಾನು ಮುಸ್ಲಿಂ, ಪಾಕಿಸ್ಥಾನವನ್ನು ಬೆಂಬಲಿಸಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಬ್ರೇಕಿಂಗ್ ನ್ಯೂಸ್ ವೈರಲ್
Fact
ರಾಹುಲ್ ಗಾಂಧಿಯವರ ಹೇಳಿಕೆಯ ಈ ಬ್ರೇಕಿಂಗ್ ನ್ಯೂಸ್‌ನ ಚಿತ್ರ ನಿಜವಾದ್ದಲ್ಲ. ಇದನ್ನು ತಿರುಚಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಾನು ಮುಸ್ಲಿಂ, ಪಾಕಿಸ್ಥಾನವನ್ನು ಬೆಂಬಲಿಸಬೇಕು ಎಂಬಂತೆ ಹೇಳಿಕೆ ನೀಡಿದ್ದಾರೆ ಎಂಬಂತೆ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಹುಲ್ ಗಾಂಧಿಯವರು ಅಮೆರಿಕ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಇದು ಹರಿದಾಡಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ನನ್ನ ಪೂರ್ವಜರು ಮುಸ್ಲಿಮರು, ನಾನು ಮುಸ್ಲಿಂ, ನಮ್ಮ ಸರ್ಕಾರ ರಚನೆಯಾದ ತಕ್ಷಣ ಪಾಕಿಸ್ಥಾನಕ್ಕೆ 50 ವರ್ಷಗಳವರೆಗೆ ಬಡ್ಡಿಯಿಲ್ಲದೆ 5 ಸಾವಿರ ಕೋಟಿ ಸಾಲ ನೀಡುತ್ತೇವೆ, ಪಾಕಿಸ್ಥಾನಕ್ಕೆ ಸಹಾಯ ಮಾಡುವುದು ಅಗತ್ಯ ಮತ್ತು ನಾವು ಅದನ್ನು ಖಂಡಿತ ಮಾಡುತ್ತೇವೆ, ಕಾಂಗ್ರೆಸ್ ಮುಸ್ಲಿಮರಿಗೆ ಸೇರಿದ್ದು ಹಾಗೆಯೇ ಉಳಿಯುತ್ತದೆ” ಎಂದು ಹೇಳಿದ್ದಾರೆ ಎಂದು ಬರೆಯಲಾಗಿದೆ.
Also Read: ನಟ ಡ್ವೇನ್ ಜಾನ್ಸನ್ ‘ಆರತಿ’ ಮಾಡುತ್ತಿರುವ ವೈರಲ್ ಫೋಟೋ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕರಾಮತ್ತು!

ಟಿವಿ ಚಾನೆಲ್‌ನ ಬ್ರೇಕಿಂಗ್ ಸುದ್ದಿ ರೀತಿ ಈ ಹೇಳಿಕೆಗಳಿವೆ. ಈ ಸಂದೇಶವನ್ನು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್(+91-9999499044) ಗೆ ಕೂಡ ಬಳಕೆದಾರರೊಬ್ಬರು ಸತ್ಯ ಪರಿಶೀಲನೆಗೆ ಕಳಿಸಿದ್ದಾರೆ.
ಸತ್ಯಶೋಧನೆಗಾಗಿ ವೈರಲ್ ಮೆಸೇಜ್ ಅನ್ನು ಪರಿಶೀಲಿಸಲಾಗಿದೆ. ಇದಕ್ಕಾಗಿ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ರಾಹುಲ್ ಗಾಂಧಿಯವರು ಇಂತಹ ಯಾವುದೇ ಹೇಳಿಕೆಯನ್ನು ಕೊಟ್ಟ ಬಗ್ಗೆ ವರದಿಗಳು ಲಭ್ಯವಾಗಿಲ್ಲ.
ಇದರೊಂದಿಗೆ ವೈರಲ್ ಮೆಸೇಜ್ ಅನ್ನು, ಕೂಲಂಕಷವಾಗಿ ಪರಿಶೀಲಿಸಿದಾಗ ಕಂಡುಬಂದಿದ್ದು, ಇದೊಂದು ಟಿವಿ ಚಾನೆಲ್ ಬ್ರೇಕಿಂಗ್ ನ್ಯೂಸ್ ರೀತಿ ಇದೆ ಎಂಬುದು ಗೊತ್ತಾಗಿದೆ. ಜೊತೆಗೆ ಬಲಬದಿ ಮೇಲ್ಭಾಗದಲ್ಲಿ ಎಬಿಪಿ ನ್ಯೂಸ್ ಲೋಗೋ ಇರುವುದನ್ನ ಗಮನಿಸಲಾಗಿದೆ. ಇದು ಎಬಿಪಿ ನ್ಯೂಸ್ ಹಿಂದಿ ನ್ಯೂಸ್ ಚಾನೆಲ್‌ನ ಲೋಗೋ ಎಂದು ಗೊತ್ತಾಗಿದೆ.
Also Read: ಮೊಳೆಗಳಿರುವ ಕ್ಯಾಪ್ಸೂಲ್ ಮೂಲಕ ಜಿಹಾದ್, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

ಇನ್ನು ಬ್ರೇಕಿಂಗ್ ನ್ಯೂಸ್ ಮೇಲೆ ಇನ್ನೊಂದು ಗ್ರಾಫಿಕ್ಸ್ ಅಳವಡಿಸಿದಂತೆ ಕಂಡುಬರುತ್ತಿದ್ದು, ಮೂಲ ಬ್ರೇಕಿಂಗ್ ನ್ಯೂಸ್‌ನ ಟೆಂಪ್ಲೆಟ್ ಅನ್ನು ಬದಲಾಯಿಸಿರುವುದು ಕಂಡುಬಂದಿದೆ.

ಎಬಿಪಿ ನ್ಯೂಸ್‌ನ ಬ್ರೇಕಿಂಗ್ ಟೆಂಪ್ಲೆಟ್ ಅನ್ನೂ ನಾವು ಕಂಡುಹಿಡಿದಿದ್ದು, ಈಗಿನ ಟೆಂಪ್ಲೆಟ್‌ಗೆ ಬದಲಾವಣೆಯನ್ನು ಗುರುತಿಸಲಾಗಿದೆ.

ಇನ್ನು ರಾಹುಲ್ ಗಾಂಧಿಯವರ ಹೇಳಿಕೆ ಕುರಿತಾಗಿ ಟ್ವಿಟರ್‌ನಲ್ಲಿ ಹುಡುಕಾಟ ನಡೆಸಿದ ವೇಳೆ, ಎಬಿಪಿ ನ್ಯೂಸ್ ಸ್ವತಃ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವುದು ತಿಳಿದುಬಂದಿದೆ. ನವೆಂಬರ್ 12, 2018ರ ವೇಳೆ ಅದು ಈ ಟ್ವೀಟ್ ಮಾಡಿದ್ದು, “ರಾಹುಲ್ ಗಾಂಧಿಯವರ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರಗಳನ್ನು ಎಬಿಪಿ ಪ್ರಸಾರ ಮಾಡಿಲ್ಲ ಮತ್ತು ಎಬಿಪಿ ನ್ಯೂಸ್ ನೆಟ್‌ವರ್ಕ್ ಗೆ ಮತ್ತು ಇದಕ್ಕೂ ಸಂಬಂಧವಿಲ್ಲ” ಎಂಬುದನ್ನು ಹೇಳಿದೆ.
Also Read: ದೆಹಲಿ ಪೊಲೀಸರು ಬಂಧಿಸಿದ ವೇಳೆಯ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್
ಈ ಸತ್ಯಶೋಧನೆಯ ಪ್ರಕಾರ, ಎಬಿಪಿ ನ್ಯೂಸ್ ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುದ್ದಿ ಪ್ರಸಾರ ಮಾಡುವ ಚಾನೆಲ್ ಹೊಂದಿದ್ದು, ಅದು ಕನ್ನಡದಲ್ಲಿ ಕಾರ್ಯಾಚರಿಸುತ್ತಿಲ್ಲ. ಆದ್ದರಿಂದ ರಾಹುಲ್ ಗಾಂಧಿಯವರ ಹೇಳಿದ್ದಾರೆ ಎನ್ನುವ ಎಬಿಪಿ ನ್ಯೂಸ್‌ನ ಬ್ರೇಕಿಂಗ್ ನ್ಯೂಸ್ ಎನ್ನುವ ಸಂದೇಶ ಸುಳ್ಳಾಗಿದೆ.
Our Sources
Self Analysis
Tweet By ABP News, Dated: November 12, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 4, 2025
Ishwarachandra B G
October 18, 2025
Runjay Kumar
October 13, 2025